ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ
🕉️ ಸಿದ್ದನು ಓಂಕಾರದ ಅರ್ಥವನ್ನು ಗುರುಗಳಿಗೆ ವಿವರಿಸಿದ್ದು 🕉️
ಲೋಕಾರೂಢಿಯಂತೆ ಗುರುಶಾಂತಪ್ಪನು ಪುತ್ರನನ್ನು ಕುರಿತು "ಸಿದ್ದಾ ನೀನು ಹಠಮಾಡಬೇಡಾ, ನಿನ್ನ ಗೆಳೆಯರೆಲ್ಲರೂ ಶಾಲೆಗೆ ಹೋಗಲಾರಂಭಿಸಿದ್ದಾರೆ. ನೀನೂ ಶಾಲೆಗೆ ಹೋಗಿ ಅಕ್ಷರಭ್ಯಾಸ ಮಾಡಬೇಕು'' ಅಂತಾ ಕೈಹಿಡಿದುಕೊಂಡು ರಮಿಸುತ್ತ ಶಾಲೆಗೆ ಕರೆತಂದು ಶಾಲಾ ಗುರುಗಳಿಗೆ ಒಪ್ಪಿಸುತ್ತಾ ಅಧ್ಯಾಪಕರೆ, “ಈ ನಮ್ಮ ಕಂದನಿಗೆ ಮೂಲ ಅಕ್ಷರಾಭ್ಯಾಸ ಮಾಡಿಸಿರಿ'' ಅಂತಾ ಹೇಳಲು "ನಾನೆಲ್ಲ ಶಿಕ್ಷಣ ನೀಡುವೆ ನೀನು ಹೋಗಬಹುದು" ಅಂತಾ ಹೇಳಿ ಅಧ್ಯಾಪಕರು ಬಾಲಕನನ್ನು ಕೂಡ್ರಿಸಿಕೊಂಡು ಪಾಟಿಯ ಮೇಲೆ “ಓಂಕಾರ'' ಬರೆದು ಅಭ್ಯಾಸ ಮಾಡು ಅಂತಾ ಹೇಳಿದರು ಆಗ ಸಿದ್ಧನು ನಮಿಸುತ್ತಾ ಗುರುಗಳೆ ಓಂಕಾರದ ಅರ್ಥವನ್ನು ತಿಳಿಸಿರಿ ಅಂತಾ ಕೇಳಿದ್ದಕ್ಕೆ ವಿದ್ಯಾಭ್ಯಾಸ ಪೂರೈಸಿ ವ್ಯಾಕರಣವನ್ನು ತಿಳಿಯಬೇಕು. ಹೀಗಾಗದಿದ್ದರೆ ಓಂಕಾರದ ಅರ್ಥವನ್ನು ನಿನಗೆ ಗ್ರಹಣ ಮಾಡಲು ಸಾಧ್ಯವಿಲ್ಲ ಅಂತಾ ಅಧ್ಯಾಪಕರು ಹೇಳಿದರು. ಆಗ ಸಿದ್ಧಬಾಲಕನು ''ನನ್ನ ಬುದ್ದಿಯು ಶುದ್ದವಾಗಿದೆ. ತಿಳಿಯಲಿಕ್ಕೆ ಸಾಮರ್ಥ್ಯವಿದೆ. ಓಂಕಾರದ ಅರ್ಥ ಹೇಳಿದಲ್ಲಿ ಪಠಣ ಮಾಡುವೆ'' ಅಂತಾ ಹಠಹಿಡಿದಿದ್ದಕ್ಕೆ ಕೋಪಾವಿಷ್ಟರಾಗಿ ಗುರುಗಳು ಸಿದ್ದಾ 'ಅ' ಕಾರ 'ಉ' ಕಾರ ಮತ್ತು 'ಮ' ಕಾರ ಈ ಪ್ರಕಾರ ಬೀಜಗಳಿದ್ದು 'ಅ' ಕಾರದ ಮುಂದೆ 'ಉ' ಕಾರ ಬರೆಯಲು ಸಂಧಿಯಾಗಿ 'ಓ ಆಗುವದು. ಅದರ ಮುಂದೆ 'ಮ' ಕಾರ ಬರಲು 'ಓಂ' ಕಾರ ಆಗುವದಾಗಿ ಹೇಳಿದರು. ಅಧ್ಯಾಪಕರಿಂದ ಈ ಪ್ರಕಾರದ ಅರ್ಥವನ್ನು ಕೇಳಿದ ಸಿದ್ದ ಬಾಲಕನು ಗುರುಗಳೆ ಓಂಕಾರದ ಅರ್ಥವನ್ನು ಕೇಳಿದರೆ, ವ್ಯಾಕರಣದ ನಿಯಮವನ್ನು ಹೇಳಿದ್ದು ಸೂಕ್ತವಲ್ಲ ಅಂತಾ ಹೇಳಿದ್ದಕ್ಕೆ ಗುರುಗಳು ಸಿದ್ದಾ ನಿನಗೆ ಗೊತ್ತಿದ್ದರೆ ಪ್ರಣವದ ಆರ್ಥವನ್ನು ಹೇಳು ಅಂತಾ ಗದರಿಸಲು ಸಿದ್ದ ಬಾಲಕನು ಹೇಳತೊಡಗಿದನು.
ಆಗ ಸಿದ್ದ ಬಾಲಕನು "ಗುರುಗಳೆ ಶಾಂತಚಿತ್ತರಾಗಿ ಕೇಳಿರಿ. ಓಂಕಾರ ಪರಬ್ರಹ್ಮಕ್ಕೆ ಮಾಯೆಯ ಪಂಚಗುಣಗಳ ಆವರಣದಿಂದ ಪಂಚಮುಖಗಳು ತೋರಿದವು. ರಾಜಸ ಗುಣದ ಆವರಣದಿಂದ ಸದ್ಯೋಜಾತ ಮುಖ, ಶುದ್ಧ ಸತ್ವಗುಣದ ಆವರಣದಿಂದ ವಾಮ ದೇವಮುಖ, ತಾಮಸಗುಣದ ಆವರಣದಿಂದ ಅಘೋರ ಮುಖ, ರಾಜಸ ಸತ್ವ ಗುಣಮಿಶ್ರಣದ ಆವರಣದಿಂದ ಸರಸಮಾದ ತತ್ಪುರುಷ ಮುಖ, ತಾಮಸ ಸತ್ವ ಗುಣ ಮಿಶ್ರಣದ ಆವರಣದಿಂದ ಪರಮ ಈಶಾನ್ಯ ಮುಖವು ತೋರಿದವು. ಈ ಪಂಚಮುಖಗಳಿಂದ ಪಂಚಾಕ್ಷರವಾಯಿತು. ಅಲ್ಲದೆ ತತ್ವಗರ್ಭಿತ ಹಾಗೂ ಭ್ರಾಂತಿಯ ಪರಿಹಾರ ಮಾಡುವ ಪ್ರಣವ ಓಂಕಾರವು ರಂಜಿಸಿತು.
ಪರಮ ಪವಿತ್ರವಾದ ಪಂಚಾಕ್ಷರಕ್ಕೆ ತಾಮಸ ಗುಣದ ಪ್ರಕೃತಿ ಮಾಯೆ ಕೂಡಲು ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ ಈ ಪ್ರಕಾರ ಪಂಚಭೂತಗಳು ಉದಯಿಸಿದವು. ಈ ಸೃಷ್ಟಿಯೇ ವಿಚಿತ್ರವಾಗಿರುವದು. ತೋರತಕ್ಕ ಸರ್ವವೂ ಪ್ರಣವವಾಗಿದ್ದು ಈ ಪ್ರಣವವೇ ಬ್ರಹ್ಮಮಯ ಅಂತಾ ಶೃತಿಯು ಸಾರಿ ಸಾರಿ ಹೇಳುತ್ತಲಿದೆ. ಹೀಗೆ ನಾನಾ ರೂಪಗಳು ಓಂಕಾರಮಯವಾಗಿಹುದು ಉಳಿದದ್ದು ಆಗಮ, ಶ್ರೋತ್ತೀಯ ಬ್ರಹ್ಮನಿಷ್ಠ ಸದ್ದುರುವಿಗೆ, ಶಿವಯೋಗಿಗೆ ಅರ್ಥವಾಗಬಲ್ಲದು. ನಿಮಗೆ ಅರ್ಥವಾಗಲಾರದು. ನಾನು ಹೋಗುವೆ ಅಂತಾ ಸಿದ್ದ ಬಾಲಕನು ನುಡಿದನು. ಆಶ್ಚರ್ಯಚಕಿತರಾದ ಗುರುಗಳು ಈತನು ಪರಶಿವನವತಾರಿ ಅಂತಾ ಉದ್ಘರಿಸಿದರು. ಈ ವಾರ್ತೆಯನ್ನು ಕೇಳಿದ ಗುರುಗಳು ಹೇ ಪುರ ಜನರೆ ಈ ಸಿದ್ದ ಬಾಲಕನು ಹೇಳಿದ ಓಂಕಾರದ ಅರ್ಥವನ್ನು ತಿಳಿಯಲು ಸಾಧ್ಯವಿಲ್ಲ. ಆದಿ ಪರಶಿವನೇ ನರನಾಗಿ ಬಂದಿರುವ ಅಂತಾ ಹೇಳಿದ್ದಕ್ಕೆ ಈ ಭೂಮಂಡಲದಲ್ಲಿ ಅಮರನಾಗಿ ಬಾಳು ಸಿದ್ದಾ ಜಯವಾಗಲಿ ನಿನಗೆ ಅಂತಾ ಹೇಳಿ ಹರ್ಷಚಿತ್ತರಾಗಿ ಪುರಜನರು ಅಲ್ಲಿಂದ ತೆರಳಿದರು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಬಾಲಸಿದ್ಧನು ಎಮ್ಮೆನು ಕೊಂದು ಬಳಿಕ, ಜೀವಂತ ಮಾಡಿದ್ದು
ಸಿದ್ಧಾರೂಢ ಭಾಗವತ ಪ್ರಥಮ ಸ್ಕಂದ ಎಲ್ಲಾ ಕಥೆಗಳು 👇👇👇
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
2)Facebook shareಗಾಗಿ👉
3)ಈ ಲಿಂಕ್ ಕ್ಲಿಕ್ ಮಾಡಿ app ಹಾಕಿಕೊಳ್ಳಿ 👉📚
«««««ಓಂ ನಮಃ ಶಿವಾಯ »»»»»»»
