ಸಿದ್ದಣ್ಣ ಶಿವಯೋಗಿಯಾದ

 🌺 ಸಿದ್ದಣ್ಣ ಶಿವಯೋಗಿಯಾದ 🌺



ಶ್ರೀ ನಾಗಾನಂದರು ಮತ್ತು ಭೀಮಣ್ಣ ಢಗೆಯವರು ಅಣ್ಣ ತಮ್ಮಂದಿರು. ನಾಗಾನಂದರು ಬ್ರಹ್ಮಚಾರಿಯಾಗಿ ಸಿದ್ಧಾರೂಢರ ಶಿಷ್ಯರಾಗಿ ಅವರ ಸೇವೆಯಲ್ಲಿ ತೊಡಗಿದರು. ಭೀಮಪ್ಪ ಎರಡು ಲಗ್ನವಾದರೂ ಮಕ್ಕಳಾಗದೆ ವಿಧಿವಶರಾದರು. ಒಂದು ದಿನ ಸಿದ್ದಾರೂಢರು ಕೈಲಾಸ ಮಂಟಪದಲ್ಲಿದ್ದಾಗ ನಾಗಾನಂದರು ಹೇಳಿದರು 'ಸದ್ಗುರುವೇ, ನಾನು ಬ್ರಹ್ಮಚಾರಿಯಾಗಿ ನಿನ್ನ ಸೇವೆಯಲ್ಲಿದ್ದೇನೆ. ನನ್ನ ತಮ್ಮ ಭೀಮಪ್ಪನಿಗೆ ಮಕ್ಕಳಾಗಲಿಲ್ಲ. ವಂಶದ ಉದ್ದಾರಕ್ಕಾಗಿ ಅವನಿಗೆ ಪುತ್ರರನ್ನು ಕೊಡು' ಎಂದು ಬೇಡಿಕೊಂಡರು. ಅಷ್ಟರಲ್ಲಿ ಮೇಲಿನ ಛತ್ತಿನಲ್ಲಿ ಇಳಿಬಿಟ್ಟ ಗಾಜಿನ ತೂಗುದೀಪದಲ್ಲಿದ್ದ ಒಂದು ತುಂಡು ಗಾಜು ಕೆಳಗೆ ಬಿದ್ದು ಸ್ವಲ್ಪ ಮುಕ್ಕಾಯಿತು. ಆಗ ಸಿದ್ಧಾರೂಢರು ಮೇಲಿನಿಂದ ಬಿದ್ದದ್ದು ಏನು ಎಂದಾಗ ಅಲ್ಲಿಯೇ ಇದ್ದ ಭೀಮಪ್ಪ ಅದನ್ನು ಎತ್ತಿ ಸಿದ್ಧರ ಕೈಯಲ್ಲಿಟ್ಟನು. ಸಿದ್ಧ ಹೇಳಿದ ಮಠವನ್ನು ಬೆಳಗುವ ತೂಗುದೀಪದಿಂದ ಇದು ಬಿದ್ದಿದೆ. ಭೀಮಪ್ಪ, ಇದನ್ನು ತೆಗೆದುಕೊಂಡು ಹೋಗಿ ನಿಮ್ಮ ದೇವರ ಜಗುಲಿಯಲ್ಲಿಟ್ಟು ಪೂಜಿಸು. ನಿನ್ನ ವಂಶ ಬೆಳಗುವ ಪುತ್ರರತ್ನ ಹುಟ್ಟುತ್ತಾನೆ' ಎಂದು ಅವನ ಕೈಯಲ್ಲಿ ಕೊಟ್ಟರು. ಅಂದಿನಿಂದ ಅದನ್ನು ದೇವರ ಜಗುಲಿಯ ಮೇಲಿಟ್ಟು ಪೂಜಿಸತೊಡಗಿದರು.
ಮುಂದೆ ಭೀಮಪ್ಪನ ಪತ್ನಿ ಮುಕ್ತಾಬಾಯಿಯ ಗರ್ಭದಿಂದ ಒಂದು ಗಂಡು ಮಗು ಜನಿಸಿತು. ಅವನೇ ಸಿದ್ದಣ್ಣ, ಸಿದ್ದಣ್ಣ ಬೆಳೆದು ದೊಡ್ಡವನಾಗಿ ಅವರ ದೊಡ್ಡಪ್ಪ ನಾಗಭೂಷಣ ಶಿವಯೋಗಿಗಳಿಂದ ಸ್ಥಾಪಿಸಲ್ಪಟ್ಟ ದೇವರ ಹುಬ್ಬಳ್ಳಿಯ ಸಿದ್ಧಾಶ್ರಮದ ಉತ್ತರಾಧಿಕಾರಿಯಾಗಿ ಸಿದ್ಧ ಶಿವಯೋಗಿಗಳಾದರು. ಆ ಗಾಜಿನ ಬುರುಡೆ ಇನ್ನೂ ಅವರ ಮನೆಯಲ್ಲಿ ಪೂಜೆಗೊಳ್ಳುತ್ತದೆ.


_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ