ಬಾಬಾ ಗರ್ದೆಯವರಿಗೆ ಛಾಂದೋಗ್ಯಪನಿಷತ್ತಿನ ಭೋದನೆ

 🙏 ಬಾಬಾ ಗರ್ದೆಯವರಿಗೆ ಛಾಂದೋಗ್ಯಪನಿಷತ್ತಿನ  ಭೋದನೆ 🙏




ನಿತ್ಯಾನಿತ್ಯವಿವೇಕ, ವೈರಾಗ್ಯ, ಶಮಾದಿ ಷಟ್‌ಸಂಪತ್ತು, ಮುಮುಕ್ಷುತ್ವ  ಈ ನಾಲ್ಕು ಸಾಧನೆಗಳನ್ನು ಸಾಧಿಸಿದರೂ ಚಿಂತೆಗೊಡುವ ಅಜ್ಞಾನದ ಆವರಣ ಅಳಿಯದೆ  ಇದನ್ನು ನಿವಾರಿಸಿಕೊಳ್ಳಲು ದೇಶ ದೇಶಗಳಲ್ಲಿ ಸಂಚಾರದಲ್ಲಿದ್ದ ಬಾಬಾ ಗರ್ದೆ  ಅವರಿಗೆ ಹುಬ್ಬಳ್ಳಿಯಲ್ಲಿ ಭವತಾಪಹಾರಕ ಶಾಂತಿ ಸಮುದ್ರ, ಸದ್ಗುರು ಶ್ರೀ ಸಿದ್ಧಾರೂಢ ಕುರಿತು ವಾರ್ತೆಯನ್ನು ಕೇಳಿ ಹುಬ್ಬಳ್ಳಿಯತ್ತ ಧಾವಿಸಿದರು. ಸದ್ಗುರುಗಳ ಸನ್ನಿಧಾನದಲ್ಲಿ ನಿಂತು ಆನಂದಾಶ್ರುಗಳಿಂದ ಓಂ ಚೈತನ್ಯಂ ಶಾಶ್ವತ0 ಶಾಂತಂ| ಯೋಮಾತಿತಂ ನಿರಂಜನಂ | ನಾದಬಿಂದು ಕಲಾತೀತಂ ತಸ್ಮೈ ಶ್ರೀ ಗುರುವೇ ನಮಃ  | ಅಂತಾ ಉಚ್ಚರಿಸುತ್ತ ಶ್ರೀಗಳ ಪಾದಪದ್ಮಗಳಿಗೆ ಶಿರಸಾಷ್ಟಾಂಗ ವಂದನೆಗಳನ್ನು ಮಾಡುತ್ತಾ ಎದ್ದು ಅಂಜಲಿ ಬದ್ಧನಾಗಿ ಸದ್ಗುರುಗಳೇ, ದಯಾಸಾಗರನೆ, ಪರಶಿವನ ಅವತಾರಿಯೇ  ಭವ ಬಾಧೆಯಿಂದ ಪೀಡಿತನಾದ ನನ್ನನ್ನು ರಕ್ಷಿಸು. ಈ ಭವಸಾಗರದಿಂದ ದಾಟಿಸಿ ಮುಕ್ತರನ್ನಾಗಿ ಮಾಡು ಅಂತಾ ಪ್ರಾರ್ಥಿಸಿದನು. ಬಾಬಾ ಗರ್ದೆಯವರ ಅಧಿಕಾರಿ ಲಕ್ಷಣವನ್ನರಿತ ಶ್ರೀಗಳು ಆತನ ಮಸ್ತಕದ ಮೇಲೆ ತಮ್ಮ ಅಮೃತ ಹಸ್ತವನ್ನಿಟ್ಟು, ಹೇ ಮಗು, ನಿನಗೆ ಸದ್ಗುರುನಾಥನು ರಕ್ಷಿಸುವನು, ಅಂಜಬೇಡ. ನಿನ್ನ ಸಂಶಯಗಳೇನು? ಎಂದು ಪ್ರಶ್ನಿಸಿದರು. ಆಗ ಬಾಬಾ ಗರ್ದೆ  ಶ್ರೀಗಳನ್ನು ಕುರಿತು ವೇದಗಳಲ್ಲಿ ಅನೇಕ ಶಾಖೆಗಳಿವೆ. ಅವುಗಳಲ್ಲಿ ಅನೇಕ ಮಹಾವಾಕ್ಯಗಳಿವೆ. ಇವುಗಳ ಅರ್ಥವನ್ನು ನೋಡಲು  ಒಂದೇ ಆಗುತ್ತದೆಯೋ ಅಥವಾ ಭಿನ್ನ ಭಿನ್ನವಾಗುವದೋ ಎಂಬ ಸಂಶಯಗಳು ಬರುತ್ತದೆ ಅಂತಾ ನುಡಿದನು. ಆಗ ಶ್ರೀಗಳು ಹೇ ಬಾಬಾ ಗರ್ದೆ  ಕೇಳು ಬ್ರಹ್ಮಸೂತ್ರದ ತತ್ವ ಸಮನ್ವಯಾತ್ ಎಂಬ ಸೂತ್ರದಿಂದ ವಿಚಾರಿಸಲು ಅವೆಲ್ಲ ವಾಕ್ಯಗಳು ಸಮನ್ವಯಾರ್ಥವನ್ನೇ ಬೋಧಿಸುತ್ತವೆ ಅಂತ ನಿರ್ಣಯವಾಗುತ್ತದೆ. ಇವೇ ಮಹಾವಾಕ್ಯಗಳೆಸುತ್ತವೆ. ಇದಕ್ಕೆ ಅನುರೂಪವಾದ ಎಲ್ಲ ವಾಕ್ಯಗಳು ಒಂದೇ ಆಗಿರುವವು. ಇವುಗಳನ್ನು ಶೋಧ ಮಾಡಿದ ನೀನು ಪುಣ್ಯ ಪುರುಷನಾದ ನೀನೇ ಧನ್ಯನು.


ಸರ್ವಂ ಖಲ್ವಿದಂಬ್ರಹ್ಮ, ಬ್ರಹ್ಮೈವೇದಂ, ಸರ್ವ0 ಆತ್ಮೈವೇದಂ ತತ್ವಮೇವ, ತ್ವಮೇವ ತತ್ಭಗವೋ ದೇವತೇ ವಾಹಮಹ  ಮಹಮೇವಾತ್ವ0, ಅಯಮಾತ್ಮಾ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ನೇಹನಾನಾಸ್ತಿ, ನಾತ್ರ ಕಾಚ ನಭಿಪಾಸ್ತಿ, ಏಕೋಹವೈ , ಏಕೋರುದ್ರ ನಾನಾ ಪಶ್ಯನ್, ಮೃತ್ಯುಂಗಚ್ಛತಿ ಯಥಾ ಸ್ವಪ್ನಸ್ತಥಾಮೃಷಾ, ಈ ಪ್ರಕಾರದ ಮಹಾವಾಕ್ಯಗಳಲ್ಲಿ ಘನತರ ಅಖಂಡಾತ್ಮ  ಬ್ರಹ್ಮದ ಭಾವನ್ವಯ ಸುಮವಿದೆ. ಸರ್ವಶಾಖೆಗಳಲ್ಲಿಯ ವಾಕ್ಯಗಳೆಲ್ಲವೂ ಏಕಾನ್ವಯಗಳಿವೆ ಅಂತಾ ಹೇಳಿದರು. ಪುನಃ ಬಾಬಾ ಗರ್ದೆಯವರು, ಹೇ ಗುರುವೆ ಸರಳವಾಗಿ ತಿಳಿದುಕೊಳ್ಳುವ ಮಹಾವಾಕ್ಯವು ಯಾವ ಶಾಖೆಯಲ್ಲಿರುವುದು ಅದನ್ನು ತಿಳಿಸಿರಿ ಅಂತಾ ಕೇಳಿಕೊಂಡನು. ಅದಕ್ಕೆ ಶ್ರೀಗಳು, ಹೇ ಭಕ್ತನೇ, ಛಾಂದೋಗ್ಯಪನಿಷತ್ತಿನ  ಆರನೇ ಅಧ್ಯಾಯದಲ್ಲಿದೆ. ಏಕಾಗ್ರಚಿತ್ತದಿಂದ ಆಲಿಸು, ಉದ್ದಾಲಕ ಮಹರ್ಷಿಯ  ಪುತ್ರನಾದ ಶ್ವೇತಕೇತು ೧೨ ವರ್ಷಗಳವರೆಗೆ ವೇದಾಧ್ಯಯನ ಮಾಡಿ ಪಾರಂಗತನಾಗಿ ಗುರುಕುಲವಾಸದಿಂದ ಮರಳಿದನು. ಗುರುಕುಲದಿಂದ ಮನೆಗೆ ಬಂದ ಈ ಶ್ವೇತ ಕೇತುವಿಗೆ ತಂದೆಯಾದ ಉದ್ದಾಲಕ ಮಹರ್ಷಿಯು ಛಾಂದೋಗ್ಯಪನಿಷತ್ತಿನ ಆರನೇ ಅಧ್ಯಾಯವನ್ನು ಉಪಕ್ರಮ ಉಪಸಂಹಾರ ಮೊದಲಾದ ಆರು ಲಿಂಗಗಳ ಮೂಲಕ ಬೋಧಿಸಿದರು. ನಾಮರೂಪದಿಂದ ತೋರುವ ಈ ಪ್ರಪಂಚ ಬಂಗಾರದಲ್ಲಿಯ  ಆಭರಣದಂತೆ ಭ್ರಾಂತಿಯಾಗಿದೆ. ಅದ್ವೈತ  ದೃಢವಾಗಿರುವುದು ಪರಬ್ರಹ್ಮನಲ್ಲಿಯ ಸತ್ತು ಚಿತ್ತು ಆನಂದ, ನಿತ್ಯ ಪರಿಪೂರ್ಣವೆಂಬ ಪಂಚ ಲಕ್ಷಣಗಳು ನಿಮ್ಮಲ್ಲಿರುವದರಿಂದ  ನೀನೇ ಅವನಿರುವಿ  ಎಂಬ ತತ್ವಮಸಿ ಮಹಾ ವಾಕ್ಯವನ್ನು ವರ್ಷದಿಂದ ಒಂಬತ್ತು ಸಾರೆ ಬೋಧಿಸಿದನು. ಅದನ್ನೇ  ಈಗ ನಿನಗೆ ಬೋಧಿಸಿದೆ  ಎಂದು ಆ ಉಪನಿಷತ್ತಿನ ಹದಿನಾರು ಖಂಡಗಳನ್ನು ಶ್ರೀಗಳು ಗರ್ದೆಯವರಿಗೆ ಬೋಧಿಸಿದರು.


ನಂತರ ಬಾಬಾ ಗರ್ದೆ  ಶ್ರೀಗಳನ್ನು ಕುರಿತು, ಬೃಹದಾರಣ್ಯಕ ಉಪನಿಷತ್ತನ್ನು ಬೋಧಿಸಬೇಕೆಂದು ಪ್ರಾರ್ಥಿಸಿದರು. ಶ್ರೀಗಳು ಆತನ ಬಯಕೆಯಂತೆ ಬೃಹದಾರಣ್ಯಕವನ್ನು ಬೋಧಿಸಿದರು. ಬೋಧಾಮೃತಪಾನ ಮಾಡಿದ ಗರ್ದೆ, ಹೇ ಸದ್ಗುರುವೇ, ದಯಾಘನನೇ, ಭವತಾಪದ ಸುಡುವ ಕಾಡ್ಗಿಚ್ಚಿನಿಂದ ನನ್ನನ್ನು ಹೊರತೆಗೆದು ನನ್ನಲ್ಲಿದ್ದ ಅಜ್ಞಾನಾಂಧಕಾರವನ್ನು ಹೊಡೆದೋಡಿಸಿ ಸ್ವಯಂ ಪ್ರಕಾಶಮಾನ ಪೂರ್ಣ ಜ್ಞಾನದ ಪ್ರಾಪ್ತಿದಾಯಕನಾದ ಹೇ ಗುರುಪುಂಗವನೇ ಈಗ ನನಗೆ ಲಭಿಸಿದ ಜ್ಞಾನೋದಯವು  ಕೆಡದಂತೆ ಸ್ಥಿರವಾಗಿ ಉಳಿಸು ಅಂತಾ ಕರಗಳನ್ನು ಜೋಡಿಸಿ, ಪ್ರಾರ್ಥಿಸಿದನು. ಆಗ ಸಿದ್ದಾರೂಢರು ಆತನನ್ನು ಕುರಿತು, ಹೇ ಜಾಣಮತಿಯೆ ಪಂಚದಶಿ ಈ ಗ್ರಂಥವನ್ನು ಕನ್ನಡ ಭಾಷೆಯಲ್ಲಿ ಚತುರತೆಯಿಂದ ರಚಿಸಿ ಪಠಿಸುತ್ತಿದ್ದರೆ ನಿನಗೆ ಈ ಜ್ಞಾನ ಸ್ಥಿರವಾಗುವುದು ಅಂತ ಬಾಬಾಗರ್ದೆಯ ಮಸ್ತಕದ ಮೇಲೆ ಅಮೃತ ಹಸ್ತವನ್ನಿಟ್ಟು ಆಶೀರ್ವದಿಸಿದರು. ಆ ಪ್ರಕಾರ ಮಾಡುವುದಾಗಿ ಹೇಳಿದನು. ಹರ್ಷ ಭರಿತನಾದ ಬಾಬಾ ಗರ್ದೆ ಅವರು ಶ್ರೀಗಳ ಮೇಲಿನ ಒಂದು ಪದ್ಯವನ್ನು ರಚಿಸಿ ಹರ್ಷೋಲ್ಲಾಸಗಳಿಂದ ಹಾಡಿದರು. ಆ ಪದ್ಯ ಈ ಕೆಳಗಿನಂತಿದೆ.


ಪದ್ಯ

ಆರೂಢ ಸತ್ಪದಾರೂಢ ತಮೋಮಯ ಮೂಢಜಗೀ ಜನಭರಲಾ|

ತ್ಯಾ ಮುಕ್ತಕರಾಯಾ ಸಾಂಬಜಿ ಜಣು ಆವತರಲಾ || ಧ್ರು ||

ಜರೀ  ರೋಡ, ಆಕೃತಿಗೋಡ ಪಾಹತಾಗೋಡ ಪುರತ ನೇತ್ರಾಂಚೆ |

ತದ್ಭಾಷಣ ವಾಟೇಸಾರ  ಬ್ರಹ್ಮ ಸೂತ್ರಾಂಚೇ||

ಮುನಿಶಾಂತಿ ಮುಖಾವರಿಕಾಂತಿ ಘಾಲವೀಭ್ರಾಂತಿ  ಪ್ರಣತ ಲೋಕಾಂಚಿ |

ಯಾ ಅಲ್ಪಮತಿ ಮೀಸ್ತುತಿ ಕೇವಿಕರುತ್ಯಾಚಿ || ಚಾಲ ||

ಕುಣಿಹ್ಮಣತಿ ಜಾತಿ ಚಾವಾಣಿ ತ್ಯಾಜಲಾ | ಕುಣಿಹ್ಮಣತಿ ಕೊಷ್ಟಿಕುವಂಶಿ ಜನ್ಮಲಾ | ಪರಿ ಅಧಿಕ ದ್ವಿಜಾಹುನಿ ವಾಚೇತೋಮಲಾ||

ಸಮದೃಷ್ಟಿ ಸದಾಂತುಷ್ಟಿ ಅಸೋತೋ ಕೋಷ್ಟಿ ವಿಪ್ರಕಿ  ವಾಣಿ | ತೋವಂದ್ಯಚಿ ಮಜಲಾ ಚಿದ್ರತ್ನಾಚೀ ಖಾಣೆ  ||ಆರೂಢ||

ಬಹುದಿವಸ ಅಸಾಸಹವಾಸ ಕರಾಯಾನವಸ  ಚಿತ್ತಕರಿಮೋಝೆ| ತೋಯೋಗ ಅಣಿಲಾ  ಸಹಜಚಿ ಸದ್ಗುರು ರಾಜೆ||

ಸಂಗತೀ , ಜ್ಯಾಂಚಿಸದ್ಗತಿ, ದೇಉನೀಮತೀ, ಶುದ್ಧಕರಿ ಖಾಶೀ|

ಹಾ ರಾಹುನೀ  ಯೇಥೇ  ಹುಬಳೀಚೀ ಕರಿ ಕಾಶೀ ||ಚೌಲ ||

ಅಸತೀಲ ಶೆಂಕಡೊ ಜ್ಞಾನಿ ಮಹಿವರೀ | ಜಾಹಲೇ ಮುಕ್ತ

ಸ್ವಜ್ಞಾನೇ ತೇಜರೀ | ಉಪಕಾರೀಕ್ಷಚಿತಚಿ ಹೋತೀಯಾ ಪರೀll 

ಶಿಶುಪರೀ ಖೇಳಕುಣಿಕರಿ ವದತವೈಖರೀ ಪಿಶಾಪರಿಕೋಣೆ |

ಕುಣೀಬಸತಿ ಮುಕ್ತ್ಯಾಪರಿ ಸ್ತು0ಭವಿ  ಅಪುಲಿವಾಣಿ ||ಆರೂಢ||

ಹೀಮಾಯ, ದೋಬತೀಗಾಯ, ವಂದಿತಾಪಾಯ, ಜ್ಞಾನಪಯದೇ ಈ |

ಗುಣ ಅಂಗ ಜಾತಿವಯ ಕಾಳಮೇಳನಚ ಪಾಹೀ||

ಜನಭರತಿ ಐಕುನೀ ಕೀರ್ತಿ, ಪಹಾಯಾ ಮೂರ್ತಿ, ರಥಾವರಿಯಾಂಚೀ।

ದರ ವರ್ಷಿಭರೇತೀ ಜತ್ರಾ ಕಶಿ ಮೌಜೇಬೀ ||ಚೌಲll

ಪ್ರಾರ್ಥನಾಜ  ನಾನೋ  ಅತಾ ಅಇಕಾ | ಕಲ್ಪತು ತುಹ್ಮಾಲಾಭೇ

ಹಾ ಪುಕಾ | ಸಂಧಿಹೀಹತಾಂತುನಿ ಜಾಊ ದೇನಕಾll 

ಜಾ  ಶರಣ ಧರಾತ  ಚ್ಚರಣ ವಾವಯಾತರಣ, ಭವಾಂಬುಧಿ ಮಾಝೀ|

ಹೀ  ಕೃಷ್ಣ ಸುತಾಚೀ ವಿನಂತಿ ಐಕುನಿ ಘ್ಯಾಜೆ ||ಆರೂಢll


ಈ ಪ್ರಕಾರ ಪದ್ಯವನ್ನು ಹಾಡುತ್ತಾ ಹಾಡುತ್ತಾ ಶ್ರೀಗಳ ಚರಣಕಮಲಗಳಲ್ಲಿ ವಂದಿಸಿದನು.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ


👇👇👇👇

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಸಿದ್ಧಾರೂಢರ ರಥೋತ್ಸವವು ಬೆಳೆದದ್ದು ಸಮಾಧಿ ಕಟ್ಟಡ,ಅಕ್ಕಲಕೋಟಿ ಶರಣಪ್ಪರಿಂದ ರುದ್ರಾಕ್ಷಿ ಮಂಟಪ ಪೂಜಾ ಆರಂಭಿಸಿದ್ದು

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚

2)Facebook shareಗಾಗಿ👉

3)WhatsApp shareಗಾಗಿ click ಮಾಡಿ📲☎️



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ