ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು




ಒಂದಾನೊಂದು ದಿವಸ ಸಿದ್ಧನು ಬಾಲಕರ ಕೂಡ ಆಡುತ್ತಿರುವಾಗ, ಬಾಲಕರೆಲ್ಲ ಕೂಡಿ ಸಿದ್ದನಿಗೆ ಎಳ್ಳು ಕೇಳುವವರಾದರು. ಆಗ ಸಿದ್ಧನು  ಅವರಿಗೆ ಆಶ್ವಾಸನೆ ಕೊಟ್ಟು ತನ್ನ ಮನೆಗೆ ಕರಕೊಂಡು ಬಂದನು. ಅವರನ್ನು ಕರೆದುಕೊಂಡು ಅಡುಗೆ ಮನೆಯೊಳಗೆ ಹೊಕ್ಕು ನೋಡುತ್ತಿರುವಾಗ, ಎಳ್ಳಿನ ಗಡಿಗೆಯು ಆತನ ಕೈಗೆ ನಿಲುಕಲಾರದಷ್ಟು  ಎತ್ತರವಾದ  ನೆಲುವಿನ ಮೇಲಿತ್ತು. ಆಗ ಸಿದ್ಧನು  ಒಂದು ಬಡಿಗೆ ತಂದು ಅದರಿಂದ ಆ ಗಡಿಗೆಯ  ಬುಡಕ್ಕೆ ಚುಚ್ಚಿ ತೂತು ಮಾಡಿದನು. ಆಗ ಎಳ್ಳು ಧಾರಾಕಾರವಾಗಿ ಸುರಿಯುತ್ತಿರುವುದನ್ನು ನೋಡಿ, ಹುಡುಗರೆಲ್ಲಾ ತಮತಮಗೆ ಬೇಕಾದಷ್ಟು ಎಳ್ಳನ್ನು ಕಟ್ಟಿಕೊಂಡು ಹೋದರು. ಅವರನ್ನು ಕಂಡು ಇತರ ಅನೇಕರೂ ಬಂದು ನೋಡಲು, ಸಣ್ಣದಾದ  ಎಳ್ಳಿನ ಗಡಿಗೆಯ ಕೆಳಗೆ  ದೊಡ್ಡ ಎಳ್ಳಿನ ರಾಶಿಯಿದ್ದು ನೋಡಿ  ಎಷ್ಟೋ ಮಂದಿ ಅದರೊಳಗಿಂದ ಎಳ್ಳನ್ನು ಕಟ್ಟಿಕೊಂಡು ಹೋಗುತ್ತಿದ್ದರು. ಇದನ್ನು ಕಂಡು ಬಹು ಆಶ್ಚರ್ಯಭರಿತರಾಗಿ ಇದು ಬಾಲರೂಪದಿಂದ ಕಾಣಿಸಿಕೊಳ್ಳುವ ಸಾಕ್ಷಾತ್ ಅವತಾರಿಕನಾದ ಸಿದ್ಧನ ಮಹಿಮೆಯಂದು ಆತನನ್ನು ಕೊಂಡಾಡಿದರು.


ಸಾವಿರಾರು ಗಡಿಗೆಯೊಳಗೆ ಹಿಡಿಸಲಾರದಷ್ಟು ಈ ಎಳ್ಳಿನ ರಾಶಿ ಒಂದು ಚಿಕ್ಕ ಗಡಿಗೆಯೊಳಗಿಂದ ಹೇಗೆ  ಬಂತು ? ಎಂದು ಸಿದ್ಧನ ಖ್ಯಾತಿಯನ್ನು ಜನರು ಎಲ್ಲಾ ಕಡೆಯಲ್ಲಿ ವರ್ಣಿಸುತ್ತಿದ್ದರು.


ಅಷ್ಟರಲ್ಲಿ ಸಿದ್ಧನ ತಾಯಿ ದೇವಮಲ್ಲಮ್ಮನು ಮನೆಯೊಳಗೆ ಬಂದು ನೋಡಲಾಗಿ, ಪುತ್ರನ ಲೀಲಾ ಕಂಡು ಆಶ್ಚರ್ಯಚಕಿತಳಾದಳು. ಸಿದ್ಧನನ್ನು ಕುರಿತು ಕೇಳುತ್ತಾಳೆ- “ಮುದ್ದು ಮಗನೇ, ಇದು ಹ್ಯಾಗೆ ಘಟಿಸಿತು ?” 

ಸಿದ್ಧನು ಹೇಳಿದ್ದನು “ಎಲೈ ತಾಯಿಯೇ ಈ ಚಮತ್ಕಾರಿಕ ಕಾರ್ಯವು  ನನ್ನಿಂದಾದ್ದಲ್ಲ. ನಿನ್ನ ಅನುಪಮವಾದ ಗುರುಸೇವೆಯ ಮಹಿಮೆಯಿಂದ ಇದು ನಿಶ್ಚಯವಾಗಿ ಘಟಿಸಿತು. ಹಾಗಾದರೆ, ಹೇಳುತ್ತೇನೆ ಕೇಳು. ತಿಲ(ಎಳ್ಳು ) ಪಾತ್ರವೆಂಬುದೇ ಜ್ಞಾನಿಯ ಶರೀರವು, ಅದರೂಳಗಿಂದ ಹೊರಡುವ ಜ್ಞಾನೋಪದೇಶದ ವಚನಗಳೆ ಎಳ್ಳು. ಆ ಜ್ಞಾನಿಯ ವಚನಗಳ ಫನ ಪ್ರವಾಹವು ಸಾವಿರಾರು ಅಜ್ಞಾನಿ ಘಟಗಳಲ್ಲಿ ಹಿಡಿಸಲಾರದೆ ಇದ್ದರೂ ಅವುಗಳಿಂದ ಸರ್ವರೂ  ತೃಪ್ತಿಯನ್ನು ಹೊಂದುವರು".


ಈ ಪ್ರಕಾರ ಸಿದ್ಧನ ವಚನ ಕೇಳಿ, ಧನ್ಯಭಾವವನ್ನು ಹೊಂದಿರುವ ದೇವಮಲ್ಲಮ್ಮನು, ಸಿದ್ಧನು ಪೂರ್ಣ ಶಿವಾವತಾರಿಕನು ಎಂದು ತಿಳಿದುಕೊಂಡಳು. ಕೂಡಲೇ ಪುತ್ರ ಮೋಹದಿಂದ ಆವರಿಸಲ್ಪಟ್ಟವಳಾಗಿ ಸಿದ್ಧನನ್ನು ಅಪ್ಪಿಕೊಳ್ಳಲು, ಆತನು  ಬಾಲಭಾವವನ್ನು ಸ್ವೀಕರಿಸಿದವನಾಗಿ, ತಪ್ಪಿಸಿಕೊಂಡು ಹುಡುಗರ ಕೂಡ ಆಡಲಿಕ್ಕೆ ಓಡಿಹೋದನು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಸಿದ್ದನು ಓಂಕಾರದ ಅರ್ಥವನ್ನು ಗುರುಗಳಿಗೆ ವಿವರಿಸಿದ್ದು 

ಸಿದ್ಧಾರೂಢ ಭಾಗವತ ಪ್ರಥಮ ಸ್ಕಂದ ಎಲ್ಲಾ ಕಥೆಗಳು 👇👇

👉ಪ್ರಥಮ ಸ್ಕಂದ ಕ್ಕಾಗಿ ಒತ್ತಿ

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಈ ಲಿಂಕ್ ಕ್ಲಿಕ್ ಮಾಡಿ app ಹಾಕಿಕೊಳ್ಳಿ 👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ