ಕಬೀರದಾಸನೆಂಬ ಶಿಷ್ಯನಿಗೆ ಬ್ರಹ್ಮಜ್ಞಾನವನ್ನು ಬೋಧಿಸಿದ ಕಥೆ
🌾ಕಬೀರದಾಸನೆಂಬ ಶಿಷ್ಯನಿಗೆ ಬ್ರಹ್ಮಜ್ಞಾನವನ್ನು ಬೋಧಿಸಿದ ಕಥೆ ✡️
🕉️ಈಶಾವಾಸ್ಯೋಪನಿಷತ್ತಿನ ಭೋಧನೆ✡️
ಒಂದಾನೊಂದು ದಿನ ಸಿದ್ಧಾರೂಢರು ತಮ್ಮ ಶಿಷ್ಯರಿಗೆ ಬೋಧಾಮೃತದಿಂದ ಆನಂದಭರಿತರನ್ನಾಗಿ ಮಾಡುತ್ತಿರುವಾಗ, ಓರ್ವ ಬಾಲಕನ ಶ್ರೀಗಳ ಚರಣಾರವಿಂದಗಳಲ್ಲಿ ವಂದನೆಗಳನ್ನು ಮಾಡುತ್ತಾ ಬೇಡಿಕೊಳ್ಳತೊಡಗಿದನು. ಹೇ ಗುರುವರ್ಯಾ, ಸಂಸಾರ ದುಃಖವನ್ನು ಶಮನಗೊಳಿಸುವ ದಾರಿಯನ್ನು ಕಂಡು ಕೊಳ್ಳಲು ನಾನಾ ದೇಶಗಳನ್ನು ತಿರುಗಿದೆ. ಸದ್ಗುರು ಶೋಧ ಮಾಡಲು ಮುಂದಾದೆ. ಹುಬ್ಬಳ್ಳಿಯಲ್ಲಿ ಸಿದ್ಧಾರೂಢರೆ ಪರಮ ಸದ್ಗುರು ಅಲ್ಲಿ ಹೋಗು ಅಂತಾ ಕೆಲವರು ಮಾರ್ಗದರ್ಶನ ಮಾಡಿದ್ದರಿಂದ ಇಲ್ಲಿಗೆ ಬಂದಿರುವೆ ದೀನರನ್ನು ಮುದದಿಂದ ಎತ್ತಿ ಹಿಡಿಯುವ ಗುರುವೇ, ಕರುಣಾಕರನೇ, ನನ್ನ ಹೃತ್ತಾಪವನ್ನು ಹರಣ ಮಾಡುವ ಸರ್ವಶಕ್ತಿಮಾನ್ ಸದಾಶಿವನೇ ನನ್ನಲ್ಲಿ ಅನುಗ್ರಹಿಸು ಅಂತಾ ಪರಿಪರಿಯಿಂದ ಪ್ರಾರ್ಥಿಸಿದನು. ಈತನು ಅಧಿಕಾರಿಯೋ ಅನಧಿಕಾರಿಯೋ ಹೇಗೆಂಬುದನ್ನು ಪರೀಕ್ಷಿಸಲು ಆತನ ಕಡೆ ಸಿದ್ದನು ಉದಾಸೀನ ಮಾಡಿದನು. ತನ್ನ ಅಧಿಕಾರತ್ವ ಪರೀಕ್ಷೆಗಾಗಿ ಹೇಗೆ ಮಾಡುತ್ತಿರುವರೆಂಬುಧನ್ನು ಗುರುತಿಸಿದ ಆ ಧೀರ ಬಾಲಕನು ಗುರುವಿನ ಸಕಲ ಸೇವೆಗಳಲ್ಲಿ ನಿರತನಾದನು.
ಒಂದೊಂದು ದಿನ ಕೀಳು ಸೇವೆಗಳನ್ನು ಮಾಡಲು ಹೇಳಿದರು ನಿರಭಿಮಾನದಿಂದ ನಿಷ್ಠೆಯಿಂದ ಸೇವಾರತನಾದನು. ಒಂದೊಂದು ದಿನ ಅನ್ನ ಕೊಡದೇ ಇದ್ದರೂ ಹಸಿವಿನ ಬಾಧೆಯತ್ತ ಗಮನ ಕೊಡದೆ ಗುರುವಿನ ಸೇವೆಯಲ್ಲಿ ಯಾವ ನ್ಯೂನತೆ ಮಾಡಲಿಲ್ಲ. ಆಶ್ರಮದ ಸೇವೆ, ಅಂಗ ಸೇವೆ ಮುಂತಾದ ಸರ್ವ ಸೇವೆಗಳಲ್ಲಿ ಸದ್ ಭಾವದಿಂದ ಶ್ರದ್ಧಾ ಭಕ್ತಿಯಿಂದ ಕರ್ತವ್ಯ ನಿರ್ವಹಿಸುತ್ತಾ ಕಾಲ ಕಳೆಯುತ್ತಿದ್ದ ಆ ಬಾಲಕನನ್ನು ಸಿದ್ಧಾರೂಢರು ಪ್ರೀತಿಯಿಂದ ಕರೆದು, ಆತನ ಸೇವೆಗೆ ಮೆಚ್ಚಿ ಆತನಿಗೆ ಕಬೀರದಾಸ ಅಂತ ನಾಮಕರಣ ಮಾಡಿದರು. ಈ ಬಾಲಕನು ಸವಣೂರ ನವಾಬರ ಅಳಿಯನು ಅಂತಾ ತಿಳಿದು ಬಂದಿದೆ. ಈತನ ಸಾಧನ ಚತುಷ್ಟಯ ಮಾಡಿರುವನೋ ಇಲ್ಲವೋ ಎಂಬುದರ ಬಗ್ಗೆ ಸಿದ್ದಾರೂಢರು ಆ ಬಾಲಕನಿಗೆ ಪ್ರಶ್ನಿಸಿತೊಡಗಿದರು.
ಜ್ಞಾನದಿಂದ ಸಾಧಿಸುವ ಮೋಕ್ಷಕ್ಕೆ ಕುಂದುರಹಿತ ವಿವೇಕ ಒಂದಿದ್ದರೆ ಸಾಕು. ಉಳಿದ ಸಾಧನಗಳು ಯಾಕೆ ಬೇಕು ಎನ್ನಲು ಅದಕ್ಕೆ ಕಬೀರನು, ಹೇ ದೀನೋದ್ದಾರಾ ವೈರಾಗ್ಯವಿಲ್ಲದಿದ್ದರೆ ವಿವೇಕವು ನಿಲ್ಲಲಾರದು ಅಂತ ಹೇಳಲು ಅದಕ್ಕೆ ಸಿದ್ಧಾರೂಢರು, ಹಾಗಾದರೆ ವೈರಾಗ್ಯ ಮತ್ತು ವಿವೇಕ ಸಾಕು, ಉಳಿದವುಗಳು ಯಾತಕ್ಕೆ ಬೇಕು ಎಂದರು. ಅದಕ್ಕೆ ಕಬೀರನು, ಹೇ ಸದ್ಗುರುವೇ, ಸಾಧನ ಷಟ್ಸಂಪತ್ತಿಯಿಲ್ಲದಿದ್ದರೆ ವೈರಾಗ್ಯ ನಾಶವಾದೀತು. ಕಾರಣ ಈ ಸಾಧನಗಳಲ್ಲಿ ಒಂದನ್ನು ಸಹ ಬಿಡಲಿಕ್ಕೆ ಬಾರದು. ಈ ಶರೀರವು ರಥವಾಗಿರುವುದು. ಈ ರಥವನ್ನೆಳೆಯಲು ಇಂದ್ರಿಯಗಳೇ ಕುದುರೆಗಳಾಗಿವೆ. ಈ ಕುದುರೆಗಳಿಗೆ ಮನಸ್ಸಿನ ಕಡಿವಾಣ, ಈ ರಥವನ್ನು ನಡೆಸಲು ಬುದ್ಧಿಯೆ ಸಾರಥಿಯಾಗಿ ಜೀವಾತ್ಮನೇ ರಥಿಕನಾಗಿರುವನು. ವಿಚಾರ ಮಾಡಲಾಗಿ ಈ ರಥದ ಕುದುರೆಗಳಿಗೆ ಕಡಿವಾಣವಾಗಿರುವ ಮನಸ್ಸನ್ನು ಸಾರಥಿಯಾದ ಬುದ್ಧಿಯು ನಿಯಂತ್ರಿಸಿದರೆ ರಥಿಕನು ತನ್ನ ಸದನಕ್ಕೆ ತಲುಪುವನು. ಈ ನಿಯಂತ್ರಣ ತಪ್ಪಿದಲ್ಲಿ ದಶೇಂದ್ರಿಯ ರೂಪ ಹತ್ತು ಕುದುರೆಗಳು ವಿಭಿನ್ನ ದಿಕ್ಕುಗಳಿಗೆ ಓಡುತ್ತಾ ದಾರಿ ತಪ್ಪಿ ರಥಿಕನಿಗೆ ದುರ್ದೆಶೆ ಪ್ರಾಪ್ತಿಯಾಗುವುದು.
ಕಾರಣ ವಿಚಾರಿಸಲು ಸಾರಥಿಯನ್ನನುಸರಿಸಿ ಕಡಿವಾಣ, ಕಡಿವಾಣವನ್ನನುಸರಿಸಿ ಕುದುರೆಗಳು, ಕುದುರೆಗಳನ್ನನುಸರಿಸಿ ರಥವಿರುವುದು. ಕಾರಣ ಮನಸ್ಸನ್ನು ನಿಯಂತ್ರಿಸಲು ಸಾಧನ ಪಟ್ ಸಂಪತ್ತಿಗಳು ಅವಶ್ಯ. ವಿಷಯಾದಿಗಳತ್ತ ಮನವು ಧಾವಿಸುವಂತೆ ಶಮೆಯೆಂಬ ಸಾಧನೆಬೇಕು. ವಿಷಯಗಳಲ್ಲಿ ಹೋಗದಂತೆ ಇಂದ್ರಿಯಗಳನ್ನು ತಡೆಯಲು ದಮೆ ಬೇಕು. ಚಂಚಲವಾದ ಮನಸ್ಸನ್ನು ನಿಗ್ರಹಿಸಲಾಗದೆ ಇಂದ್ರಿಯಗಳ ಇಚ್ಛೆಗಳನ್ನು ಅಡಗಿಸಲು ದಮೆಯು ಶ್ರಮೆಯನ್ನು ಬಯಸುವುದು. ಶೃತಿಗಳಲ್ಲಿ ಗುರುಗಳಲ್ಲಿ ಮನಸ್ಸಿನ ದೃಢವಾದ ವಿಶ್ವಾಸವಿಡಲು ಶ್ರದ್ಧಾ ಬೇಕು. ಇಂದ್ರಿಯಗಳು ಚಂಚಲವಾದರೆ, ಶ್ರದ್ಧೆಯು ಉಳಿಯಲಾರದು. ಅದಕ್ಕಾಗಿ ಶ್ರದ್ಧೆಯು ದಮೆಯನ್ನು ಇಚ್ಚಿಸುವುದು. ಮನಸ್ಸನ್ನು ಚಲಿಸಗೊಡದೆ ಸ್ಥಿರಗೊಳಿಸುವುದೇ ಶಾಂತಿಯು, ಸದ್ಗುರುವಿನ ಭೋದಾಮೃತದಲ್ಲಿ ಸಂಶಯಾತ್ಮಕ ಮನಸ್ಸನ್ನು ಅಡಗಿಸದಿದ್ದರೆ ಚಿತ್ತವು ಏಕಾಗ್ರತೆ ಹೊಂದಲಾರದು. ಕಾರಣ ಶಾಂತಿ ಶಮೆಯನ್ನು ಇಚ್ಚಿಸುವುದು, ತೊರದಂಥ ವಿಷಯಗಳು ತಾವಾಗಿಯೇ ಪ್ರಾಪ್ತಿಯಾದರೂ ಅವುಗಳತ್ತ ಮನಸ್ಸನ್ನು ಹರಿಯಗೊಡದೇ ಇರುವುದು. ಉಪರತಿಯು ಇಲಿಯನ್ನು ಕೊಂದು ತಿನ್ನುವ ಸ್ವಭಾವದ ಬೆಕ್ಕಿಗೆ ಹಾಲನ್ನು ಕುಡಿಸಿದ ಪೋಷಣೆ ಮಾಡಿದರೂ , ಒಂದು ದಿನ ಇಲಿಯು ಅದರ ಸಮೀಪ ಬಂದಾಗ ಅದನ್ನು ಜಪ್ಪಿಸಿ ಹಿಡಿದು ಬೆಕ್ಕು ತಿನ್ನುವಂತೆ ಮನಸ್ಸಿನ ಗುಣಧರ್ಮವಿದೆ. ಕಾರಣ ಆ ಉಪರತಿಗೆ ಶಮೆ ಅವಶ್ಯಬೇಕು. ಈ ಶರೀರಕ್ಕೆ ಆಗುವ ಹಸಿವು, ತೃಷೆ ಮತ್ತು ಶೀತೋಷ್ಣ ಬಾಧಕಗಳನ್ನು ಸಹನೆ ಮಾಡುವುದೇ ತಿತೀಕ್ಷೆಯು, ಅಂತರ್ಮುಖಿಯಾದ ಮನಸ್ಸು ಈ ದ್ವಂದ್ವ ದುಃಖಗಳನ್ನು ಸಹನೆ ಮಾಡುವುದು. ಆದರೆ ಅದು ಬಹುರ್ಮುಖವಾದಲ್ಲಿ ಸಹಿಸಲಾರದು. ಕಾರಣ ತಿತೀಕ್ಷೆಗೆ ಶಮೆಯು ಬೇಕೆ ಬೇಕು. ಇವೆಲ್ಲ ಕಾರಣಗಳನ್ನು ನೋಡಿದಲ್ಲಿ ಶಮೆ, ದಮೆ, ಶಾಂತಿ, ಶ್ರದ್ಧಾ, ಉಪರತಿ, ತಿತೀಕ್ಷೆ ಈ ಷಟ್ ಸಾಧನಗಳು ಅವಶ್ಯಬೇಕು ಅಂತಾ ಆ ಬಾಲಕನು ಶ್ರೀಗಳಲ್ಲಿ ವಂದಿಸುತ್ತಾ ನುಡಿದನು,
ಆಗ ಸಿದ್ದಾರೂಢರು ಆ ಬಾಲಕರನ್ನು ಪರೀಕ್ಷಿಸಲು, ಹೇ ಕುಮಾರ ಈ ಚತುಷ್ಟಯಗಳು ಜೀವ ಮರಣಕ್ಕೆ ಮದ್ದು. ಕಾರಣ ಅವುಗಳ ಅಪೇಕ್ಷೆ ಮಾಡದೆ ಯಾವ ಶಾಸ್ತ್ರವನ್ನು ತಿಳಿದುಕೊಳ್ಳುವುದರಿಂದ ಜನವಶ, ರಾಜವಶವಾಗುವುದೂ ಅದನ್ನು ತಿಳಿಸುವೆ ಕೇಳು ಎಂದರು. ಅದಕ್ಕೆ ಕಬೀರನು ಗುರುಗಳನ್ನು ಕುರಿತು, ಹೇ ಪರಮ ಗುರುವೇ, ಜನವಶ, ರಾಜವಂಶ ಮುಂತಾದ ಸಿದ್ಧಿಗಳು ಈ ಲೋಕದಲ್ಲಿ ಸುಖವನ್ನು, ಪರಲೋಕದಲ್ಲಿ ದುಃಖಕ್ಕೆ ಕಾರಣಗಳಾಗುವುದರಿಂದ ಇವುಗಳು ನನಗೆ ಬೇಡ ಅಂತ ಬೇಡಿಕೊಂಡನು. ಪುನಃ ಈತನನ್ನು ಪರೀಕ್ಷಿಸಲು ಸಿದ್ದಾರೂಢರು ಆತನಿಗೆ ಹೇ ಕಬೀರಾ, ಹಾಗಾದರೆ ಈ ಸಿದ್ದಿಗಳು ಬೇಡ. ಆದರೆ ಪರಲೋಕದಲ್ಲಿ ಸುಖವನ್ನು ನೀಡುವಂತಹ ಉಪಾಸನೆ, ಯೋಗ ಸಾಧನೆಗಳನ್ನು ತಿಳಿಸುವೆ ಅಂತಾ ಹೇಳತೊಡಗಿದರು. ಆಗ ಕಬೀರನು ಹೇ ಹೃತ್ತಾಪಹಾರಕಾ, ಪರಲೋಕ ಸುಖಗಳು ಕರ್ಮ ಜನ್ಯವಾಗಿವೆ. ಮುಂದೆ ಕರ್ಮದ, ಪುಣ್ಯದ, ಪಲರೂಪ ಸುಖವನ್ನು ಅನುಭವಿಸುತ್ತಾ ಆ ಪುಣ್ಯ ಸಂಚಯ ತೀರಲು ದುಃಖಕಾರಕ ಈ ಲೋಕಕ್ಕೆ ಬರಬೇಕಾಗುತ್ತದೆ.
ಅದಕ್ಕೆ ಶೃತಿಯು -
ಯಥೇಹ ಕರ್ಮಜಿತಾನ್ ಲೋಕಕ್ಷೀಯತೆ |
ತಥೈವಾಮುತ್ರ ಕರ್ಮಜಿತ್ ಲೋಕ ಕ್ರೀಯತೆ ||
ಈ ಪ್ರಕಾರ ಶೃತಿವಾಕ್ಯ ಇದ್ದು ಇವುಗಳನ್ನು ತೊರೆದಿದ್ದೇನೆ ಅಂತಾ ಹೇಳಿದನು. ಆಗ ಗುರುಗಳು, ಹೇ ಕಬೀರಾ ಈ ಲೋಕದಲ್ಲಿ ಪರತರ ವಿಷಯಾದಿಗಳನ್ನು ಸಾಧನೆ ಮಾಡಿ ಸುಖವನ್ನು ಪಡೆದುಕೊ ಅಂತಾ ಹೇಳಲು, ಅದಕ್ಕೆ ಹೇ ಸದ್ಗುರುರಾಯ ವಿಷಯ ಸುಖಗಳು ಕ್ಷಣಿಕವಿದ್ದು, ಅವು ಅಮೃತ ತತ್ವದ ಶಾಶ್ವತ ಸುಖಗಳಾಗಲಾರವು
ಅದಕ್ಕೆ ಪ್ರಮಾಣ :-
ನ ಕರ್ಮಣಾ ನ ಪ್ರಜಯಾ ನಧನೇನ |
ತ್ಯಾಗೇನೈಕೇ ಅಮೃತತ್ವ ಮಾನಶೂ |
ಹೀಗೆ ಪ್ರಮಾಣವಿರುವ ಇಹ ಪರ ಭೋಗೇಚ್ಚುತ್ಯಾಗ ಮಾಡಿದೆ ಅತ್ಯಂತ ದುಃಖ ನಿವೃತ್ತಿ ಪರಮಾನಂದದ ಅಮೃತ ಸುಖ ದೊರೆಯಲಾರದು. ಕಾರಣ ಇವೆಲ್ಲವುಗಳನ್ನು ತ್ಯಾಗ ಮಾಡಿ ಮೋಕ್ಲಾಪೇಕ್ಷೆಯುಳ್ಳವನಾಗಿ ತಮ್ಮ ಪಾದಾರವಿಂದಗಳಲ್ಲಿ ಶರಣಾಗತನಾಗಿದ್ದೇನೆ. ನನಗೆ ಸುಜ್ಞಾನದ ಬೋಧಾಮೃತ ಮಾಡಿ ರಕ್ಷಿಸು ಅಂತಾ ವಂದಿಸಿದನು. ಆಗ ಸಿದ್ದಾರೂಢರು ಕಬೀರರ ವೃತ್ತಿಯನ್ನು ಕಂಡು, ಈತನು ಯೋಗ್ಯ ಅಧಿಕಾರಿ ಇರುವನೆಂದು ನಿರ್ಣಯಿಸಿ, ತಮ್ಮ ಸಮೀಪ ಉಚಿತಾಸನದಲ್ಲಿ ಕುಳ್ಳಿರಿಸಿ ಭಸ್ಮವನ್ನು ಧಾರಣ ಮಾಡಿಸಿ ದೀಕ್ಷಾಬದ್ಧನನ್ನಾಗಿ ಮಾಡಿಸಿ, ಆತನ ಶಿರದ ಮೇಲೆ ತಮ್ಮ ಅಭಯಹಸ್ತವನ್ನಿಡುತ್ತಾ ಹೇ ಕಬೀರಾ ನಿನ್ನ ಶುದ್ಧ ಮನಸ್ಸಿನಲ್ಲಿ ಒಡಮೂಡಿದ ಇಂಗಿತವನ್ನು ಬಯಲು ಮಾಡು ಅಂತ ಹೇಳಿದರು. ಆಗ ಕಬೀರನು ಹರ್ಷಚಿತ್ತದಿಂದ ಹೇ ಕರುಣಾ ರಸಪರಿಪೂರ್ಣ ನಯನಾ, ಸದ್ಗುರುವೇ, ನನ್ನ ಮನಸ್ಸಿನಲ್ಲಿ ಒಡಮೂಡಿದ ಸಂಶಯಗಳನ್ನು ನಿವಾರಿಸಿ. ಪರಮ ಈಶಾವಾಸ್ಯೋಪನಿಷತ್ತು ಕರ್ಮಪರವೋ ಅಥವಾ ಜ್ಞಾನಪರವೋ ಎಂಬುದನ್ನು ತಿಳಿಸು ಅಂತ ಕೈಮುಗಿದು ಬೇಡಿಕೊಂಡನು.
ಈಗ ಶ್ರೀಗಳು ಹೇ ಕಬೀರಾ ಪ್ರಥಮವಾಗಿ ಷಡ್ಲಿ0ಗಗಳನ್ನು ತಿಳಿಸುವೆ. ಅವುಗಳ ಜ್ಞಾನದಿಂದ ಶೃತಿಯನ್ನು ತಿಳಿಯುವಂತಹ ಬಲವು ಬರುವದು. ಏಕಚಿತ್ತದಿ ಕೇಳು ಅಂತ ಹೇಳತೊಡಗಿದರು. ಪ್ರಕರಣದ ಆರಂಭದಲ್ಲಿ ಹೇಳಿದ ಅರ್ಥವನ್ನು ಕೊನೆಗೆ ಮುಕ್ತಾಯಗೊಳಿಸುವ ಈ ಪ್ರಕ್ರಿಯೆಗಳಿಗೆ ಉಪಕ್ರಮ ಉಪಸಂಹಾರ ಅಂತಾ ಹೇಳುವರು. ಇದು ಮೊದಲನೇ ಲಿಂಗವಾಗಿದೆ. ಪರತರವಾದ ಅದ್ವೈತದ ಅರ್ಥವನ್ನು ಪುನಃ ಪುನಃ ಬೇರೆ ಬೇರೆ ಯುಕ್ತಿಗಳಿಂದ ಪ್ರತಿಪಾದಿಸುವುದೇ ಅಭ್ಯಾಸ ಎನಿಸುವುದು. ಇದೇ ಎರಡನೇ ಲಿಂಗವು. ಉಪನಿಷತ್ ಪ್ರಮಾಣಗಳ ಹೊರತಾಗಿ ಅನ್ಯ ಪ್ರಮಾಣಗಳಿಂದ ಬ್ರಹ್ಮವನ್ನು ತಿಳಿಯಲಾಗದು ಎಂಬುದೇ ಅಪೂರ್ವತೆಯು, ಇದು ಮೂರನೇ ಲಿಂಗವಾಗಿದೆ. ಜನ್ಮಾದಿಗಳಿಗೆ ಕಾರಣೀಭೂತ ದುಃಖಗಳಿಂದ ನಿವೃತ್ತಿ ಪಡೆದು ನಿಜವಾದ ಅದ್ವೈತ ಜ್ಞಾನದಿಂದ ಪರಮಾನಂದ ಪ್ರಾಪ್ತಿ ಫಲರೂಪವೇ ನಾಲ್ಕನೇ ಲಿಂಗವಾಗಿದೆ, ಭೇದ ಜ್ಞಾನನಿಂದೆಯನ್ನೂ ಅಭೇದ ಜ್ಞಾನದ ಸ್ತುತಿಯನ್ನು ಮಾಡುವ ಮಹಾವಾಕ್ಯವೇ ಅರ್ಥವಾದ ಇದುವೇ ಐದನೇ ಲಿಂಗವಾಗಿದೆ. ಬಳಿಕ ಅದ್ವೈತ ತತ್ವಕ್ಕೆ ಅನುಗುಣವಾದ ದೃಷ್ಟಾಂತಗಳನ್ನು ಹೇಳುವುದೇ ಉಪಪತ್ತಿ, ಇದು ಆರನೇ ಲಿಂಗವಾಗಿದೆ. ಈ ಪ್ರಕಾರದ ಷಡ್ಲಿಂಗಗಳನ್ನು ನೀನು ಕ್ರಮವತ್ ಸಾಧನೆ ಮಾಡಿದಲ್ಲಿ ಶೃತಿಗಳನ್ನು ಶೋಧ ಮಾಡುವಂತಹ ಬಲವು ಬರುವುದಲ್ಲದೆ ಸುಜ್ಞಾನ ಸಂಪಾದನೆಯೊಂದಿಗೆ ಮುಕ್ತಿಯ ಸೋಪಾನ ತಪ್ಪದೆ ಪ್ರಾಪ್ತಿಯಾಗುವುದು ಅಂತ ಹೇಳತೊಡಗಿದರು. ಪುನಃ ಮುಂದುವರಿಯುತ್ತಾ
☘️ಈಗ ಈಶಾವಾಸ್ಯೋಪನಿಷತ್ ಆರಂಭಿಸುವೆ.
ಓಂ ಪೂರ್ಣಮದಃ ಪೂರ್ಣಮಿದಂ |
ಪೂರ್ಣಾತ್ ಪೂರ್ಣಮುದಚ್ಯತೇ||
ಪೂರ್ಣಸ್ಯ ಪೂರ್ಣಮಾದಾಯ | ಪೂರ್ಣಮೇವಾವಶಿಷ್ಯತೇ ||
ಓಂ ಶಾಂತಿಃ ಶಾಂತಿಃ ಶಾಂತಿಃ
ಓಂಕಾರ ಪರಬ್ರಹ್ಮವು ಪೂರ್ಣವಿದೆ ಮತ್ತು ಆ ಕಾರ್ಯಬ್ರಹ್ಮವೂ ಪೂರ್ಣವಿದೆ. ಯಾಕೆಂದರೆ ಪೂರ್ಣತ್ವದಿಂದ ಪೂರ್ಣವೇ ಉತ್ಪತ್ತಿಯಾಗುತ್ತದೆ. ಕಾರಣ ಪೂರ್ಣವಾದ ಕಾರ್ಯಬ್ರಹ್ಮವು ಪೂರ್ಣತ್ವವನ್ನು ತೆಗೆದುಕೊಂಡು ತನ್ನಲ್ಲಿ ಲೀನವಾದರೂ ಶೇಷವೂ ಸಹ ಪೂರ್ಣವೇ ಇರುತ್ತದೆ. ಶಾಂತಿಃ ಶಾಂತಿಃ ಶಾಂತಿಃ
ಓಂ ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್|
ತೇನ ತ್ಯಕ್ತೇನ ಭುಂಜೇಥಾ ಮಾ ಗೃಧಃ ಕಸ್ಯಸ್ವಿದ್ದನಮ್ |೧|
ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಚತಮ್ ಸಮಾ|
ಏವಂ ತ್ವಯಿ ನಾನ್ಯಥೇತೋ ಸ್ತಿನ ಕರ್ಮ ಲಿಪ್ಯತೆ ನೆರೆ ||೨||
ಅಸುರ್ಮಾ ನಾಮ ತೇಲೋಕಾ ಆಂದೇನ ತಮಸಾ ವೃತಾ |
ತಾಂ ಸ್ತೆ ಪ್ರೇತ್ಯಾಭಿಗಚ್ಛಂತಿ ಯೇಕೇ ಚಾತ್ಮಹಸೋ ಜನಾ ||೩||
ಅನೇಜದೇಕ0 ಮನಸೋ ಜವೀಯೋ ನೈನಾದ್ದೇವಾ ಅಪ್ನುವನ್ ಪೂರ್ವಮರ್ಶತ್ |
ತದ್ದಾವತೋ ನ್ಯಾನತ್ಯೇತಿ ತಿಷ್ಟತ್ತಸ್ಮಿನ್ನಪೊ ಮಾತರಿಶ್ವಾದಧಾತಿ ||೪||
ತದೇಜತಿ ತನ್ನೈ ಜತಿ ತದ್ದೂರೇ ತದ್ವಂತಿಕೆ | ತದಂದತಹರಸ್ಯ ಸರ್ವಸ್ಯ ತದು ಸರ್ವನ್ಯಾಸ್ಯ ಬಾಹ್ಯತ || ೫||
ಯಸ್ತು ಸರ್ವಾಣಿ ಭೂತಾನ್ಯಾತ್ಮಸ್ಯೇವಾನುಪಶ್ಯತಿ |
ಸರ್ವಭೂತೇಷು ಜಾತ್ಮಾನಂ ತತೋ ನ ವಿಜುಬುಪ್ಸತೇ ||೬||
ಯಸ್ಮಿನ್ ಸರ್ವಾಣಿ ಭೂತಾನ್ಯಾತ್ಮೈವಾಭೂ ದ್ವಿಜಾನತಃ |
ತತ್ರಕೊ ಮೋಹ ಕಃ ಶೋಕ ಏಕತ್ವವನ್ನು ಪಶ್ಚತಃ ||೭||
ಸಪರ್ಯಗಾಚತ್ಪ್ರ ಕ್ರಮಕಾಯಮವ್ರಣ ಮಸ್ನಾವಿರಮ್ ಶುದ್ಧಮಪ ಪಾಪ ವಿದ್ವುಮ್ |
ಕವಿರ್ಮನೀಪೀ ಪರಿಭೂಃ ಸ್ವಯಂ ಭೂರ್ಯಾಧಾತಥ್ಯಾಯ ತೋ ರ್ಥಾನ್|
ವೃದಧಾಚ್ವಾಶ್ವತೀಭ್ಯ ಸಮಾಭ್ಯ||೮||
ಅಂಧಂತಮಃ ಪ್ರವಿಶಂತಿ ಯೇ ವಿದ್ಯಾಮುಪಾಸತೇ।
ತತೋ ಭೂಯ ಇವ ತೇ ತತೋ ಯ ಉ ವಿದ್ಯಾಯಾಮ್ ರತಾ ||೯||
ಅನ್ಯದೇವಾಯುರ್ವಿದ್ಯಯಾನ್ಯದಾಹುರವಿದ್ಯಾ ಯಾ|
ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೆ I೧೦|
ವಿದ್ಯಾಂಚವಿದ್ಯಾಂಚ ಯಸ್ತದ್ವೆದೋಯಂ ಸಹ।
ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯೆಯಾಮೃತಮಶ್ನುತೇ ||೧೧||
ಅಂಧಂ ತಮಃ ಪ್ರವಿಶಂತಿ ಯೇ ಸಂಭೂತಿಮುಪಾಸತೆ |
ತತೋ ಭೂಯ ಇವತೇ ತಮೋಯ ಉ ಸಂಭೂತ್ಯಾಂರತಾ ||೧೨||
ಅನ್ಯದೇವಾಹುಃ ಸಂಭವಾದನ್ಯದಾಹುರ ಸಂಭವಾತ್ |
ಇತಿ ಶುಶ್ರುಮ ಧೀರಾಣಾಂ ಯೇ ಸಪ್ತದ್ವಿಚಚಕ್ಷಿರೇ ||೧೩||
ಸಂಭೂಶಿಂಚ ವಿನಾಶಂಚ ಯಸ್ತದ್ವೆದೋಭಯಂ ಸಹ |
ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂ ತ್ಯಾಮೃತಮಶ್ನುತೇ |೧೪||
ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿತಂ ಮುಖಮ್|
ತತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ ||೧೫||
ಪೂಷನ್ನೇಕರ್ಕಿ ಯಮ ಸೂರ್ಯ ಪ್ರಜಾಪತ್ಯ ವ್ಯೂಹ ರಸ್ಮಿನ್ ಸಮೂಹ |
ತೇಜೋ ಯತ್ತೆ ರೂಪಂ ಕಲ್ಯಾಣ ತಮಂ ತತ್ತೇ ಪಶ್ಯಾಮಿ |
ಯೇ ಸಾವಸೌ ಪುರುಷಃ ಸೋ ಹಮಸ್ಮಿಃ|೧೬|
ವಾಯುಕನಿಲಮಮೃತಮ ಭೇದಂ ಭಸ್ಮಾಂತಮ್ ಶರೀರಂ
ಓಂಕ್ರ ತೊಸ್ಮರ ಕೃತಂ ಸ್ಮರ ಕ್ರತೋ ಸ್ಮರ ಕೃತಂ ಸ್ಮರ ||೧೭||
ಆಗ್ನೆನಯ ಸುಪಥಾ ರಾಯೇ ಅಸ್ಮಾನ್ವಿಶ್ವಾನಿ ದೇವಾನಿ ದೇವ ವಯುನಾನಿ ವಿದ್ವಾನ್ |
ಯುಯೋಧ್ಯಸಮಜ್ಜು ಹುರಾಣಮೆನೋ ಭೂಯಿಷ್ಠಾಮ್ ತೇ ನಮ ಉಕ್ತಿಮ್ ವಿಧೇಮ ||೧೮||
ಗ್ರಂಥಕರ್ತರು ಪ್ರೊ. ಬ್ರ, ಬಸವಂತಾಚಾರ್ಯರು ಮೇಲ್ಕಾಣಿಸಿದ ಈಶಾವಾಸ್ಕೋಪನಿಷತ್ತಿನ ಮಂತ್ರಿಗಳ ಮತಿತಾರ್ಥವನ್ನು ಶ್ರೀಗಳ ಮುಖದಿಂದ ಕೇಳಿ ಷಡ್ಲಿಂಗಳನ್ನು ಗುರ್ತೈಸಿ ಕಲ್ಪದ್ರುಮದಲ್ಲಿ ವಿವರಿಸಿದ್ದಾರೆ. ಅವರು ರಚನೆ ಮಾಡಿದ ಪದ್ಯಗಳ ಸಾರವನ್ನು ಇಲ್ಲಿ ಬರೆಯಲು ಪ್ರಯತ್ನಿಸಲಾಗಿದೆ.
ಓಂ ಈಶಾವಾಸ್ಯಮಿದಂ ಸರ್ವಂ ಆಭರಣಗಳೆಲ್ಲ ಸುವರ್ಣದಿಂದಾವೃತಗೊಂಡಂತೆ ಸರ್ವ ಜಗತ್ತು ಈಶನಿಂದ ಆವೃತವಾಗಿದೆ ಎಂದು ಪ್ರಥಮ ಮಂತ್ರವು ಉಪಕ್ರಮವನ್ನು ಮಾಡಿ ತೋರಿಸುತ್ತದೆ. ನಾಲ್ಕು ದಿಕ್ಕುಗಳಲ್ಲಿ ಈ ಭವನವನ್ನು ನಿರ್ಲೇಪದಿಂದ ವ್ಯಾಪಿಸಿ ಸದ್ರೂಪದಿಂದ ಇರುವ ಪರಶಿವನು ಚಿದರೂಪದಿಂದ ಪ್ರಕಾಶಿಸುತ್ತಿರುವನು ಎಂದು ಎಂಟನೇ ಮಂತ್ರವು ಉಪಸಂಹಾರ ಮಾಡುವದು. ಈ ಪ್ರಕಾರ ಉಪಕ್ರಮ ಉಪಸಂಹಾರಗಳು ಪ್ರಥಮ ಲಿಂಗ,
ಅನೇಜದೇಕಂ ಮನಸೋಜವೀಯೊ ನೈನಾದ್ದೇವಾ
ಅಪ್ನುವನ್ ಪೂರ್ವಮಶತ್|
ತದ್ಧಾವನೋ ನ್ಯಾನತೈತಿ ತಿಷ್ಠತ್ತಸ್ಮಿನ್ ಪೋ
ಮಾತಾರಿಶ್ವಾದಧಾತಿ||
ಅನೇಜತ್ ಅಂದರೆ ಚಲಾಯಮಾನರಹಿತ ಏಜ್ ಧಾತುವಿನ ಅರ್ಥ ಕಂಪನ. ಕಂಪನ ರಹಿತ ಅಂದರೆ ಚಲಾಯಮಾನ ರಹಿತ ಅನೇಜತ್ ಇರುವುದೇ ಆತ್ಮತತ್ವ ಸರ್ವ ಪ್ರಾಣಿಮಾತ್ರರಲ್ಲಿ ಇದ್ದು ಸಂಕಲ್ಪ ವಿಕಲ್ಪರೂಪ ಮನಸ್ಸಿನ ವೇಗಕ್ಕಿಂತಲೂ ವೇಗಗತಿಯುಳ್ಳವನೇ ಆತ್ಮ ಅದಕ್ಕೆ ಮನಸೋಜವಿಯೋ ನಿಂತಲ್ಲಿಯೇ
ನಿಂತವನಾದರೂ ಓಡುವವರನ್ನು ಹಿಂದೆ ಸರಿಸುವನು. ಜಗತ್ತನ್ನು ತುಂಬಿಯೂ ಅಚಲನು ನಾಲ್ಕನೇ ಮಂತ್ರದ ಸಾರಭೂತ ಅದ್ವೈತಪರ ೨ನೇ ಅಭ್ಯಾಸಲಿಂಗವಾಗಿದೆ.
ನೈನದ್ದೇವಾ ಅಪೂರ್ವತ್ವಮ್ ಫಲಂ ಮೋಹಾದ್ಯಭಾವಕಂ
ಕುರ್ವನ್ನಿತ್ಯನು ವಾದ್ಯೆವಾ ಸೂರ್ಯ ಭೇದವಿನಿಂದನಂ
ನೈನದ್ದೇವಾ ಅಪ್ನುವನ್ ಪೂರ್ವಮರ್ಶತ್||
ಈ ನಾಲ್ಕನೇ ಮಂತ್ರದಲ್ಲಿ ಇಂದ್ರಿಯಗಳಿಗೆ ಮನಸ್ಸಿಗೆ ಪ್ರತ್ಯೇಕವಾದಿ ಪ್ರಮಾಣಗಳಿಗೆ ಅಗೋಚರವಾದ ಚಿನ್ಮಯ ಆತ್ಮನು ಅಂತಾ ಸಾರಾಂಶವೇ ಅಪೂರ್ವತಾ ಎಂಬುದೇ ೩ನೇ ಲಿಂಗವಾಗಿದೆ.
ತತ್ರ ಕೋ ಮೋಹ ಕಶೋಕ ಏಕತ್ವವನ್ನು ಪಶ್ಯತಿ ||
ಆತ್ಮ ಸ್ವರೂಪದಲ್ಲಿ ಪರಮಾರ್ಥ ತತ್ವವನ್ನು ತಿಳಿದುಕೊಂಡ ಪುರುಷನ ದೃಷ್ಠಿಯಲ್ಲಿ ಸರ್ವದರಲ್ಲಿ ಆತ್ಮ ಸ್ವರೂಪವನ್ನೇ ಕಾಣುತ್ತಾನೆ. ಆತ್ಮ ಸ್ವರೂಪದಲ್ಲಿ ಲೀನನಾದ ಈ ಮಹಾತ್ಮನಿಗೆ ಮೋಹವೂ ಶೋಕವು ಇರಲಾರದು. ಇದೇ ಫಲರೂಪ ೪ನೇ ಲಿಂಗವಾಗಿದೆ.
ಅಸೂರ್ಯ ನಾಮತೇ ಲೋಕಾ ಅಂಧೇನ ತಮಸಾ ವೃತಾ ||
ಅಸುರೀ ಪ್ರವೃತ್ತಿಯ ಅಂಧಕಾರದಲ್ಲಿಯ ಜನರಲ್ಲಿಯ ಭೇದ ಜ್ಞಾನವನ್ನು ತ್ಯಜಿಸಿ ಅಭೇದ ಪರಮಜ್ಞಾನವನ್ನು ಸ್ತುತಿಸುವುದೇ ಅರ್ಥದ ೫ನೇ ಲಿಂಗವಾಗಿದೆ.
ತಸ್ಮಿನ್ನಪೋ ಮಾತರಿಶ್ವೆತ್ಯುಪಪತ್ತಿ ಪ್ರದರ್ಶಿತಾ|| ಏತೈರೀಶೋಪ ನಿಷದೋ ದ್ವೈತೆ ತಾತಪರ್ಯಮಿಷ್ಯತೆ
ತಸ್ಮಿನ್ನಪೋ ಮಾತರಿಶ್ವಾದಧಾತಿ||
ಇದು ಪರಮಾತ್ಮನ ಚೇತನ ಸ್ವರೂಪವನ್ನು ತಿಳಿಸುತ್ತದೆ. ಆತ್ಮನು ವಾಯು ಜಲಂಗಳನ್ನು ಧರಿಸಿದ್ದರೂ ಅಭೇದ ಸ್ವರೂಪವನ್ನು ಪ್ರತಿಪಾದಿತವಾಗಿದೆ. ಇದೇ ಶ್ರೇಷ್ಠವಾದ ಉಪಪತ್ತಿ ಅಂತಾ ಆರನೇ ಲಿಂಗವಾಗಿದೆ.
ಈ ಪ್ರಕಾರ ಈಶಾವಾಸ್ಯ ಉಪನಿಷತ್ತಿನ ಸಾರಭೂತವನ್ನು ಬೋಧಿಸಿ ಇದು ಕರ್ಮಫರವಲ್ಲ, ಅದ್ವೈತಪರವಾಗಿದೆ ಅಂತಾ ಸಿದ್ಧಾರೂಢರು ಕಬೀರನಿಗೆ ಮನವರಿಕೆ ಮಾಡಿಕೊಟ್ಟರು. ಆಗ ಕಬೀರನು ಎದ್ದುನಿಂತು ಮೃಮಣಿದು ಕರಜೋಡಿಸಿ, ಹೇ ಸದ್ಗುರುನಾಥನೆ, ಹದಿನೆಂಟು ಮಂತ್ರಗಳಿಂದೊಡಗೂಡಿದ ಈಶಾವಾಸ್ಕೋಪನಿಷತ್ತಿನ ಬಗ್ಗೆ ನನ್ನ ಮನದಾಳದಲ್ಲಿ ಉದಯಿಸಿದ್ದ ಭ್ರಾಂತಿಯನ್ನು ಕಳೆದು, ಈ ಉಪನಿಷತ್ ಮಾಡಿದ ಆ ಪರಬ್ರಹ್ಮನೇ ನೀನಿರುವಿ, ನನಗೆ ಕರುಣಿಸು ಅಂತಾ ವಂದಿಸಿದನು. ಸದ್ಗುರುಗಳು ಹರ್ಷೋಲ್ಲಾಸಗಳಿಂದ ಪರವು ಅಧಿಕಾರಿ ಕಬೀರನಿಗೆ ಆಶೀರ್ವದಿಸಿದರು.
ಇವತ್ತು ನಾನು ಧನ್ಯನಾದೆನು ನನ್ನದು ಬಹುಪೂರ್ವ ಪುಣ್ಯವಿತ್ತೆಂದು ನನಗೆ ಸದ್ಗುರು ದರ್ಶನವಾಗಿ ಮನಸ್ಸಿನ ಸಂಶಯಗಳೆಲ್ಲಾ ಪರಿಹಾರವಾದವು, ಮತ್ತು ಪೂರ್ವಜ್ಞಾನ ಸಂಪಾದನ ಮಾಡಿಕೊಂಡನು. ಈಗ ಗುರುದಕ್ಷಿಣೆ ಕೊಡುವದ್ಯಾವದೆಂದರೆ, ನಿಮ್ಮ ಚರಿತ್ರೆವನ್ನು ವರ್ಣಿಸುವೆನು. ಅದನ್ನು ಶ್ರವಣ ಮಾಡುವದರಿಂದ ಜನರೆಲ್ಲಾ ಉದ್ಧಾರರಾಗುವರು. ಇದನ್ನು ಕುರಿತು ತಮ್ಮ ಆಜ್ಞೆಯಾಗಬೇಕು' ಎಂದು ಪ್ರಾರ್ಥಿಸಿದನು. ಸದ್ಗುರುಗಳು ಆಗ ಆನಂದದಿಂದ ಕಬೀರನನ್ನು ಅಪ್ಪಿಕೊಂಡು, ಇಬ್ಬರಿಗೂ ಪ್ರೇಮಾಶ್ರುಗಳು ನಡೆದವು. ಆಮೇಲೆ ಸದ್ಗುರುಗಳು ಸವಿಸ್ತರ ಚರಿತ್ರವನ್ನು ಬರಿಯಲಿಕ್ಕೆ ಕಬೀರನಿಗೆ ಆಜ್ಞೆಯನ್ನಿತ್ತರು. ಸದ್ಗುರುಗಳ ಅತಿ ಪ್ರಿಯಶಿಷ್ಯರಾದ ಕಬೀರದಾಸರು, ಈ ಪೂರ್ವಾರ್ಧ ಗ್ರಂಥವನ್ನು ಕನ್ನಡ ಭಾಷೆಯಲ್ಲಿ ರಚಿಸಿದರು
🕉️ ಕಬೀರದಾಸರು ವಿದೇಹರಾದದ್ದು 🌷
ಹರ್ಷದಿಂದ ಕಾಲ ಕಳೆಯುತ್ತಿರುವಾಗ ಪರಮ ಭಕ್ತರಾದ ಕಬೀರದಾಸರು ರಾಕ್ಷಸನಾಮ ಸಂವತ್ಸರ ಕಾರ್ತಿಕ ಬಹುಳ ನವಮಿ ದಿನ ನಿರ್ವಿಕಲ್ಪದಿಂದ ಪರಂಧಾಮನ್ನೈದಿದರು. ಅಂತ್ಯಯಾತ್ರೆಯನ್ನು ಮಾಡಿ ಮಠದ ಹಿಂಭಾಗದಲ್ಲಿಯ ತೋಟದಲ್ಲಿ ಸಮಾಧಿ ಮಾಡಿದರು. ಶ್ರೀ ಗುರುಗಳ ಜಾತ್ರೆಯ ಕಾಲಕ್ಕೆ ಸಮಾಧಿಯ ಮೇಲೆ ಮಂಟಪ ಹಾಕಿ ಅಲಂಕಾರ ಮಾಡಿ ಪೂಜೆ ಮಾಡಿಸತೊಡಗಿದರು. ಇದರಂತೆ ಮಠದಲ್ಲಿ ವಾಸ ಮಾಡಿದ ಭಕ್ತರು ವಿಧಿವಶರಾದ ನಂತರ ಕಬೀರದಾಸರ ಗದ್ದುಗೆಯ ಬಳಿ ಸಮಾಧಿ ಮಾಡಿದರು.
ಗುರುವೇಬ್ರಹ್ಮನು ಗುರುವೇ ವಿಷ್ಣುವು
ಗುರುವೇ ರುದ್ರನು ಗುರುವೇ ಯೀಶನು
ಗುರುಸದಾಶಿವ ಮೂರ್ತಿ ಪರತರ ಪಾವನಾತ್ಮಕನು ||
ಗುರುವೇ ಸಚ್ಚಿತ್ಸುಖಮಯಾತ್ಮನು
ಗುರವೇ ಸಾಕ್ಷಾತ್ ಬ್ರಹ್ಮರೂಪನು
ಗುರುವೇ ತಾರಕನಿರಲು ಸಾಕ್ಷಾದ್ಗುರುಪದದೊಳಿಹೆನು||
👇👇👇👇
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಸಿದ್ಧಾರೂಢರು ಹಾಗೂ ನವಲಗುಂದ ನಾಗಲಿಂಗ ಸ್ವಾಮಿಗಳ ಸಂಗಮವಾದ ಕಥೆ,
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
