ಲೋಕಮಾನ್ಯ ಬಾಲಗಂಗಾಧರ ತಿಲಕ ಹಾಗೂ ಸಿದ್ಧಾರೂಢರ ಸಮಾಗಮ ಕಥೆ

 🍀ಲೋಕಮಾನ್ಯ ತಿಲಕರ ಹಾಗೂ ಸಿದ್ಧಾರೂಢರ  ಸಮಾಗಮ



ಹೀಗೆ ಪ್ರತಿನಿತ್ಯ ಶಾಸ್ತ್ರ ಶ್ರವಣ ನಡೆಯುತ್ತಿರುವಾಗ ಒಂದಾನೊಂದು ದಿನ ಓರ್ವನು ಲೋಕಮಾನ್ಯ ತಿಲಕರು ರಚಿಸಿದ ಭಗವದ್ಗೀತೆಯನ್ನು ತಂದನು. ಅದರಲ್ಲಿಯ  ಕೆಲ ಶ್ಲೋಕಗಳನ್ನು ಓದುತ್ತಾ ಈ ಭಗವದ್ಗೀತೆಯು ಕರ್ಮಪರದ ಅರ್ಥ ಬರೆದಿದ್ದನ್ನು ಸಂಶಯ ವ್ಯಕ್ತಪಡಿಸಿದನು.

ಆಗ ಸಿದ್ದಾರೂಢರು ಶ್ಲೋಕಗಳ ಅರ್ಥವನ್ನು ಗಮನಿಸಿ, ಹೇ ಚತುರ ಭಕ್ತನೇ, ನಿನ್ನ ಸಂಶಯ ವಾಸ್ತವಿಕವಾದುದಾಗಿದೆ. ಗುರುಮುಖದಿಂದ ವಿದ್ಯೆಯನ್ನು ಕಲಿಯದೇ ತನ್ನ ಮೊದಲಿನ ಕರ್ಮ ಸಂಸ್ಕಾರದಲ್ಲಿ ಮುಳುಗಿದ ಬುದ್ದಿಯಿಂದಲೇ ಕರ್ಮಪರ  ಅರ್ಥ ಬರುವಂತೆ ಗೀತಾ ರಚನಾ ಮಾಡಿದುದಾಗಿದೆ ಅಂತಾ ವಿವರಿಸಿದರು. ಈ ವಾರ್ತೆಯನ್ನು ಕೇಳಿದ ಟಿಳಕರು ನಾನು ರಚಿಸಿದ ಗ್ರಂಥವು ಸರಿಯಾಗಿದೆ. ಈ ಕುರಿತು ಅವರೊಡನೆ ವಾದ ಮಾಡುವೆ ಅಂತ ಗರ್ವದಿಂದಲೇ ಹುಬ್ಬಳ್ಳಿಗೆ ಆಗಮಿಸಿದರು. ಮಠಕ್ಕೆ ಬಂದು ಶ್ರೀಗಳ ದರ್ಶನ ಪಡೆದು ವಂದನೆಗಳನ್ನು ಮಾಡುತ್ತಾ ಲೋಕಮಾನ್ಯ ಟಿಳಕರು, ಹೇ ಪರಮರೇ, ನಾನು ಬರೆದ ಗೀತೆಯನ್ನು ನೋಡಿ ಅದರ ಅರ್ಥದ  ಬಗ್ಗೆ ಟೀಕೆ ಮಾಡಿದ್ದೀರಿ ಅಂತ ನನಗೆ ತಿಳಿದು ಬಂದಿದೆ ಎಂದು ಪ್ರಶ್ನಿಸಿದರು. ಅದಕ್ಕೆ ಸಿದ್ಧಾರೂಢರು, ಹೇ ಲೋಕಮಾನ್ಯರೇ, ಕೇಳಿರಿ, ಆನಂದಗಿರಿ, ಶ್ರೀಧರ, ಚಿದ್ಘನ ಮಧುಸೂಧನ, ಶಂಕರಾನಂದ, ಶಂಕರಾಚಾರ್ಯ ಮೊದಲಾದ ಮಹಾಮುನಿಗಳು ಗುರುಮುಖೇನ ಶೃತಿಗಳ ಅರ್ಥವನ್ನು ತಿಳಿದುಕೊಂಡು ಅಹಂಕಾರ ಭೇದಗಳನ್ನು ಮರೆತು, ವೈರಾಗ್ಯಶೀಲ ಸಂಪನ್ನರಾಗಿ ಸರ್ವರಲ್ಲಿ ಸಮಭಾವವುಳ್ಳವರಾಗಿ ಜಗತ್ತಿನ ಕಲ್ಯಾಣಕ್ಕಾಗಿ ಅತಿ ಶ್ರಮಪಟ್ಟು, ಎಳ್ಳುಕಾಳಿನಷ್ಟಾದರೂ ಸಂಶಯಗಳಿಗೆ ಅವಕಾಶವುಬಾರದಂತೆ ನಿರ್ಮಲವಾದ ಅರ್ಥವನ್ನು ಬರೆದಿದ್ದಾರೆ. ಕೊಂಕಿನಿಂದ ನಡೆವ ಜನರನ್ನು ಸತ್ಕರ್ಮದತ್ತ ಆಕರ್ಷಿಸಿ ಮೋಕ್ಷ ಮಾರ್ಗಕ್ಕೆ ಹಚ್ಚಬೇಕೆಂದು ನಾನು ಬರೆದದ್ದು ಯೋಗ್ಯವೇ ಆಗಿದೆ ಅಂತಾ ಹೇಳಿದರು. ಆರೂಢರ ನುಡಿಗಳನ್ನು ಕೇಳಿ ಉಬ್ಬಿದ ಟಿಳಕರು ಅವರನ್ನು, ಹೇ ಸ್ವಾಮಿಗಳೇ, ಆತ್ಮನು ಬಂಧನರಹಿತನು, ಪ್ರಾಣ, ಇಂದ್ರಿಯ,ಅಂತಃಕರಣ ಇವುಗಳಿಗೆ ಒಂದಕ್ಕೂ ಸಂಬಂಧ ಇಲ್ಲದವನು ಮತ್ತು ಮಾತು ಮನಗಳಿಗೆ ಮೀರಿದವನು ಎಂದು ಹೇಳುವಿರಿ. ಇದರಿಂದ ನಿಮ್ಮ ಮತವು ಶೂನ್ಯ ಮತವಾಯಿತು. ಅದಕ್ಕೆ ತಮ್ಮ ಉತ್ತರವೇನು ಅಂತಾ ಪ್ರಶ್ನಿಸಿದರು. ಆಗ ಆರೂಢರು ಅವರನ್ನು ಕುರಿತು, ಹೇ ಮತಿವಂತ ಟಿಳಕರೆ ಕೇಳಿರಿ, ಆ ಶೂನ್ಯವನ್ನು ಅರಿಯುವ ಆತ್ಮನು ನಿರಂತರ ಸಾಕ್ಷಿಕನಾಗಿ ಇರಬೇಕಾದವನಲ್ಲವೇ, ಅವನೇ ಆತ್ಮಸ್ವರೂಪನು. ಆದರೆ ಪೂರ್ವದ ಕರ್ಮಾಚರಣೆಯ  ಪೂರ್ಣವಾದ ಅನುಭವ ನಿಮಗಿರುವುದು. ಅದರ ಅಭಿಮಾನದಿಂದ ಇಂತಹ ಆತ್ಮ ಸ್ವರೂಪವನ್ನು ತಿಳಿದುಕೊಳ್ಳಲಾರದೆ ನಾಸ್ತಿಕರಂತೆ ನೀವು ಬಹಿರ್ಮುಖವಾಗಿ ಈ ರೀತಿ ಪ್ರಶ್ನೆ ಮಾಡಿದಿರಿ, ಸ್ತುತ್ಯವಾದ ಬ್ರಹ್ಮವಿದ್ಯೆಗೆ  ನೀವು  ಅಧಿಕಾರಿಯಲ್ಲ. ನಿಷ್ಕಾಮ ಕರ್ಮದಿಂದ ಅಂತಃಕರಣ ಶುದ್ದಿ ಮಾಡಿಕೊಂಡಿದ್ದರೆ  ಜ್ಞಾನಕ್ಕೆ ನೀವು ಅಧಿಕಾರಿಗಳಾಗುವಿರಿ. ನೀವು ಹಾಗೆ ಮಾಡಲಿಲ್ಲ. ಯಾಕೆಂದರೆ ನಾನು ಬರೆದ ಗೀತಾ ರಹಸ್ಯಕ್ಕೆ ಬುಧರಿಂದ ಕುಂದು ಬಂತೆಂದು ಕುಗ್ಗದಿರಿ. ಈಗ ಇಲ್ಲಿಗೆ ಬಂದ ನಿಮಗೆ ಸ್ತುತಿ ಮಾಡಿದ್ದಕ್ಕೆ ಹಿಗ್ಗಿದಿರಿ, ಈ ಪ್ರಕಾರ ಹಿಗ್ಗು ಕುಗ್ಗುಗಳಿರುವವೆಂದ  ಮೇಲೆ ನೀವು ಕರ್ಮದ ರಹಸ್ಯವನ್ನು ತಿಳಿಯುವವರಾಗಿರಿ.ಹೇಗೆ  ಕರ್ಮ ಮತ್ತು ಜ್ಞಾನಗಳ ಬಗ್ಗೆ ಯಥಾರ್ಥ ಜ್ಞಾನವಿಲ್ಲದೆ ಗೀತೆಗೆ  ಅರ್ಥ ಬರೆದಿದ್ದು ಸರಿಯೇ ಎಂಬುದನ್ನು ನೀವೇ ವಿವೇಚನೆ ಮಾಡಿರಿ ಮತ್ತು ಅನುಭವದಿಂದ ತಿಳಿದು ನೋಡಿರಿ ಎಂದು ನೇರ ನುಡಿಯಿಂದ ಆರೂಢರು ತಿಲಕರಿಗೆ ಹೇಳಿದರು.


ಲೋಕಮಾನ್ಯರು ಕೇಳಿ ಆಶ್ಚರ್ಯಚಕಿತರಾದರು. ಕೂಡಿದ ಭಕ್ತ ಸಮುದಾಯವನ್ನು ಕುರಿತು, ಮಹನಿಯರೇ ನಾನು ಭಾರತದ ತುಂಬಾ ಅಲ್ಲದೆ ಯುರೋಪ್, ಅಮೆರಿಕ, ಆಫ್ರಿಕಾ, ಏಷ್ಯಾ ಮೊದಲಾದ ದೇಶಗಳ ಜನರಿಂದ ಪ್ರಖ್ಯಾತಿಯಾಗಿ ಲೋಕಮಾನ್ಯ ಅಂತಾ ಬಿರುದಾಂಕಿತನಾಗಿರುವೆ, ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಬೇಕೆಂದು ಚಿಂತನೆ ಮಾಡಿ ಬಂದೆ. ವಾದ ವಿವಾದ ಮಾಡಲು ಕಾತುರತೆಯಿಂದ ಬಂದೆ. ನನ್ನಲ್ಲಿ ಒಡಮೂಡಿದ ಎಲ್ಲ ಪ್ರಶ್ನೆಗಳು ಅಡಗಿದವು. ನಾನು ವಾದ ಮಾಡಲು ಅಸಮರ್ಥನಾಗಿ ಮೂಕನಾಗಿರುವೆ. ಈತನು ಮಹಾಪುರುಷನು, ನಿಜವಾದ ಆದಿನಾರಾಯಣನಾಗುವದು ಸತ್ಯವು  ಎಂದು ಸಾರುತ್ತಾ ಸದ್ಗುರುಗಳನ್ನು ಕುರಿತು, ಹೇ ಕರುಣಾ ಸಾಗರನೇ, ಸಾಧು ಶಿರೋಮಣಿ ಭಕ್ತೋದ್ಧಾರನೇ, ನನ್ನಲ್ಲಿ ಅಹಂಕಾರಕ್ಕೆ ಕಾರಣವಾದ ಅಪರಾಧವನ್ನು ಮನ್ನಿಸು ಅಂತಾ ಶಿರಬಾಗಿ ಕೇಳಿಕೊಂಡರು. ಅದಕ್ಕೆ ಶ್ರೀಗಳು ಪ್ರಸಾದ ಕೊಟ್ಟು ಆಶೀರ್ವದಿಸಿದರು. ನಂತರ ಟಿಳಕರು ತಮ್ಮ ಊರಿಗೆ ಮರಳಿದರು.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

👇👇👇👇

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಸಿದ್ಧಾರೂಢರ ಜಾತ್ರೆಯಿಂದ ಲಕ್ಷಾವಧಿ ಭಕ್ತ ಸಮುದಾಯಕ್ಕೆ ಬೋಧನೆ, ಅನ್ನಸಂತರ್ಪಣೆ ಮುಂತಾದವುಗಳಿಂದ ಅವತಾರಿ ಪುರುಷನ ಮಹಿಮೆ.

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ