ಗೋಪನಕೊಪ್ಪದ ಶ್ರೀ ಸಿದ್ದವೀರಸ್ವಾಮಿಗಳಿಗೆ ಸಿದ್ಧರಿಂದ ಭೋದನೆ
🕉️ ಗೋಪನಕೊಪ್ಪದ ಶ್ರೀ ಸಿದ್ದವೀರಸ್ವಾಮಿಗಳು 🌷
ಒಂದು ವರ್ಷದ ಮಗುವಿನ ತಲೆಯ ಮೇಲೆ ಹೆಡೆಯತ್ತಿ. ಘಟಸರ್ಪ ಆಡುತ್ತಿದ್ದುದನ್ನು ತಂದೆ, ತಾಯಿಗಳು ದೂರದಿಂದ ನೋಡಿ ಭಯಭೀತರಾಗಿ ಜನರನ್ನು ಸೇರಿಸಿದರು. ಜಗನ್ಮಾತೆಯನ್ನು ತದೇಕ ಚಿತ್ತದಿಂದ ಭಜಿಸುತ್ತಿರುವಲ್ಲಿ, ಆ ಸರ್ಪವು ಸಾವಕಾಶವಾಗಿ ಹೆಡೆಯನ್ನು ಮುದುಡಿಕೊಂಡು ಸರಿದು ಸರಸರನೆ ಅಡಗಿ ಹೋಯಿತು. ಎಲ್ಲರಿಗೂ ಆಶ್ಚರ್ಯ. ಈತನು ಭವಿಷ್ಯತ್ ಕಾಲದಲ್ಲಿ ಮಹಾಪರುಷನಾಗುವನೆಂದು ಮಾತನಾಡಿದರು. ಈ ಬಾಲಕನೇ ಗೋಪನಕೊಪ್ಪದ ಸಿದ್ದವೀರಪ್ಪನು. ಶ್ರೀ ಸಿದ್ಧಾರೂಢ ಸ್ವಾಮೀಜಿಯವರಿಂದ ನಡೆಯುತ್ತಿದ್ದ ಶಾಸ್ತ್ರ ಶ್ರವಣಕ್ಕಾಗಿ ಸಂಕಪ್ಪ ಶಾಸ್ತ್ರಿಗಳ ಜೊತೆಗೆ ಈತನು ಹೋಗತೊಡಗಿದನು. ಅಲ್ಲಿ ಆಧ್ಯಾತ್ಮ ವ್ಯಾಸಂಗದಲ್ಲಿದ್ದ ಮುಪ್ಪಿನಾರ್ಯ ಮುಂತಾದವರ ಸಂಪರ್ಕ ಬಂದಿತು. ಶ್ರೀ ಸಿದ್ಧಾರೂಢರ ಗುರೂಪದೇಶದಿಂದ ಸಿದ್ಧ ವೀರಪ್ಪನು ಪ್ರಪಂಚದಲ್ಲಿದ್ದುಕೊಂಡೇ ಶಮದಮಾದಿ ಸಾಧನೆಗಳಿಂದ ಪಕ್ವತೆಯುಳ್ಳವರಾಗಿ ಪರಮಹಂಸ ಸ್ಥಿತಿಯೊದಗಿತು ಗೋಪನಕೊಪ್ಪದಲ್ಲಿ ಅವ್ಯಾಹತವಾಗಿ ಬ್ರಹ್ಮ ಜಿಜ್ಞಾಸೆ ಮಾಡಲು ಭಕ್ತರನ್ನು ಆಕರ್ಷಿಸಿತು. ನಿಜಗುಣ ಶಾಸ್ತ್ರ ಶ್ರವಣ ಪ್ರಮುಖತೆ ಯಾಗಿತ್ತು. ಭಕ್ತರೊಂದಿಗೆ ಕಾಲಕಾಲಕ್ಕೆ ತೀರ್ಥ ಯಾತ್ರೆ ಕೈಕೊಂಡನು. ಹುಬ್ಬಳ್ಳಿ ಮಹಾನಗರದಲ್ಲಿ ಅಲ್ಲಲ್ಲಿ ಪ್ರವಚನಗಳನ್ನು ಮಾಡುತ್ತಾ ಅದ್ವೈತ ತತ್ವ ಪ್ರಸಾರ ಮಾಡುತ್ತಲಿದ್ದರು.
ಈ ಮಹಾಪುರುಷನ ಕಾರ್ಯಗಳಿಂದ ಭಕ್ತರ ಬೃಹತ್ ಸಮುದಾಯವು ಶಾಸ್ತ್ರ ಶ್ರವಣದಲ್ಲಿ ಆಕರ್ಷಕವಾಗಿತ್ತು. ಸಿದ್ದವೀರಪ್ಪ ಸ್ವಾಮಿಗಳು ನಿಜಗುಣಾರ್ಯರು ತಪಸ್ಸನ್ನಾಚರಿಸಿದ ಶಂಭುಲಿಂಗ ಬೆಟ್ಟಕ್ಕೆ ಮೇಲಿಂದ ಮೇಲೆ ಹೋಗುತ್ತಿದ್ದರು. ಭಕ್ತರಲ್ಲಿ ಜಾಗೃತಿ ಮಾಡಿದ ಪರಿಣಾಮವಾಗಿ ಈ ಬೆಟ್ಟದಲ್ಲಿ ನಿಜಗುಣರ ಅನುಭವ ಮಂಟಪದ ಭವ್ಯ ಕಟ್ಟಡ ನಿರ್ಮಾಣವಾಯಿತು. ಇಲ್ಲಿ ನಿಜಗುಣ ಶಾಸ್ತ್ರಗಳ ಪ್ರವಚನ ನಡೆಯತೊಡಗಿತು. ಇದರಂತೆ ಭಕ್ತರನ್ನು ಕೂಡಿಕೊಂಡು ಕಾಶೀಕ್ಷೇತ್ರಕ್ಕೆ ಭೇಟಿ ನೀಡಿದರು. ಭಕ್ತರ ಇಚ್ಛೆಯ ಪ್ರಕಾರ ಕರ್ನಾಟಕ, ಆಂಧ್ರ ಪ್ರದೇಶಗಳಲ್ಲಿ ಸಂಚಾರ ಮಾಡಿದರು. ಇವರ ಶಿಷ್ಯರಾದ ವೇದಾಂತ ಕೇಸರಿ ಅಂತಾ ಬಿರುದಾಂಕಿತ ಶ್ರೀ ಶೇಷನಗೌಡ್ರು ಜಾಗತಿಕ ವೇದಾಂತ ಸಭೆಯಲ್ಲಿ ಅನೇಕ ಪಂಡಿತರ ಹೃನ್ಮನಗಳಾಕರ್ಷಿಸುವಂತೆ ನಿಜಗುಣರ ಶಾಸ್ತ್ರಗಳ ತಿರುಳನ್ನು ಪ್ರತಿಪಾದಿಸಿದರು ಇದರಂತೆ ಸಿದ್ಧವೀರ ಸ್ವಾಮಿಗಳು ನಡೆಸುತ್ತಿದ್ದ ಜ್ಞಾನ ಯಜ್ಞಗಳ ಮುಖಾಂತರ ಆಧ್ಯಾತ್ಮ ಮಾಡುತ್ತಿರುವ ಶ್ರೀ ಶಿವಪ್ಪ ಮಾನೇದ, ಶ್ರೀ ಯೋಗೀಶ ಯಡ್ರಾವಿ, ಶ್ರೀ ಬಾಳೇಶ ಸತ್ತಿಗೇರಿ, ಶ್ರೀ ಮಡಿವಾಳರ, ಶ್ರೀ ಕೇಶವ ಗುರಂ, ಶ್ರೀ ಕಲ್ಲನಗೌಡರು, ಶ್ರೀಪತೆಪ್ಪ ಕೊಪ್ಪರ, ಶ್ರೀ ಬಸನಗೌಡರು, ಶ್ರೀ ಕಾಳಪ್ಪ ಬಡಿಗೇರ, ಬಸವಣ್ಣೆವ್ವ ಗೋಕಾಕ ಮುಂತಾದ ಅನೇಕ ಭಕ್ತರು ಅಪ್ರತಿಮ ಸೇವೆಯಲ್ಲಿದ್ದಾರೆ. ಶ್ರೀ ಸಿದ್ಧಾರೂಢರ ತತ್ವ ಪ್ರತಿಪಾದನೆ ಅದ್ವೈತ ತತ್ವದಲ್ಲಿ ಜಾಗೃತಿ ಮಾಡುವಲ್ಲಿ ತಮ್ಮ ತಮ್ಮ ಭಕ್ತರನ್ನು ತಯಾರಿಸಿದ ಪರಮಹಂಸ ಶ್ರೀ ಸಿದ್ಧವೀರ ಸ್ವಾಮಿಗಳು ಪ್ರಾತಃಸ್ಮರಣೀಯರಾಗಿದ್ದಾರೆ.
👇👇👇👇👇👇👇👇👇👇👇👇👇👇
👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
