ಜಮಖಂಡಿ ಅಪ್ಪಾಸಾಹೇಬರು ಸಿದ್ಧಾರೂಢಮಠಕ್ಕೆ ರಸ್ತೆ ಮಾಡಿಸಿದ ಕಥೆ
✡️ ಜಮಖಂಡಿ ಅಪ್ಪಾಸಾಹೇಬರು ಬಂದು ಮಠಕ್ಕೆ ರಸ್ತೆ ಮಾಡಿಸಿದ್ದು ⚛️
ಮಾರನೇ ದಿನ ಪ್ರಾತಃಕಾಲದಲ್ಲಿ ಬಂದ ಜಮಖಂಡಿ ಅಪ್ಪಾಸಾಹೇಬರು ಸಿದ್ಧಾರೂಢರ ಪಾದಾರವಿಂದಗಳಲ್ಲಿ ದಂಡವತ ಪ್ರಣಾಮಗಳನ್ನು ಮಾಡಿ ಕುಳಿತಿರುವಾಗ ಓರ್ವ ವೃದ್ಧ ಭಕ್ತೆಯು ಶ್ರೀಗಳ ದರ್ಶನಕ್ಕೆ ಬಂದಳು. ಆಕೆಯ ತಲೆಗಾದ ಪೆಟ್ಟಿನಿಂದ ರಕ್ತವು ಬರುತ್ತಲಿತ್ತು. ಅದನ್ನು ಕಂಡು ಶ್ರೀಗಳು ಕೇಳಿದರು. ಆಗ ಆ ಮುದುಕಿಯು, ಅಪ್ಪ ನಿನ್ನ ದರ್ಶನಕ್ಕೆ ಬರುವ ಹಂಬಲದಲ್ಲಿ ಮಠದ ಸಮೀಪಕ್ಕಿರುವ ಈ ದಾರಿಯಲ್ಲಿ ಎಡವಿ ಬಿದ್ದೆ. ಆಗ ತಲೆಗೆ ಪೆಟ್ಟು ತಗಲಿ ಗಾಯವಾಗಿ ರಕ್ತ ಬರುಹತ್ತಿತ್ತು. ಬಹಳ ನೋವಾಯಿತು ಅಂತ ಅಳಹತ್ತಿದಳು. ಕೂಡಲೇ ಶ್ರೀಗಳ ಆಕೆಯನ್ನು ಸಮೀಪ ಕರೆದು ಗಾಯಕ್ಕೆ ತಮ್ಮ ಅಮೃತ ಹಸ್ತದಿಂದ ಭಸ್ಮ ಹಚ್ಚಿದ ಕೂಡಲೇ ನೋವು ಶಮನವಾಯಿತು. ಅದನ್ನು ಕಂಡ ಅಪ್ಪಾಸಾಹೇಬರು ತಮ್ಮಲ್ಲಿ ತಾವು ಈ ಶಿವಯೋಗಿಯ ಮಹಾತ್ಮೆ ಅಗಾಧವಾದುದು. ಶೃತಿ, ವೇದ ಪ್ರಮಾಣಗಳಿಂದ ದ್ವೈತವನ್ನು ಖಂಡಿಸಿ ಅದ್ವೈತದಲ್ಲಿ ಸ್ಥಿರತೆಗೊಳಿಸಲು ಇವರ ಯುಕ್ತಿಗಳನ್ನು ನೋಡಲಾಗಿ ಸಾಕ್ಷಾತ್ ಈಶನೇ ಅವತರಿಸಿ ಬಂದಿರುವಾತನೆಂದು ನಂಬಿಕೆಯು ದೃಢವಾಗಿದೆ ಅಂತಾ ಭಾವಿಸುತ್ತಾ ಶ್ರೀಗಳನ್ನು ಕುರಿತು ಅಪ್ಪಾ ಸಾಹೇಬರು, ಹೇ ಗುರುವೇ, ತಮ್ಮಯ ಈ ಮಠಕ್ಕೆ ಬರಹೋಗುವ ಈ ದಾರಿಯು ಸರಳ ಇರದ್ದಕ್ಕೆ ಭಕ್ತರಿಗೆ ತೊಂದರೆಯಾಗಿದೆ. ತಾವು ಅಪ್ಪಣೆ ಕೊಟ್ಟರೆ ಈ ಮಾರ್ಗವನ್ನು ಸರಳವಾಗಿ ಮಾಡುವ ಕಾರ್ಯ ಮಾಡಿವೆ ಅಂತಾ ಕೈಮುಗಿದು ಪ್ರಾರ್ಥಿಸಿದ್ದಕ್ಕೆ ತಥಾಸ್ತು ಅಂತಾ ಅಪ್ಪಣೆ ಕೊಟ್ಟರು. ಕೂಡಲೇ ಚತುರ ಸೇವಕರನ್ನು ಕರೆಯಿಸಿ ರಸ್ತೆ ಮಾಡುವ ಕಾರ್ಯ ಆರಂಭಿಸಿದರು. ಪ್ರತಿನಿತ್ಯವೂ ಆ ಸೇವಕರಿಗೆಲ್ಲ ಪಂಚಪಕ್ವಾನ್ನ ಭೋಜನ ಮಾಡಿಸಿದರು. ಮೂರು ತಿಂಗಳುಗಳಲ್ಲಿ ರಸ್ತೆಯು ಸಿದ್ಧವಾಯಿತು. ಆರಂಭದಿಂದ ಮುಕ್ತಾಯದವರೆಗೂ ಸತತವಾಗಿ ಮೇಲ್ವಿಚಾರಣೆ ಮಾಡುತ್ತಾ ಅಪ್ಪಾಸಾಹೇಬರು ಇದ್ದರು. ಕೊನೆಗೆ ಸಿದ್ದಾರೂಢರಿಗೆ ಜರೆಯ ಮಡಿ ಹೊದಿಸಿ ಪಾದಪೂಜೆ ಮಾಡಿ ಅಪ್ಪಣೆ ಪಡೆದು ತಮ್ಮ ಊರಿಗೆ ಅಪ್ಪಾಸಾಹೇಬರ ಪ್ರಯಾಣ ಮಾಡಿದರು
.
👇👇👇👇👇👇👇👇👇👇👇👇👇👇
👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಸ್ತ್ರೀಯು ಸಿದ್ದರಿಗೆ ವಿಷ ಕೊಟ್ಟಾಗ ಅವರು ಗುಣವಾಗಿ ಅವಳೇ ಸತ್ತು ಹೋದದ ಕಥೆ .
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
