ದಿವಟೆ ಮಲ್ಲಪ್ಪಣ್ಣನವರಿಂದ ಶ್ರೀಗಳಗೆ ಟಾಂಗಾ ಮತ್ತು ಬಗಿ ಅರ್ಪಣೆ
🎠ದಿವಟೆ ಮಲ್ಲಪ್ಪಣ್ಣನವರಿಂದ ಶ್ರೀಗಳಗೆ ಟಾಂಗಾ ವ ಬಗಿ ಅರ್ಪಣೆ
ಹಳೇ ಹುಬ್ಬಳ್ಳಿ ಅಕ್ಕಸಾಲಿಗರ ಓಣಿಯಲ್ಲಿ ಉಜ್ಜಣ್ಣನವರ ಮನೆಗೆ ಪ್ರತಿನಿತ್ಯ ಸಾಯಂಕಾಲ ಸ್ವಾಮಿಗಳು ಬಂದು ವೇದಾಂತ ಶಾಸ್ತ್ರ ಶ್ರವಣ ಮಾಡುಸುತ್ತಿದ್ದರು. ಪ್ರಾತಃಕಾಲ ಶಿವಭಜನೆ ಮಾಡಿಸಿ ನಂತರ ಮಠಕ್ಕೆ ಬರುತ್ತಿದ್ದರು. ವಿಷಪ್ರಯೋಗವಾದ ನಂತರ ಸಿದ್ದಾರೂಢರಿಗೆ ನಡೆಯುವ ಶಕ್ತಿಯು ಕೂಗಿದ್ದನ್ನು ಗಮನಿಸಿ, ದಿವಟೆಗಲ್ಲಿಯಲ್ಲಿಯ ಆಗರ್ಭ ಶ್ರೀಮಂತರಾದ, ಪರಮ ಸದ್ಭಕ್ತರು ಶ್ರೀ ಮಲ್ಲಪ್ಪಣ್ಣ ಗಂಗಾಧರಪ್ಪ ದಿವಟೆ ಅವರು ಸ್ವಾಮಿಗಳನ್ನು ಮಠದಿಂದ ಉಜ್ಜಣ್ಣವರ ಮನೆಗೆ ಬರಲು ಹಾಗೂ ಪ್ರಾತಃಕಾಲ ಅವರ ಮನೆಯಿಂದ ಮಠಕ್ಕೆ ಮರಳಲು, ಒಂದು ಟಾಂಗಾ ಹಾಗೂ ಸುಂದರವಾದ ರಥ ಅಂದರೆ ಬಗಿಯನ್ನು ಸ್ವಾಮಿಗಳ ಸೇವೆಗೆ ಅರ್ಪಿಸಿದರು. ಅಂದಿನಿಂದ ದಿವಟೆಯವರ ಬಗಿಯಲ್ಲಿ ಕೂತು ಸ್ವಾಮಿಗಳು ಓಡಾಡ ತೊಡಗಿದರು.
ವಿಷವನ್ನು ತಿಂದು ಸಿದ್ದಾರೂಢರು ಬದುಕಿದರೆಂಬ ವಾರ್ತೆಯು ದೇಶದ ತುಂಬಾ ಪ್ರಸಾರವಾಯಿತು. ಈತನು ಸಾಕ್ಷಾತ್ ಶಿವನೆಂದು ಭಕ್ತರೆಲ್ಲರೂ ಸಮ್ಮತಿಸಿದರು. ಜಗತ್ತಿನ ಉದ್ಧಾರಕ್ಕಾಗಿ ಕೇಡನ್ನುಂಟು ಮಾಡುತ್ತಿರುವ ಹುಬ್ಬಳ್ಳಿಯಲ್ಲಿ ವಾಸ ಮಾಡುತ್ತಾ, ಮೇಲಿಂದ ಮೇಲೆ ದುರ್ಜನರಿಂದಾದ ಕಷ್ಟ ಸಂಕೋಲೆಗಳನ್ನು ಸಹನೆ
ಮಾಡುತ್ತಾ, ಅವರಲ್ಲಿ ಪ್ರೀತಿಯಿಂದ ಅವರನ್ನು ಸನ್ಮಾರ್ಗಕ್ಕೆ ಹಚ್ಚುತ್ತಾ, ಆ ಪುರವನ್ನು ಕೈಲಾಸ ಮಾಡಿದ ಪರಮ ಸಿದ್ಧಾರೂಢರ ವಾರ್ತೆಯನ್ನು ಕೇಳಿದ ಮುಂಬಯಿ ಮಹಾನಗರದ ಜನರು ವರ್ಷದಲ್ಲಿ ೨, ೩ ಸಲ ತಪ್ಪದೆ ಆಗಮಿಸಿ ಗುರು ಸೇವೆಯನ್ನು ಮಾಡುತ್ತಾ ಮರಳುತ್ತಿದ್ದರು.
🕉️ಭಾಗವತ ಸಪ್ತಾಹ ಆರಂಭ ✡️
ಶ್ರೀ ಕ್ಷೇತ್ರ ಪಂಢರಪುರದಲ್ಲಿ ಆಷಾಢಮಾಸ ಮತ್ತು ಕಾರ್ತಿಕ ಮಾಸಗಳಲ್ಲಿ ಜರುಗುವ ಉತ್ಸವಗಳಂತೆ ಈ ಮಠದಲ್ಲಿ ಅವೇ ತಿಥಿಗಳಲ್ಲಿ ಉತ್ಸವಗಳನ್ನು ಆಚರಿಸುವಾಗ ಭಾಗವತ ಸಪ್ತಾಹವನ್ನು ಆಚರಿಸುವುದನ್ನು ಆರಂಭಿಸಿದರು. ಋಷಿಯಶಾಪದಿಂದ ೭ ದಿನಗಳಲ್ಲಿ ಮರಣವಾಗುವುದನ್ನು ತಿಳಿದುಕೊಂಡ ಪಾಂಡವರ ವಂಶದ ಪರೀಕ್ಷಿತ ರಾಜನಿಗೆ ಗಂಗಾ ನದಿ ತಟದಲ್ಲಿ ಮಹಾನ್ ವೈರಾಗ್ಯಮೂರ್ತಿ ಶುಕಮುನಿಯು ಬೋಧ ಮಾಡಿದ ಭಾಗವತ ಪುರಾಣವನ್ನು ಶ್ರವಣ ಮಾಡಿ ಅಂತ್ಯ ಕಾಲಕ್ಕೆ ಪರೀಕ್ಷಿತ್ ರಾಜನು ಜೀವನ್ ಮುಕ್ತಿಯನ್ನು ಪಡೆದದ್ದನ್ನು ಭಕ್ತರೆಲ್ಲರಿಗೂ ತಿಳಿಯಪಡಿಸುವುದೇ ಈ ಉತ್ಸವದ ಉದ್ದೇಶವಾಗಿದೆ. ಪ್ರತಿ ಸೋಮವಾರ ಸಾಯಂಕಾಲ ಶೃಂಗರಿಸಿದ ಮಂಟಪದಲ್ಲಿ ಸ್ವಾಮಿಗಳನ್ನು ಕೂಡಿಸಿ ಮಹಾಮಂಗಳಾರತಿ
ಮಾಡುವ ದೃಶ್ಯವು ಕೈಲಾಸದಲ್ಲಿ ಸಾಕ್ಷಾತ್ ಪರಶಿವನಂತೆ ಭಾಸವಾಗುತ್ತಿತ್ತು. ಇದರಿಂದ
ಹುಬ್ಬಳ್ಳಿಯು ಭೂಕೈಲಾಸವೆಂದೂ, ಸಿದ್ದರೇ ಭಗವಾನ್ ಪರಶಿವನೆಂದೂ ಭಾವಿಸಿ ಜಾತಿ, ಮತ, ಪಂಥ ಭೇದವಿಲ್ಲದೆ ಸರ್ವಧರ್ಮದ ಭಕ್ತರೆಲ್ಲರೂ ಮಠಕ್ಕೆ ಆಗಮಿಸಿ ಸೇವಾ ಭಾಗಿಗಳಾಗಿ, ಶಾಸ್ತ್ರ ಶ್ರವಣ ಮಾಡುತ್ತಾ ಧನ್ಯರಾಗುತ್ತಿದ್ದರು. ನಾಲ್ಕು ಸಮುದ್ರಗಳ ದಾಟಿ ಜಗತ್ತಿನ ತುಂಬಾ ಈ ವಾರ್ತೆಯು ಪಸರಿಸುತೊಡಗಿತು. ಹೀಗೆ ಪ್ರತಿನಿತ್ಯ ಶಾಸ್ತ್ರ ಶ್ರವಣ ನಡೆಯುತ್ತಿರುವಾಗ ಒಂದಾನೊಂದು ದಿನ ಓರ್ವನು ಲೋಕಮಾನ್ಯ ತಿಲಕರು ರಚಿಸಿದ ಭಗವದ್ಗೀತೆಯನ್ನು ತಂದನು. ಅದರಲ್ಲಿಯ ಕೆಲ ಶ್ಲೋಕಗಳನ್ನು ಓದುತ್ತಾ ಈ ಭಗವದ್ಗೀತೆಯು ಕರ್ಮಪರದ ಅರ್ಥ ಬರೆದಿದ್ದನ್ನು ಸಂಶಯ ವ್ಯಕ್ತಪಡಿಸಿದನು.
👇👇👇👇
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
