ಕಲಾವತಿಬಾಯಿಯ ಸಂಕ್ಷಿಪ್ತ ಕಥೆ
🕉️ಕಲಾವತಿಬಾಯಿಯ ಸಂಕ್ಷಿಪ್ತ ಕಥೆ 🌺
ಕಾರವಾರದಲ್ಲಿ ಜನಿಸಿದ ರುಕ್ಮಿಣಿಬಾಯಿ, ಗೋಕರ್ಣ ಕ್ಷೇತ್ರದಲ್ಲಿ ಬೆಳೆದು, ತಮಿಳುನಾಡಿನಲ್ಲಿಯ ತಿರುಕೋಯಲೂರ ಊರಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜೊತೆ ವಿವಾಹವಾಗಿ, ಇಬ್ಬರು ಪುತ್ರರನ್ನು ಪಡೆದ ನಂತರ ಗಂಡ ತೀರಿಕೊಂಡನು. ಈಕೆಯು ಆಧ್ಯಾತ್ಮ ಚಿಂತನೆಯಲ್ಲಿದ್ದುದರಿಂದ ಗುರುವಿನತ್ತ ಧಾವಿಸಬೇಕೆಂಬ ಇಚ್ಛೆಯಾಗಿ ಹುಬ್ಬಳ್ಳಿಗೆ ಬಂದು, ಶ್ರೀ ಸಿದ್ಧಾರೂಢಸ್ವಾಮಿಗಳ ಮಠದಲ್ಲಿ ಬಂದು ಗುರುಸೇವೆಯಲ್ಲಿ ಆಸಕ್ತಳಾದಳು. ನಿತ್ಯವೂ ಪಂಚಾಕ್ಷರಿ ಭಜನೆಯಿಂದ ಸಂತ ಮೀರಾ ಬಾಯಿಯಂತೆ ಕಾಣುತ್ತಿದ್ದಳು. ಈಕೆಯ ಭಕ್ತಿಯನ್ನು ಕಂಡು ಶ್ರೀ ಸಿದ್ಧಾರೂಢರು ಈಕೆಗೆ ಕಲಾವತಿ ಅಂತಾ ನಾಮಕರಣ ಮಾಡಿ ಪಂಚಾಕ್ಷರಿ ಮಂತ್ರದ ಭಜನಾ, ಶಾಸ್ತ್ರ, ಶ್ರವಣ, ಭಕ್ತಿಮಾರ್ಗದಲ್ಲಿ ಜನರನ್ನು ತೊಡಗಿಸಲು ಬೆಳಗಾವಿಗೆ ಹೋಗಲು ಅಪ್ಪಣೆ ಮಾಡಿದರು. ಗುರುಗಳ ಅಪ್ಪಣೆಯಂತೆ ಬೆಳಗಾವಿಗೆ ಹೋಗಿ ಮಾಡುತ್ತಿದ್ದ ಭಕ್ತಿ ಪಂಥಕ್ಕೆ ಸುತ್ತಲಿನ ಅನೇಕ ಊರುಗಳ ಜನರು ಹಾಗೂ ಮಹಾರಾಷ್ಟ್ರದ ಭಕ್ತ ಸಮುದಾಯ ಆಕರ್ಷಿತವಾಯಿತು. ಕಲಾವತಿಯ ಶಿಷ್ಯವರ್ಗದ ಬೃಹತ್ ಸಮುದಾಯವಾಯಿತು. ಕಲಾವತಿ ಆಶ್ರಮವು ಪ್ರಶಾಂತ ವಾತಾವರಣದಿಂದ ನಿರ್ಮಲ ಚಿತ್ತಕ್ಕೆ ನಾಂದಿಯಾಗಿದೆ. ಆ ಆಶ್ರಮಕ್ಕೆ ಬರುವ ಭಕ್ತರು ಮೊದಲಿಗೆ ಶ್ರೀ ಸಿದ್ಧಾರೂಢಸ್ವಾಮಿ ಮಠದ ದರ್ಶನ ಪಡೆಯಬೇಕೆಂದು ಮಾಡಿದ ಕಟ್ಟಾಜ್ಞೆಯನ್ನು ಈಗಲೂ ಪಾಲಿಸಲಾಗುತ್ತಿದೆ.
👇👇👇👇👇👇👇👇👇👇👇👇👇👇
👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
