ಸಿದ್ಧಾರೂಢರ ರಥೋತ್ಸವವು, ಸಮಾಧಿ ಕಟ್ಟಡ .

 ✡️ಸಿದ್ಧಾರೂಢರ ರಥೋತ್ಸವವು ಬೆಳೆದದ್ದು ಸಮಾಧಿ ಕಟ್ಟಡ,ಅಕ್ಕಲಕೋಟಿ ಶರಣಪ್ಪರಿಂದ ರುದ್ರಾಕ್ಷಿ ಮಂಟಪ ಪೂಜಾ ಆರಂಭಿಸಿದ್ದು.



ಈ ಪ್ರಕಾರ ಸಿದ್ಧಾರೂಢರ ಕೀರ್ತಿಯು ಜಗತ್ತಿನ ತುಂಬಾ ವ್ಯಾಪಿಸತೊಡಗಿತು. ಈ ವಾರ್ತೆಯನ್ನು ಕೇಳಿ, ವಿಜಯಪುರದ ಷಣ್ಮುಖಸ್ವಾಮಿ, ಬೆಂಗಳೂರಿನ ಅನಂತ ಸ್ವಾಮಿಗಳು ಮುಂತಾದ ಅನೇಕ ಮಹಾತ್ಮರು ಹುಬ್ಬಳ್ಳಿಗೆ ಬಂದು, ಸಿದ್ಧಾರೂಢ ದರ್ಶನ ಪಡೆದು ಮಠದಲ್ಲಿ ಕೆಲಕಾಲ ಉಳಿದು, ಶಾಸ್ತ್ರ ಶ್ರವಣ ಮಾಡಿ ಆನಂದಪಟ್ಟು ತಮ್ಮ ತಮ್ಮ ಊರುಗಳಿಗೆ ಹೋಗಿ ಬರುವ ಪರಿಪಾಠ ಬಿತ್ತು. 


ಹೀಗಿರಲು ಹಿಂದಿನ  ಐದಾರು ವರ್ಷಗಳಿಗಿಂತಲೂ ಮಿಗಿಲಾಗಿ ಕಾರ್ತಿಕ ಮಾಸದಲ್ಲಿ ಜಾತ್ರೆಯು  ಬಹು ವೈಭವದಿಂದ ನಡೆಯತೊಡಗಿತು. ಅಂಬಾರಿಯ ಮೇಲೆ ಅಲಂಕೃತ ಸಿದ್ಧಾರೂಢರ ಮೂರ್ತಿಯನ್ನು ಕುಡ್ರಿಸುತ್ತ ಪಲ್ಲಕ್ಕಿಯಲ್ಲಿ ಸಿದ್ಧಾರೂಢನ್ನು ಕೂಡ್ರಿಸಿ ಊರಲ್ಲಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡತೊಡಗಿದರು. ನಂತರ ಸುಂದರವಾದ ಮಂಟಪದಲ್ಲಿ ಕುಳ್ಳಿರಿಸಿ ಕೀರ್ತನೆ ಮಾಡಿದ ನಂತರ ಪೂಜಾ, ಆರತಿ ಆದ ನಂತರ ಅನ್ನಸಂತರ್ಪಣೆ ನಡೆಯತೊಡಗಿತು. ಮುಂದೆ ಮೂರನೇ ದಿನ ಶಾಸ್ತ್ರ ಶ್ರವಣ, ಹರಿಕೀರ್ತನೆ ಭಜನಾ ಕಾರ್ಯಕ್ರಮಗಳು ನಾಲ್ಕೈದು ದಿನ ನಡೆಯುತ್ತಾ ಆರನೇ ದಿನ ಸದ್ಭಕ್ತರೆಲ್ಲರಿಂದೊಡಗೂಡಿ ಕೆರೆಯ  ದಂಡೆಯ ಮೇಲೆ ಆಸೀನರಾಗಿ ಸುತ್ತಲೂ ದೀಪಗಳನ್ನು ಹಚ್ಚುತ್ತಾ ಉತ್ಸಾಹದಿಂದ ಹೂವಿನ ತೇರಿನಲ್ಲಿ ಆರೂಢರನ್ನು ಕೂಡ್ರಿಸಿ  ಕೆರೆಯಲ್ಲಿ ತಿರುಗಾಡಿಸುತ್ತಲಿದ್ದರು. ಹರನ ನಾಮಸ್ಮರಣೆ ಮಾಡುತ್ತಾ ವಾದ್ಯ ವೈಭವಗಳಿಂದ ರಥೋತ್ಸವ ಪೂರೈಸುತ್ತಾ, ಶ್ರೀಗಳನ್ನು ಮಂಟಪಕ್ಕೆ ಕರೆತರುತ್ತಲಿದ್ದರು. ಮೂರನೇ ದಿನ ಶಾಸ್ತ್ರ ಶ್ರವಣ ಕೀರ್ತನೆಯಾದ ನಂತರ ಅನ್ನಸಂತರ್ಪಣೆ ಮಾಡುತ್ತಲಿದ್ದರು. ಮಂತ್ರಗಳಿಂದ ಕೆತ್ತಲ್ಪಟ್ಟ ಶ್ರೀಗಂಧದ ದೊಡ್ಡ ತೇರಿನ ಮಧ್ಯಭಾಗದ ಮಂಟಪವನ್ನು ಹೂ, ಕೇತರಿಗಳಿಂದ ಶೃಂಗರಿಸಿ ಸಾಯಂಕಾಲ ಜರಿಮಡಿ ಪೂಮಾಲೆಗಳಿಂದ ಅಲಂಕಾರ ಮಾಡಿ, ಶ್ರೀಗಳನ್ನು ಕೂಡ್ರಿಸಿ, ನವರತ್ನ ಖಚಿತ ಸುವರ್ಣ ಕಿರೀಟ ಧಾರಣೆ ಮಾಡಿಸಿ ಸಾಯಂಕಾಲಕ್ಕೆ ಸುಮಂಗಲೆಯರಿಂದ ಮಂಗಳಾರತಿಯಾದ ಕೂಡಲೇ ಹರಹರ ಮಹಾದೇವ ಅಂತಾ ಜಯಘೋಷಗಳ ನಿನಾದದಲ್ಲಿ ತೇರನ್ನು ಎಳೆಯತೊಡಗಿದರು.


ತೇರು ಪಾಜೇಗಟ್ಟಿ ಮುಟ್ಟಿದ ನಂತರ ತೇರಿನಿಂದ ಶ್ರೀಗಳನ್ನು ಪಲ್ಲಕ್ಕಿಯಲ್ಲಿ ಕೂಡ್ರಿಸಿಕೊಂಡು ಮಂಟಪದಲ್ಲಿ ವೈಭವದ  ಸಿಂಹಾಸನದಲ್ಲಿ ಕುಳ್ಳಿರಿಸಿದರು. ಪಾದಪೂಜೆ ಮಾಡಿ ಮಂಗಳಾರತಿ ಮಾಡುವಾಗ ಮದ್ದನ್ನು ಹಾರಿಸಿದರು. ಈ ಪ್ರಕಾರ ವೈಭವದಿಂದ ಮೂರು ವರ್ಷಗಳವರೆಗೆ ಜಾತ್ರೆಯು ನಡೆಯಿತು. ಜಾತ್ರೆಯಾದ ನಂತರ ಹಿಂಭಾಗದಲ್ಲಿಯ  ಹೂವಿನ ತೋಟವನ್ನು ತೆಗೆದು ಶ್ರೀಗಳ ಸಮಾಧಿಯನ್ನು ಭಕ್ತರೆಲ್ಲರೂ ಕೂಡಿ ಕಟ್ಟಿಸಿದರು. ನಂತರ ಮಾಘಮಾಸದಲ್ಲಿ ಜಾತ್ರೆಯನ್ನು ಆರಂಭಿಸಿದರು, ಮಾಘ ಬಹುಳ ಅಷ್ಟಮಿ ಪ್ರಾತಃಕಾಲ ಬ್ರಹ್ಮಿ ಮುಹೂರ್ತದಲ್ಲಿ ಸಪ್ತಾಹ ಆರಂಭ ಮಾಡಿ ಅನ್ನ ಸಂತರ್ಪಣೆ ಮಾಡತೊಡಗಿದರು. ಮುಂಜಾನೆ ಶಾಸ್ತ್ರ ಶ್ರವಣ, ಸಾಯಂಕಾಲ ಕೀರ್ತನೆ, ಪಾದಪೂಜೆ ಮಹಾಮಂಗಳಾರತಿ ಮಾಡುತ್ತಾ ಅಮಾವಾಸ್ಯೆಯ ದಿನ ರಥೋತ್ಸವ, ಮಾರನೇ ಉಷಃಕಾಲ ಸಪ್ತಾಹದ  ಮುಕ್ತಾಯ ಸಮಾರಂಭ ನಡೆಯು ತೊಡಗಿತು. ಶ್ರಾವಣ ಮಾಸದಲ್ಲಿ ತಪ್ಪದ ರಥೋತ್ಸವ ಮಾಡಲು ಹರ್ಷದಿಂದ ಭಕ್ತರೆಲ್ಲರೂ ಒಪ್ಪಿಕೊಂಡು ಈ ಪ್ರಕಾರ ಜಾತ್ರೆಗಳನ್ನು ನಡೆಸತೊಡಗಿದರು. ವಿಜಯಪುರ ರಾಮದಾಸರು ಹುಬ್ಬಳ್ಳಿಯ  ತಿರುಕಂಭಟ್ಟರು ಸಪ್ತಾಹ ಕಾಲಕ್ಕೆ ನಿರಂತರವಾಗಿ ಕೀರ್ತನೆ ಮಾಡಲು ಒಪ್ಪಿಕೊಂಡರು. ಈ ಪ್ರಕಾರ ವರ್ಷದಲ್ಲಿ ಎರಡು ಸಲ ರಥೋತ್ಸವಗಳು ನಡೆಯತೊಡಗಿದವು. ಹೀಗೆ ಎರಡು ವರ್ಷಗಳ ಕಾಲ ಜಾತ್ರೆ ನಡೆದ ನಂತರ ದೇಶದ ತುಂಬಾ ಭಯಂಕರ ಪ್ಲೇಗರೋಗ ಬಾಧೆಯಿಂದ ಬಹುಜನರು ಮೃತ್ಯುವಿನ ಬಾಯಿಗೆ ತುತ್ತಾಗಿ, ಎಲ್ಲಿ ನೋಡಿದಲ್ಲಿ ಶವಗಳು ಕಾಣತೊಡಗಿದವು. ಸಾಂಸರ್ಗಿಕ ರೋಗವಾಗಿದ್ದರಿಂದ ಸಭೆ, ಸಮ್ಮೇಲನ ಜಾತ್ರೆ ಮುಂತಾದ ಜನರ ಕೂಟಗಳು ನಡೆಯದಂತೆ ಸರಕಾರಿ ಕಟ್ಟಪ್ಪಣೆಯಾಯಿತು,


ಇದರಿಂದ ಸಿದ್ಧಾರೂಢರ ಜಾತ್ರೆಯು ಸಂಕ್ಷಿಪ್ತ ಕಾರ್ಯಗಳಿಂದ ಸಾಂಗವಾಯಿತು. ಪ್ಲೇಗಿನ ಬಾಧೆ ತಣ್ಣಗಾಗಲು, ಪನಃ ಜಾತ್ರೆ ವೈಭವದಿಂದ ಜರುಗತೊಡಗಿತು. ವರ್ಷಾ ಜನರು ಬರುವಿಕೆ ಹೆಚ್ಚಾಗತೊಡಗಿತು. ಶ್ರೀಗಳ ಕರುಣೆ ಉಕ್ಕೇರುತ್ತ ಜನಸಾಗರವೇ ಜಾತ್ರೆಗೆ ಬರತೊಡಗಿತು. ಈ ವಾರ್ತೆ ಕೇಳಿ ಕಾಶಿನಾಥ ಛತ್ರೆ  ಎಂಬಾತನು ಆಶ್ರಮಕ್ಕೆ ಬಂದನು. ಪರಮ ಭಕ್ತಿಯಿಂದ ಸಿದ್ಧರ ಚರಣಗಳಿಗೆ ವಂದನೆಗಳನ್ನು ಅರ್ಪಿಸಿದನು. ಮೇಲಿಂದ ಮೇಲೆ ಬರಹತ್ತಿದನು. ಒಂದಾನೊಂದು ದಿನ ಶ್ರೀಗಳಲ್ಲಿ ನಯ ವಿನಯದಿಂದ ಅರಿಕೆ ಮಾಡಿಕೊಂಡು ಸಮಾಧಿಯ ಮುಂಭಾಗದ ಪಡಸಾಲೆ, ಪಾತಾಳಂಕಣಗಳನ್ನು ಕಟ್ಟಿಸಿಕೊಡಲು ಅಪ್ಪಣೆ ಕೇಳಿದನು. ಅದಕ್ಕೆ ಶ್ರೀಗಳ ಒಪ್ಪಿಕೊಂಡರು. ಕಾಶೀನಾಥ ಛತ್ರೆಯ  ಇಚ್ಛೆಯಂತೆ ಬಾದಾಮಿ ಕಲ್ಲುಗಳಿಂದ ಕಟ್ಟಡ ನಿರ್ಮಾಣದ  ಸೇವೆಯಲ್ಲಿ ಹಳೇಹುಬ್ಬಳ್ಳಿ ತುಕ್ಕಪ್ಪ ಸಪಾರೆ ಮತ್ತು ಖಂಡಪ್ಪ ಬೆಳಮಕರ  ಈ ಪ್ರಮುಖರು ನಡುಕಟ್ಟಿ ನಿಂತರು. ಇನ್ನೂ ಕೆಲ ಭಕ್ತರನ್ನು ಸಂಘಟಿಸಿ ಬಾದಾಮಿಯಿಂದ ಕಲ್ಲುಗಳನ್ನು ತರಿಸಿದರು. ಕಲ್ಲುಗಳಲ್ಲಿ ತೊಲಿ, ಕಂಬ, ಬೋದಿಗೆ, ನಿಲುವು ಗೋಡೆಯ ದಿಂಬು ಮೊದಲಾದವುಗಳನ್ನು ಕೆತ್ತಿಸಿದರು. ಕಲ್ಲಿನ ಕಟ್ಟಡಕ್ಕೆ ಗಚ್ಚನ್ನು ಉಪಯೋಗಿಸಿದರು, ಕಲ್ಲುಗಳಲ್ಲಿ ಸರ್ಪವನ್ನು ಕೆತ್ತಿಸಿದರು. ಅಲ್ಲದೆ ಈಶೋಪನಿಷತ್ತಿನ ಮಂತ್ರಗಳನ್ನು ಕಲ್ಲುಗಳಲ್ಲಿ ಕೆತ್ತಿಸಿದರು. ಸಮಾಧಿ ಮಂದಿರವು ಸುಂದರವಾಗಿ ಕಾಣತೊಡಗಿತು.

ಮುಂದೆ ಅಂಕಲಕೋಟೆಯ ಶರಣಪ್ಪನು ಆಗಮಿಸಿ, ರಥೋತ್ಸವದಲ್ಲಿ ರುದ್ರಾಕ್ಷಿ ಮಂಟಪವನ್ನು ಕಟ್ಟಿಸಿದನು. ಸಿದ್ಧಾರೂಢಪಾದ ಪೂಜೆ ಮಾಡುತ್ತ ಕೀರ್ತನೆ ಮಾಡಿ ಅನ್ನ ಸಂತರ್ಪಣೆ ಮಾಡಿದನು.

ಮುಂದೆ ನಿರಂಜನ ಬಾಬು ಎಂಬಾತನು ಬಂದು ಭಕ್ತಿಯಿಂದ ಸ್ವಾಮಿಗಳ ಸೇವೆಯಲ್ಲಿ ನಿರತನಾದನು. ಹರಿದ್ವಾರ, ಲಖನೌ, ಹೃಷಿಕೇಶ, ನಾಶಿಕ, ಕಾಶಿ ಮೊದಲಾದ ಕಡೆಗಳಿಂದ ಮಹಾತ್ಮರು ಆಗಮಿಸಿ ಬ್ರಹ್ಮ ಜಿಜ್ಞಾಸೆಯಲ್ಲಿ ತೊಡಗುತ್ತಿದ್ದರು. ಮತ್ತು ದಕ್ಷಿಣಾಮೂರ್ತಿಯೇ  ಈ ಜಗತ್ತನ್ನು ಉದ್ದರಿಸಲು ಅವತಾರ ಧಾರಣ ಮಾಡುವಾತನೇ ಸಿದ್ದಾರೂಢರು ಅಂತಾ ಭಾವಿಸಿ ಶ್ರೀಗಳಲ್ಲಿ  ವಂದನೆಗಳನ್ನು ಅರ್ಪಿಸಿ ಹೋಗುತ್ತಿದ್ದರು.

👇👇👇👇

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಶರೀಫ ಸಾಹೇಬರು ಸಿದ್ಧಾರೂಢ ಮಠಕ್ಕೆ ಬಂದು ಕಾಯಿ ಮಹಿಮೆಯನ್ನು ತೋರಿಸಿದ ಕಥೆ,

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ