ಬಾಲಸಿದ್ಧನು ಎಮ್ಮೆನು ಕೊಂದು ಬಳಿಕ, ಜೀವಂತ ಮಾಡಿದ ಕಥೆ
🐃 ಬಾಲಸಿದ್ಧನು ಎಮ್ಮೆನು ಕೊಂದು ಬಳಿಕ, ಜೀವಂತ ಮಾಡಿದ್ದು 🍀
ಒಂದಾನೊಂದು ದಿನ ಹುಡುಗರ ಕೂಡ ಆಡುತ್ತಿರುವಾಗ ಸಿದ್ದ ಬಾಲಕನು ಒಂದು ಎಮ್ಮೆಯನ್ನು ಕಂಡು, ಅದರ
ಬೆನ್ನಮೇಲೆ ಹತ್ತಿ ಕೂತುಕೊಂಡು, ಮತ್ತು ಹುಡುಗರಿಗೆ ಕೂಗಿ -"ನೋಡಿರಿ ನಾನು ಆನೆಯ ಮೇಲೆ ಕೂತಿರುವೆನು ; ನೀವೆಲ್ಲಾ ವಾದ್ಯಗಳನ್ನೂ ಬಾರಿಸುತ್ತ ಗ್ರಾಮದೊಳಗೆ ಉತ್ಸವವನ್ನು ಮೆರೆಸಿರಿ. ಇದನ್ನು ಕೇಳಿ ಬಾಲಕರೆಲ್ಲಾ ಆನಂದದಿಂದ ನಾನಾ ವಾದ್ಯ ಧ್ವನಿಗಳನ್ನು ಮಾಡುತ್ತ, ನಗುತ್ತ, ಹಾರಾಡುತ್ತ ಮುಂದಕ್ಕೆ ಸಾಗಿದರು. ಆದರೆ ಎಮ್ಮೆಯು ಮುಂದಕ್ಕೆ ಹೆಜ್ಜೆ ಇಡಲೊಲ್ಲದು. ಸಿದ್ಧನೂ, ಹುಡುಗರೂ ಎಷ್ಟು ಪ್ರಯತ್ನ ಮಾಡಿದರೂ, ಅದೂ ಚಲಿಸಲಿಲ್ಲ. ಆಗ ಸಿದ್ಧನು ಸಿಟ್ಟಿಗೆದ್ದು -" ಎಮ್ಮೆಯೇ ನೀನು ಮೃತನಾಗು " ಎಂದು ಅಂದಕೂಡಲೇ ಅದು ನಿರ್ಜೀವವಾಗಿ ಭೂಮಿಗೆ ಬಿತ್ತು. ಇದನ್ನು ನೋಡಿ ಹುಡುಗರು ಓಡಿಹೋಗಿ ಸಿದ್ದನ ತಾಯಿಗೆ ಈ ವರ್ತಮಾನವನ್ನು ತಿಳಿಸಿ "ಸಿದ್ಧನು ಶಪಿಸಿದ ಕೂಡಲೇ ನಿಮ್ಮ ಎಮ್ಮೆಯು ಭೂಮಿಗೆ ಬಿದ್ದು ಸತ್ತುಹೋಯಿತು.” ಎಂದು ಆಕೆಗೆ ಹೇಳಿದರು. ಇದನ್ನು ಕೇಳಿ ದೇವಮಲ್ಲಮ್ಮನು ಮನಸ್ಸಿನಲ್ಲಿ ಬಹಳ ಗಾಬರಿಯಾಗಿ ಸಿದ್ದನ ಕಡೆಗೆ ಓಡಿಬಂದು, ಸತ್ತು ಬಿದ್ದ ಎಮ್ಮೆಯನ್ನು ಕಂಡು, ಪುತ್ರನನ್ನು ಕುರಿತು ಅನ್ನುತ್ತಾಳೆ -"ಇದೇನು ಮಾಡಿದಿ. ಎಮ್ಮೆಯನ್ನು ಯಾತಕ್ಕೆ ಕೊಂದಿ. ಶಿವ ಶಿವಾ ನಾನು ಇನ್ನೇನು ಮಾಡಲಿ ".ಎಂದು ದೊಡದ್ವನಿದಿಂದ ಅಳುವುದನ್ನು ಕೇಳಿ ಸಿದ್ದನಿಗೆ ಕರುಣೆ ಹುಟ್ಟಿ, "ತಾಯಿಯೇ, ನಿನಗೆ ಎಮ್ಮೆ ಬೇಕಾಗಿದ್ದರೆ ಇಷ್ಟು ದುಃಖ ಯಾತಕ್ಕೆ ಮಾಡಬೇಕು ? ಎಂದು ನುಡಿದು, ಸಿದ್ಧನು "ಓಂ ನಮಃ ಶಿವಾಯ" ಎಂಬ ಮಂತ್ರವನ್ನು ಉಚ್ಚರಿಸಿ, ಎಮ್ಮೆಯನ್ನು ಸ್ಪರ್ಶಿಸಿದನು. ತತ್ಕಾಲವೇ ಆ ಎಮ್ಮೆಯು ಸೆಟೆದ ಕೈಕಾಲುಗಳನ್ನು ಎಳೆದುಕೊಂಡು ಸಜೀವವಾಗಿ ಎದ್ದು ನಿಂತಿತು. ಇದನ್ನು ನೋಡಿ ಸೂತ್ತುಮುತ್ತಲಿನ ಜನರು, “ಇದು ಮಹಾ ಅಘಟಿತವಾದ ಕಾರ್ಯ,'' ಎಂದು ನುಡಿಯುತ್ತ ಆಶ್ಚರ್ಯಚಕಿತರಾದರು ಮತ್ತು ಕೆಲವರು, "ಈತನು ನಮ್ಮ ಉದ್ಧಾರದೆಶೆಯಿಂದ ಬಂದಿರುವ ಈಶ್ವರನೋ, ವಿಷ್ಣುವೋ ಅಥವಾ ಯಾವನಾದರೂ ಋತೀಶ್ವರನೋ, ತಿಳಿಯಲಾರೆವು'' ಎಂದು ಅನ್ನುತ್ತಿರುವಾಗ ಅವರನ್ನು ಕುರಿತು ಸಿದ್ಧನು ಅಂದದ್ದು
“ಎಲೈಪುಣ್ಯಾತ್ಮರುಗಳಿರಾ, ಕೇಳಿರಿ, ಇತರರ ವಚನವನ್ನು ಕೇಳದೆ ತಮೋಗುಣದಿಂದ ತಟಸ್ಥವಾಗಿರುವಂಥಾ ಅಹಂಬುದ್ದಿಯೇ ಈ ಎಮ್ಮೆಯು. ಅಂಥಾ ಅಹಂಬುದ್ಧಿಯ ತಮಸ್ಸನ್ನು ನಾಶಮಾಡುವ ಉದ್ದಿಶ್ಯವಾಗಿ ಆತ್ಮನು ಅದರ ಮೇಲೆ ಆರೋಹಣ ಮಾಡಿದರೂ, ಅದು ಸರ್ವಥಾ ಚಲಿಸಲಿಲ್ಲ. ಇದನ್ನು ಕಂಡು ಆತ್ಮನು ಸಂಕಲ್ಪ ಮಾಡಿದ ಕೂಡಲೇ ಅಹಂತೆಯು ಲಯಾವಸ್ಥೆಯನ್ನು ಹೊಂದಿತು. ಕೂಡಲೆ, ಈ ಅಹಂತೆಯನ್ನು ಬಹುಕಾಲ ಪಾಲನೆ ಮಾಡಿದ ಮೂಲಮಾಯಯು ಓಡಿಬಂದು, ಅಹಂತತೆಯನ್ನು ಬದುಕಿಸಬೇಕೆಂದು ಆತ್ಮನಿಗೆ ಪ್ರಾರ್ಥಿಸಿದಳು. ಈ ಪ್ರಾರ್ಥನೆಯನ್ನು ಕೇಳಿ ಆತ್ಮನು ಅಹಂತೆಯನ್ನು ಸಜೀವ ಮಾಡಿದನು. ಈಗ ಆ ಅಹಂತತೆಯು ಆತ್ಮನ ಭಕ್ತಿಯಿಂದಯುಕ್ತವಾಗಿ ಶಾಂತರೂಪದಿಂದ ಜಗತ್ತಿನಲ್ಲಿ ವರ್ತಿಸುವುದು."ಈ ಸವಿಚಾರ ಭಾಷಣವನ್ನು ಕೇಳಿ ಸರ್ವರೂ ಅನ್ನುತ್ತಾರೆ. - "ಆಹಾ, ಎಂಥಾ ಗಹನವಾದ ವಿಚಾರ! ನಮಗಿಂತ ಈತನು ಎಷ್ಟೋ ಚಿಕ್ಕವನಂತೆ ಕಾಣಿಸುತ್ತಿದ್ದರೂ, ಈತನ ಜ್ಞಾನವು ಆತರ್ಕ್ಯವಾದದ್ದು.” ಸಿದ್ಧಬಾಲಕನು ಸುಂದರವಾಗಿಯೂ ಮನೋಹರವಾಗಿಯೂ ಶೋಭಿಸುತ್ತಿರುವ ಮೂರ್ತಿಯನ್ನು ಕಂಡು, ಸರ್ವರು ''ಈತನ ಮಾತೆಯು ಧನ್ಯಳು, ಧನ್ಯಳು. ನಾವಾದರೂ ಈತನ ಸಂಗದಿಂದ ಧನ್ಯರು. ಈತನ ಪ್ರತ್ಯಕ್ಷ ತ್ರಿಮೂರ್ತಿಸ್ವರೂಪನಿರುವನು,” ಎಂದು ಅನ್ನುತ್ತಾ ಹೊರಟು ಹೋಗುವಂಥವರಾದರು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ದೇವದತ್ತನನ್ನು ಕೆರೆಯಲ್ಲಿ ಮುಳಗಿಸಿ ಬ್ರಹ್ಮಾನಂದದಲ್ಲಿ ಇರುವಂತೆ ಮಾಡಿದ ಬಾಲ ಸಿದ್ಧ ,
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3
«««««ಓಂ ನಮಃ ಶಿವಾಯ »»»»»»»
