ಬೆನಕಪ್ಪ ಮತ್ತು ಆತನ ಪತ್ನಿಯನ್ನು ಗ್ರಂಥಿರೋಗದಿಂದ ರಕ್ಷಿಸಿದ ಕಥೆ.

 🍁 ಬೆನಕಪ್ಪ ಮತ್ತು ಆತನ ಪತ್ನಿಯನ್ನು ಗ್ರಂಥಿರೋಗದಿಂದ ರಕ್ಷಿಸಿದ ಕಥೆ.



ಬೆನಕಪ್ಪನೆಂಬ ಒಬ್ಬ ಭಕ್ತನು ಮಠದ ಗೋಡೆಯ ಮೇಲೆ ಚಿತ್ರಗಳನ್ನು ತೆಗಿಯುತ್ತಿರುವಾಗ, ಒಬ್ಬ ಮಿತ್ರನ ಕೂಡ ಹೀಗನ್ನುವಂಥವನಾದನು - “ಮುಂದಿನ ಶಿವರಾತ್ರಿಯ

ಉತ್ಸವ ಸಮಯದಲ್ಲಿ, ನಾನು ಒಂದು ಅಪೂರ್ವವಾದ ಚಿತ್ರವನ್ನು ತೆಗೆಯುವೆನು. ಆ ಚಿತ್ರವನ್ನು ನೋಡಿ ಎಲ್ಲಾ ಜನರು ಕೌತುಕಪಟ್ಟು ಚಕಿತರಾಗುವರು".  ಈ ಪ್ರಕಾರ ಬೆನಕಪ್ಪನು ಅನ್ನುತ್ತಿರುವಾಗ ಅವನಿಗೆ ತಿಳಿಯದೆ, ಸಿದ್ದರು ಅವರ ಹಿಂದೆ ನಿಂತಿದ್ದರು. ಆಗ ಅವರ ಮುಂದೆ ಬಂದು ಹೀಗನ್ನುತ್ತಾರಲ್ಲ - ''ನೀನು ಚಿತ್ರ ಮಾಡುವೆನೆಂದು ಹೇಳುತ್ತಿ, ಆದರೆ ಮುಂದಿನ ವರ್ಷ ಈಶ್ವರನು ತೆಗೆಯುವ ಚಿತ್ರವು ನಿಶ್ಚಯವಾಗಿ ಎಲ್ಲಕ್ಕೂ ವಿಲಕ್ಷಣವಾಗುವದು. ಅದೇನೆಂದರೆ ನಗರವೇ ಅಡವಿಯಾಗುವದು. ಅರಣ್ಯಕ್ಕೆ ಎಲ್ಲಾ ಜನರು ಹೋಗುವರು ಮತ್ತು ಪಟ್ಟಣದಲ್ಲಿ ಕಾಡು ಪಶುಗಳು ಬಂದು ವಸ್ತಿ ಮಾಡಿಕೊಂಡಿರುವವು. ರಸ್ತೆಗಳು ಭಯಂಕರವಾಗಿ ಕಾಣಿಸುವವು. ಪ್ರೇತಗಳು ಬೀದಿಗಳಲ್ಲಿ ಬಿದ್ದಿರುವವು, ಮತ್ತು  ಗೃಧ್ರಾದಿ ಪಕ್ಷಿಗಳು ಅವುಗಳ ಮೇಲೆ ಕುಳಿತು ಸುಖದಿಂದ ಭೋಜನ ಮಾಡುತ್ತಿರುವವು''. ಹೀಗಂದು ಸಿದ್ದರು ಸುಮ್ಮನಾದರು. ಈ ವಚನವನ್ನು ಕೇಳಿ ಅವರಿಬ್ಬರು ಘಾಬರಿಯಾದರು. ಎಷ್ಟು ವಿಚಾರ ಮಾಡಿದರೂ, ಆ ಮಾತುಗಳು ಅರ್ಥವೇನೆಂದು ಅವರಿಗೆ ತಿಳಿಯದೇ ಹೋಯಿತು. 


ಇದಾದ ಆರು ತಿಂಗಳ ನಂತರ, ಮುಂಬೈ ಶಹರದೂಳಗೆ ಗ್ರಂಥಿರೋಗವು ವ್ಯಾಪಿಸಿತು. ಕೆಲವು ಕಾಲ ಮೇಲೆ ಆ ರೋಗವು ಹುಬ್ಬಳ್ಳಿಗೂ ಬರುವಂಥದ್ದಾಯಿತು. ಬಹಳ ಜನರು ಸಾಯಲಾರಂಭಿಸಿದರು. ಮರಣ ಭೀತಿಯು  ಎಲ್ಲರನ್ನೂ ವ್ಯಾಪಿಸಿಕೊಂಡು, ಜನರೆಲ್ಲಾ ತಮ್ಮ ತಮ್ಮ ಗೃಹಗಳನ್ನು ಬಿಟ್ಟು, ಅರಣ್ಯಕ್ಕೆ ಹೋಗುವಂಥವರಾದರು. ಯಾವದೊಂದು  ಗೃಹದೊಳಗೆ ವ್ಯಾಧಿ ಬಂತೆಂದರೆ ಮನೆಯೊಳಗಿನ ಜನರನ್ನೆಲ್ಲಾ ಹೊರಗೆ ಓಡಿಸುತ್ತಿದ್ದರು. ಅವರು ಅಡವಿಯೊಳಗೆ ಗುಡಿಸಲುಗಳನ್ನು ಕಟ್ಟಿಕೊಂಡು ಇರುತ್ತಿದ್ದರು. ರೋಗ ಆದವರ ರಕ್ಷಣೆ ಮಾಡಲಿಕ್ಕೆ ಯಾರೂ ಇಲ್ಲದೇ , ರಸ್ತೆ ಮೇಲೆ ಬಿದ್ದು ಸಾಯುತ್ತಿದ್ದರೂ. ಆ ಹೆಣಗಳನ್ನು ತೆಗೆಯುವವರು ಇಲ್ಲದೆ, ಗೃಧ್ರಾದಿ ಪಕ್ಷಿಗಳು ಅಲ್ಲಿ ವಾಸ ಮಾಡುತ್ತಿದ್ದವು. ಹೇಗೆ ಸಿದ್ದರ ಭವಿಷ್ಯ ಕಥನವು, ಪೂರ್ಣ ಸತ್ಯವಾಯಿತು. ಮುಂದೆ ಸದ್ಗುರುಗಳ ಮಹಿಮಾವನ್ನು ಸಾವಧಾನ ಚಿತ್ತದಿಂದ ಶ್ರವಣ ಮಾಡುವಂಥವರಾಗಿರಿ, ಬೆನಕಪ್ಪನಿಗೆ ಗ್ರಂಥಿರೋಗವು ಹತ್ತಿತು. ಆಗ ಸರಕಾರಿ ನೌಕರನು ಮನೆಗೆ ಬಂದು, ವ್ಯಾಧಿಯ ವರ್ತಮಾನವನ್ನು ತಿಳಿದುಕೊಂಡು, ಉಚ್ಛಾಧಿಕಾರಿಗೆ ತಿಳಿಸಲಿಕ್ಕೆ ಹೋದನು. ಅಧಿಕಾರಿಗಳು ರೋಗಿಯ ಮನೆಗೆ ಬಂದು, ರೋಗಿಯನ್ನು ನೋಡಿ ಊರ ಹೊರಗೆ ಕಳುಹಿಸುವರು. ಊರ ಹೊರಗೆ ಹೋದರೆ ಅಲ್ಲಿ ನಿಶ್ಚಯವಾಗಿ ಸಾಯುತ್ತಿದ್ದರೂ. ಬೆನಕಪ್ಪನ ಹೆಂಡತಿಯು  ಬಹಳ ಗಾಬರಿಯಾಗಿ, ಸಿದ್ಧಾರೂಢರಿಗೆ ಶರಣು ಬಂದು ಅನ್ನುತ್ತಾಳೆ- ''ಹೇ ದಯಾಘನನೇ, ನಾವು ದೀನರಾಗಿ ನಿಮಗೆ ಶರಣು ಬಂದಿದ್ದೇವೆ, ನಮ್ಮನ್ನು ರಕ್ಷಿಸು.” ಸಿದ್ಧರು ಎಲ್ಲಾ ವರ್ತಮಾನವನ್ನು ಕೇಳಿಕೊಂಡು, ಅಂದದ್ದೇನೆಂದರೆ - ''ನೀವಿಬ್ಬರೂ ನಾಮಸ್ಮರಣೆಯನ್ನು ಮಾಡಿರಿ. ಏನೇನೂ ಹೆದರಬೇಡಿರಿ. ನಿಮ್ಮನ್ನು ಯಾರೂ ಊರ ಹೊರಗೆ ಕಳುಹಿಸುವದಿಲ್ಲ'', ಕೆಲವು ದಿವಸಗಳಾದ ಮೇಲೆ ಬೆನಕಪ್ಪನು ನೆಟ್ಟಗಾದನು. ಅಲ್ಲಿಯವರೆಗೆ ಅವರ ಮನೆಗೆ ಯಾರೊಬ್ಬರೂ ಅಧಿಕಾರಿ ಬಂದಿಲ್ಲ, ಅವರನ್ನು ಊರ ಹೊರಗೆ ಕಳುಹಿಸಲೇ ಇಲ್ಲ. ಅನಂತರ ಆತನ ಪತ್ನಿಗೆ ಅದೇ ರೋಗ ಬಂತು. ಆಗ ಸರ್ಕಾರಿ ನೌಕರನು ಮನೆಗೆ ಬಂದನು. ಆತನು  ನೋಡುವಾಗ ಎದುರಿಗೆ ರೋಗ ಬಂದ ಸ್ತ್ರೀಯು  ಮಲಗಿಕೊಂಡಿದ್ದಳು. ಆದರೆ ಆಕೆಯು ಅವನ ಕಣ್ಣಿಗೆ ಕಾಣಿಸದೆ ಹೋದಳು. ಆತನು  ಮನೆಯೊಳಗೆ ರೋಗಿ ಇಲ್ಲವೆಂದು ಬರೆದುಕೊಂಡು ಹೋದನು. ಭಕ್ತ ರಕ್ಷಣೆಯಲ್ಲಿ ತತ್ಪರನಾದ ಸದ್ಗುರುರಾಯನ ಕಾರ್ಯಗಳು ಹೀಗಿರುತ್ತವೆ. ಆಮೇಲೆ ಸದ್ಗುರುವಿನ ಪ್ರಸಾದ ವಿಭೂತಿಯನ್ನು ಬೆನಕಪ್ಪನ ಪತ್ನಿಗೆ ಹಚ್ಚಿದ ಮಾತ್ರದಿಂದಲೆ, ಆಕೆಗೆ ಪೂರ್ಣ ನೆಟ್ಟಗಾಯಿತು. ಈ ಪ್ರಕಾರ ಈ ಸಿದ್ಧ ಸದ್ಗುರುರಾಯನು ಭಕ್ತರನ್ನು ದಯೆಯಿಂದ ಪಾಲಿಸುತ್ತಿರುವನು.

 👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಗ್ರಂಥಿರೋಗ ದಿಂದ ಜೀವಪ್ಪನ ಕುರುಡಾದ ನೇತ್ರಗಳನ್ನು ಸದ್ಗುರುಹಸ್ತ ಸ್ಪರ್ಶದಿಂದ ದೃಷ್ಟಿ ಬಂದ ಕಥೆ,

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 📲

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ