ಲಿಂಗ ಇಲ್ಲದ ಸಿದ್ಧಾರೂಢರಿಗೆ ಅಕ್ಕಲಕೋಟಿ ಶರಣ್ಣಪ್ಪ ಲಿಂಗ ಕಟ್ಟಲು ಬಂದ ಕಥೆ
ಲಿಂಗ ಇಲ್ಲದ ಸಿದ್ಧಾರೂಢರಿಗೆ ಅಕ್ಕಲಕೋಟಿ ಶರಣ್ಣಪ್ಪ ಲಿಂಗ ಕಟ್ಟಲು ಬಂದ ಕಥೆ ಕಾರಜೋಳ ಎಂಬುದು ಅಕ್ಕಲಕೋಟ ಬಳಿಯ ಒಂದು ಸಣ್ಣ ಉರು, ಅಲ್ಲಿ ದಾನಪ್ಪನೆಂಬವ ಒಬ್ಬ ಗಟ್ಟಿ ಕುಳ ಇದ್ದ. ಬಾಲ್ಯದಲ್ಲಿ ವಿವಾಹವಾಗಿತ್ತು, ಅವನ ಪತ್ನಿ ಮಡಿದ ಮೇಲೆ, ಅವನಿಗೆ ಎಳೆತನದಲ್ಲಿಯೇ ವೈರಾಗ್ಯ ಬೆಳೆಯತೊಡಗಿತು. ಆಸಮಯಕ್ಕೆ ಕಾರಜೋಳಕ್ಕೆ ಒಬ್ಬ ಹಟಯೋಗಿ ಬಂದನು. ದಾನಪ್ಪ ಆ ಹಟಯೋಗಿಯ ಸೇವೆಯನ್ನು ಮನಮುಟ್ಟಿ ಮಾಡತೊಡಗಿದ. ಸ್ವಾಮೀ ದಯಮಾಡಿ ನನಗೆ ಸನ್ಯಾಸಿ ದೀಕ್ಷೆ ನೀಡಿ ಎಂದು ಪ್ರಾರ್ಥಿಸಿದ. ಆ ಹಟಯೋಗಿಯ ಕರುಳು ಕರಗಲಿಲ್ಲ. ಮನಸ್ಸು ಮರುಗಲಿಲ್ಲ. ಅವನ ಸೇವೆ ಮುಂದುವರೆಯಿತು, ಸ್ವಾಮೀ! ನನಗೆ ಸನ್ಯಾಸಿ ದೀಕ್ಷೆ ಕೊಟ್ಟು ಶಿಷ್ಯನನ್ನಾಗಿ ಮಾಡಿಕೊಂಡು ಉದ್ಧಾರದ ಹಾದಿ ತೋರಿಸಿರೆಂದು ದಾನಪ್ಪ ದುಂಬಾಲ ಬೀಳತೊಡಗಿದ. ಸಿಟ್ಟಿಗೆದ್ದ ಆ ಯೋಗಿ, “ಎಲೋ ತೊಲಗಾಚೆ ಎಂದು ಜೋರಾಗಿ ಕಲ್ಲು ಬೀಸಿದ. ಆಕಲ್ಲು ಬಂದು ದಾನಪ್ಪನ ತಲೆಗೆ ಬಡಿದು ರಕ್ತ ಸುರಿಯಿತು. ದಾನಪ್ಪ ಆ ಕಲ್ಲನ್ನೆ ಗುರುಕೊಟ್ಟ ಲಿಂಗವೆಂದು ಅದಕ್ಕೆ ರೇವಣಸಿದ್ದೇಶ್ವರ ಎಂದು ಹೆಸರಿಟ್ಟು ಪೂಜಿಸತೊಡಗಿದ. ೧೨ ವರ್ಷಗಳ ಕಾಲ ಬೇವಿನಮರದ ಮೇಲೆಯೇ ವಾಸ. ಅದೇ ತಪ್ಪಲು ಆಹಾರ. ಹೀಗೆ ಉಗ್ರತಪಸ್ಸು ನಡೆಯಿತು. ಆ ದಾನಪ್ಪನಿಗೆ ಬಸಲಿಂಗಮ್ಮ ಎಂಬವಳು ಸಹೋದರಿ. ಅವಳು ಅಣ್ಣನ ಸೇವೆಯಲ್ಲಿ ದೇಹವನ್ನು ಸವೆಸಿದಳು. ಅವನ ಸೇವೆಯ ಕರುಣೆಯಿಂದೆಂಬಂತೆ ಆ ತಾಯಿಯ ಉದರದಲ್ಲಿ ಏಳು ಹೆಣ್ಣಿನ ಮೇಲೆ ಒಂದು ಗಂಡು ಮಗು ಹುಟ್ಟಿತು. ಅವ...