ಹರಿಜನ-ಗಿರಿಜನ ಘೋಡಕೆ ಮಲ್ಲಪ್ಪನ ಮನೆಯಲ್ಲಿ ಸದ್ಗುರುಗಳು ಅಕ್ಷಯ ಪ್ರಸಾದ ಮಾಡಿದ ಕಥೆ

 ✡️ ಹರಿಜನ-ಗಿರಿಜನರೊಡನೆ ಬೆರೆತು ಘೋಡಕೆ ಮಲ್ಲಪ್ಪನಲ್ಲಿ ಪ್ರಸಾದ ಸ್ವೀಕರಿಸಿ ಅಕ್ಷಯ ಪ್ರಸಾದ ಮಾಡಿದ ಸಿದ್ಧಾರೂಢರು 




ಶ್ರೀ ಸಿದ್ಧಾರೂಢರು  ಯಾವುದೇ ಜಾತಿ, ಮತ, ಪಂಥ, ಉಚ್ಚ ನೀಚ, ಬಡವ ಬಲ್ಲಿದ ಭೇದವಿಲ್ಲದ ಸರ್ವರಲ್ಲಿ ಸಮದೃಷ್ಟಿಯನ್ನಿಟ್ಟಿದ್ದರು. ಒಂದಾನೊಂದು ದಿನ ಬಡತನದ ಬೇಗೆಯಿಂದ ತಾಪಗೊಂಡ ಡೋರರ ಪೈಕಿ ಓರ್ವನು ಮೈಮೇಲೆ ಹರಿದ ಬಟ್ಟೆಯುಳ್ಳವನಾಗಿ ಬಂದು, ಶ್ರೀ ಸಿದ್ಧಾರೂಢ ಸ್ವಾಮಿಗಳ ಪಾದಗಳಲ್ಲಿ ವಂದನೆಗಳನ್ನು ಸಲ್ಲಿಸಿ ದೂರ ನಿಂತು, ಮೈಮಣಿದು, ಕರಮುಗಿದು ತನ್ನ ಮನೆಗೆ ಪ್ರಸಾದಕ್ಕೆ ಬರಬೇಕೆಂದು ಪ್ರಾರ್ಥಿಸಿದನು. ಅದಕ್ಕೆ ಒಪ್ಪಿ ಮಲ್ಲಪ್ಪಣ್ಣ ದಿವಟೆಯವರು ಕೊಟ್ಟ ಟಾಂಗಾದಲ್ಲಿ ಶ್ರೀಗಳು ಆತನ ಮನೆಗೆ ಬಂದರು. ಚಿಕ್ಕ ತಟ್ಟಿ ಗೋಡೆಯ ಮನೆ, ಮುರಿದ ಮಣೆಯ ಮೇಲೆ ಕೂಡ್ರಿಸಿ, ದಂಪತಿಗಳು ಸಹಿತ ಪಾದ ಪೂಜೆ ಮಾಡಿ ನಮ್ಮನ್ನು ಉದ್ಧರಿಸು ಅಂತ ಕೇಳಿಕೊಂಡರು. ಒಂದು ಪುಟ್ಟ ಪಾತ್ರೆಯಲ್ಲಿ ಮಾಡಿದ ಪಾಯಸ ೨, ೩, ಜನರಿಗೂ ಸಾಲುತ್ತಿದ್ದಿಲ್ಲ. ಆದರೆ ಶ್ರೀಗಳ ಜೊತೆಗೆ ೨೫, ೩೦ ಜನ ಭಕ್ತರಿದ್ದರು. ಶ್ರೀಗಳು ಆ ಪಾಯಸದ ಪಾತ್ರೆಯಲ್ಲಿ ತಮ್ಮ ಅಮೃತ ಹಸ್ತವನ್ನಿಟ್ಟರು. ನೀಡಿದಂತೆಲ್ಲ ಬೆಳೆಯತೊಡಗಿತು. ಶ್ರೀಗಳ ಜೊತೆಗೆ ಬಂದ ಭಕ್ತರೆಲ್ಲರೂ ಭೋಜನ ಮಾಡಿದರೂ  ಆ ಪಾತ್ರೆಯಲ್ಲಿ ಮೊದಲಿದ್ದಷ್ಟೆ  ಪಾಯಸ ಉಳಿಯಿತು. ಈ ಚಮತ್ಕಾರವನ್ನು ಕೇಳುತ್ತಾ ಆ ಓಣಿಯವರೆಲ್ಲರೂ ಬಂದು ಶ್ರೀಗಳಿಗೆ ಭಕ್ತಿಯಿಂದ ವಂದಿಸಿ, ಪ್ರಸಾದ ಸ್ವೀಕಾರ ಮಾಡುತ್ತಿದ್ದ ದೃಶ್ಯವು  ಆಕರ್ಷಣೀಯವಾಗಿತ್ತು. ಆತನನ್ನು ಕರೆದು ನಿನ್ನಲ್ಲಿ ಸದಾ ಓಂ ನಮಃ ಶಿವಾಯ ಭಜನೆ, ಕೀರ್ತನೆ ನಡೆಯಲಿ ನಿನ್ನ ವಂಶೋದ್ಧಾರವಾಗಲಿ ಅಂತ ಆಶೀರ್ವದಿಸಿ ಟಾಂಗಾದಲ್ಲಿ ಕುಳಿತು ಶ್ರೀಗಳು ಮಠಕ್ಕೆ ಮರಳಿದರು. ಹರಿಜನ ಗಿರಿಜನ ಕೇರಿಗೆ ಸಂದರ್ಶನ ನೀಡಿ ಅವರಲ್ಲಿ  ಪಾದಪೂಜೆ ಮಾಡಿಸಿಕೊಂಡು ಅವರಲ್ಲಿ ಪ್ರಸಾದ ಸ್ವೀಕರಿಸಿದ ಪ್ರಪ್ರಥಮ ಸ್ವಾಮೀಗಳೆಂದರ, ಶ್ರೀ ಸಿದ್ಧಾರೂಢರೆ, ಮಾನವ ಮಾತ್ರರೆಲ್ಲರನ್ನು ಸಮಾನತೆಯಿಂದ ಕಂಡ ಈ ಮಹಾತ್ಮನ ದರ್ಶನವಾಗುತ್ತಲೆ ಈ ಕೇರಿಯ ಜನ ತಂಡೋಪತಂಡವಾಗಿ ಮಠಕ್ಕೆ ಬರತೊಡಗಿದರು. ಸೇವಾ ಮಾಡತೊಡಗಿದರು. ಆ ಡೋರ  ಭಕ್ತನೇ ಘೋಡಕೆ ಮಲ್ಲಪ್ಪ ಅವರು ತಮ್ಮ ಮನೆಯಲ್ಲಿ ಪ್ರತಿ ಸೋಮವಾರ ಸಾಯಂಕಾಲ ಶ್ರೀ ಸಿದ್ಧಾರೂಢರ  ಭಾವಚಿತ್ರಕ್ಕೆ ಪೂಮಾಲೆ ಹಾಕಿ ಪೂಜೆ ಮಾಡಿ, ಆ ಓಣಿಯ ಜನರನ್ನು ಕರೆಸಿ ಪಂಚಾಕ್ಷರಿ ಮಂತ್ರ ಭಜನೆ ಕೀರ್ತನೆ ಆರಂಭಿಸಿ, ಶ್ರೀಗಳ ಜನ್ಮೋತ್ಸವ ಕಾರ್ಯ ಕ್ರಮ ಹಮ್ಮಿಕೊಂಡರು. ಶ್ರೀ ರಾಮನವಮಿ ದಿನ ಶ್ರೀಗಳ ಜಯಂತಿ ಬಂದಿದ್ದರಿಂದ ಶ್ರೀ ಸಿದ್ಧಾರೂಢರ ದೊಡ್ಡದಾದ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ಇಟ್ಟು ಹಳೇಹುಬ್ಬಳ್ಳಿಯಿಂದ ಗಣೇಶ ಪೇಟೆಗೆ ಹೋಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಿಂದ ಶ್ರೀಗಳ ಮಠಕ್ಕೆ ತಲುಪಿದ ನಂತರ ಶ್ರೀಗಳ ಪೂಜಾ ಮಾಡಿ, ಅನ್ನಸಂತರ್ಪಣೆ ಬೃಹತ್ ಕಾರ್ಯದಲ್ಲಿ ತೊಡಗಿದವರಿಗೆ ಘೋಡಕೆ ಮಲ್ಲಪ್ಪಣ್ಣ ಈ ಕಾರ್ಯದಲ್ಲಿ ಹರಿಜನ, ಗಿರಿಜನ ಹಿಂದುಳಿದ ಎಲ್ಲ ಪಂಗಡಗಳ ಜನರು ತೊಡಗಿದರು. ಈ ಪುಣ್ಯದ ಫಲ ರೂಪವಾಗಿ ಘೋಡಕೆ ಮನೆತನವು ವಿವಿಧ ಉದ್ಯೋಗ ಹಾಗೂ ಫ್ಯಾಕ್ಟರಿ ಆರಂಭಿಸಿ ನಗರದ ನಾಮಾಂಕಿತ ಮನೆತನವಾಯಿತು. ಘೋಡಕೆ ಮಲ್ಲಪ್ಪನ ಪುತ್ರ ಗಂಗಪ್ಪ, ಬಸಪ್ಪ ಮತ್ತು ಮನೆತನದ ಫಕ್ಕೀರಪ್ಪ ಮುಂತಾದ ವಂಶಸ್ಥರಲ್ಲರೂ ಶ್ರೀಗಳು ಸೇವೆಯಲ್ಲಿ ತೊಡಗಿದ್ದರಿಂದ ಮುನ್ಸಿಪಲ್ ಕೌನ್ಸಿಲರ್, ವಿಧಾನ ಪರಿಷತ್ ಸ್ಥಾನ ಮಾನಗಳು ದೊರೆತದ್ದಲ್ಲದೆ ಅದೇ ಪುಣ್ಯ ಫಲದಿಂದ ಅವರ ಅಳಿಯಂದಿರಾದ ಶ್ರೀ ತುಕಾರಾಮ ಪೋಳ ಅವರು ಈ ಮಹಾನಗರ ಪೂಜ್ಯ ಮಹಾಪೌರರಾದ. ಮತ್ತು ಶ್ರೀಗಳ ಮಠದ ಧರ್ಮದರ್ಶಿಗಳಾಗಿದ್ದಾರೆ ಮತ್ತು ಘೋಡಕೆ ಮಲ್ಲಪ್ಪಣ್ಣ ಹಾಕಿಕೊಟ್ಟ ಶ್ರೀಗಳ ಜಯಂತಿ ಉತ್ಸವವನ್ನು ರಾಮನವಮಿ ದಿನ ಈಗಲೂ ಈ ಮನೆತವು ಆಚರಿಸುತ್ತಿಲಿದೆ.

👇👇👇👇

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಸಿದ್ಧಾರೂಢರ ಮತ್ತು ಮಹಾತ್ಮ ಗಾಂಧೀಜಿ ಸಮಾಗಮ.

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ