ದರಿದ್ರ ನಾರಾಯಣನಿಂತಿದ್ದ ಮಡಿಮನ್ ಗಣಪತರಾವ್ ಗುರುಭಕ್ತಿಯಿಂದ ಲಕ್ಷ್ಮೀಪತಿ ಆಗಿದ್ದಲ್ಲದೆ ರೋಗಬಾಧೆಯಿಂದ ಪಾರಾದದ್ದು

 🙏 ದರಿದ್ರ ನಾರಾಯಣನಿಂತಿದ್ದ ಮಡಿಮನ್ ಗಣಪತರಾವ್ ಗುರುಭಕ್ತಿಯಿಂದ ಲಕ್ಷ್ಮೀಪತಿ ಆಗಿದ್ದಲ್ಲದೆ ರೋಗಬಾಧೆಯಿಂದ ಪಾರಾದದ್ದು 🙏





ಹುಬ್ಬಳ್ಳಿಯಲ್ಲಿ ಶ್ರೀ ಗಣಪತರಾವ್ ಮಡಿಮನ್ ಬಡಕುಟುಂಬ. ಜೀವನೋಪಾಯಯಕ್ಕೆ ನೌಕರಿ ಮಾಡುತ್ತಿದ್ದು,  ಪ್ರತಿನಿತ್ಯ ಶ್ರೀ ಸಿದ್ಧಾರೂಢ ಸ್ವಾಮೀಜಿಯ  ದರ್ಶನ, ಶ್ರವಣ ಮಾಡುತ್ತಾ  ಭಕ್ತಿಪೂರ್ವಕ ಧ್ಯಾನದಲ್ಲಿರುತ್ತಿದ್ದು, ಮನೆಯವರಿಗೆಲ್ಲ ಕಾಯಿಲೆಯಾಗಿದ್ದರಿಂದ, ಅನಿವಾರ್ಯವಾಗಿ ಶ್ರೀಗಳ ಮಠದಲ್ಲಿ ಎಲ್ಲರೂ ವಾಸ ಮಾಡುತ್ತಾ ಸೇವೆ ಮಾಡುತ್ತಿದ್ದರು. ಗುರುಗಳಿಂದ ಪ್ರಸಾದ, ತೀರ್ಥ ಸೇವನೆಯಿಂದ ಗುಣಮುಖವಾದರು. ನೌಕರಿಯಿಂದ ಬರುವ ವರಮಾನದಲ್ಲಿ ಜೀವನೋಪಾಯ ವಾಗಲಾರದ್ದರಿಂದ ಗುರುವಿಗೆ ವಂದಿಸಿ, ಹೇ ಗುರುವೇ, ನಾನು ಸಣ್ಣ ವ್ಯಾಪಾರ ಮಾಡಬೇಕೆಂಬ ಇಚ್ಚೆಯಾಗಿದೆ, ಆಶೀರ್ವಾದ ಆಗಬೇಕು ಅಂತ ಶ್ರೀ ಗಣಪತರಾವ್ ಪ್ರಾರ್ಥಿಸಲು, ತಥಾಸ್ತು ಅಂತ ಆಶೀರ್ವದಿಸಿದರು. ಸಣ್ಣ ಪ್ರಮಾಣದ ವ್ಯಾಪಾರ ಆರಂಭವಾಗಿ ಸತತವಾದ ಲಾಭವಾಗುತ್ತಾ, ಬೃಹತ್ ಪ್ರಮಾಣದ ವ್ಯಾಪಾರದಿಂದ ಲಕ್ಷ್ಮಿ ಕೃಪಾ ಕಟಾಕ್ಷಕ್ಕೆ ಪಾತ್ರರಾದರು. ಹೀಗೆ ಶ್ರೀಮಂತಿಕೆ ಸೌಭಾಗ್ಯ ದೊರೆತ ಬಗ್ಗೆ ಶ್ರೀ ಸಚ್ಚಿದಾನಂದರಲ್ಲಿ ಮಡಿಮನ್ ಗಣಪತರಾವ್ ಗುರುಭಕ್ತಿಯಿಂದ ದೊರೆತ ಶ್ರೀಮಂತಿಕೆಯ ಸೌಭಾಗ್ಯ ಬಂದರೂ ಪೂರ್ವದ ಸ್ಥಿತಿಯನ್ನು ನೆನಪಿನಲ್ಲಿಟ್ಟುಕೊಂಡು ನ್ಯಾಯ, ನೀತಿ, ಪರೋಪಕಾರ, ಅತಿಥಿ ಸತ್ಕಾರ, ಗುರುಭಕ್ತಿಯಿಂದ ಸರ್ವರ ಪ್ರೀತಿಗೆ  ಪಾತ್ರರಾಗಬೇಕು ಅಂತ ಬೋಧಿಸಿದರು. ಅದರಂತೆ ನಡೆದುಕೊಳ್ಳುತ್ತಿದ್ದಾಗ ಪ್ರಾರಬ್ಧ ಕರ್ಮದಿಂದ ಗಣಪತರಾವ್‌ರಿಗೆ ವಿಷಮ ಜ್ವರ ಭಾದೆ ವಿಪರೀತವಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಶ್ರೀ ಸಿದ್ಧಾರೂಢರು ಅಲ್ಲಿಗೆ ಬಂದು ಗಣಪತರಾವ್‌ರ ಮೈಮೇಲೆ ತಮ್ಮ ಅಮೃತ ಹಸ್ತವನ್ನಿಟ್ಟು, ಅವರ ಪರಿವಾರಕ್ಕೆ ನೀವು ಸದ್ಗುರುನಾಥ ಸ್ಮರಣೆ ಮಾಡುತ್ತಾ ಆತನ ಪಾದ ತೀರ್ಥವನ್ನು ಕುಡಿಸಿರಿ, ಮೃತ್ಯುಭಯ ನಿವಾರಣೆಯಾಗುವುದು ಅಂತಾ ಹೇಳಿ ಮಠಕ್ಕೆ ಮರಳಿದರು. ಆ ಪ್ರಕಾರ ಪರಿವಾರದವರು ಮಾಡುತ್ತಿರುವಲ್ಲಿ ಆತನ ತಾಯಿಯಾದ ಚಂದ್ರಭಾಗಾಬಾಯಿಯ ಕನಸಿನಲ್ಲಿ ಶ್ರೀ ಸಿದ್ಧಾರೂಢರು  ಪ್ರಕಟಗೊಂಡು, ತ್ರಿವಿಧ ತಾಪಹಾರಕ ಮೃತ್ಯುಭಯನಿವಾರಕ ಶಿವಸ್ತುತಿಯನ್ನು ನಿನ್ನ ಮಗ ಗಣಪತರಾಯನ ಮುಂದೆ ನಿತ್ಯ ಪಠಣ ಮಾಡು, ರೋಗ ಪರಿಹಾರವಾಗುವುದು ಅಂತಾ ಹೇಳಿದರು. ಆ ಪ್ರಕಾರ ಶಿವಸ್ತುತಿಯನ್ನು ಪಠಣ ಮಾಡಲು ಕೆಲ ದಿನಗಳಲ್ಲಿ ವಿಷಮ ಜ್ವರ ಬಾಧೆಯು  ನಿವಾರಣೆಯಾಯಿತು. ಕೂಡಲೇ ಶ್ರೀ ಸಿದ್ಧಾರೂಢರ  ಅಪ್ಪಣೆ ಪಡೆದು ಗಣಪತರಾಯರ ತಂಗಿ ಲೀಲಾಬಾಯಿಯು  ಶ್ರೀ ಗುರು ಚರಿತ್ರೆ ಸಪ್ತಾಹವನ್ನು ಪ್ರಾರಂಭಿಸಿದಳು.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

👇👇👇👇

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಹಳೇಹುಬ್ಬಳ್ಳಿ ಬಡಬ್ರಾಹ್ಮಣ ಗುಡಿ ವಿರೂಪಾಕ್ಷ ಶಾಸ್ತ್ರಿಗೆ ಭಾಗವತ ಪುರಾಣ ನಡೆಸಲು ಆದೇಶಿಸಿದ್ದು ಹಾಗೂ ಅವರ ಮನೆಯಲ್ಲಿ ಕಲ್ಪವೃಕ್ಷದ ಫಲ ನೀಡಿದ,

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

👇Facebook share ಗಾಗಿ

👇

👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ