ಗ್ರಂಥಿರೋಗದಿಂದ ಜೀವಪ್ಪನ ಕುರುಡಾದ ಕಣ್ಣುಗಳನ್ನು ಸದ್ಗುರುಹಸ್ತ ಸ್ಪರ್ಶದಿಂದ ದೃಷ್ಟಿ ಬಂದ ಕಥೆ,

 👀ಗ್ರಂಥಿರೋಗದಿಂದ ಜೀವಪ್ಪನ ಕುರುಡಾದ ನೇತ್ರಗಳನ್ನು  ಸದ್ಗುರುಹಸ್ತ ಸ್ಪರ್ಶದಿಂದ ದೃಷ್ಟಿ ಬಂದ ಕಥೆ,



ಹಳೆ ಹುಬ್ಬಳ್ಳಿಯಲ್ಲಿ ಜೀವಪ್ಪನೆಂಬ ಒಬ್ಬ ನೇಕಾರನಿರುತ್ತಿದ್ದನು. ಆತನು ದರಿದ್ರಾವಸ್ಥೆಯಲ್ಲಿದ್ದನು. ತನ್ನ  ಸ್ತ್ರೀ ಪುತ್ರರನ್ನು ಕೂಡಿಕೊಂಡು ನಿತ್ಯದಲ್ಲಿಯೂ ಸಿದ್ಧಾರೂಢರಲ್ಲಿಗೆ ಬಂದು, ಅಲ್ಲಿ ಪ್ರೇಮದಿಂದ ಭಜನೆ ಮಾಡಿ, ಅನಂತರ ಆರತಿ ಬೆಳಗಿ, ನಮಸ್ಕಾರಾದಿಗಳನ್ನು ಮಾಡಿ, ತಮ್ಮ ಮನೆಗೆ ಬರುತ್ತಿದ್ದನು. ಹೀಗಿರುತ್ತಾ ಊರೂಳಗೆ ಗ್ರಂಥಿರೋಗವು ಬಂದು, ಜೀವಪ್ಪನಿಗೂ ಹತ್ತಿತು. ಆಗ್ಗೆ ಸ್ತ್ರೀಯು ಗಾಬರಿಯಾಗಿ ತನ್ನ ಮಕ್ಕಳನ್ನು ಕರಕೊಂಡು ಸಿದ್ಧಾರೂಢರ ಪಾದಕ್ಕೆ ಬಂದಳು. ಸದ್ಗುರುವಿಗೆ ನಮನ ಮಾಡಿ ಅನ್ನುತ್ತಾಳೆ -" ಹೇ ದೀನನಾಥನೇ, ನಿನಗೆ ಶರಣು ಬಂದಿರುವೆನು. ಯಜಮಾನರಿಗೆ ರೋಗ ಬಂದು ಮಲಗಿರುವಾಗ್ಗೆ ನಮಗೀಗ ಯಾರು ರಕ್ಷಿಸುವವರು ? ನಿನ್ನ ಹೊರತು ಅನ್ಯ ರಕ್ಷಕರಿಲ್ಲವೆಂದು ನಾನು ನಿರ್ಧಾರವಾಗಿ ತಿಳಿದಿರುವೆನು. ನೀನು ನಮ್ಮ ಮೇಲೆ ಕೃಪೆ ಮಾಡಿ ನನ್ನ ಪತಿಯನ್ನು ಬದುಕಿಸತಕ್ಕದ್ದಾಗಿರುತ್ತದೆ". ಆಕೆಯ ಈ ದೀನವಾಣಿಯನ್ನು ಕೇಳಿ ಸಿದ್ಧರು ಆಕೆಯ ಮತ್ತು ಮಕ್ಕಳ ಮೇಲೆ ಕೃಪೆಯಿಂದ ವಿಭೂತಿಯನ್ನು ಕೊಟ್ಟು ನಾಮಸ್ಮರಣೆ ಮಾಡುತ್ತಿರಬೇಕೆಂದು ಹೇಳಿದರು. ಮಹಾತ್ಮರ ಕೃಪೆಯಿಂದ ಜೀವಪ್ಪನು ಪೂರ್ಣ ನೆಟ್ಟಗಾದನು, ಆದರೆ ರೋಗದ ಭರದಿಂದ ಆತನ ಎರಡೂ ಕಣ್ಣುಗಳು ಕುರುಡಾದವು. ಆಗ ಆ ದಂಪತಿಗಳು ಬಹಳ ತಳಮಳಿಸುವಂಥವರಾದರು. ಯಾಕೆಂದರೆ

ಅವರ ಜೀವಿಕಾವೃತ್ತಿಯು ನಡಿಯದಂತಾಯಿತು. ಆಗ್ಗೆ ಪತಿಯನ್ನು ಕರೆದುಕೊಂಡು ಸ್ತ್ರೀಯು ಪುನಹಾ ಸದ್ಗುರುಗಳ ಸನ್ನಿಧಿಯಲ್ಲಿ ಪ್ರಾಪ್ತಳಾಗಿ, ಬಹು ದೈನ್ಯ ಭಾವದಿಂದ ನಿವೇದಿಸುತ್ತಾಳೆ - ''ನಾವು ಸಮುದ್ರ ಜಲದೊಳಗಿಂದ ತಪ್ಪಿಸಿಕೊಂಡು ಬಾವಿಯೊಳಗೆ ಬಿದ್ದಂತಾಯಿತು. ಗ್ರಂಥಿಯೋಗದೊಳಗಿಂದ ಬದುಕಿ, ವೃತ್ತಿನಾಶ ಮೂಲಕ ಕ್ಷುಧೆಯ ಬಾಧೆಯಿಂದ ಮರಣ ಭಯವು ಪ್ರಾಪ್ತಿಯಾಗಿರುವದು. ಇಂಥಾ ಸಂಕಷ್ಟದೊಳಗಿಂದ, ದರಿದ್ರರಾದ ನಮ್ಮನ್ನು ಬಿಡಿಸುವವರನ್ನು ನಿನ್ನ ಹೊರತು ಮತ್ಯಾರನ್ನೂ ಸರ್ವಥಾ ಕಾಣೆವು. ಆದ್ದರಿಂದಲೇ ಪುನಹಾ ನಿನ್ನ ಪಾದಕ್ಕೆ ಶರಣು ಬಂದಿರುತ್ತೇವೆ' ಅಂದಳು. ಆಗ ದೀನದಯಾಳನಾದ ಸಿದ್ದ ಸದ್ಗುರುರಾಜನು, ಭಕ್ತ ರಕ್ಷಕನು, ಕರುಣಾಕರನು, ಶರಣಾಗತಿಗೆ ಕೃಪೆಯಿಂದ ಛಾಯಾ ಕೊಡುವಂತಹ ಮಹಾ ತರುವಿನಂತೆ ಇರುವವನಾಗಿ, ಏನು ಮಾಡಿದರೆಂದರೆ, ಆ ಜೀವಪ್ಪನನ್ನು ತನ್ನ ಸಮೀಪ ಕರೆದು, ಎರಡೂ ಕಣ್ಣುಗಳಿಗೆ ತನ್ನ ಅಮೃತ ಹಸ್ತ ಸ್ಪರ್ಶ ಮಾಡಿ, ಒಂದು ಅರಿವೆಯಿಂದ ಆತನ ಕಣ್ಣುಗಳನ್ನು ಕಟ್ಟಿ ಮನೆಗೆ ಹೋಗಿ ಬಿಚ್ಚಿರೆಂದನು. ಆಮೇಲೆ ಸದ್ಗುರುಗಳಿಗೆ ನಮಸ್ಕರಿಸಿ, ಆ ದಂಪತಿಗಳು ಮನೆಗೆ ಬಂದರು. ಗೃಹಕ್ಕೆ ಬಂದ ಕೂಡಲೇ, ಪತ್ನಿಯು ಪತಿಯ ಕಣ್ಣಿಗೆ ಕಟ್ಟಿದ ಅರಿವೆಯನ್ನು ಬಿಚ್ಚಿದಾಕ್ಷಣವೇ, ಬಹಳ ಆಶ್ಚರ್ಯವಾಯಿತು. ರೋಗ ಬರುವ ಮೊದಲು ಕಣ್ಣಿಗೆ ಹ್ಯಾಗೆ ಕಾಣಿಸುತ್ತಿತ್ತೊ ಹಾಗೆಯೇ ಜೀವಪ್ಪನಿಗೆ ಈಗ ಕಾಣಿಸುವುದು ನೋಡಿ, ಅವರಿಗೆ ಅತಿ ಆನಂದವಾಗುವಂಥಾದ್ದಾಯಿತು. ಮತ್ತು ಸದ್ಗುರು ಸ್ತವನ ಮಾಡುವಂಥವರಾದರು. ಅನ್ನುತ್ತಾರೆ - ಹೇ ಸದ್ಗುರುವೇ  ಈ ಹೊತ್ತಿನಿಂದ ನಮ್ಮ ಸಂಸಾರವನ್ನು ನಿನ್ನ ಚರಣಗಳಿಗೆ ಅರ್ಪಿಸಿರುತ್ತೇವೆ. ನಿನ್ನ ದಾಸರೇ ಆಗಿ ನಡಿವೆವು. ಮತ್ತು ನಮ್ಮ ಮೇಲೆ ಏನೇನೂ ಭಾರ ಹಾಕಿಕೊಳ್ಳಲಾರೆವು "ದೀನ ದಯಾಳುವಾದ ಸದ್ಗುರುನಾಥನು, ಸತ್ಯವಾಗಿ ಭಕ್ತರ  ಸಂಕಷ್ಟಗಳನ್ನು ಪರಿಹರಿಸಿ, ಅವರನ್ನು ರಕ್ಷಿಸುತ್ತಾನೆ. ಅದರಿಂದ ಭಕ್ತಿಯು ವೃದ್ಧಿಯಾಗುತ್ತಿರುತ್ತದೆ.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಭಕ್ತ ಸಾತಪ್ಪನ ಮೈಮೇಲೆ ಬಿಸಿ ತುಪ್ಪ ಬಿದ್ದು,ಮೈಸುಟ್ಟ ಮೂರ್ಚ್ಛಾಗತನಾಗಿ ಬಿದ್ದಿರುವಾಗ ಸದ್ಗುರುವು ಆತನನ್ನು ಆರಾಮ ಮಾಡಿದನು

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 📲

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ