ಶ್ರೀಶೈಲದಲ್ಲಿ ಜಂಗಮರಿಗೆ ಶಿವಪಂಚಾಕ್ಷರಿ ಮಂತ್ರ ಮಹಿಮೆ ಹೇಳಿದ ಸಿದ್ಧಾರೂಢರು ,

🕉️ 




ಸಿದ್ದನು, ''ಹರಹರಾ ನಾನು ಭವಿಯೆ? ಆಗಲಿ ನಾನು ಇಲ್ಲಿಂದ ಹೋಗುವೆನು, ಇಲ್ಲಿ ಇದ್ದುಕೊಂಡೇ ನೀವು ಊಟ ಮಾಡಿರಿ, ಶ್ರೀಶೈಲ ಅಧಿಪತಿ ಮಲ್ಲಿಕಾರ್ಜುನನು ನಮ್ಮ ನಿಮ್ಮ ಉಭಯತರನ್ನು ತಿಳಿಯಲಾರನೆ?'' ಅಂತಾ ಅನ್ನುತ್ತಾ ಕಾಡಿನಲ್ಲಿ ಸಂಚರಿಸುತ್ತ ಅಲ್ಲಿ ಶೋಭಾಯಮಾನವಾದ ನವಗ್ರಹಮಠದಲ್ಲಿ ಪ್ರವೇಶಿಸಿದನು. ಈ ಕಡೆ ಜಂಗಮರು ನೀರಿನಲ್ಲಿ ಇಳಿದು ಸ್ನಾನ ಮಾಡುತ್ತ ಲಿಂಗಾರ್ಚನೆ ಕೂಡ್ರಲು ತಮ್ಮ ಕೊರಳುಗಳಲ್ಲಿಯ ಕಟ್ಟಿದ ವಸ್ತ್ರವನ್ನು ಬಿಚ್ಚಲು ಲಿಂಗಗಳೇ ಮಾಯವಾಗಿದ್ದನ್ನು ಕಂಡು, ''ಶಿವ ಶಿವಾ'' ಅಂತ್ತಾ ಬೆಚ್ಚಿಬಿದ್ದರು. ಲಿಂಗ ಕಾಣದ್ದರಿಂದ ನಮಗೆ ಅಂತ್ಯಕಾಲ ಸಮೀಪಿಸಿತೆಂದು ಗೋಳಾಡತೊಡಗಿದರು. ಅಷ್ಟರಲ್ಲಿ ಹೊರಗೆ ಹೋಗಿದ್ದ ಧನಿಕ ಶೆಟ್ಟಿಯು ಬಂದು ಎಲ್ಲಾ ಸಂಗತಿಗಳನ್ನು ಕೇಳಿ, ''ಸಿದ್ದನು ಮಹಾತ್ಮನು. ಘನತರ ಮಹಿಮಾಶಾಲಿ ಶಿವಯೋಗಿಯನ್ನು ನೀವು ಜಂಗಮರೆ ಭವಿ ಅಂತಾ ಜರಿದು ಅವನನ್ನು ದೂಡಿದ ನೀವೇ ಕೀಳು ಭವಿಗಳಾದಿರಿ ತಿಳಿಯಿತೆ? ಕೂಡಲೇ ಆ ಮಹಾಮಹಿಮನನ್ನು ಹುಡುಕಿ ಅಹಂಕಾರವನ್ನು ಬಿಟ್ಟು ಅವನಲ್ಲಿ ಶರಣಾಗತರಾಗಿ ನಿಮ್ಮ ನಿಮ್ಮ  ಲಿಂಗಗಳನ್ನು ಪಡೆಯಿರಿ' ಅಂತಾ ಹೇಳಲು ಅವರೆಲ್ಲರೂ ಕಾಡಿನಲ್ಲಿ  ಕಲ್ಲು ಮುಳ್ಳುಗಳನ್ನು ತುಳಿಯುತ್ತ ಮರಗುತ್ತ ಬಿಸಿಲಿನ ತಾಪಕ್ಕೆ ಬಾಯಾರಿಕೆಯಾಗಿ ಹಸಿವಿನಿಂದ ಸುಕಟಪಡುತ್ತ ''ಬೇಡಪ್ಪ ಬೇಡ ಈ ಸಂಕಷ್ಟ. ಸಿದ್ದ ಬಾಲಕನನ್ನು ಮನ ಬಂದಂತೆ ನಾವು ಜರಿದೆವು  ಕಠೋರವಾಗಿ ದೂಡಿದೆವು. ನಮಗೆ ಸರಿಯಾದ ಪ್ರಾಯಶ್ಚಿತ್ತವಾಗಿದೆ' ಅಂತಾ ನಡೆಯುತ್ತ, ''ಹೇ ತಂದೆಯೇ ತಪ್ಪಾಯಿತು. ಕ್ಷಮಿಸು ದಯಾನಿಧಿಯ ಮಂದಮತಿಗಳಾದ ನಮ್ಮನ್ನು ಉದ್ದಾರಮಾಡು, ಮಹಾತ್ಮನೆ ನಿಮ್ಮ ಮಹಿಮೆ  ಅಪಾರವಾದುದು'' ಅಂತಾ ಸಿದ್ಧನನ್ನು ಕೊಂಡಾಡುತ್ತ ನವಗ್ರಹಮಠ ತಲುಪಿದರು. ಆ ಮಠದಲ್ಲಿ ಘೋರವಾದ ಹುಲಿಯ ಮೇಲೆ ಸಿದ್ದನು ಆಸೀನನಾಗಿ ಧ್ಯಾನಾಸಕ್ತನಾಗಿದ್ದನ್ನು,ಅವನ ಕೊರಳಲ್ಲಿ ಹೆಡೆಯೆತ್ತಿ ಭುಸುಗುಟ್ಟುತ್ತಿರುವ ಭಯಾನಕ ನಾಗಸರ್ಪವನ್ನು, ಆತನಿಗೆ ಬಿಸಿಲು ತಾಗದಂತೆ ರೆಕ್ಕೆಗಳನ್ನು ಹರಡಿ ಚೌರಿ ಬೀಸುತ್ತಿರುವ ನವಿಲುಗಳನ್ನು, ಕಪಿಗಳು ಕೊಡುತ್ತಿರುವ ಹಣ್ಣುಗಳನ್ನು ತಿನ್ನುತ್ತಲಿರುವ ಸಿದ್ದನನ್ನು ಕಂಡರು. ಭಯಂಕರ ಹುಲಿ, ಸರ್ಪ ಇವೆಲ್ಲವುಗಳನ್ನು ಕಂಡು ಅಂಜಿ ಜಂಗಮರು ಚಿಟ್ಟನೆ ಚೀರುತ್ತಲೇ  ಶಿರಸಾಷ್ಟಾಂಗ ನಮಸ್ಕಾರ ಹಾಕಿದರು. ಭಯದಿಂದ ನಡುಗುತ್ತ ಜಂಗಮರು ಸಿದ್ಧನನ್ನು ಕುರಿತು, “ಪರಶಿವನೆ ನೀನು ಭವಿಯಲ್ಲ. ನಮ್ಮ ಮಾತೇ ನಮಗೆ ಮುಳುವಾಯಿತು. ನಾವು ಬಹು ಪಾಪಾತ್ಮರು. ಒಡೆಯನೆ ನಮ್ಮ ತಪ್ಪುಗಳನ್ನು ಎಣಿಸದೆ ಕರುಣೆಯಿಂದ ನಮ್ಮನ್ನು ರಕ್ಷಿಸು. ನಿನ್ನಲ್ಲಿ ನಾವು ಶರಣಾಗತರಾಗಿದ್ದೇವೆ'' ಅಂತಾ ಪರಿಪರಿಯಾಗಿ  ಪ್ರಾರ್ಥಿಸಿದರು. 

ಸ್ವಾನುಭವಿಯಾದ ಸಿದ್ದನು ಜಂಗಮರನ್ನು ಕುರಿತು ''ಅಯ್ಯಾ, ಜಂಗಮರೆ, ಸೂರ್ಯನಾರಾಯಣ ಜಗತ್ತನ್ನೇ ಪ್ರಕಾಶ ನೀಡುತ್ತಿರುವಂತೆ, ನೀವು ಸ್ಥಿರವಾದ ಲಿಂಗವುಳ್ಳವರು. ನಾನು ಏನೂ ತಿಳಿಯದ ಭವಿಯಾದ ಈ ಹೀನನ ಕಡೆ ನೀವೇಕೆ ಬಂದು ನೀವು ಕೀಳಾಗುವಿರಿ, ಇಲ್ಲಿಂದ ಹೊರಡಿರಿ'' ಅಂತಾ ಹೇಳಲು ಅವರು, “ಕರುಣಾಕರನೇ, ನಮ್ಮ ಸ್ಥಿತಿಯನ್ನು ನೀನು ಗುರ್ತಿಸಿರುವೆ. ಸುಮ್ಮನೇ ಕಾಡಬೇಡ. ನಮ್ಮ ನಮ್ಮ ಲಿಂಗಗಳನ್ನು ಕೊಟ್ಟು ರಕ್ಷಿಸು'' ಅಂತಾ ಅಂಗಲಾಚಿ ಬೇಡಿಕೊಂಡರು. ಆಗ ಹರ್ಷದಿಂದ ಸಿದ್ದನು ''ಈ ಜಂಗಮರಿಗೆ ಪಶ್ಚಾತ್ತಾಪವಾಗಿರುವುದೇ ಪ್ರಾಯಶ್ಚಿತ್ತವಾಗಿರುವುದು'' ಅಂತಾ ತನ್ನ ಕಡೆಗೆ ಅವರನ್ನು ಕರೆಯಲು, "ನಿಮ್ಮ ಬಳಿ ಬರಲಿಕ್ಕೆ ನಮಗೆ ಭಯವಾಗಿದೆ " ಅಂತಾ ಹೇಳಲು, ಹುಲಿಯ ಮೇಲಿಂದ ಕೆಳಗಿಳಿದು ಸಿದ್ದನು ಜಂಗಮರ ಹತ್ತಿರ ಹೋಗಿ, ಜಂಗಮರೆ ಆ ಹುಲಿಯ ಮುಖದಲ್ಲಿ ನಿಮ್ಮ ಲಿಂಗಗಳು ಇವೆ. ನಿಮ್ಮ ನಿಮ್ಮ ಗುರ್ತಿಸಿ ನೀವು ಅವುಗಳನ್ನು ತೆಗೆದುಕೊಳ್ಳಿರಿ ಅಂತಾ ಹೇಳಿದನು. ಆಗ ಜಂಗಮರು ಸಿದ್ಧನನ್ನು ಕುರಿತು "ಹೇ ಮಹಾತ್ಮನೇ ನಮಗೆ ಕಾಡಬೇಡ. ನಮ್ಮ ಗರ್ವಹರಣವಾಗಿದೆ. ನಾವು ಬಹಳೇ ದುಃಖಿತರಾಗಿದ್ದೇವೆ ಅಂತಾ ಪುನಃ ಪ್ರಾರ್ಥಿಸಲು ಸಿದ್ದನು ಅವರನ್ನು ಕುರಿತು ಹೇ ಜಂಗಮರೆ ಶಿವ ಪಂಚಾಕ್ಷರಿ ಮಂತ್ರವನ್ನು ನುಡಿಯಿರಿ. ನಿಮಗೆ ಲಿಂಗಗಳು ದೊರಕುವವು 'ಅಂತಾ ಹೇಳಿದನು. ಆಗ ಜಂಗಮರು ಆ ಶಿವಮಂತ್ರವನ್ನು ಬಹಿರಂಗವಾಗಿ ಅನ್ನಲಾಗದು ಅಂತಾ ಪ್ರತಿಪಾದಿಸಿದರು. ಆಗ ಸಿದ್ದನು ಅವರ ನುಡಿ ಕೇಳುತ್ತ,” ಅಯ್ಯಾ ಜಂಗಮರೆ

ಶಿವಮಂತ್ರವನ್ನು ನುಡಿಯಲು, ನುಡಿದವರು ಕೆಡುವರೋ? ಅಥವಾ ಆ ಮಂತ್ರವು ಕೆಡುವುದೆ? ಅಥವಾ ಅದನ್ನು ಕೇಳಿದವರು ಕೆಡುವರೋ?
ಜಡಮತಿಗಳೇ ನುಡಿದವನೇ ಕೆಡುವನೆಂದರೆ ಇದಕ್ಕೆ ಶೃತಿವಾಕ್ಯವಿದೆ. 

ಸಕೃದುಚ್ಛಾರ ಮಾತ್ರೇಣ ಪಂಚಾಕ್ಷರ ಮಹಾಮನೋಃ |
ಸರ್ವೇಷಾಮಪಿ ಜಂತೂನಾಂ ಸರ್ವಪಾಪಕ್ಷಯೋ ಭವೇತ್ ||
 
ಪರಮಶಿವ ಪಂಚಾಕ್ಷರಿ ಮಂತ್ರವನ್ನು ಈ ಧರೆಯಲ್ಲಿ ಜೀವ ಜಂತುಗಳು ಅರಿವುತಾ, ಮರವಿನಿಂದಾಗಲಿ ಅಥವಾ ಮೊಸತನದಿಂದಾಗಲಿ ಒಂದು ಸಾರೆಯಾಗಲಿ ನುಡಿಯಲು, ಪಾಪದ ರಾಶಿಗಳೆಲ್ಲ ಭಸ್ಮವಾಗುವವು. ಪರಮಾನಂದ ಪ್ರಾಪ್ತಿಯಾಗುವುದು ಅಂತಾ ಶೃತಿ ಅಭಿಪ್ರಾಯವಾಗಿದೆ. 

          🕉️ ಮತ್ತೊಂದು  ಶೃತಿಯಲ್ಲಿ :-

ಈಶಮಂತ್ರೋ ಮಹಾಶಕ್ತಿರೀಶ್ವರಃ ಪ್ರತಿಪಾದಕಃ| ಸಕೃದುಚ್ಛಾರ ಮಾತ್ರೇಣ ಸರ್ವಸಿದ್ಧಿ ಪ್ರದೋ ಭವೇತ್ ||

ಘನವಾದ ಶಕುತಿಯ ವಟಬೀಜದಂತೆ ಈ ಶಿವಮಂತ್ರವು ಜನನ ಮರಣ ರಹಿತ ಈಶವಾಚಕವಾಗಿದೆ. ಗಂಭೀರವಾದ ಉಚ್ಚ ಸ್ಟರದಿಂದ ಈ ಮಹಾಮಂತ್ರವನ್ನು ಒಮ್ಮೆ ನುಡಿಯಲು, ಮನಸ್ಸಿನಲ್ಲಿಯ ಸಂಕಲ್ಪ ಸಿದ್ಧಿಗಳಾಗುವವು ಮತ್ತು ತನಗೆ ಪರಮಾನಂದ ಪ್ರಾಪ್ತಿ ಅಂತಾ ಶೃತಿಯ ಮತವಿದೆ. 

     ✡️ ಮತ್ತೊಂದು  ಶೃತಿಯಲ್ಲಿ 

ವಸಿಷ್ಠ ವಾಮದೇವಾದ್ಯಾಮುನಯೋ ಮುಕ್ತಕಿಲ್ಬಿಷಾಃ | 
ಮಂತ್ರೇಣಾನೇನಸಂ ಸಿದ್ಧಾ ಮಹಾತೇಜಸ್ವಿನೋ ಭವನ್ ||

ಪಾಪರಹಿತ ನಾರದ, ವಾಮದೇವ, ಸನಕ, ಶ್ವೇತ, ವಸಿಷ್ಟ, ಗೌತಮ, ಜನಕ ಮೊದಲಾದವರು ಈ ಶಿವಮಂತ್ರವನ್ನು ಜಪಿಸುತ್ತ ಮನಸ್ಸಿನ ಮಲವಿಕ್ಷೇಪಗಳನ್ನು ಕಳೆದುಕೊಂಡು ಪರಮಾನಂದ ಸುಖವನ್ನು ಅನುಭವಿಸಿ ಬಹುವಿಖ್ಯಾತರಾದರು ಅಂತಾ ಶೃತಿಯು ಸಾರಿ ಸಾರಿ ಹೇಳಿದೆ. 

🕉️ಮತ್ತೊಂದು  ಶೃತಿಯಲ್ಲಿ 

ಬ್ರಹ್ಮಾದೀನಾಂ ಚ ದೇವಾನಾಂ ಜಗತ್ಸ್ರಷ್ಟ್ಯಾದಿ  ಕರ್ಮಣಿ |
ಮಂತ್ರಸ್ಯಾಸ್ಯೈವ ಮಹಾತ್ಮ್ಯಾತ್ಸಾಮರ್ಥ್ಯ ಮುಷಜಾಯತೆ|| 

ಶ್ರೇಷ್ಠರಾದ ಬ್ರಹ್ಮ, ಹರಿ, ಸೂರ್ಯ, ಚಂದ್ರರು, ಸುರರು ಮೊದಲಾದವರು ಶಿವಷಡಾಕ್ಷರಿ ಮಂತ್ರ ಬಲದಿಂದ ಜಗತ್ತಿನ ಉದಯಾದಿ ಕಾರ್ಯಗಳನ್ನು ತಿಳಿದಕೊಂಡು ಮಾಡುವ ಶ್ರೀಮಂತ ಶಕ್ತಿಯುತರಾದರೆಂದು ಶೃತಿಯ ಮತವಾಗಿದೆ.

🕉️ ಮತ್ತೊಂದು  ಶೃತಿಯಲ್ಲಿ

ಪುರಾಸಾನಂದ ಯೋಗೀಂದರಃ ಶಿವಜ್ಞಾನ ಪರಾಯಣಃ | 
ಪಂಚಾಕ್ಷರಂ ಸಮುಚ್ಚಾರ್ಯನಾರಕಾನುದ ತಾರಯತ್||

ಪೂರ್ವದಲ್ಲಿ ಸಾನಂದ ಮುನಿಯು ಯಮಲೋಕಕ್ಕೆ ಹೋದಾಗ ಯಮದೇವನ ಪರವಾನಿಗೆ ಪಡೆದು, ನರಕಲೋಕ ಪ್ರವೇಶಿಸಿದರು. ರೌರವ ನರಕದಲ್ಲಿ ಬಿದ್ದು ಅತಿ ಭಯಂಕರ ದುಃಖದ ಯಾತನೆಯನ್ನು ಅನುಭವಿಸುತ್ತಿದ್ದ ಜೀವಜಂತುಗಳನ್ನು ಕಂಡು ಆತನು ಅವರ ಮೇಲೆ ಕೃಪಾದೃಷ್ಟಿಯನ್ನು ಬೀರಿ, 'ಹೇ ಜೀವಿಗಳೆ, ಶಿವ ಪಂಚಾಕ್ಷರಿ ಮಂತ್ರವನ್ನು ನುಡಿಯಿರಿ' ಅಂತಾ ನುಡಿಯಲು ಹಚ್ಚಲು ಆ ಎಲ್ಲ ಜೀವಕೋಟಿಗಳು ನರಕಯಾತನೆಯಿಂದ ಮುಕ್ತರಾಗಿ, ಶಿವಪದವನ್ನು ಪಡೆದರು. ಕಾರಣ ಉಚ್ಛ ಸ್ವರದಿಂದ ಬಹಿರಂಗವಾಗಿ ಶಿವಮಂತ್ರ ನುಡಿಯಬೇಕೆಂದು ಶೃತಿಯು ಸಾರಿ ಸಾರಿ ಹೇಳುತ್ತಲಿದೆ. ವೇಶ್ಯಾ ಸ್ತ್ರೀಯಲ್ಲಿ ರತನಾಗಿದ್ದ ಕಾಮಾಂಧನಾದ ದುರುಳ ಶೈತನು ತನ್ನ ಪ್ರಿಯತಮೆ  “ಶಿವನಿ'ಗಾಗಿ ಹೂವುಗಳನ್ನು ತರಲು, ಅಡವಿಗೆ ಹೋದಾಗ ಹೂವುಗಳನ್ನು ಸಂಗ್ರಹಿಸಿ ಮರಳುವಾಗ ಮಾರ್ಗದಲ್ಲಿ ಘೋರವಾದ ತಗ್ಗಿನಲ್ಲಿ ಬಿದ್ದಾಗ, ಪ್ರಾಣಾಂತಿಕ ಪೆಟ್ಟು ತಗಲಿ ಪ್ರಾಣ ಹೋಗುವಾಗ ತನ್ನ ಪ್ರಿಯತಮೆಯನ್ನು ಕುರಿತು 'ಶಿವನಿ'ಗೆ ಈ ಹೂಗಳು ಮುಟ್ಟಲಿ ಅಂತಾ ತೂರಿದಾಗ, ಅಲ್ಲಿಯೇ ಇದ್ದ ಶಿವಲಿಂಗದ ಮೇಲೆ ಬಿದ್ದವು.
ಮೋಸದಿಂದ ನುಡಿದ ಶಿವನಾಮಸ್ಮರಣೆಯ ಫಲದಿಂದ ಕಾಮಾಂಧ ಶ್ವೇತನು ಶಿವಪದವನ್ನು ಪಡೆದನು. ಬಹಿರಂಗವಾಗಿ ಮಂತ್ರವನ್ನು ನುಡಿದು ಕೆಟ್ಟವರು ಯಾರೂ ಇಲ್ಲ. ಹೀಗಿರುವಾಗ ಶಿವಮಂತ್ರವನ್ನು ಬಹಿರಂಗವಾಗಿ ನುಡಿಯಬಾರದು ಅಂತಾ ಅನ್ನುವುದು ಶಾಸ್ತ್ರದ್ರೋಹವಾಗುವುದು. ಸಪ್ತಕೋಟಿ ಮಂತ್ರಗಳಿಗೆ ಮಾತೃಸ್ವರೂಪವಾದದ್ದು, ಸುರನರ ಮುನಿಗಳಿಗೆ ಪರತರ ಮುಕ್ತಿದಾಯಕ ಪಂಚಾಕ್ಷರಿ ಮಂತ್ರವನ್ನು ನುಡಿಯುವುದರಿಂದ ಹೇಗೆ ಕೆಡುಕಾಗುವುದು. ಕೆಡುವುದೇ ಆದಲ್ಲಿ ಭವಸಾಗರದಿಂದ ಹೇಗೆ ಪಾರಾಗಬೇಕು. ಶಿವನು ಈ ನಿಂದಕರ ಬಗ್ಗೆ ಕೋಪಿಸಿಕೊಳ್ಳುವನು. ನಿಂದಕರನ್ನು ಯಮನು ನರಕದಲ್ಲಿ ತಳ್ಳುವನು, ಕೇಳುವ ಜನರು ಕೆಡುವರು ಅಂತಾ ಹೇಳಿದೊಡೆ, ಸತ್ಯದಿಂದ ವೇದ ಗುರುಗಳು ಹೇಳಿದ ಉನ್ನತ ಶಿವಮಂತ್ರ ಕೀರ್ತನೆಯಿಂದ ಕೇಳುವ ಭಕ್ತರು ನಿಜಮುಕ್ತಿ ಪಡೆಯುವರು ಅಂತಾ ನುಡಿದಿರುವರು. ಸಾನಂದಯೋಗಿಯು ಮಾಡಿದ ಘೋಷಣೆಯಿಂದ ಭಕ್ತಿಯಿಂದ ನರಕಯಾತನೆಯಲ್ಲಿದ್ದ ಜೀವಿಗಳು ಶಿವಮಂತ್ರವನ್ನು ನುಡಿಯಲು, ಕೈಲಾಸ ದೊರಕಲಿಲ್ಲವೆ? ಹೀಗೆ ಕೇಳಿ ಕೆಟ್ಟವರು ಇರುವರೆ  ಈ ಜಗತ್ತಿನಲ್ಲಿ ತಿಳಿದುಕೊಂಡು ಬಹಿರಂಗಕ್ಕೆ ಶಿವಮಂತ್ರವನ್ನು ನುಡಿಯುವವರನ್ನು ಹೀಯಾಳಿಸಿದಲ್ಲಿ ಘೋರ ನರಕಕ್ಕೆ ಬೀಳುವರು. ಅದಕ್ಕೆ ಸ್ಮೃತಿ  ಕಲೌನಾಮ ಸಂಕೀರ್ತನಃ ಕೇಳಿರಿ.

ಲಿಂಗ, ಮಂತ್ರ, ಆಗಮಗಳೆಲ್ಲ ಲಿಂಗವಂತರು ನಮ್ಮವು ಅಂತಾ ಅನ್ನುವರು. ಗಾಯತ್ರಿ ಮಂತ್ರ, ಹರಿ ವೇದಗಳು ನಮ್ಮವು ಅಂತಾ ವಿಪ್ತರು ಅನ್ನುವರು. ಉಳಿದವರಿಗೆ ಶ್ರೇಷ್ಠವಾದ ಮಂತ್ರ ಶಾಸ್ತ್ರ, ದೇವತೆ ಇಲ್ಲವೇನು? ಇವರನ್ನು ಜಗದೀಶ್ವರನು ಹುಟ್ಟಿಸಲಿಲ್ಲವೆ. ವಿಚಾರ ಮಾಡಲು ಈ ಜಗತ್ತನ್ನು ನೀವಿಬ್ಬರೂ ಕೆಡಿಸಿದಿರಿ.
ಬೇರೆಯವರನ್ನು ಭವಿ, ಶೂದ್ರ, ನರಕದಲ್ಲಿ ಬೀಳುವಿರಿ ಅಂತಾ ಹೇಳುತ್ತ ಆ ಪರಬ್ರಹ್ಮನ ಇರವು ನಿಮಗೆ ತಿಳಿದಿಲ್ಲ. ಇದಕ್ಕೆ ಆಗಮ ಪ್ರಮಾಣ 

ಲಿಂಗ ಮಧ್ಯೆ ಜಗತ್ಸರ್ವಂಲಿಂಗಮಯಂಜಗತ್ | ಲಿಂಗ ಬಾಹ್ಯಾತ್ಪರನ್ನಾಸ್ತಿ ತಸ್ಮಾಲ್ಲಿಂಗ ಮಹಂ ಸದಾ||

ಪರಮ ಜಂಗಮ ನಾಮ ಶ್ರೇಷ್ಟವಾಗಿದೆ. ನಿರಂತರ ಚಾಂಡಾಲ ಸ್ವಭಾವವನ್ನು ತಂದುಕೊಳ್ಳದೆ ಸರ್ವರಲ್ಲಿ ಸಮಭಾವದಿಂದ ಆಶೆಯನ್ನು ತ್ಯಜಿಸಿ, ಲಿಂಗಾಂಗ ಸಮರಸತೆಯನ್ನು ಅರಿಯುತ್ತ ಜಗತ್ತಿನ ತುಂಬಾ ವ್ಯಾಪಕನಾದ ಲಿಂಗಾತ್ಮನೆ  ನಿಜವಾದ ಜಂಗಮನು. "ಈ ಪ್ರಕಾರ ದೃಢಚಿತ್ತದಿಂದ ಶೃತಿ ಸ್ಮೃತಿ ಆಗಮೋಕ್ತಿಗಳಿಂದ ಸಾರಿ ಸಾರಿ ಹೇಳಿದ, ಸಿದ್ದನು ಹೇಳಿದ್ದನ್ನು ಕೇಳಿದ ಆ ಜಂಗಮರು," ಈತನು ಸಾಕ್ಷಾತ್ ಪರಶಿವನಾಗಿರುವನು “ಅಂತಾ ಹೇಳುತ್ತಾ ವರಪಂಚಾಕ್ಷರಿ ಮಂತ್ರವನ್ನು ಉಚ್ಚರಿಸಿದ ಕೂಡಲೇ ಅವರವರ ಬೊಗಸೆಗಳಲ್ಲಿ ಅವರವರ ಲಿಂಗಗಳು ಹುಲಿಮುಖದಿಂದ ಬಂದು ಬಿದ್ದವು. ಆಗ ಸಿದ್ಧನನ್ನು ವಂದಿಸುತ್ತ ಅಲ್ಲಿಂದ ಮಲ್ಲಿಕಾರ್ಜುನ ದೇವಾಲಯಕ್ಕೆ ಹರ್ಷದಿಂದ ಬಂದು ಶಿವಮಂತ್ರವನ್ನು ನುಡಿಯುತ್ತ ತಮ್ಮ ತಮ್ಮ ಕಾರ್ಯಗಳನ್ನು ಪೂರೈಸಿ ಭೋಜನ ಮಾಡಿದರು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಶ್ರೀರಂಗ ಪಟ್ಟಣದಲ್ಲಿ ವಾಮಾಚಾರದಲ್ಲಿ ತೊಡಗಿದ ಬ್ರಾಹ್ಮಣರನ್ನು ಸನ್ಮಾರ್ಗಕ್ಕೆ ತಂದ ಆರೂಢರು,
ಎಲ್ಲಾ  ಕಥೆಗಳ ಲಿಂಕಗಳು 
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉  
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಲು 👉📚

«««««ಓಂ ನಮಃ ಶಿವಾಯ »»»»»»
»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ