ಚಿಂತಾಮಣಿ ಆಶ್ರಮದ ಸ್ವಾಮಿಗಳ ಶಿಷ್ಯ ಜೊತೆ ಶ್ರೀಶೈಲಕ್ಕೆ ಪ್ರಯಾಣ

🕉   ಶ್ರೀಶೈಲಕ್ಕೆ ಪ್ರಯಾಣ 🕉️


ಭಕ್ತರಲ್ಲಿಯ ಒಬ್ಬನು ಆಶ್ರಮದ ಗುರುಗಳನ್ನು ಕುರಿತು, ''ನಾನು ಶ್ರೀ ಶೈಲಕ್ಕೆ ಹೋಗಿ ಮಂಗಲಾತ್ಮಕ ಮಲ್ಲಿಕಾರ್ಜುನನ್ನು ಪೂಜಿಸಲು ಹೋಗುವೆ, ತಮ್ಮಲ್ಲಿಯ ಒಬ್ಬಿಬ್ಬರನ್ನು ನಮ್ಮ ಜೊತೆಗೆ ಕಳುಹಿಸಿರಿ'' ಅಂತಾ ವಿನಂತಿಸಲು. “ಸ್ವಾಮಿಗಳು ಸಿದ್ಧನನ್ನು ಕರೆದೊಯ್ಯು" ಅಂತಾ ಹೇಳಿದರು. ಈರ್ವರೂ ಶೆಟ್ಟಿಯ ಮನೆಗೆ ಹೋಗಲು ಅಲ್ಲಿಗೆ ಶಿವಯೋಗಿಗಳು, ಜಂಗಮರು, ಭಕ್ತರೆಲ್ಲರೂ ಬಂದರು.
ಅವರೆಲ್ಲರೂ ಕೂಡಿ ಶ್ರೀಶೈಲದತ್ತ ಸಾಗಿದರು. ಅಲ್ಲಲ್ಲಿ ಮಾರ್ಗದಲ್ಲಿ ವಸತಿ ಮಾಡುತ್ತ, ಬಡವರಿಗೆ ಅನ್ನಸಂತರ್ಪಣೆ ಮಾಡುತ್ತ ಪ್ರಯಾಣಿಸುತ್ತ ಆತ್ಮಕೂರ, ನಾಗಲೂಟಿ ದಾಟುತ್ತಾ ಭೀಮನಕೊಳ್ಳಕ್ಕೆ ಆಗಮಿಸಿದರು.

ಬೀಮನಕೊಳ್ಳದಲ್ಲಿ ಸ್ನಾನ ಭೋಜನ ಪೂರೈಸಿ, ಕೈಲಾಸ ಬಾಗಿಲದಿಂದ ಹೊರಟು ಮಲ್ಲಿಕಾರ್ಜುನ ದೇವಾಲಯ ಪ್ರವೇಶಿಸಿ, ಶಿಲಾಮಂಟಪದಲ್ಲಿ ಉಳಿದುಕೊಂಡರು. ಮಾರನೇ ದಿನ ಶಿವನ ಹರಕೆ ತೀರಿಸಲು, ಉಳಿದುಕೊಂಡ ಸ್ಥಳವನ್ನು ಮಡಿ ಮಾಡಿದರು. ಎಲ್ಲ ಸ್ತ್ರೀಯರು ಸ್ನಾನ ಮಾಡಿ ಅಡಿಗೆ ಮಾಡಲು ಆರಂಭಿಸಿದರು. ಈ ಕಡೆ ಜಂಗಮರ ಗರ್ವಹರಣ ಮಾಡಲು ಸಿದ್ದನು ಅವರಿದ್ದೆಡೆ ಬಂದನು. ಜಂಗಮರು ಅವನನ್ನು ನೋಡುತ್ತಾ, ''ಲಿಂಗವಿಲ್ಲದ ಹೀನನಾದ ಈ ಭವಿಯನ್ನು ಕಣ್ಣುಗಳಿಂದ ನಾವು ನೋಡುವುದು ಯೋಗ್ಯವಲ್ಲ. ಹೇ ಮೂಢ ಭವಿಯೇ, ನಿರ್ಭಯವಾಗಿ ನಮ್ಮ ಕೂಡ ಹೇಗೆ ಬಂದಿರುವಿ. ಸಂಗಯ್ಯನೇ ಈತನ ಕತ್ತು ಹಿಡಿದು ದೂಡು ಅಂತಾ ಅಪ್ಪಣೆ ಕೊಟ್ಟರು. ಆಗ ಸಿದ್ದನು ಅವರನ್ನು ಕುರಿತು ಪರಮ ಗುರು ಕೊಟ್ಟ ಆತ್ಮಲಿಂಗವು ನನ್ನಲ್ಲಿ ನಿರಂತರವಾಗಿ ದೃಢವಾದ ಅರಿವಿನ ರೂಪ ಲಿಂಗಮಯನಿರಲು, ನಾನೆಂತು ಭವಿಯು, ಕರ್ಮ ಮಾಡಬೇಕಾಗಿರುವವನ ಕೊರಳಲ್ಲಿ ಲಿಂಗವಿರುವುದು. ಶ್ರೇಷ್ಟವಾದ ಲಿಂಗಾಂಗ ಸಮರಸತೆಯನ್ನು ತಿಳಿಯದ ನೀವು ಕೂಳಭಾಕ ಭವಿಗಳಾಗಿರುವಿರಿ ''ಅಂತಾ ಮೂದಲಿಸಿದನು. ಆಗ ಜಂಗಮ ಅಭಿಮಾನಿಯೊಬ್ಬನು ಸಿದ್ಧನನ್ನು ಕುರಿತು" ಧಡಧಡನೆ ನಮಗೆ ಕೂಳಭಾಕ ಭವಿ ಅಂತಾ ಕರೆಯುವಿಯಾ? ದುರಾತ್ಮನೇ ಅಂತಾ ಸಿದ್ಧನನ್ನು ಹೊಡೆಯಲು ಹೋದನು. ಅವರಲ್ಲಿಯ ಓರ್ವನು ಅವನನ್ನು ಬಿಡಿಸುತ್ತ ಸಿದ್ಧಾ, ನೀನು ಇಲ್ಲಿಂದ ಹೊರಟು ಹೋಗು ಅಂತಾ ಹೇಳಿದನು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಶ್ರೀಶೈಲದಲ್ಲಿ ಹುಲಿ ಬಾಯಿಯಿಂದ ಲಿಂಗಗಳನ್ನು ತರಿಸಿ ಜಂಗಮರಿಗೆ ಕೊಟ್ಟು ಶಿವ ಪಂಚಾಕ್ಷರಿ ಮಂತ್ರ ಮಹಿಮೆ ಹೇಳಿದ ಆರೂಢ,
ಎಲ್ಲಾ  ಕಥೆಗಳ ಲಿಂಕಗಳು 
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉   
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಲು 👉📚

«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ