ಸದ್ಗುರು ಜ್ವರದಿಂದ ಪೀಡಿತರಾದಾಗ ವೈದ್ಯನು ಕೊಟ್ಟ ಎಲ್ಲ ಮಾತ್ರೆಗಳನ್ನು ನುಂಗಿ ವೈದ್ಯನನ್ನು ಭಯಪಡಿಸಿದ ಕಥೆ

 🍀ಸದ್ಗುರುಗಳು ಜ್ವರದಿಂದ ಪೀಡಿತರಾಗಿದ್ದಾಗ ಒಮ್ಮೆಗೇ ಬಹಳ ಗುಳಿಗೆಗಳನ್ನು ನುಂಗಿದಾಗ ವೈದ್ಯನು ಹೆದರಿ ಅತ್ತಾಗ  ಸದ್ಗುರು ನೆಟ್ಟಗಾದರು.



 ಶ್ರೀ ಸಿದ್ದ ಸದ್ಗುರು ಮಹಾರಾಜರು ಶರೀರ ತೊಟ್ಟಿರುವುದರಿಂದ, ಪ್ರಸಂಗದಲ್ಲಿ ರೋಗಗಳನ್ನು ಸ್ವೀಕರಿಸುತ್ತಿದ್ದರು; ಯಾಕೆಂದರೆ, ದೇಹವು ಸ್ವಾಭಾವಿಕವಾಗಿ ರೋಗದ ಬೀಜವಾಗಿರುತ್ತದೆ. ಒಮ್ಮೆ ಸಿದ್ದರಿಗೆ ಮಹಾಜ್ವರವು ಪ್ರಾಪ್ತವಾಗಿ, ಬಹು ಕಷ್ಟದಿಂದ ನರಳುತ್ತಾ ಹಾಸಿಗೆಯ ಮೇಲೆ   ಊರುಳ್ಯಾಡುತ್ತಿದ್ದರು. ಇದನ್ನು ನೋಡಿ ಭಕ್ತ ಜನರು ಬಹಳ ಘಾಬರಿಯಾಗಿ ಔಷಧ ಗುಳಿಗೆಗಳನ್ನು ತಂದು ಕೊಡುತ್ತಿದ್ದರು. ಸಿದ್ಧರು ಅವುಗಳನ್ನು ಹಾಸಿಗೆಯ ಬುಡಕ್ಕೆ ಇಟ್ಟು, “ಇನ್ನಷ್ಟು ನಿಂತು ತೆಗೆದುಕೊಳ್ಳುವೆನು,” ಎಂದನ್ನುತ್ತಿದ್ದರು. ಒಂದು ದಿವಸ ಒಬ್ಬ ಪ್ರಸಿದ್ಧ ವೈದ್ಯನು ಬಂದು, ಬಹಳ ಅಮೋಘವಾದ ಮಾತ್ರೆಗಳೆಂದು  ಕೊಟ್ಟು ಹೋದನು. ಸಿದ್ಧಾರೂಢರು, ಅವುಗಳನ್ನು ಹಾಸಿಗೆ ಬುಡಕ್ಕೆ ಇಟ್ಟರು. ಪ್ರತಿ ದಿನದಲ್ಲಿಯೂ ಭಕ್ತ ಜನರು ಔಷಧ ಗುಳಿಗೆಗಳನ್ನು ತಂದು ಕೊಡುತ್ತಿದ್ದರು, ಮತ್ತು ವೈದ್ಯನು ನಿತ್ಯ ಬಂದು ಜ್ವರವನ್ನು ಪರೀಕ್ಷಿಸಿ  ಮಾತ್ರೆಗಳನ್ನು ಕೋಟ್ಟು ಹೋಗುತ್ತಿದ್ದರು. ಆದರೆ ರೋಗವು ಏನೇನು ಕಡಿಮೆಯಾಗಿದೆ ಇದ್ದದ್ದನ್ನು ನೋಡಿ, ಒಂದು ದಿನ, ವೈದ್ಯನು ಸದ್ಗುರುಗಳನ್ನು ಕುರಿತು - "ಮಹಾರಾಜರೆ,  ರೋಗವು ಏನೇನು ಕಡಿಮೆಯಾಗಲಿಲ್ಲ. ನನ್ನ ಗುಳಿಗೆಗಳು ಅಮೋಘವಾಗಿದ್ದವು. ಅವುಗಳನ್ನು ಉಪಯೋಗಿಸಿದ್ದಾದರೆ ಜ್ವರವೂ ಅವಶ್ಯವಾಗಿ ಕಡಿಮೆಯಾಗಬೇಕಿತ್ತು. ನೀವು ಅವನ್ನು ತಗೆದುಕೊಂಡಿರಲಿಕ್ಕಿಲ್ಲ. ರೋಗವು ಹ್ಯಾಗೆ ಹೋದೀತು ? ಆದ್ದರಿಂದ ದೈನ್ಯಭಾವದಿಂದ ನಿಮ್ಮನ್ನು ಕುರಿತು ಪ್ರಾರ್ಥಿಸುವದೇನೆಂದರೆ - ಈಗಲಾದರೂ ಔಷಧವನ್ನು ಸ್ವೀಕರಿಸಿ, ಭಕ್ತರ ಇಚ್ಛೆಯನ್ನು ಪಾಲನ ಮಾಡಿ, ದೇಹವನ್ನು ನಮಗೋಸ್ಕರ ರಕ್ಷಿಸತಕ್ಕದ್ದು", ಎಂದು ವೈದ್ಯನು ಅನ್ನಲು, ಸದ್ಗುರುಗಳು ಹಾಸ್ಯವದನದಿಂದ- “ನಿನ್ನ ಆಗ್ರಹವಿರುವದಾದರೆ " ಈಗಲೇ ಎಲ್ಲಾ ಔಷಧವನ್ನು ತೆಗೆದುಕೊಳ್ಳುವೆನು', ಎಂದು ಎದ್ದರು. ಹಾಸಿಗೆ ಬುಡಕ್ಕೆ ಕೈಹಾಕಿ, ಮುಷ್ಠಿ ತುಂಬ ಗುಳಿಗೆಗಳನ್ನು ತೆಗೆದುಕೊಂಡು  ಬಾಯಿ ತೆಗೆದು, ಅಷ್ಟೂ ಹಾಕಿಕೊಂಡು ನುಂಗಿಬಿಟ್ಟರು. ಇದನ್ನು ನೋಡಿ  ವೈದ್ಯನು ಘಾಬರಿಯಾಗಿ - “ಅಪರಾಧವಾಯಿತು'' ಎಂದು ತನ್ನ ಮುಖದ ಮೇಲೆ ಬಡಿದುಕೊಂಡು ನೆಲದ ಮೇಲೆ ಬಿದ್ದು ದುಃಖದಿಂದ ಊರುಳ್ಯಾಡಲಾರಂಭಿಸಿದನು. ಅಲ್ಲಿದ್ದ ಅನೇಕ ಜನರು ಸಹಾ ಬಹು ಖಿನ್ನರಾಗಿ, - “ಇನ್ನು ಮೇಲೆ ಆಸೆ ಹಿಡಿಯುವುದು ವ್ಯರ್ಥವು. ನಮ್ಮ ಪುಣ್ಯವು ಇಂದಿಗೆ ತೀರಿತು'' ಅನ್ನುವಂಥವರಾದರು. ಅಷ್ಟರಲ್ಲಿ ಸಿದ್ದರು ಎದ್ದು ನಿಂತು - 'ನನಗೇನೇನೂ ವ್ಯಥೆ ಇಲ್ಲ, ವ್ಯರ್ಥವಾಗಿ ಯಾಕೆ ಗಡಬಡಿಸುತ್ತೀರಿ. ರೋಗವು ನನಗೆ ಎಂದೂ ಬಂದಿದ್ದಿಲ್ಲ. ನನಗೆ ಜನ್ಮ ಮರಣಗಳು ಇಲ್ಲೆ ಇಲ್ಲ; ಶರೀರವೇ ಇಲ್ಲ, ರೋಗ ಎಲ್ಲಿಂದ ಬರುವದು! ನಾನು ಯಾರು ಏನೆಂಬುದು ನಿಮ್ಮಿಂದ ತಿಳಿಯಲಾಗದು,'' ಎಂದು ಅನ್ನುತ್ತಾ, ಅಡ್ಡಾಡಲಿಕ್ಕೆ ಆರಂಭಿಸಿದರು. ಹದಿನೈದು ದಿವಸಗಳ ತನಕ ಜ್ವರದಿಂದ ಹಾಸಿಗೆ ಹಿಡಿದು ಮಲಗಿದವರು ಕ್ಷಣದಲ್ಲಿ ಎದ್ದು, ಸಶಕ್ತರಿದ್ದಂತೆ  ಓಡ್ಯಾಡುವದನ್ನು ನೋಡಿ, ಸರ್ವರೂ ಆಶ್ಚರ್ಯಪಟ್ಟು ಅನ್ನುತ್ತಾರೆ. - ಮಹಾತ್ಮರ ಮಹಿಮಾ ಇಷ್ಟೇ ಎಂದು ಸೀಮಾ ಹತ್ತುವದಿಲ್ಲ. ನಮ್ಮ ಭ್ರಮೆಯಿಂದ ಅವರು ನಮ್ಮಂತೆ ಶರೀರಿಯೆಂದು  ತಿಳಿಯುತ್ತೇವೆ. ಯಾವಾತನ ಪಾದ ತೀರ್ಥದ ಪ್ರಭಾವದಿಂದ ನಾವು ಮಹಾರೋಗಗಳಿಂದ ಮುಕ್ತರಾಗುವೇವೂ, ಆ ಸದ್ಗುರುರಾಯನಿಗೆ ನಾವು ಔಷಧವನ್ನು ಕೊಟ್ಟು, ಮೂರ್ಖತ್ವವನ್ನು ಪ್ರಾಪ್ತಿ ಮಾಡಿಕೊಂಡೆವು.” ಈ ಪ್ರಕಾರವಾಗಿ ಸದ್ಗುರು ಮಹಿಮೆ ವರ್ಣಿಸುತ್ತಾ, ಆ ಜನರೆಲ್ಲರು ತಮ್ಮ ಗೃಹಗಳಿಗೆ ಹೋಗುವಾಗ “ನಮ್ಮ ಅದ್ಭುತವಾದ ದೈವಯೋಗದಿಂದ ಇಂಥಾ ಸದ್ಗುರುನಾಥನನ್ನು ನಾವು ಹೊಂದಿರುವೆವು'', ಎಂದು ಅನ್ನುತ್ತಿದ್ದರು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಗರ್ಭನಿಲ್ಲದ ದಾನವ್ವ ಸದ್ಗುರು ದಯೆಯಿಂದ ಹಡೆದಾಗ , ಸದ್ಗುರುಗಳು ಕೂಸನ್ನು ತೆಗೆದುಕೊಂಡು ಹೋದರು. ಆಮೇಲೆ ಆಕೆಯನ್ನು ಅನುಗ್ರಹಿಸಿ ಎರಡನೇ ಪುತ್ರನನ್ನು ಕೊಟ್ಟರು.

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ