ಶ್ರೀ ಗುರುನಾಥಾರೂಢರ ಉಗುಳಿನ ಮಹಿಮೆ
ಸವದತ್ತಿ ತಾಲೂಕಿನ ಉಗರಗೊಳ್ಳ ಗ್ರಾಮದ ಬಸಪ್ಪ ಕುರಹಟ್ಟಿ ಅವರ ಧರ್ಮಪತ್ನಿ
ಯಲ್ಲಮ್ಮ ದಂಪತಿಗಳ ಉದರದಲ್ಲಿ ಜನಿಸಿದ ಅನ್ನಕ್ಕನಿಗೆ ಹದಿನೈದು ವರ್ಷ. ಒಂದು ದಿನ ಈ ಮೂವರೂ ಸೇರಿ ಹುಬ್ಬಳ್ಳಿಗೆ ಬಂದಾಗ ಶ್ರೀ ಸಿದ್ಧಾರೂಢರ ಮಠಕ್ಕೆ ಹೋಗಿ ಶ್ರೀಸಿದ್ದಾರೂಢರ ಗದ್ದುಗೆ ದರ್ಶನ ಪಡೆದು ಶ್ರೀ ಗುರುನಾಥಾರೂಢರ ದರ್ಶನಕ್ಕೆ ಹೋದಾಗ, ಆರೇಳು ಭಕ್ತಜನರಲ್ಲಿ ಫಾರಸಿ ಭಕ್ತರು ಶ್ರೀಗುರುನಾಥಾರೂಢರನ್ನು, ಮಕ್ಕಳನ್ನು ತಾಯಂದಿರು ಯಾವ ರೀತಿ ಚುಂಬಿಸುತ್ತಾರೋ ಅದೇರೀತಿ ಚುಂಬಿಸಿ ಶ್ರೀಗಳನ್ನು ಐದಾರು ಜನರು ಮಕ್ಕಳನು ತೂರಿ ಪುನಃ ಹಿಡಿದು ಮುದ್ದಾಡುವರೋ ಅದೇ ರೀತಿ ಮಾಡಿ ನಂತರ ಶ್ರೀಗಳನ್ನು ಕರೆದುಕೊಂಡು ಅಡುಗೆ ಮನೆಯ ಬಯಲು ಬಚ್ಚಲದಲ್ಲಿ ಅವರನ್ನು ನಿಲ್ಲಿಸಿ ಪೂರ್ಣ ಬತ್ತಲೆ ಮಾಡಿ ಸ್ನಾನ ಮಾಡಿಸುತ್ತಿರುವಾಗ ಶ್ರೀಗಳ ಮುಖದಲ್ಲಿ ನೀರು ಹಾಕಿದರು. ಆ ನೀರನ್ನು ಗುರುಗಳು ಸ್ವಲ್ಪ ಹೊತ್ತಿನತನಕ ತಮ್ಮ ಮುಖದಲ್ಲಿಯೇ ಹಿಡಿದು ಬೇಗನೇ ಉಗುಳಲಿಲ್ಲ,
ಇದನ್ನು ನೋಡಿದ ಅಲ್ಲಿದ್ದ ಶ್ರೀಮಂತರು, ಸಾಧುಗಳು, ಇನ್ನಿತರರು ಶ್ರೀಗಳು ತಮ್ಮ ಮುಖದಲ್ಲಿ ಹಿಡಿದುಕೊಂಡಿದ್ದ ಪ್ರಸಾದವನ್ನು ಯಾರಿಗೆ ಕೊಡುವರೋ ಅವರು ಧನ್ಯರು ಎಂದು ತಮ್ಮ ಮನಸ್ಸಿನಲ್ಲಿಯೇ ನಂಬಿದ್ದರು ಹಾಗೂ ನಮಗೆ ಸಿಗಬೇಕು ಎಂದು ಸದಾಸೆಯಿಂದ ನಿಂತಿದ್ದರು, ಆಗ ದೂರದಲ್ಲಿ ನಿಂತು ಈ ದೃಶ್ಯವನ್ನು ಅನ್ನಕ್ಕೆ ಕೈ ಮುಗಿದು ನೋಡುತ್ತಿದ್ದರು. ಆಗ ಒಬ್ಬ ಸಾಧುಗಳು ಬಂದು ಅನ್ನಕ್ಕನನ್ನು ಕರೆದುಕೊಂಡು ಬಂದು ಶ್ರೀಗಳ ಎದುರಿನಲ್ಲಿ ನಿಲ್ಲಿಸಿ ಕೈ ಬೊಗಸೆಯೊಡ್ಡಲು ಹೇಳಿದಾಗ ಅನ್ನಕ್ಕ ಭಕ್ತಿಯಿಂದ ಬೊಗಸೆಯೊಡ್ಡಿದ ತಕ್ಷಣ ಗುರುಗಳು ಅನ್ನಕ್ಕನ ಬೊಗಸೆಯಲ್ಲಿ ತಮ್ಮ ಮುಖದಲ್ಲಿದ್ದ ನೀರನ್ನು ಬೊಗಸೆಯಲ್ಲಿ ಉಗುಳಿದರು.
ಆಗ ಅನ್ನಕ್ಕ ಅದನ್ನು ಶ್ರೀಗುರುನಾಥ ದೇವರ ಪ್ರಸಾದವೆಂದು ಪ್ರೀತಿಯಿಂದ ಸೇವಿಸಿ ನಮಸ್ಕರಿಸಿ ಹಿಂದೆ ಸರಿದು ನಿಂತಳು. ಆಗ ಅನ್ನಕ್ಕನಿಗೆ ಆದ ಆನಂದ ಅಷ್ಟಿಷ್ಟಲ್ಲ. ರೋಮಾಂಚನವಾಯಿತು. ಇದನ್ನು ಕಂಡು ಅಲ್ಲಿ ನೆರೆದ ಭಕ್ತರು ಇಂದಿನ ಪ್ರಸಾದ ನಮಗೆ ಸಿಗಲಿಲ್ಲ. ಎಲ್ಲಿಂದಲೋ ಬಂದ ಹದಿನೈದು ವರ್ಷದ ಹುಡುಗಿಗೆ ನೀಡಿದರಲ್ಲ ಎಂದುಕೊಂಡು ನಿರಾಸೆಗೊಳ್ಳದೆ ಸಂತೋಷಪಟ್ಟರು. ನಂತರ ಶ್ರೀಗಳಿಗೆ ಸ್ನಾನ ಮಾಡಿಸಿ ಫಾರಸಿ ಹೆಣ್ಣುಮಕ್ಕಳು ಭಕ್ತರು ಶ್ರೀಗಳಿಗೆ ಕೈಪಾ ಹಾಕಿ ಮೈಗೆ ಪೀತಾಂಬರ ಉಡಿಸಿ ತಲೆಗೆ ಜರತಾರಿ ಪೇಠಾ ಸುತ್ತಿ, ಶ್ರೀಗಳು ವಾಸಿಸುವ ಬೋಲಿಗೆ ಕರೆದುಕೊಂಡು ಬಂದು, ಅವರನ್ನು ಪ್ರೀತಿಯಿಂದ ಪೂಜಿಸಿ ಆರತಿ ಮಾಡಿ, ಜಯಘೋಷಗಳನ್ನು ಮಾಡಿದನಂತರ ಅವರಿಗೆ ತಾವು ತಂದ ಪ್ರಸಾದವನ್ನು ಗುರುಗಳು ಸ್ವೀಕರಿಸಿದಷ್ಟು ಉಣಿಸಿ, ಉಳಿದುದನ್ನು ಭಕ್ತರಿಗೆ ಹಂಚಿದರು. ನಂತರ ಅನ್ನಕ್ಕ ಹಾಗೂ ತಂದೆ-ತಾಯಿಗಳು ಸಂತೋಷಗೊಂಡು ತಮ್ಮೂರಿಗೆ ಹೋದರು. ಮುಂದೆ ಅನ್ನಕ್ಕ ಹದಿನಾರು ವರ್ಷದವಳಿದ್ದಾಗ ಹುಬ್ಬಳ್ಳಿ ಜಂಗ್ಲಿಪೇಟೆಯ ಭಕ್ತರು ಚನ್ನಪ್ಪ ದೇವಕ್ಕಿ ಅವರ ಜೊತೆಗೆ ಲಗ್ನವಾಯಿತು. ಆಗ ಅವರ ಹೆಸರನ್ನು ನಿಂಗಮ್ಮ ಎಂಬ ಪರಿವರ್ತಿಸಲಾಯಿತು. ಪತಿಕೂಡ ಶ್ರೀಸಿದ್ದಾರೂಢ ಶ್ರೀ ಗುರುನಾಥಾರೂಢರ ಭಕ್ತರಾಗಿದ್ದು ನಿತ್ಯ ಶ್ರೀಗಳ ದರ್ಶನ ಪಡೆದು ಶ್ರೀ ಶಿವಪುತ್ರ ಸ್ವಾಮಿಗಳ ಶಾಸ್ತ್ರ ಕೇಳಿದವರು, ಶ್ರೀಮತಿ ನಿಂಗಮ್ಮನವರು ಶಾಲಾಭ್ಯಾಸ ಮಾಡಿದ್ದು ಕೇವಲ ಆರನೆಯ ತರಗತಿಯಲ್ಲಿ ಪಾಸಾಗಿದ್ದರು. ಓದಲು ಮತ್ತು ಕಠಿಣವಾದ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಅದಕ್ಕಿಂತ ಕಠಿಣವಾಗಿದ್ದ ಶ್ರೀನಿಜಗುಣ ಶಿವಯೋಗಿಗಳ ಷಟ್ ಶಾಸ್ತ್ರಗಳನ್ನು ಓದಲಾರಂಭಿಸಿದರು. ಅಲ್ಲದೆ ಸಂಸ್ಕೃತ ಗ್ರಂಥಗಳಾದ ಉಪನಿಷತ್ತುಗಳು ಶಂಕರ ಭಗವತ್ಪಾದರ ಗ್ರಂಥಗಳನ್ನು ಸರಳವಾಗಿ ಓದಿ ಅರ್ಥ ಮಾಡಿಕೊಳ್ಳವ ಯೋಗ್ಯತೆ ಪ್ರಾಪ್ತವಾಯಿತು. ಇಂದಿಗೂ ಆ ಪರಿಪಾಠ ಮುಂದುವರೆದಿದೆ. ಅವರ ಮಾತಿನಲ್ಲಿಯೇ ಹೇಳುವುದಾದರೆ ಶ್ರೀಗುರುನಾಥರು ಕೊಟ್ಟ ಪ್ರಸಾದದಿಂದಲೇ ಈ ಯೋಗ್ಯತೆ ಬಂದಿದೆ ಎನ್ನುತ್ತಾರೆ.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
