ಶಿವಪ್ಪನೆಂಬ ಭಕ್ತನು ನಿಚ್ಚಿಣಿಕೆಯಿಂದ ಬಿದ್ದು ಸತ್ತಾಗ ಸದ್ಗುರುನಾಥರು ಬದುಕಿಸಿದ ಕಥೆ.
🌻ಶಿವಪ್ಪನೆಂಬ ಭಕ್ತನು ನಿಚ್ಚಿಣಿಕೆಯಿಂದ ಬಿದ್ದು ಸತ್ತಾಗ ಸದ್ಗುರುನಾಥರು ಬದುಕಿಸಿದ ಕಥೆ.
ಸಿದ್ಧಾಶ್ರಮದಲ್ಲಿ, ಪರಸ್ಥಳದ ಜನರಿಗೋಸ್ಕರ ಒಂದು ಹೊಸ ಇಮಾರತಿಯನ್ನು ಕಟ್ಟಿಸುತ್ತಿದ್ದರು. ಅಲ್ಲಿ ನಿತ್ಯ ಸದ್ಭಕ್ತರು ಬಂದು ಅದ್ಭುತವಾದ ಸೇವೆ ಕೆಲಸಗಳನ್ನು ಮಾಡುತ್ತಿದ್ದರು. ಅನೇಕರು ಸೇವೆಗೋಸ್ಕರ ಬಂದು, ಬಹು ಪ್ರೇಮದಿಂದ ಗುರುಸೇವಕರಾಗಿ ನಿಂತು, ಒಬ್ಬರ ಮುಂದೆ ಒಬ್ಬರು ಹೋಗಿ, ಉತ್ತಮ ರೀತಿಯಿಂದ ಸೇವಾ ಮಾಡುತ್ತಿದ್ದರು. ತನಗೆ ಸೇವಾ ಸಿಕ್ಕಿತೋ ಇಲ್ಲವೋ ಎಂಬುದೊಂದೇ ಭೀತಿಯು ಸದ್ಗುರು ಸೇವೆಯೊಳಗೆ ಇರುವದು. ಆ ಸಮಯದಲ್ಲಿ ಶಿವಪ್ಪನೆಂಬ (ಈತನಿಗೆ ಶಿವರಾಯನೇತಲೂ ಕರೆಯುತ್ತಾರೆ ) ಒಬ್ಬ ಭಕ್ತನು ಆತುರದಿಂದ ಮುಂದೆ ಬಂದು, ಯಾರೂ ಹಿಡಿಯದಿರುವ ಒಂದು ನಿಚ್ಚಣಿಕೆಯನ್ನು ತೀವ್ರವಾಗಿ ಹತ್ತಿದನು. ತುದೀ ಹಲ್ಲಿನ ಮೇಲೆ ಕಾಲಿಡುವಾಗ, ನಿಚ್ಚಣಿಕೆಯು ಅಕಸ್ಮಾತ್ತಾಗಿ ಜಾರಿ, ನೆಲದ ಮೇಲೆ ಬಿತ್ತು. ಶಿವಪ್ಪನೂ ನೆಲಕ್ಕೆ ಅಪ್ಪಳಿಸಿದಂತೆ ಬೀಳುವಾಗ, ಕೆಳಗಿನ ಕಟ್ಟೆಯ ಕಲ್ಲಿನ ಏಣು ತಲೆಗೆ ಭರದಿಂದ ಬಡೆದು, ತತ್ಕಾಲ ಮೂರ್ಛಿತನಾದನು. ಸದ್ಗುರುರಾಜರು ಸಮೀಪವಿದ್ದು ಅವರೇ ಶಿವಪ್ಪನು ಬಿದ್ದದ್ದನ್ನು ಮೊದಲು ನೋಡಿದರು. ಇತರ ಅನೇಕ ಜನರು ಓಡಿ ಬಂದು ನೋಡುತ್ತಾರೆ, ಶಿವಪ್ಪನು ಬುಡಕ್ಕೆ ಬಿದ್ದು ಆತನ ಮೈಮೇಲೆ ನಿಚ್ಚಣಿಕೆ ಬಿದ್ದಿರುವುದು. ಒಬ್ಬನು ನಿಚ್ಚಣಿಕೆ ಎತ್ತುತ್ತಲೆ ರಕ್ತ ಹರಿಯುವುದು ಕಂಡು ಬಂತು. ಶಿವಪ್ಪನ ತಲೆಗೆ ಒಂದು ಕಂತವಾದ ಘಾಯವಾಗಿರುವದು ಮತ್ತು ಸರ್ವಾಂಗವು ರಕ್ತಮಯವಾಗಿರುವದನ್ನು ನೋಡಿ, ದಯಾವಂತರಾದವರು, ಆತನ ಮೇಲೆ ತಣ್ಣೀರು ತಂದು ಸುರಿದರು. ಆದರೆ ಆತನು ಮೃತಪ್ರಾಯನಾಗಿ ಕಾಣಿಸುತ್ತಿರುವನು. ಎಷ್ಟು ಪ್ರಯತ್ನ ಪಟ್ಟರೂ, ಶಿವಪ್ಪನಿಗೆ ದೇಹದ ಮೇಲೆ ಸ್ಮೃತಿಬಾರದು. ಆಗ ದುಃಖದಿಂದ ಸಂತ್ರಪ್ತರಾಗಿ ಆತನ ಪತ್ನಿ ಪುತ್ರರು ಅಲ್ಲಿಗೆ ಬಂದು. ಶಿವಪ್ಪನ ಮುಖದೊಳಗಿಂದ ರಕ್ತ ಕೂಡಿದ ಬುರುಗು ಹೊರಬೀಳುತ್ತಿತ್ತು. ಇವನೇನೂ ಬದುಕುವ ಆಶಾ ಇಲ್ಲವೆಂದು ಎಲ್ಲರೂ ಅನ್ನಲಾರಂಭಿಸಿದರು. ಕೆಲವರು ವೈದ್ಯನನ್ನು ಕರೆಯಲಿಕ್ಕೆ ಓಡಿದರು. ಕೆಲವರು ಅನ್ನುತ್ತಾರೆ-" ವೈದ್ಯನನ್ನು ಏನು ಮಾಡುವದು ? ಜಲಾವ ಕಟ್ಟಿಗೆ ತೆಗೆದುಕೊಂಡು ಬನ್ನಿರಿ. ಈತನ ದೇಹಯಾತ್ರಾ ತೀರಿತು. ಸದ್ಗುರುಗಳ ಪಾದದಲ್ಲಿ ದೇಹ ಇಟ್ಟು, ಈತನು ಧನ್ಯನಾಗಿ ಹೋದನು'', ಶಿವಪ್ಪನ ಪತ್ನಿ - ಪುತ್ರರು ಸದ್ಗುರು ಮುಖವನ್ನು ನೋಡಿ, ಆತನ ಚರಣಗಳ ಮೇಲೆ ಬಿದ್ದು, - 'ಹೇ ಸದ್ಗುರುರಾಯನೇ, ನೀನೇ ನಮ್ಮನ್ನು ರಕ್ಷಿಸುವಂಥವನಾಗು. ನಿನ್ನ ವಿನಃ ನಮಗೆ ಮತ್ಯಾರೂ ಇಲ್ಲವು. ಸರ್ವರನು ಬಿಟ್ಟು ನಾವು ನಿಮ್ಮ ಚರಣಗಳಲ್ಲಿ ಬಂದು ಬಿದ್ದಿರುವಾಗ, ನೀನು ಈ ಕಾಲದಲ್ಲಿ ಬಿರುದನ್ನು ಬಿಟ್ಟು ಬಿಡಬೇಡ, ಏನು ಸಂಕಷ್ಟ ಪ್ರಾಪ್ತವಾದರೂ ನಾವು ನಿನ್ನನ್ನು ಬಿಟ್ಟು ಮತ್ತೆಲ್ಲಿಗೂ ಹೋಗಲಾರೆವು ನಮಗೆ ತಂದೆ ತಾಯಿಗಳಿಬ್ಬರೂ ನೀವೇ ಆಗಿರುತ್ತೀರಿ. ನಿಮ್ಮ ಚರಣಗಳಲ್ಲಿಯೇ ನಮ್ಮನ್ನು ಇಟ್ಟುಕೊಳ್ಳಿ ರಿ,'' ಅಂದರು. ಇಷ್ಟು ಹೊತ್ತಿನವರೆಗೆ ಶಿವಪ್ಪನನ್ನು ನೋಡುತ್ತ ಸ್ತಬ್ದರಾಗಿ ಕೂತಿದ್ದ ಸದ್ಗುರುನಾಥರು, ಶಿವಪ್ಪನ ಸ್ತ್ರೀ ಪುತ್ರರ ವಚನವು ಕರ್ಣದಲ್ಲಿ ಬಿದ್ದ ಕೂಡಲೇ ಚಟ್ಟನೆ ಎದ್ದರು. ಶಿವಪ್ಪನ ಯಡಪಾರ್ಶ್ವದ ಕಪಾಲದೊಳಗಿಂದ ರಕ್ತಧಾರೆಯು ಹರಿಯುತ್ತಿತ್ತು. ಇದನ್ನು ನೋಡಿ, ಮಾತೆ ಆಗಿರುವ ಸದ್ಗುರುಗಳು ಶಿವಪ್ಪನ ಸಮೀಪ ಕುಳಿತುಕೊಂಡು, ಅವನ ಘಾಯಕ್ಕೆ ಹಸ್ತಸ್ಪರ್ಶ ಮಾಡಿದರು. ಕೂಡಲೇ ರಕ್ತಪ್ರವಾಹ ನಿಂತು ಹೋಯಿತು. ಆಮೇಲೆ ನಮಃ ಶಿವಾಯ ಅನ್ನುತ್ತ ಸರ್ವಾಂಗಕ್ಕೆ ಅಮೃತ ಹಸ್ತವನ್ನು ಸ್ಪರ್ಶಿಸುವಂಥವರಾಗಿ, ಅನ್ನುತ್ತಾರೆ - "ಈತನ ಆಯುಷ್ಯ ತೀರಿದಂತೆ ತೋರುತ್ತದೆ. ಆದರೆ ಮುಂದೆ ಈತನು ಮಾಡತಕ್ಕ ವಿಶೇಷ ಕಾರ್ಯವಿರುತ್ತದೆ. ಆದ್ದರಿಂದ ಏನಾದರೂ ಆಯುಷ್ಯ ಲೇಶದಿಂದ ಸದ್ಗುರುನಾಥನು ಈತನನ್ನು ಬದುಕಿಸತಕ್ಕದು''. ಹೀಗಂದು ಸಿದ್ಧರು ಹಸ್ತದಲ್ಲಿ ಸ್ವಲ್ಪ ತಣ್ಣೀರು ತೆಗೆದುಕೊಂಡು, ಶಿವಪ್ಪನ ಮುಖದ ಮೇಲೆ ಪ್ರೋಕ್ಷಣೆ ಮಾಡಿ, ತೂಷ್ಣಿಂ ಸ್ಥಿತಿಯಲ್ಲಿರುವಂಥವರಾದರು. ಎಲ್ಲಾ ಭಕ್ತ ಜನರು, ಚಿತ್ತದೊಳಗಿನ ನರನಾರಿಯರಂತೆ ತಟಸ್ಥರಾಗಿ ನೋಡುತ್ತಿದ್ದರು. ಭಕ್ತನಾದ ಶಿವಪ್ಪನು ಬಿದ್ದದ್ದು ನೋಡಿ ಸ್ತ್ರೀಯರಿಗೆ ಕಣ್ಣೀರು ಸುರಿಯುತ್ತಿದ್ದವು. ಎಲ್ಲರೂ ಶಿವಪ್ಪನ ಕಡೆಗೆ ನೋಡುತ್ತಿರುವಾಗ ಮೆಲ್ಲಗೆ ಆತನ ತುಟಿಗಳು ಅಲ್ಲಾಡಲಾರಂಭಿಸಿದವು, ಮತ್ತು ಮುಖದಿಂದ "ರಾಮನಾಮದ " ಜಪವು ಹೊರಡುತ್ತಿತ್ತು. ಸರ್ವ ಜನರಿಗೆ ಈಗ ಆನಂದವಾಯಿತು. ಮತ್ತು ಎಲ್ಲರೂ ಜಯಜಯಕಾರವನ್ನು ಗರ್ಜಿಸುವಂಥವರಾದರು. ಸದ್ಗುರು ಮಹಿಮಾ ವರ್ಣಿಸಲಿಕ್ಕೆ ಯಾರೊಬ್ಬರಿಗೂ ಸಾಧ್ಯವಿಲ್ಲ. ಸಿದ್ಧರಾಯರಂದರು -“ನಿಶ್ಚಯವಾಗಿ ಸದ್ಗುರುರಾಯನು ಪ್ರಾಪ್ತನಾದನು. ಆದ್ದರಿಂದಲೇ ಶಿವಪ್ಪನು ಬದುಕಿದನು. ಇನ್ನು ಮೇಲೆ ಇವನಿಗೆ
ಭಯವಿಲ್ಲ''. ಕೆಲವು ದಿವಸಗಳ ಮೇಲೆ ಶಿವಪ್ಪನ ಪ್ರಕೃತಿಯು ಸುಧಾರಿಸಿ, ಪುನಃ ಆತನು ಅಧಿಕ ಪ್ರೇಮದಿಂದ ಗುರುಸೇವ ಮಾಡಲಾರಂಭಿಸಿದನು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
