ಒಂದೇ ಸಮಯದಲ್ಲಿ ಮುರಕಿಭಾವಿ ಮತ್ತು ಹುಬ್ಬಳ್ಳಿಯಲ್ಲಿ ಪೂಜೆಯಾಗುವಾಗ ಎರಡು ಕಡೆ ದರ್ಶನ ಕೊಟ್ಟ ಸಿದ್ದಾರೂಢರು

 🥀ಮುರಕಿಭಾವಿ ಗ್ರಾಮದಲ್ಲಿ ಬಹು ವೈಭವದಿಂದ ಸದ್ಗುರು ಚಿತ್ರದ ಪೂಜೆಯಾಗುತ್ತಿರುವಾಗ,  ಭಕ್ತರ ಪ್ರಾರ್ಥನೆಯಿಂದ ಸದ್ಗುರುವು ನಿಜರೂಪದಲ್ಲಿ  ಪ್ರತ್ಯಕ್ಷನಾದ ಕಥೆ,



ಶ್ರೀ ಸಿದ್ಧಾರೂಢ ಸ್ವಾಮಿಯವರು, ಸಿದ್ಧಾಶ್ರಮದಲ್ಲಿರುತ್ತಿರುವಾಗ, ಶಿವರಾತ್ರಿ ಇತ್ಯಾದಿ ಉತ್ಸವಗಳಿಗೆ ಅನ್ಯ ಗ್ರಾಮಗಳಿಂದಲೂ ಭಕ್ತಜನರು ಬರುತ್ತಿದ್ದರು. ಉತ್ಸವವಾದ  ನಂತರ ಅವರು ತಿರುಗಿ ತಮ್ಮ ತಮ್ಮ ಗ್ರಾಮಕ್ಕೆ ಹೋದ ಮೇಲೆ ಉತ್ಸವದ  ಆನಂದವನ್ನು ಅನುಭವಿಸಿದವರಾಗಿ ಕೆಲವರು ಕೂಡಿ ಆಲೋಚನೆ ಮಾಡುತ್ತಾರೆ - “ನಮ್ಮ ಗ್ರಾಮಕ್ಕೂ

ಸದ್ಗುರುಗಳನ್ನು ಕರೆದುಕೊಂಡು ಬಂದು ಹುಬ್ಬಳ್ಳಿಯಲ್ಲಿ ಆದಂಥಾದ್ದೇ ಉತ್ಸವ ಮಾಡಿದ್ದಾದರೆ, ನಾವಾದರೂ, ಗುರುಚರಣ ಸೇವಾ ಘಟಸುವದರಿಂದ ಧನ್ಯರಾಗಿ ಹೋಗುವೆವು'', ಎಂದು ಅನ್ನುವರು, ಮುರಕಿಭಾವಿ ಎಂಬ ಗ್ರಾಮದಲ್ಲಿಯೂ ಅನೇಕ ಗೃಹಸ್ಥರು ಕೂಡಿ, ಈ ಪ್ರಕಾರ ಆಲೋಚನೆ ಮಾಡಿ, ಸದ್ಗುರು ಉತ್ಸವದ್ದೆಶೆಯಿಂದ, ಎಲ್ಲ ತಯಾರಿ ಮಾಡಿಕೊಂಡು, ಸಿದ್ದಾಶ್ರಮಕ್ಕೆ ಬಂದು ಸದ್ಗುರುಗಳಿಗೆ ವಿಜ್ಞಾಪಿಸುತ್ತಾರೆ - " ಶಿವರಾತ್ರಿ ಕಾಲದಲ್ಲಿ ಇಲ್ಲಿ ಯಾವ ಪ್ರಕಾರ ಉತ್ಸವವಾಗುವದೋ  ಅದೇ ರೀತಿಯಿಂದ ನಮ್ಮ ಗ್ರಾಮದಲ್ಲಿ ಮಾಡಬೇಕೆಂದು ನಾವು ಇಚ್ಚಿಸುತ್ತೇವೆ. ಆಜ್ಞೆಯಾದರೆ, ತಮ್ಮನ್ನು ಅಲ್ಲಿ ತನಕ ಕರೆದುಕೊಂಡು ಹೋಗಿ ಮಂಟಪ ಪೂಜಾ ಮಾಡಿ ಆನಂದ ಪಡುವೆವು''. ಅವರನ್ನು ಕುರಿತು ಸಿದ್ದರು ಅನ್ನುತ್ತಾರೆ- “ಕೇಳಿರೈಯ್ಯಾ ಭಕ್ತ ಜನರುಗಳಿರಾ, ನಾವು ಹುಬ್ಬಳ್ಳಿಯನ್ನು ಬಿಟ್ಟು ಬರುವದಿಲ್ಲ. ಯಾಕೆಂದರೆ, ಇಲ್ಲಿ ನಿತ್ಯದಲ್ಲಿಯೂ ದರ್ಶನಕ್ಕೋಸ್ಕರ ಬರುವಂಥ ಭಕ್ತರಿಗೆ ನಿರಾಶೆಯಾಗುವದು. ನೀವು ಎಲ್ಲೆಲ್ಲಿ ಭಜನೆ, ಬ್ರಹ್ಮಜಿಜ್ಞಾಸ, ವೇದಾಂತ ಶ್ರವಣ ಮುಂತಾದವುಗಳನ್ನು ನಡಿಸುವಿರೋ ಅಲ್ಲಲ್ಲಿ ಸದ್ಗುರುವು ನಿಶ್ಚಯವಾಗಿ ಇರುತ್ತಾನೆ. ಇದನ್ನು ದೃಢವಾಗಿ ನಂಬಿ ಕಾರ್ಯವನ್ನು ನಡಿಸಿರಿ,'' ಎಂಬ ಸಿದ್ದರ ವಚನವನ್ನು ಕೇಳಿ, ಆ ಭಕ್ತ ಜನರೆಲ್ಲಾ ಆನಂದಭಭರಿತರಾಗಿ, ಸದ್ಗುರುನಾಥನ  ಭಾವಚಿತ್ರವನ್ನು ಮಂಟಪದೊಳಗೆ ಪೂಜಾಗೋಸ್ಕರ ಇಡುವಂಥವರಾದರು. ಆ ಭಕ್ತರು ಸಿದ್ಧಾರೂಢರ  ಶಿಷ್ಯನಾದ ರಾಮಸ್ವಾಮಿ ಎಂಬವನಿಗೆ ಪೂಜಾ  ಮಾಡುವದಕ್ಕೋಸ್ಕರ ಮುರಕಿಭಾವಿಗೆ ಕರೆದುಕೊಂಡು ಹೋದರು. ಆಗ, ದೇಶದಲ್ಲೆಲ್ಲಾ ಭಕ್ತ ಜನರಿಗೆ ಆಮಂತ್ರಣ ಪತ್ರಗಳನ್ನು ಕಳುಹಿಸಿದರು. ಆಮಂತ್ರಣ ಪತ್ರಗಳಲ್ಲಿ, ಸಿದ್ದಾರೂಢ ಸದ್ಗುರುಗಳು ಸ್ವತಃ ಬಂದು ಪೂಜಾ ಕೈಕೊಳ್ಳುವರೆಂದು, ಉಲ್ಲೇಖನ ಮಾಡಿತ್ತು. ಸಿದ್ಧಾರೂಢರು ಹುಬ್ಬಳ್ಳಿ ಊರು ಬಿಟ್ಟು ಮತ್ತೆಲ್ಲಿಯೂ ಹೋಗುವುದಿಲ್ಲವೆಂಬುದು ಎಲ್ಲರೂ ತಿಳಿದಿದ್ದರಿಂದ, ಏನೋ ಚಮತ್ಕಾರವಿರುವದೆಂದು, ಎಲ್ಲರೂ ಉತ್ಸವಕ್ಕೆ ಬರುವಂಥವರಾದರು. ಅಪಾರ ಜನರು ಕೂಡಿದರು. ಎಲ್ಲ ಭೋಜನ ಉಪಚಾರಕ್ಕೋಸ್ಕರವಾಗಿ ಬೇಕಾದಷ್ಟು ಸಾಮಗ್ರಿ ತಯಾರಿಸಿ ಇಟ್ಟಿತು. ವಿಸ್ತಾರ ಪ್ರದೇಶದಲ್ಲಿ ಒಂದು ಭವ್ಯವಾದ ಹಂದರ ಹಾಕಿಸಿ, ಅದರೊಳಗೆ ದಿವ್ಯ ಮಂಟಪವನ್ನು ನಿಂದಿರಿಸಿ, ಅದರ ಮಧ್ಯಭಾಗದಲ್ಲಿ ಸುಂದರ ಸಿಂಹಾಸನದ ಮೇಲೆ ಸದ್ಗುರುರಾಯನು ಚಿತ್ರರೂಪದಿಂದ ಆಸೀನನಾಗಿದ್ದನು. ಏಳುದಿವಸಗಳ ತನಕ ಉತ್ಸವ ನಡೆಯುತ್ತಿರುವದು. ಅಹೋರಾತ್ರಿ ಭಜನೆಯ ಘೋಷ ನಡೆಯುತ್ತಿದ್ದು, ಎರಡು ಹೊತ್ತು ಕೀರ್ತನ ಸಮಾರಂಭವು ಆಗುತ್ತಿತ್ತು. ದೇಶ ದೇಶಗಳಿಂದ ಬಂದಂಥಾ ಸಾಧು ಸತ್ಪುರುಷರು ನಿತ್ಯದಲ್ಲಿಯೂ ವೇದಾಂತಚರ್ಚಾ ಉಪನ್ಯಾಸಾದಿಗಳನ್ನು ನಡೆಸುತ್ತಿದ್ದರು. ಈ ರೀತಿಯಿಂದ ಆಸ್ಥಾನವು ಸಾಕ್ಷಾತ್ ಕೈಲಾಸವೆಂಬಂತೆ ತೋರುತ್ತಿತ್ತು. ಮಧ್ಯಾನ್ಹ ಕಾಲದಲ್ಲಿ ಎಲ್ಲಾ ಜನರನ್ನು ಭೋಜನಕ್ಕೆ ಕರೆಯುತ್ತಿದ್ದರು. ಮತ್ತು ರಾತ್ರಿ ಕಾಲದಲ್ಲಿ, ಸರ್ವರಿಗೂ ಊಟ ಹಾಕಿಸಿ ತೃಪ್ತಿಪಡಿಸುತ್ತಿದ್ದರು. ಏಳು ದಿವಸಗಳ ತನಕ ನಿತ್ಯ ಸಂಧ್ಯಾಕಾಲದಲ್ಲಿ ದೀಪ ಹಚ್ಚುತ್ತಲೇ ಮಂಟಪದಲ್ಲಿ ಸದ್ಗುರು ಮೂರ್ತಿಯನ್ನು ದಿವ್ಯಾಲಂಕಾರಗಳಿಂದ ಭೂಷಿಸಿ, ಆಮೇಲೆ ಆನಂದದಿಂದ ಆರತಿಯನ್ನು ಬೆಳಗುತ್ತಿದ್ದರು. ಅಸಂಖ್ಯ ಜನರು ಆ ಸಮಯದಲ್ಲಿ ಆ ಸಮಾರಂಭವನ್ನು ನೋಡುತ್ತಾ ನಾಮಘೋಷ ಮಾಡಿ, ಮಂಗಳಾರತಿಯನ್ನು ಹಾಡುತ್ತಿದ್ದರು. ಆ ಸಮಯದಲ್ಲಿ ಕೆಲವರು ಅನ್ನುತ್ತಾರೆ, "ಉತ್ಸವಕ್ಕೆ ಶ್ರೀ ಸಿದ್ಧಾರೂಢರು ಬರುವರೆಂದು ನಮಗೆ ಹೇಳಿತ್ತು, ಆದರೆ ಆತನನ್ನು ಇಲ್ಲಿ ಯಾರೂ ನೋಡಲಿಲ್ಲ,ಸುಳ್ಳೇ ಆಮಂತ್ರಣ ಪತ್ರದಲ್ಲಿ ಹಾಗೆ ಬರೆದಿತ್ತು ". ಆಗ ಭಾವಿಕ ಜನರು ಇದನ್ನು ಕೇಳಿ ಅನ್ನುತ್ತಾರೆ - 'ಸದ್ಗುರುಗಳು ಕಡೇ ದಿವಸ ಬರುವರು.” ಈ ವಚನವನ್ನು ಕೇಳಿ, ಎಲ್ಲರೂ ಕಡೆಯ ದಿವಸದ ತನಕ ಇರುವಂಥವರಾದರು. ನಿತ್ಯವೂ ಚಿತ್ರದ ಪೂಜಾ ಆಗುತ್ತಿತ್ತು. ಏಳನೇ ದಿವಸವು ಪ್ರಾಪ್ತವಾಯಿತು. ಆ ದಿವಸ ಸದ್ಗುರುಗಳು ಬರುವರೆಂಬ ವರ್ತಮಾನ ಕೇಳಿ, ಅಸಂಖ್ಯ ಜನರು ಬಂದರು. ಸಂಧ್ಯಾಕಾಲದಲ್ಲಿ ಜನ ಸಂದಣಿಯು ಹಂದರದಲ್ಲಿ ತುಂಬಿತ್ತು. ಆದರೆ ಸದ್ಗುರುಗಳು ಬಂದದ್ದು ಯಾರಿಗೂ ಕಾಣಲಿಲ್ಲ. ಆ ಸಮಯದಲ್ಲಿ ರಾಮಯ್ಯ ಸ್ವಾಮಿಯು ಪೂಜಾ ಮಾಡಲಿಕ್ಕೆ ಸಿದ್ಧನಾದನು. ದೇವರ ಮುಂದೆ ಪರದೆಯನ್ನು ಹಿಡಿದು, ಭಕ್ತ ಜನರನ್ನು ಕೂಡಿಕೊಂಡು, ಅಲಂಕಾರ ಮಾಡಲಿಕ್ಕೆ ಆರಂಭಿಸಿದನು. ಸಿದ್ದರಾಜನು  ಇನ್ನೂ ತನಕ ಬಂದಿಲ್ಲವೆಂದು ಅವರೆಲ್ಲರಿಗೂ ಮನಸ್ಸಿನಲ್ಲಿ ಬಹಳ ಚಿಂತೆ ಉತ್ಪನ್ನವಾಯಿತು. ಪೂಜಾ ಎಲ್ಲಾ ಸಿದ್ಧಮಾಡಿ ರಾಮಯ್ಯ ಸ್ವಾಮಿಯು ಸದ್ಗುರುವಿಗೆ ಪ್ರಾರ್ಥಿಸುವಂಥವನಾಗುತ್ತಾನೆ. - “ಹೇ ಸಿದ್ದ ಸದ್ಗುರುರಾಯನೇ ನಿನಗೆ ಜಯಜಯಕಾರವಿರಲಿ, ಭಕ್ತಸಖನೇ, ಬೇಗನೇ ಪ್ರಾಪ್ತನಾಗು. ನಿನ್ನ ದರ್ಶನೆದ್ದೇಶೆಯಿಂದ ಬಹು ಕುತೂಹಲಪಟ್ಟು ಅಸಂಖ್ಯ ಜನರು ಬಂದಿರುವರು. ನೀನು ಈ ಸಮಯದಲ್ಲಿ ಬಂದಿಲ್ಲವಾದರೆ ಈ ನಾಚಿಕೆ ಯಾರಿಗೆ ಆಗುತ್ತದೆ. ನೀನು ಈ ದಿನ ಇಲ್ಲಿಗೆ ಬರುವಿ ಎಂದು ಲೋಕದಲ್ಲಿ ವಾರ್ತೆಯಾಗಿರುತ್ತದೆ. ನೀನು ಬಾರದ್ದು  ನೋಡಿ, ನಿನ್ನ ಭಕ್ತರಾದ ನಮ್ಮನ್ನು ಕುರಿತು, ಎಲ್ಲರೂ ಹಾಸ್ಯ ಮಾಡುವರು. ಇದು ನೀನು ತಿಳಿದಿರುವಿ. ವಿಷಯಗಳನ್ನು ಪ್ರಾರ್ಥಿಸುವವರಿಗೆ ಅವನ್ನು ನೀನು ಶೀಘ್ರವಾಗಿ ಕೊಡುವಿ, ಆದರೆ, ಅಂತಾ ವಿಷಯಗಳನ್ನು ನಾವು ನಿನಗೆ ಬೇಡದೆ,  ಲೋಕಹಿತಾರ್ಥವಾಗಿ, ನೀನು ಇವತ್ತಿನ ದಿವಸ, ಇಲ್ಲಿ ಎಲ್ಲರಿಗೂ ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳಬೇಕೆಂಬುವದನ್ನೇ ನಾವು ಇಚ್ಚಾ ಮಾಡುತ್ತೇವೆ. ಈ  ದಿವಸ, ನಿನ್ನ ದರ್ಶನವಾಗುವದರಿಂದ, ಎಲ್ಲಾ ಜನರಿಗೂ ಅತ್ಯಂತ ಆನಂದ ಉಂಟಾಗುವದು ಮತ್ತು ನಿನ್ನ ಮೇಲೆ ಅವರ ಭಕ್ತಿಯು ವಿಶೇಷವಾಗಿ ಬೆಳೆಯುವುದು. ಇದೇ ನಮ್ಮ ಹೇತುವಾಗಿರುವದು. ಇದಕ್ಕೋಸ್ಕರವಾಗಿಯೇ ನಿನ್ನ ಅವತಾರವಿರುತ್ತದೆ- ಸದ್ಗುರು ಭಕ್ತಿಯನ್ನು ಸರ್ವತ್ರದಲ್ಲಿಯೂ ಪಸರಿಸಿ, ಜನರನ್ನು ಪವಿತ್ರ ಮಾಡಿ, ಆ ಮೂಲಕ ಅವರನ್ನು ಉದ್ದಾರ ಮಾಡಬೇಕು. ಇದೆ ಹೇತುವಿನಿಂದಲೇ ಈ ಉತ್ಸವವಾದರೂ ಆರಂಭಿಸಿತ್ತು, ಈಗ ಅಸಂಖ್ಯ ಜನರು ನಿನ್ನ ದರ್ಶನೋತ್ಸುಕರಾಗಿ ಬಂದಿರುವರು. ನೀನು ಅವರಿಗೆ ಈಗ ಪ್ರತ್ಯಕ್ಷ ದರ್ಶನ ಕೊಟ್ಟಿದ್ದಾದರೆ  ಈ ಮಹೋತ್ಸವವು ? ಸಾರ್ಥಕವಾಗುವದು. ನೀನು ಒಂದು ವೇಳೆ ನನ್ನ ಪ್ರಾರ್ಥನೆಯನ್ನು ಮನ್ನಿಸದಿದ್ದರೆ, ನಿನ್ನ ಭಕ್ತರ ವಚನಕ್ಕೆ ಅಸತ್ಯತ್ವದ ದೋಷ ಬರುವುದು. ಈ ನಾಚಿಕೆಯು, ಭಕ್ತಾಭಿಮಾನಿಯಾದ ನಿನ್ನ ಹೊರತು ಮತ್ಯಾರಿಗೆ ಇರುವುದು?' ಈ ಪ್ರಕಾರ ಈ ಪ್ರಾರ್ಥಿಸಿ, ತತ್‌ಕ್ಷಣವೇ ಪರದೆಯನ್ನು ತೆಗೆದರು. ಎಲ್ಲ ಜನರು ನೋಡುತ್ತಿರುವಾಗ, ಏನು ಚಮತ್ಕಾರವಾಯಿತೆಂದರೆ, ಪ್ರತ್ಯಕ್ಷ ಸದ್ಗುರುನಾಥನೇ ಸರ್ವಾಲಂಕಾರದಿಂದ ಮಂಡಿತನಾಗಿಯೂ, ಪ್ರಕಾಶಮಾನವಾದ ಮುಖಕಮಲ ಉಳ್ಳವನಾಗಿಯೂ, ಸುತ್ತಲೂ ಅದ್ಭುತವಾದ ತೇಜವನ್ನು ಕೂಡಿಕೊಂಡಂಥವನಾಗಿಯೂ, ಸಿಂಹಾಸನದ ಮೇಲೆ ವಿರಾಜಮಾನವಾಗಿರುವದನ್ನು ಸರ್ವರೂ  ನೋಡುವಂಥವರಾದರು. ಒಂದು ಕ್ಷಣ ಮಾತ್ರ ಎಲ್ಲರಿಗೂ ಸದ್ಗುರುನಾಥನು ಕಾಣಿಸಿಕೊಂಡನು. ಆ ಸಮಯದಲ್ಲಿ ಹ್ಯಾಗೆ ಸಮುದ್ರವು ಉಕ್ಕೇರಿ ಬರುವುದೋ, ಅಥವಾ ವರ್ಷಕಾಲದಲ್ಲಿ ಮೇಘವು ಗರ್ಜಿಸುವದೋ ಆ ರೀತಿಯಿಂದ ಆ ಸಭಾದೊಳಗೆ ಉತ್ಸಾಹವಾಯಿತು. ಸಿದ್ದ ಸದ್ಗುರುವು ಪ್ರಕಟವಾದಾಗ ಜನರೊಳಗೆ ಹುಟ್ಟಿದ ಆನಂದವು,  ಅದು ಎಷ್ಟೆಂತ ವರ್ಣಿಸಲಸಾಧ್ಯವು, ಸದ್ಗುರುವನ್ನು ನೋಡಿ, ಜನರು ಅತ್ಯಂತ ಮೋದದಿಂದ ಕುಣಿಯಲಾರಂಭಿಸಿದರು. ಅನ್ನುತ್ತಾರೆ- “ನಾವು ಧನ್ಯರು ಧನ್ಯರು. ಆ ದಯಾಘನನಾದ ಸಿದ್ಧನನ್ನು ಇಲ್ಲೇ ಕಂಡೆವು. ಆ ಸದ್ಗುರುನಾಥನು ಎಲ್ಲಾ ಸ್ಥಳದಲ್ಲಿಯೂ ವ್ಯಾಪಕನಾಗಿರುವನೆಂದು, ಈಗ ಪೂರ್ಣವಾಗಿ ನಾವು ತಿಳಿದೆವು. ನಾವು ಯಾತಕ್ಕೆ ಇತರ ದೇವರಿಗೆ ಹೋಗಬೇಕು. ಸಿದ್ದನ ಹತ್ತಿರ ತತ್ಕಾಲವೇ ದರ್ಶನವು. ಇದನ್ನು ತಿಳಿಯದೆ  ನಾವು ಇಷ್ಟು ದಿನ ವ್ಯರ್ಥವಾಗಿ ನಾಲ್ಕೂ ಕಡೆಗೆ ಓಡಾಡಿದೆವು''. ಎಲ್ಲಾ ಜನರು  ಆನಂದಭರಿತರಾದರು. ಎಲ್ಲರ ಹೃದಯದಲ್ಲಿ ಆ ಸಿದ್ಧಮೂರ್ತಿಯು  ಸ್ಥಿರವಾಗಿ ನಿಲ್ಲುವಂಥಾದ್ದಾಯಿತು. ಆ ಕ್ಷಣವೇ ಸದ್ಗುರುಮೂರ್ತಿಯು ಅದೃಶ್ಯವಾಯಿತು. ಇಲ್ಲಿಗೆ ಆ ಮಹೋತ್ಸವವು ಸಂಪೂರ್ಣವಾಯಿತು. ಇಂಥಾ ಭಕ್ತಾಭಿಮಾನಿಯಾದ ಸದ್ಗುರುವು ಲೋಕಹಿತಕ್ಕಾಗಿ ಇರುವಂಥಾ ಕಾರ್ಯಕ್ಕೆ ಸಾಹ್ಯವಾಗುತ್ತಾನೆ. ಯಾಕೆಂದರೆ ಭಕ್ತೋದ್ಧಾರಾರ್ಥವಾಗಿಯೇ ಆತನು ಅವತಾರವನ್ನು ಧಾರಣ ಮಾಡಿರುತ್ತಾನೆ. ಈ ಪವಿತ್ರವಾದ ಕಥೆಯನ್ನು ಆದರದಿಂದ ಯಾರು ಶ್ರವಣ ಮಾಡುವರೋ  ಅವರ ಮೇಲೆ ಸದ್ಗುರುವು ಕೃಪೆ ಮಾಡಿ, ದುರ್ಧರವಾದ ಅವರ ಭವಪಾಶವನ್ನು ಕ್ಷಣದಲ್ಲಿ ಹರಿದು ಬಿಡುವನು.


👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ರಾಮರಾಯನಿಗೆ ಸಿದ್ಧರು ಸ್ವಪ್ನದಲ್ಲಿ ಅಭಿನಯವನ್ನು ಕೊಟ್ಟರು. ಸಂತರ ನಡುವೆ ಸದ್ಗುರುಗಳು ಕುಳಿತು ಉಣ್ಣುವದನ್ನು ಕಂಡು ಸರ್ವರೂ ಆಶ್ಚರ್ಯಪಟ್ಟು ಅವರನ್ನು ಪೂಜಿಸಿದರು.

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 📲

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಸಿದ್ಧಾರೂಢರು ಹಾಗೂ ನವಲಗುಂದ ನಾಗಲಿಂಗ ಸ್ವಾಮಿಗಳ ಸಂಗಮದ ಲೀಲಾಕಥೆ,

ಸಿದ್ಧಾರೂಢರ ಅಭಯ ಹಸ್ತದಿಂದ ಹುಲಿ ಜನ್ಮ ಮುಕ್ತನಾಗಿ ನರಜನ್ಮಕ್ಕೆ ಅವತರಿಸಿದ ಗುರುನಾಥರೂಢರು