ಬ್ರಾಹ್ಮಣ ಸ್ತ್ರೀಗೆ ಭೂತಬಾದೆ ಕಳೆದ ನರಸಿಂಹಸರಸ್ವತಿಗೆ ಕಾಣಿಕೆಕೊಡಲು ಹೋದಾಗ ಸಿದ್ದಾರೂಢರಿಗೆ ಕೊಡು ಅಂತ ಕನಸಲ್ಲಿ ಹೇಳಿದರು.


 🍁 ಬ್ರಾಹ್ಮಣ ಸ್ತ್ರೀಗೆ ಭೂತಬಾದೆ ಕಳೆದ ನರಸಿಂಹಸರಸ್ವತಿಗೆ ಕಾಣಿಕೆಕೊಡಲು ಹೋದಾಗ   ಸಿದ್ದಾರೂಢರಿಗೆ ಕೊಡು ಅಂತ ಕನಸಲ್ಲಿ ಹೇಳಿದರು. 


ಕೊಂಕಣದೊಳಗೆ ಬ್ರಾಹ್ಮಣ ದಂಪತಿಗಳಿದ್ದರು. ಆ ಪೈಕಿ ಸ್ತ್ರೀಗೆ ಭೂತ ಉಪದ್ರವವಾಗಿದ್ದು ಏನು ಮಂತ್ರ ಔಷಧಾದಿಗಳನ್ನು ಮಾಡಿದರೂ ಆ ವಿಪತ್ತು ಕಳಿಯಲಾಗದೆ, ನರಸೋಬವಾಡಿ ಹೋಗುವಂಥವರಾದರು. ವಾಡಿಗೆ ಹೋಗಿ, ನರಸಿಂಹ ಸರಸ್ವತಿ ಸ್ಥಾನದಲ್ಲಿ ಪ್ರಾರ್ಥಿಸಿದ್ದೇನೆಂದರೆ - "ಸ್ತ್ರೀಯು ದೇಹಸ್ಥಿತಿಯು ನೆಟ್ಟಗಾದರೆ  ನೂರು ರೂಪಾಯಿಗಳನ್ನು ಚರಣಕ್ಕೆ ಅರ್ಪಿಸುವೆವು." ಹೀಗೆ  ಪ್ರಾರ್ಥಿಸಿ, ಅಲ್ಲಿ ಪ್ರೇಮದಿಂದ ದೇವರ ಸೇವೆ ಮಾಡುತ್ತ ಇರುತ್ತಿದ್ದರು. ಕೆಲವು ಕಾಲ ಸೇವಾ ಮಾಡಿದ ಮೇಲೆ, ಒಂದಾನೊಂದು ರಾತ್ರಿ ಆ ಸ್ತ್ರಿಯು  ಮಲಗಿದ್ದಾಗ ನರಸೋಬನು ಸ್ವಪ್ನದಲ್ಲಿ ಬಂದು ಹೇಳಿದ್ದೇನೆಂದರೆ- “ನೀನು ಬೇಗನೇ ಇಲ್ಲಿಂದ ಹೊರಟು ಹುಬ್ಬಳ್ಳಿಯಲ್ಲಿರುವ ಶ್ರೀ ಸಿದ್ದಾರೂಡರ ಕಡೆಗೆ ಹೋಗು. ನಾನೇ ಅಲ್ಲಿ ಶರೀರ ಧಾರಣ ಮಾಡಿ ಸಿದ್ಧಾರೂಢರ ರೂಪದಿಂದಿದ್ದೇನೆ. ಆ ರೂಪದಿಂದಿರುವ ನನ್ನನ್ನು ನೀನು ಸೇವಿಸಿದ್ದಾದರೆ ನಿನ್ನ ಮೇಲೆ ತುಷ್ಟನಾಗಿ, ನಿಶ್ಚಯವಾಗಿ ಕೃಪಾ ಮಾಡುವೆನು''. ಈ ಪ್ರಕಾರ ಅಭಯ ವಚನವನ್ನು ಕೇಳಿ, ಆ ಸ್ತ್ರೀಯು ನಿದ್ರೆಯಿಂದೆಚ್ಚತ್ತು ಪತಿಗೆ ಎಬ್ಬಿಸಿ ಸ್ವಪ್ನ  ವೃತ್ತಾಂತವನ್ನು ಹೇಳಿ, ಈಗಲೇ ಹುಬ್ಬಳ್ಳಿಗೆ ಹೋಗೋಣ ಎಂದಳು. ನರಸೋಬನಿಗೆ ನಮಸ್ಕರಿಸಿ, ಆ ದಂಪತಿಗಳು ಹುಬ್ಬಳ್ಳಿಗೆ ಬಂದು ಸಿದ್ಧಾರೂಢರನ್ನು ಕಂಡು, ಅತ್ಯಂತ ಪ್ರೇಮಯುಕ್ತರಾಗಿ ಅವರ ಪಾದಕ್ಕೆ ಬಿದ್ದು ತಮ್ಮ ವೃತ್ತಾಂತವನ್ನೆಲ್ಲಾ ನಿವೇದಿಸಿ, ಸ್ತ್ರೀಯು ಅನ್ನುತ್ತಾಳೆ- ''ನನ್ನ ರೋಗ ನಿವಾರಾಣಾರ್ಥ ನರಸೋಬನು ನಿಮ್ಮ ಪಾದಕ್ಕೆ ನನ್ನನ್ನು ಕಳುಹಿಸಿರುವನು. ನಿಮ್ಮ ಕೃಪೆಯಿಂದ ನಾವು ಕೃತಾರ್ಥರಾಗುವೆವು''. ಈ ವಚನವನ್ನು ಕೇಳಿ ಸಿದ್ಧ ಸದ್ಗುರುಗಳು - "ಇಲ್ಲಿಯೇ ಇದ್ದು ನೀವು ನಿತ್ಯದಲ್ಲಿಯೂ ಭಜನ ಮಾಡುತ್ತಿದ್ದರೆ, ಮನಸ್ಸು ಸಮಾಧಾನ ಹೊಂದಿ, ಎಲ್ಲಾ ಪೀಡೆ ನಿವಾರಣೆಯಾಗುವುದು.” ಎಂದು ಹೇಳಿದ ವಾಕ್ಯವನ್ನು ಕೇಳಿ, ಅವರ ಆಜ್ಞೆಯಂತೆ ಆ ದಂಪತಿಗಳು  ನಿತ್ಯ ಭಜನಾನಂದವನ್ನು ಅನುಭವಿಸುತ್ತ ಪ್ರೇಮದಿಂದ ಇತರ ಗುರುಸೇವಾದಿಗಳನ್ನು ಮಾಡುತ್ತ ಇದ್ದರು. ಇದರಿಂದ ಅವರ ಚಿತ್ತಕ್ಕೆ ಬಹಳ ಸಮಾಧಾನವಾಯಿತು. ಅದರ ಮೇಲೆ ಮಹಾತ್ಮರ  ಪವಿತ್ರವಾದ ಸನ್ನಿದಿ; ಇದರಿಂದ ಸರ್ವ ಮಾನಸಿಕ ವ್ಯಥೆಯು ನಾಶ ಹೊಂದುವುದು. ಶ್ರವಣದಿಂದ ದೇಹಬುದ್ದಿಯು ನಿರಸನವಾಗಿ, ಅವರ ಚಿತ್ತವು ಶುದ್ದಿಯನ್ನು

ಹೊಂದಿತು. ಸ್ತ್ರೀಯಭೂತ ಬಾಧೆಯು ಸಹಾ ನಿಃಶೇಷವಾಗಿ ಹೋಯಿತು, ಮತ್ತು ಅವರು ಬಹಳ ಆನಂದಯುಕ್ತರಾದರು. ಸಿದ್ಧಚರಣಗಳಿಗೆ ನಮನ ಮಾಡಿ, ಆ ಸ್ತ್ರೀಯನ್ನುತ್ತಾಳೆ - ''ಹೇ ದಯಾಳುವಾದ ಸಿದ್ಧನಾಥನೇ, ನಿನ್ನ ಕೃಪೆಯಿಂದ ಸರ್ವವ್ಯಥೆ ನಾಶವಾಯಿತು. ಆದರೆ ನಿನ್ನ ಚರಣ ಪ್ರೇಮದಿಂದ ನಾವು ಭರಿತರಾಗಿ, ಊರಿಗೆ ಹೋಗಬೇಕೆಂದು ನಮಗೆ ಅನಿಸುವದಿಲ್ಲ”. ಹೀಗಂದದ್ದನ್ನು ಸದ್ಗುರುಗಳು ಕೇಳಿ ಸಂತೋಷದಿಂದ ಆ ದಂಪತಿಗಳನ್ನು ಕುರಿತು ಅನ್ನುತ್ತಾರೆ - "ನೀವು ನಿಮ್ಮ ಗ್ರಾಮಕ್ಕೆ ಹೋಗಿ, ಇದೇ ಪ್ರೇಮವನ್ನು ಮನಸ್ಸಿನಲ್ಲಿ ಹಿಡಿದು, ನಿರಂತರ ಸದ್ಗುರು  ಚರಣಗಳನ್ನು ಚಿಂತಿಸುವವರಾಗಿರಿ" ಈ ಪ್ರಕಾರ ಸದ್ಗುರು ವಚನವನ್ನು ಕೇಳಿ, ಆ ದಂಪತಿಗಳು ಆನಂದದಿಂದ ಅವರ ಚರಣಕ್ಕೆ ನಮಿಸಿ, ಆಜ್ಞೆ ಪಡೆದುಕೊಂಡು, ತಮ್ಮ ಗ್ರಾಮವನ್ನು ಕುರಿತು ಹೊರಟು ಹೋಗವುಂಥವರಾದರು. ತಮ್ಮ ಊರಿಗೆ ಪ್ರಾಪ್ತರಾಗಿ, ಮನಸ್ಸಿನಲ್ಲಿ ಚಿಂತೆ ಮಾಡುತ್ತಾರೆ, ''ನೂರು ರೂಪಾಯಿಗಳನ್ನು ಕೊಡುವೆವು,  ಎಂದು ನರಸೋಬನಿಗೆ ಪ್ರಾರ್ಥಿಸಿದ್ದೆವು. ಆದರೆ ಈಗ ಶ್ರೀ ಸಿದ್ದಾರೂಡರ ಕೃಪೆಯಿಂದ ಗುಣ ಬಂದಿರುವಾಗ, ರೂಪಾಯಿ ಯಾರಿಗೆ ಕೊಡಬೇಕು ಎಂಬ ಸಂಶಯವಿದೆ.” ಹೀಗೆ ಚಿಂತಿಸುತ್ತಾ ಮಲಗಿದ್ದಾಗ ಸ್ವಪ್ನದಲ್ಲಿ ಸ್ತ್ರೀಗೆ ನರಸೋಬನು ಕಾಣಿಸಿಕೊಂಡು ಹೇಳಿದ್ದೇನೆಂದರೆ - “ಬೇಡಿಕೊಂಡ ಹಣವನ್ನು ಸಿದ್ಧಾರೂಢರಿಗೆ ಕೊಡು” ಹೀಗಂದು ಆ ಮಹಾತ್ಮನು ಅಂತರ್ಧಾನವನ್ನು ಹೊಂದುವಂಥವನಾದನು. ಆಗ ಸ್ತ್ರೀಯು  ಪತಿಗೆ  – “ನನ್ನ ಸ್ವಪ್ನದಲ್ಲಿ ನರಸೋಬನು ಬಂದು ಹರಿಕೆ ಹಣವನ್ನು ಸಿದ್ದಾರೂಡರಿಗೆ ಕೊಡಬೇಕೆಂದು ಹೇಳಿರುತ್ತಾನೆ.” ಎಂದು ಅಂದಳು. ಪತಿಯಾದರೂ ಅದು ಮಹಾ ಆಜ್ಞೆಯೆಂದು ಸ್ತ್ರೀ ಸಮೇತ ಆ ಕೂಡಲೇ ಹುಬ್ಬಳ್ಳಿಗೆ ಹೊರಟು ಬಂದು, ಸಿದ್ಧಾರೂಢರಿಗೆ ಭೆಟ್ಟಿಯಾಗಿ ಇಬ್ಬರೂ ದೈನ್ಯ ಭಾವದಿಂದ ಪ್ರಾರ್ಥಿಸುತ್ತಾರೆ- “ಹೇ ಪ್ರಭೋ, ಸ್ತ್ರೀಗೆ ಆರೋಗ್ಯವಾದರೆ ನೂರು ರೂಪಾಯಿ ನರಸೊಬನಿಗೆ ಅರ್ಪಿಸುವೆವು, ಎಂದು ಹರಿಕೆ ಬೇಡಿಕೊಂಡಿದ್ದೆವು. ಆದರೆ ನಿಮ್ಮ ಕೃಪೆಯಿಂದ ಬಾಧೆಯು ನಿವಾರಣವಾಯಿತು. ಈಗ ಹಣವನ್ನು ಯಾರಿಗೆ ಕೊಡಬೇಕೆಂದು ಚಿಂತೆ ಮಾಡುತ್ತಿರುವಾಗ್ಗೆ, ಸ್ವಪ್ನದಲ್ಲಿ ನರಸೋಬನು ಬಂದು, ಹರಿಕೆ ಹಣವನ್ನು ತಮಗೆ ಅರ್ಪಿಸಬೇಕೆಂದು ಆಜ್ಞೆ ಮಾಡಿದನು. ಆದ್ದರಿಂದ ಆ ಹಣವನ್ನು ಕೊಡುವ ಉದ್ದೇಶದಿಂದ ಇಲ್ಲಿಗೆ ಈಗ ಬಂದಿರುವೆವು.'' ಹೀಗಂದು  ನೂರು ರೂಪಾಯಿಗಳನ್ನು ಸದ್ಗುರು ಚರಣಗಳಲ್ಲಿಟ್ಟು, ಅವರ ಆಶೀರ್ವಾದವನ್ನು ಪಡೆದುಕೊಂಡು ತಮ್ಮ ಸ್ವಗ್ರಾಮಕ್ಕೆ ಹೋಗವುಂಥವರಾದರು. ಅವರು ಸದ್ಗುರು ಭಜನವನ್ನು ಅಖಂಡ ಮಾಡುತ್ತ ಆತನ ಪಾದದಲ್ಲಿ ಅವರಿಗೆ ಅನನ್ಯ ಭಕ್ತಿ ಉತ್ಪನ್ನವಾಯಿತು. ಇವರು ಸಕಾಮ ಭಕ್ತಿಯನ್ನು ಆರಂಭಿಸಿದ್ದರೂ, ನಿಷ್ಕಾಮ ಭಕ್ತಿಯು  ಪ್ರಾಪ್ತವಾಗಿ, ಆ ದಂಪತಿಗಳು ಧನ್ಯರಾದರು. ಸದ್ಗುರುಗಳ ಸನ್ನಿಧಿ ಮಾತ್ರದಿಂದ ಸಕಾಮವಿದ್ದ

ಮನಸ್ಸು ನಿಷ್ಕಾಮವಾಗಿ ಹೋಗವುದು. ಆತನ ಅನುಗ್ರಹವಾದ ಬಳಿಕ ಸ್ವರೂಪಾನುಭವವೂ ಬರುವದು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ.

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ನಿರುಪಾದನಿಗೆ ಕೋಣೆಯಲ್ಲಿ ಬಂಧಿಸಿ ಇಟ್ಟಾಗ ಆತನು ಸದ್ಗುರುಗಳನ್ನು ಪ್ರಾರ್ಥಿಸಿ ಸಾಯಲು ನಿಂತಾಗ ಆಕ್ಷಣವೇ ಸದ್ಗುರುಗಳು ಬಂದು ಆತನ ನೈವೇದ್ಯವನ್ನು ಸೇವಿಸಿದರು.

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ