ಕೈಲಾಸದಲ್ಲಿ ಪಾರ್ವತಿ ಪರಮೇಶ್ವರ ಮುಂದೆ ಭೂಲೋಕ ಸಮಾಚಾರ ಪ್ರಸಾರ
ಕೈಲಾಸ ಲೋಕದಲ್ಲಿ ಪ್ರಮಥ ಗಣಗಳಿಂದ, ನಂದಿ, ಭೃಂಗಿಯರ ನಾಟ್ಯದಿಂದಲೂ ಸಾಲೋಕ್ಯ ಸಾಮಿಪ್ಯ ಸಾರೂಪ್ಯ ಸಾಯುಜ್ಯದ ಗಣಂಗಳಿಂದೊಡಗೂಡಿ ವೀರಭದ್ರ, ವಿನಾಯಕ, ಷಣ್ಮುಖರ ಉಪಸ್ಥಿತಿಯಲ್ಲಿ ಪಾರ್ವತಿಸಹಿತ ಪರಮೇಶ್ವರನು ವಿರಾಜಮಾನನಾಗಿದ್ದಾಗ ನಾರದನು ಆಗಮಿಸಿ ದಂಡವತ್ ಪ್ರಣಾಮಗಳನ್ನು ಸಲ್ಲಿಸಿದನು.
''ಹೇ ನಾರದರೇ ಭೂಲೋಕದ ಸಮಾಚಾರವೇನು'' ಅಂತಾ ಪರಶಿವನು ಕೇಳಿದನು. ಅದಕ್ಕೆ ಹೇಳುವೆನು ಕೇಳಿರಿ” ಅಂತಾ ನಾರದರು ಕೈಮುಗಿದು ಹೇಳತೊಡಗಿದರು.
"ಹೇ ಸದಾಶಿವನೇ, ಕಲಿಯುಗ ಪ್ರವೇಶವಾಗಿ 5000 ವರ್ಷಗಳಾದವು. ಅಪೇಯ-ಪೇಯ, ಅಭಕ್ಷ್ಯ-ಭಕ್ಷ್ಯದಿಂದ ವಿಷಯೋಪಭೋಗ ವಿಲಾಸದಲ್ಲಿ ಆಸಕ್ತರಾಗಿ, ಅನ್ಯಾಯ, ಅಸತ್ಯ ಹಿಂಸೆಗಳಿಂದ ಮದೋನ್ಮೂತ್ತರಾದ ದುರ್ಜನರು ಸ್ಟೇಚ್ಚಾಚಾರಿಗಳಾಗಿ, ಸುಜನರ ಜೀವನೋಪಾಯಕ್ಕೂ ಕಂಟಕ ಪ್ರಾಯರಾಗಿದ್ದಾರೆ. ಧರ್ಮ ಗ್ಲಾನಿಯಾದಾಗ ಪರಮಾತ್ಮನು ಧರೆಯಲ್ಲಿ ಅವತರಿಸಿ, ಶಿಷ್ಟರ ಪರಿಪಾಲನೆ ದುಷ್ಟರ ಶಿಕ್ಷೆ ಮಾಡುವನೆಂಬ ಪುರಾಣೋಕ್ತಿಯಂತೆ, ತಾವು ಭೂಲೋಕದಲ್ಲಿ ಅವತಾರ ಧಾರಣೆ ಮಾಡಿ ಸುಲಭ ಸಾಧನವಾದ “ಓಂ ನಮಃ ಶಿವಾಯ” ಮಹಾಮಂತ್ರವನ್ನು ಬೋಧಿಸಿ, ಭಕ್ತಿಜ್ಞಾನದ ಜಾಗೃತಿ ಮಾಡಿ ಮಾನವರನ್ನು ಉದ್ದರಿಸಬೇಕು' ಅಂತಾ ಅಂಗಲಾಚಿ ಬೇಡಿಕೊಂಡನು. ಪ್ರಮಥಗಣ ಸಭೆಯಲ್ಲಿ ಉಪಸ್ಥಿತರಿದ್ದ ದೇವಗಣಂಗಳೆಲ್ಲರೂ ಭೂಲೋಕದಲ್ಲಿ ಅವತಾರ ಮಾಡಿ ಭಕ್ತಿ ಜ್ಞಾನ ವೈರಾಗ್ಯ ಬೋಧಿಸಬೇಕೆಂದು ಸದಾಶಿವನು ಅಪ್ಪಣೆ ಮಾಡಿದನು. ಅದಕ್ಕೆ ದೇವ ಗಣಂಗಳು ''ಹೇ ದೇವನೇ ಪ್ರತಿನಿತ್ಯ ನಾವು ನಿನ್ನಿಂದ ಅಗಲಲು ಸಿದ್ಧವಿಲ್ಲದಿರುವಾಗ ನಾವು ದುಃಖಭರಿತ ಭೂಲೋಕಕ್ಕೆ ಹೋಗಲಿಕ್ಕೆ ಸಾಧ್ಯವಿಲ್ಲ " ಅಂತಾ ಹೇಳಿದರು. ಇದನ್ನರಿತು ಪರಶಿವನು 'ಹೇ ಜ್ಞಾನಿಗಳೇ, ನಾನು *ಸಿದ್ದ* ನಾಮದಿಂದ ಭೂಲೋಕದಲ್ಲಿ ಅವತರಿಸುವೆ' ಅಂತಾ ಹೇಳುತ್ತಿರುವಂತೆ ದೇವಗಣಕ್ಕೆ ಅಪಾರ ಹರ್ಷವಾಯಿತು. ಈಶನು ವಿಜಾಪುರದಲ್ಲಿ ಷಣ್ಮುಖ ಸ್ವಾಮಿಯಾಗಿ, ಮಹಾವಿಷ್ಣುವು ಗೋಂದಾವಲಿಕರಾಗಿ, ಬ್ರಹ್ಮನು ಅನಂತಸ್ವಾಮಿಯಾಗಿ ಜನಿಸಿದರು. ಕ್ಷುದ್ರ, ಅರಿಷಡ್ವರ್ಗಗಳ ಅದ್ರಿಗೆ ವಜ್ರಾಯುಧದಂತಿದ್ದ ರುದ್ರನು ಜಡಿಸಿದ್ಧನಾಗಿ, ಅಜ್ಞಾನಾಂಧಕಾರದಲ್ಲಿ ಮುಳುಗಿದ ಮಾನವರನ್ನು ಎಚ್ಚರಿಸಲು ವಶಿಷ್ಟರು ತಮ್ಮಣ್ಣ ಶಾಸ್ತ್ರಿಗಳಾಗಿ ಜನಿಸಿದರು. ದುರ್ವಾಸ ಮುನಿಯು ಗರಗದ ಮಡಿವಾಳೇಶನಾಗಿ, ಪಾರ್ವತಿಯು ನವಲಗುಂದದ ನಾಗಲಿಂಗನಾಗಿ, ಪಂಚದಶಿಯನ್ನು ಟೀಕಾತಾತ್ಪರ್ಯ ಮಾಡಿ ಜನರಿಗೆ ತಿಳಿಸಲು ದೇವಗುರು ಬೃಹಸ್ಪತಿಯು ಸಹಜಾನಂದರಾಗಿ ವಾಲ್ಮೀಕಿಯು ವಿವೇಕಾನಂದರಾಗಿ, ಅತ್ರಿಮುನಿಗಳು ರಾಮತೀರ್ಥರಾಗಿ, ವೀರಭದ್ರನು ಶಿಶುನಾಳ ಶರೀಫರಾಗಿ, ಗಣಪತಿಯು ಕಬೀರದಾಸರಾಗಿ, ಗುಹನು ನಿರ್ವಾಣೀಂದ್ರರಾಗಿ, ನಂದಿಕೇಶನು ಅಕ್ಕಲಕೋಟೆ ಶರಣರಾಗಿ ಜನಿಸಿದರು.
ನಾರದನು ಸಂತರಾಮದಾಸರಾಗಿ, ಶುಕಮುನಿಯು ಗೋವಿಂದಸ್ವಾಮಿಯಾಗಿ, ಭೃಂಗಿಯು ಖಾಸ್ಗತಸ್ವಾಮಿಯಾಗಿ ಜಮದಗ್ನಿಯು ಚಳ್ಳಗುರಿಕಿ ಸ್ವಾಮಿಯಾಗಿ ಜನಿಸಿದರು. ಈ ಪ್ರಕಾರ ಶ್ರುತಿಯ ಸಾರವನ್ನು ಬೋಧಿಸುವ ಅನೇಕ ಋಷಿಮುನಿಗಳು ಭಾರತದಲ್ಲಿ ಅವತರಿಸಿದರು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಸದಾಶಿವನು ಸಿದ್ದ ನಾಮದಿಂದ ಭೂಮಿಯಲ್ಲಿ ಅವತರಿಸಿದ್ದು 🍁
ಶ್ರೀ ಸಿದ್ಧಾರೂಢ ಭಾಗವತ್ ಪ್ರಥಮ ಸ್ಕಂದದ ಕಥಾ ಸಂಗ್ರಹಕ್ಕಾಗಿ ಕೆಳಗಡೆ ಒತ್ತಿ 👇👇👇
👉ಸಿದ್ಧಾರೂಢ ಭಾಗವತ ಲೀಲಾಕಥಾ ಸಂಗ್ರಹ 📲
👉ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp share ಗಾಗಿ ಒತ್ತಿ 📲☎️
2)Facebook shareಗಾಗಿ👉
«««««ಓಂ ನಮಃ ಶಿವಾಯ »»»»»»»
