ಸಿದ್ಧಾರೂಢರನ್ನು ವಿರೋಧಿಸಿದ ರಮಾನಾಥನ ಮನೆಯಲ್ಲಿ ಸರ್ವದೇವರ ಮೂರ್ತಿಗಳು ಸಿದ್ಧಾರೂಢ ಮೂರ್ತಿಗಳಾಗಿ ಕಂಡಿದ್ದು

 🌺ಸಿದ್ಧರನ್ನು ಪೂಜಿಸಬೇಕೆಂದು ಕೃಷ್ಣಾಬಾಯಿಯು ಹೇಳಲು ಪತಿಯಾದ ರಮಾನಾಥನು ವಿರೋಧಿಸಿದಾಗ , ಅವರ ಮನೆಯಲ್ಲಿ ಸರ್ವ ದೇವರಮೂರ್ತಿಗಳು ಸಿದ್ಧಾರೂಢ ರೂಪವಾಗಿರುವದನ್ನು ಕಂಡನು,



ಪುಣ್ಯವತಿಯಾದ ಹುಬ್ಬಳ್ಳಿ ನಗರದೊಳಗೆ, ರಮಾನಾಥನೆಂಬ ಬ್ರಾಹ್ಮಣ ಗೃಹಸ್ಥನಿರುವನು. ಆತನಿಗೆ ಕೃಷ್ಣಾಬಾಯಿ ಎಂಬಾಕೆ ಪತ್ನಿ ಇರುವಳು. ಅವರ ಮಗನ ಉಪನಯನ ಕಾರ್ಯವನ್ನು ಸಂಪಾದಿಸುವದಕ್ಕೋಸ್ಕರವಾಗಿ, ಮನೆಯಲ್ಲಿ ತಯಾರಿ ನಡೆಯುತ್ತಿರುವಾಗ್ಗೆ, ಕೃಷ್ಣಾಬಾಯಿ ಬಂದು, ಪತಿಯನ್ನು ಕುರಿತು ಅನ್ನುತ್ತಾಳೆ- “ನಮ್ಮ ಪುತ್ರನ ಉಪನಯನ

ಕಾರ್ಯವನ್ನು ನಡಿಸಬೇಕಾಗುತ್ತದೆ. ಯಾಕೆಂದರೆ, ಈ ಪುತ್ರನು  ಹುಟ್ಟುವ ಪೂರ್ವದಲ್ಲಿ ಎರಡು ಕೂಸುಗಳು ಹುಟ್ಟಿದ ಕೂಡಲೇ ತೀರಿಕೊಂಡವು. ಆಗ ಮಕ್ಕಳು ಹ್ಯಾಗೆ ಬದುಕುವವು  ಎಂಬ ಮಹಾ ಚಿಂತೆ ಉತ್ಪನ್ನ ವಾಯಿತು. ಆಗ ಯಾರೋ ಒಬ್ಬರು ಹೇಳಿದರು - “ಶ್ರೀ ಸಿದ್ಧಾರೂಢ ಚರಣಗಳಿಗೆ ಪ್ರಾಪ್ತವಾಗಿ ಪ್ರಾರ್ಥಿಸಿದ್ದಾದರೆ  ಅವರ ಕೃಪೆಯಿಂದ ಮಕ್ಕಳು ಬದುಕುವವು''. ಈ ಕೀರ್ತಿಯನ್ನು ನಾನು ಕೇಳಿ, ಈ ನಮ್ಮ ಪುತ್ರನು  ಹೊಟ್ಟೆಯಲ್ಲಿರುವಾಗ ನಾನು ಸಿದ್ಧಾಶ್ರಮಕ್ಕೆ ಹೋಗಿ ಪ್ರಾರ್ಥಿಸಿದೆನು - ''ಹೇ ಸದ್ಗುರುನಾಥಾ, ನನಗೆ ಪುತ್ರನನ್ನು ದಯಪಾಲಿಸಿ, ಆತನನ್ನು ದೀರ್ಘಾಯು ಮಾಡಿದ್ದಾದರೆ, ಆತನ ಉಪನಯನ ಕಾಲದಲ್ಲಿ ನಿಮ್ಮನ್ನು ಗೃಹಕ್ಕೆ ಕರಿಸಿ ಪೂಜೆಯನ್ನು ಮಾಡಿ, ಸಂತೋಷಪಡಿಸುವೆನು. ಆದ್ದರಿಂದ ನನ್ನ ಮೇಲೆ ಕೃಪಾಮಾಡಿ ನನ್ನ ಮನೋರಥವನ್ನು ಪೂರ್ಣ ಮಾಡಬೇಕು''. ಈ ಪ್ರಕಾರದ ನನ್ನ ವಚನವನ್ನು ಕೇಳಿ, ಆ ದಯಾಳುವಾದ ಸದ್ಗುರುನಾಥನು, ನನ್ನ ಮೇಲೆ ಕೃಪೆ ಮಾಡಿ, ಆಶೀರ್ವಾದ ಕೊಟ್ಟನು; ಅದರಿಂದ ನನಗೆ ಆನಂದವಾಗಿ, ಆತನಿಗೆ ನಮಸ್ಕರಿಸಿ ನಾನು ಹೊರಟು ಬಂದೆನು, ಆ ಸಿದ್ಧಾರೂಢ ಸದ್ಗುರು ಕೃಪೆಯಿಂದಲೇ ಇಲ್ಲಿ ತನಕ ಮಗನು ಬದುಕಿರುತ್ತಾನೆ. ಆದ್ದರಿಂದ ಈ ಉಪನಯನ ಮಹೋತ್ಸವ ಆರಂಭ ಮಾಡುವದಕ್ಕಿಂತಲೂ ಮೊದಲು, ಸಿದ್ಧಾರೂಢರನ್ನು  ಗೃಹಕ್ಕೆ ಕರೆದುಕೊಂಡು ಬಂದು ಷೋಡಶೋಪಚಾರಗಳಿಂದ ಪೂಜಿಸಬೇಕು. ಅತ್ಯಾದರದಿಂದ ಪೂಜಿಸಿ, ಅವರಿಗೆ ವಸ್ತ್ರ ಕಾಣಿಕಾದಿಗಳನ್ನು ಸಮರ್ಪಿಸಿ, ಆಮೇಲೆ ಭೋಜನ  ಮಾಡಿಸಿ, ಮಠಕ್ಕೆ ತಿರುಗಿ ಕಳುಹಿಸಬೇಕಾಗಿರುತ್ತದೆ. ಈ ಪ್ರಕಾರ ಪೂಜಾ ಮಾಡಿದ್ದಾದರೆ, ಪುತ್ರನಿಗೆ ಸರ್ವ ಕಲ್ಯಾಣ ಪ್ರಾಪ್ತವಾಗುವದು. ಆದ್ದರಿಂದ ನೀವು ಇದನ್ನು ಮನಸ್ಸಿನೊಳಗೆ ವಿಚಾರ ಮಾಡಿಕೊಂಡು, ಹಾಗೆಯೇ ನಡಿಸಬೇಕು ಎಂದು ನನ್ನ ಪ್ರಾರ್ಥನೆಯದೆ'' ಅಂದಳು. ಪತ್ನಿಯ ಈ ಪ್ರಕಾರದ ವಚನವನ್ನು ಕೇಳಿ ರಮಾನಾಥನು ಕ್ಲೋಭೆಗೊಂಡು, ಅನ್ನುತ್ತಾನೆ- “ ಹರಿಕೆ ಬೇಡುವದಕ್ಕೆ ಇಲ್ಲಿ ಯಾವ ದೇವರೂ ನಿನಗೆ ಸಿಗಲಿಲ್ಲವೇನು ? ನಾವು ಬ್ರಾಹ್ಮಣರಿದ್ದು ಆ ಶೂದ್ರನಿಗೆ ಹರಿಕೆ ಹೊತ್ತಿ. ನಾನು ಆತನನ್ನು ಮನೆಯೊಳಗೆ ಕರೆದುಕೊಂಡು ಬಂದದ್ದಾದರೆ, ಬ್ರಾಹ್ಮಣರೆಲ್ಲ  ನನ್ನ ನೋಡಿ ನಗುವರು. ಈಗ ನಿನ್ನ ಈ ಮೂರ್ಖತ್ವವನ್ನು ಬಿಟ್ಟುಬಿಡು. ನಾವು ಇಲ್ಲೇ ದೇವರ ಪೂಜೆಯನ್ನು ಮಾಡುವೆವು'', ಅಂದದ್ದು ಕೇಳಿ, ಕೃಷ್ಣಾಬಾಯಿಯು ಬಹಳ ಆಗ್ರಹ ಮಾಡಿದಾಗ್ಯೂ ಆತನು ಕೇಳಲಿಲ್ಲ. ಆಗ್ಗೆ ಕೃಷ್ಣಾಬಾಯಿಯು, ಏಕಾಂತದಲ್ಲಿ ಹೋಗಿ ಕಣ್ಣಿನಿಂದ ನೀರು ಸುರಿಸುತ್ತಾ, ಸದ್ಗುರು ಪ್ರಾರ್ಥನೆ ಮಾಡುವಂಥವಳಾದಳು - “ಹೇ, ದಯಾಳ್ ಸಿದ್ಧಾರೂಢನೇ, ನೀನೇ ಪ್ರಾಪ್ತಗಾಗಿ, ನನ್ನ ಹರಕೆ ತೀರಿಸಿಕೊಳ್ಳುವಂಥವನಾಗು. ನನ್ನ ಪತಿಯು ಸಮ್ಮತಪಡುವದಿಲ್ಲ. ಆದ್ದರಿಂದ ಮನೆಗೆ ಕರಿಸಿಕೊಂಡು ಪೂಜಾ ಮಾಡಲಿಲ್ಲವೆಂದು ನಮ್ಮ ಮೇಲೆ ಕ್ಷೋಭಿಸದೆ, ನನ್ನ ಪುತ್ರನನ್ನು ಬದುಕಿಸಬೇಕಾಗಿರುತ್ತದೆ''. ಕೃಷ್ಣಾಬಾಯಿಯು  ಹೀಗನ್ನುತ್ತಾ, ಹೃದಯದಲ್ಲಿ ಶ್ರೀ ಸಿದ್ಧಾರೂಢರ ಮೂರ್ತಿಯನ್ನು ಸ್ಮರಿಸುವಂಥವಳಾದಳು. ಆ ಕೂಡಲೆ, ಅಲ್ಲೇ ಸದ್ಗುರುವು ಪ್ರಸನ್ನವದನದಿಂದ ಆಕೆಗೆ  ಆಶ್ವಾಸನ ಕೊಡುವಂಥವನಾದನು, ಮತ್ತು ಆಕೆಯು  ಸಮಾಧಾನ ಹೊಂದಿದಳು. ಉಪನಯನಾರಂಭದಲ್ಲಿ ದೇವರ ಪೂಜಾ ಮಾಡಬೇಕೆಂದು, ರಮಾನಾಥನು ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು, ದೇವಗೃಹಕ್ಕೆ ಪ್ರಾಪ್ತನಾಗಲು, ಅಲ್ಲಿ ಒಂದು ಚಮತ್ಕಾರವನ್ನು

ಕಂಡನು. ಮಂಟಪದೊಳಗೆ ಎಲ್ಲಿ ಕೃಷ್ಣಮೂರ್ತಿಯಿತ್ತೋ ಅಲ್ಲೆ ಅದು ಆರೂಢಮೂರ್ತಿಯಾಗಿ ಕಾಣಿಸುತ್ತಿರುವದು. ಈ ವೈಚಿತ್ರ್ಯವನ್ನು ಕಂಡು, ಆತನು  ಭ್ರಮೆ ಹೊಂದಿದನು. ಆಗ ಆತನು ಮನಸ್ಸಿನಲ್ಲಿ ವಿಚಾರಿಸಿದನು - “ಇದು ನನ್ನ ಪತ್ನಿಯ ಕೆಲಸವಾಗಿರಬೇಕು. ತನ್ನ ಮನೋರಥವನ್ನು ಪೂರೈಸಿಕೊಳ್ಳುವ ಉದ್ದಿಶ್ಯವಾಗಿ ಕೃಷ್ಣಮೂರ್ತಿಯನ್ನು ತೆಗೆದು, ಆರೂಢ ಮೂರ್ತಿಯನ್ನು ಆಕೆಯು  ಸ್ಥಾಪಿಸಿರಬಹುದು ಮತ್ತು ಹೀಗೆ ತನ್ನ ಇಚ್ಛೆಯನ್ನು ಪೂರ್ಣಮಾಡಿಕೊಳ್ಳಲಿಕ್ಕೆ ನೋಡುತ್ತಾಳೆ' ಎಂದು ಚಿಂತಿಸಿ, ಕೃಷ್ಣಾಬಾಯಿಗೆ  ಗಟ್ಟಿಯಾಗಿ ಒದರಿದ ಕೂಡಲೇ, ಆಕೆಯು  ಬಂದಳು. ಆಗ್ಗೆ  ಸಿಟ್ಟಿನಿಂದ

ಕೇಳುತ್ತಾನೆ - ''ಭ್ರಷ್ಟೇ, ನೀನು ಕೃಷ್ಣ ಮೂರ್ತಿಯನ್ನು ತೆಗೆದು ಸಿದ್ಧಮೂರ್ತಿಯನ್ನು ಸ್ಥಾಪಿಸಿರುವಿಯೇ ?” ಎನ್ನಲಾಗಿ, ಆಕೆಯು “ನಾನೇನೂ ಅರಿಯೆ,'' ಎಂದು ಯಥಾರ್ಥವಾಗಿ ನುಡಿದಳು, ಮತ್ತು ಈ ಚಮತ್ಕಾರವನ್ನು ನೋಡಿ ಆಶ್ಚರ್ಯಪಟ್ಟು, ಆ ದಯಾಘನನಾದ ಸಿದ್ಧ ಸಮರ್ಥನು ಸತ್ಯವಾಗಿ ಪ್ರಾಪ್ತನಾದನು, ಅಂದುಕೊಂಡಳು. ಆಗ್ಗೆ ಆತನು ಸಂಪುಷ್ಟವನ್ನು ತೆಗೆದು ನೋಡುತ್ತಾನೆ, ಅದರೊಳಗಿರುವ ಗಣಪತಿ ಮೂರ್ತಿ, ವಿಠ್ಠಲ ಮೂರ್ತಿ, ಸಾಲಿಗ್ರಾಮ ಎಲ್ಲವೂ ಸಿದ್ಧಾರೂಢನೇ ಆಗಿ ಕಾಣಿಸುತ್ತಿರುವವು. ಇದನ್ನು ನೋಡಿ ರಮಾನಾಥನು ಆಶ್ಚರ್ಯಚಕಿತನಾಗಿ, - 'ಇದು ನಿಜವಾಗಿ ಈಶ್ವರೀ ಮಾಯಾ ಇರುವುದು. ಸಿದ್ಧಾರೂಢರು ಸತ್ಯವಾಗಿ ಅವತಾರ ಪುರುಷರಿರುವರು. ಇದರೊಳಗೆ ಏನೇನೂ ಸಂಶಯವಿಲ್ಲ. ಹೇ ಸ್ತ್ರೀಯೇ  ನಾನು ವ್ಯರ್ಥವಾಗಿ ಸಿಟ್ಟಿಗೆದ್ದೆ. ನೀನೇ ಸಿದ್ಧಾರೂಢರ ಅವತಾರವನ್ನು ತಿಳಿದುಕೊಂಡಿರುವಿ. ಮತ್ತು ಧನ್ಯಳಾದಿ. ನಾನು ಈಗಲೇ ಸಿದ್ಧಾಶ್ರಮಕ್ಕೆ ಹೋಗಿ, ಸದ್ಗುರುಗಳನ್ನು ಕರೆದುಕೊಂಡು ಬರುವೆನು, ಮತ್ತು ನಿನ್ನ ಇಚ್ಚೆ ಹ್ಯಾಗಿತ್ತೋ ಹಾಗೆಯೇ ಪೂಜಿಸುವೆನು', ಎಂದನು. ಈ ಪ್ರಕಾರ ಅಂದು, ತನ್ನ ಇಷ್ಟ ಮಿತ್ರರನ್ನು ಮನೆಗೆ ಕರಕೊಂಡು ಬಂದು, ಎಲ್ಲಾ ದೇವರ ರೂಪದಿಂದ ಸಿದ್ದಾರೂಢನೇ ಇರುವುದನ್ನು ತೋರಿಸಿ ಅನ್ನುತ್ತಾನೆ - ''ಸಿದ್ಧಾರೂಢ ಸದ್ಗುರುಗಳ ಸತ್ತಾ ಎಂಥಾದ್ದದೆ! ಎಲ್ಲಾ ದೇವರುಗಳಾಗಿ ತಾನೇ ಇದ್ದಾನೆ. ನಾವು ಆತನ ಮಹಿಮೆಯನ್ನು ತಿಳಿಯದೆ, ವ್ಯರ್ಥವಾಗಿ ಕರ್ಮ ಮಾರ್ಗವನ್ನು ಅನುಸರಿಸಿದೆವು. ಈಗಲಾದರೂ ಆ ಸದ್ಗುರುರಾಯನಿಗೆ ಶರಣು ಹೋಗಿ, ಸದ್ಭಾವದಿಂದ ಆತನ ಚರಣಗಳನ್ನು ಹಿಡಿದು, ಪ್ರೇಮದಿಂದ ಆತನನ್ನು ಪೂಜಿಸಿದ್ದಾದರೆ, ನಾವು ಈ ಲೋಕದಲ್ಲಿ ಧನ್ಯರಾಗುವೆವು'. ಈ ಪ್ರಕಾರ ಅಂದು, ರಮಾನಾಥನು

ಸಿದ್ಧಾಶ್ರಮಕ್ಕೆ ಹೋಗಿ ಶ್ರೀ ಸಿದ್ಧಾರೂಢರನ್ನು ಪ್ರಾರ್ಥಿಸಿ, ಸ್ವಗೃಹಕ್ಕೆ ಕರೆದುಕೊಂಡು ಬರುವಂಥವನಾದನು. ಕೃಷ್ಣಾಬಾಯಿಯು ಸದ್ಗುರುಗಳಿಗೋಸ್ಕರ ದಿವ್ಯ ಪೀಠವನ್ನು ಹಾಕಿ, ಅವರ ದಾರಿ ನೋಡುತ್ತಿದ್ದಳು. ಸಿದ್ಧರನ್ನು ನೋಡಿದ ಕೂಡಲೇ, ಆಕೆಗೆ ಉತ್ಕಟ ಪ್ರೇಮ ಉತ್ಪನ್ನವಾಯಿತು. ಆಗ್ಗೆ ಸಿದ್ದಾರೂಢರನ್ನು ಆಸನದ ಮೇಲೆ ಕುಳ್ಳಿರಿಸಿ, ತನ್ನ ಮಸ್ತಕವನ್ನು ಆತನ ಚರಣಗಳಲ್ಲಿಟ್ಟು, ನೇತ್ರೋದಕದಿಂದ ಆತನ ಪಾದ ಪ್ರಕ್ಷಾಳನ ಮಾಡುವಂಥವಳಾದಳು. ಅನ್ನುತ್ತಾಳೆ - ''ಹೇ ದೀನ ದಯಾಳಾ, ಸಿದ್ದನಾಥಾ,  ದೀನ ಅನಾಥರಾದ ನಮ್ಮನ್ನು ನೀನು ರಕ್ಷಿಸುತ್ತಿ. ನಾವು ನಿನ್ನ ಮಹಿಮೆಯನ್ನು ತಿಳಿಯಲಾರೆವು. ಆದರೂ  ಹೇ ದೀನನಾಥಾ  ಕೃಪಾಮಾಡಿದಿ,” ಅಂದಳು. ಆಗ್ಗೆ ಎಲ್ಲಾ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಬಂದು, ರಮಾನಾಥನು ಸಿದ್ಧಾರೂಢರ  ಚರಣಗಳಿಗೆ ನಮನ ಮಾಡಿದನು, ಆಮೇಲೆ ವೇದವಿಧಿಗನುಸರಿಸಿ, ಯಥಾಸಾಂಗ ರೀತಿಯಿಂದ ಸದ್ಗುರುಗಳನ್ನು ಪೂಜಿಸುವಂಥವನಾದನು. ಎಲ್ಲಾ ಇಷ್ಟ ಮಿತ್ರರನ್ನು ಕೂಡಿಕೊಂಡು ಈ ಪ್ರಕಾರ ಪೂಜಾ ಮಾಡಿ, ನೈವೇದ್ಯ ಸಮರ್ಪಿಸಿ, ವಿಧಿ ಪ್ರಕಾರ ಸಿದ್ಧಾರೂಢರಿಗೆ ಆರತಿ ಬೆಳಗಿದರು. ಆಮೇಲೆ ರಮಾನಾಥನು ಸದ್ಗುರುಗಳಿಗೆ ದಕ್ಷಿಣೆ ಮತ್ತು ಒಂದು ದಿವ್ಯ ಶಲ್ಲೆಯನ್ನು ಸಮರ್ಪಿಸಿ, ಅವರನ್ನು ಗಾಡಿ ಮೇಲೆ ಕೂಡ್ರಿಸಿ, ಸಿದ್ಧಾಶ್ರಮಕ್ಕೆ ಮುಟ್ಟಿಸಿ ಬಂದನು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಮುರಕಿಭಾವಿ ಗ್ರಾಮದಲ್ಲಿ ಬಹು ವೈಭವದಿಂದ ಸದ್ಗುರು ಚಿತ್ರದ ಪೂಜೆಯಾಗುತ್ತಿರುವಾಗ, ಭಕ್ತರ ಪ್ರಾರ್ಥನೆಯಿಂದ ಸದ್ಗುರುವು ನಿಜರೂಪದಲ್ಲಿ ಪ್ರತ್ಯಕ್ಷನಾದ ಕಥೆ,

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ