ಗುರು ಶೋಧನೆಗಾಗಿ ಬಾಲಸಿದ್ಧ ಮಾಡಿದ ಯುಕ್ತಿಕಥೆ

 🕉️ಗುರು ಶೋಧನೆಗಾಗಿ ಸಿದ್ಧ ಮಾಡಿದ ಯುಕ್ತಿ  ✡️





ವೀರಭದ್ರಸ್ವಾಮಿಯವರು ನಿತ್ಯ ವೇದಾಂತ ಶ್ರವಣ ಮಾಡಿಸುತ್ತಿರುವಾಗ, ತಾಯಿಯ ಹತ್ತಿರದಲ್ಲಿ ಕೂತು ಸಿದ್ದನು ಬಹು ಆದರದಿಂದ ಶ್ರವಣ ಮಾಡುವನು. ಒಂದಾನೊಂದು ದಿನ ಶ್ರವಣ ಕಾಲದಲ್ಲಿ ವೈರಾಗ್ಯ ಬೋಧಿಸುವ ವಿಷಯ. ಸ್ವಾಮಿಯವರು ಅಂದದ್ದೇನೆಂದರೆ- "ಒಂದು ಕಾಲದಲ್ಲಿ ಪೃಥ್ವಿಯು ಸಾಗರದಲ್ಲಿ ಕರಗಿ ಹೋಗುವದು, ಮೇರು ಪರ್ವತವಾದರೂ ಬಿದ್ದು ಹೋಗುವುದು. ಪಂಚಭೂತಗಳು ನಾಶಹೊಂದುವವು. ಸ್ವರ್ಗಾದಿ ಸಮಸ್ತ ಲೋಕಗಳು ಸಹ ಪ್ರಳಯಾಗ್ನಿಯಲ್ಲಿ ಸುಟ್ಟು ಹೋಗುವವು. ಆ ಸಮಯದಲ್ಲಿ, ದೇಹವೇ ತಾನೆಂದೂ ಇಲ್ಲಿ ಸುಖವನ್ನು ಭೋಗಿಸುವೆನೆಂದೂ ಅನ್ನುವಂಥಾ ಭ್ರಾಂತ ಮನುಷ್ಯನ ಸ್ಥಿತಿ ಏನೆಂದು ಹೇಳಲಿ ".
ಇದನ್ನು ಕೇಳಿದ ಸಿದ್ಧನು, ಗುರುಗಳನ್ನು ಕುರಿತು, "ಸ್ವಾಮಿಗಳೇ ಆಕಾಶವು ಹ್ಯಾಗೆ ಪ್ರಳಯ ಹೊಂದುವದು ?'' ಎಂದು ಅಂದದ್ದಕ್ಕೆ ಗುರುಗಳು, "ಎಲೋ ತಮ್ಮಾ ಆತ್ಮಾನುಭವಿಯಾದ ಯೋಗ್ಯ ಗುರುವಿಗೆ ಈ ಪ್ರಶ್ನೆಯನ್ನು ಕೇಳಿತಕ್ಕದ್ದು" ಅಂದರು. ಕುಲಗುರುಗಳ ಈ ವಚನವನ್ನು ಕೇಳಿ ಸಿದ್ಧನು ತಾನು ಬ್ರಹ್ಮವೇತ್ತನಾದ ಗುರುವನ್ನು ಹುಡಕಬೇಕು ಎಂದು ಮನಸ್ಸಿನಲ್ಲಿ ನಿರ್ಧರಿಸಿದನು, ತಾನು ಸದ್ಗುರುವಿನ ಶೋಧನೆಗೆ ಹೊರಡಬೇಕೆಂದು ಸಂಕಲ್ಪ ಮಾಡಿದ ಕೂಡಲೇ ಬಲಭುಜ ಅದರಿತು,  ತಂದೆ ತಾಯಿಗಳಿಗೆ ಕೇಳಿದರೆ ಅವರು ನನಗೆ ಗುರುಶೋಧಕ್ಕೆ ಹೊರಡಲು ಅಪ್ಪಣೆ ಕೊಡಲಾರರು. ಅದಕ್ಕೆ ಒಂದು ಯುಕ್ತಿಯನ್ನು ಮಾಡಲು ಮುಂದಾನು. ಒಂದು ಗುರುವಾರ ದಿನ ಮನೆಯಿಂದ ಹೊರಟು ಉರಹೊರಗಿನ ಶಿವ ದೇವಾಲಯದಲ್ಲಿ ಸಿದ್ಧನು ಬಂದು ಕೂತನು. ಆದಿಶೇಷನನ್ನು ಸ್ಮರಿಸಿದ ಕೂಡಲೇ ಘಟಸರ್ಪವು ಹೆಡೆಯೆತ್ತಿ ಆತನ ಕಡಗೆ ಬಂದಿತು. ಆಗ ಸಿದ್ದನು ಚೀರುತ್ತಾ ಬೋಬ್ಬೆ ಹೊಡೆಯ ಹತ್ತಿದನು. ಅವನ ದ್ವನಿ ಕೇಳಿದ ಕೂಡಲೇ ಪುರದ ಜನರಲ್ಲರೂ ತಂದೆ ತಾಯಿಗಳು ಓಡುತ್ತಾ ಬಂದರು. ಶಿವ ದೇವಾಲಯದಲ್ಲಿ ಸರ್ಪವು ಸಿದ್ಧನ ಮೊಣಕಾಲಸಂದಿಯಲ್ಲಿ ಸುತ್ತಹಾಕಿ ಕಚ್ಚಿತು. ಅದನ್ನು ಹೊಡೆಯಲು ಮುಂದಾಗುವಷ್ಟರಲ್ಲಿ ಸರಸರನೆ ಸರ್ಪವು ಸರಿಯುತ್ತಾ ಮಾಯವಾಯಿತು. ಮೈತುಂಬಾ ವಿಷವೇರಿತು, ಶಿವನಾಮ ಸ್ಮರಿಸುತ್ತಾ ಸಿದ್ಧನು ಮೂರ್ಛಿತನಾದನು, ಬಾಯಿಂದ ಬುರುಗು ಬರತೊಡಗಿತು. ಮಗನ ಈ ಸ್ಥಿತಿಯನ್ನು ಕಂಡು ತಂದೆ ತಾಯಿಗಳು ಮೂರ್ಛಿತರಾಗಿ ಬಾಳೆ ಗಿಡ ಉರುಳಿದಂತೆ ನೆಲಕ್ಕೆ ಬಿದ್ದರು. ಅದನ್ನು ನೋಡುತ್ತಾ ಜನರು ಶೈತ್ಯೋಚಾರವನ್ನು ಮಾಡತೊಡಗಿದರು, ನಮ್ಮಲ್ಲರ ಪುಣ್ಯ ಬಲದಿಂದ ಈ ಮಹಿಮನು ನಮಗೆ ದೊರೆತನು. ಬೆಕ್ಕು ಗಿಳಿಯನ್ನು ಕಚ್ಚಿ ತಗೆದುಕೊಂಡಂತೆ ಯಮಧರ್ಮನು ಕಟಕನಾಗಿ ಈತನನ್ನು ತೆಗೆದುಕೊಂಡನೆ  ಅಂತಾ ಹಾಹಾಕಾರದಿಂದ ಗೋಳಾಡತೊಡಗಿದರು. ಕಣ್ಣುಗಳಿಂದ ಧಾರಾಕಾರವಾಗಿ ನೀರು ಹರಿಯತೊಡಗಿದವು. ದೇವಮಲ್ಲಮ್ಮ ಎಚ್ಚತ್ತು ಗಡಬಡಿಸುತ್ತಾ ಮಗುವನ್ನು ಎತ್ತಿಕೊಂಡು
"ಅಯ್ಯಾ ಶಂಕರನೆ, ಏಳು ವರ್ಷಗಳ ಸದ್ಗುಣ ಮಹಿಮಾಶಾಲಿ ಪುತ್ರನನ್ನು ಮೃತ್ಯುದೇವಿಯ ಬಾಯಲ್ಲಿ ನೂಕಿದ ನೀನು, ನನ್ನ ಮಗನ ಕುತ್ತಿಗೆಯನ್ನು ಕೊಯ್ದ ಕಟುಕನೆ, ನಿನಗೆ ನನ್ನ ಶಾಪ ಹತ್ತಲಿ. ನೀನು ಸ್ಮಶಾನದಲ್ಲಿ ನಿತ್ಯವೂ ವಾಸ ಮಾಡು, ಬೂದಿ ಬಡಿದುಕೊ. ಭೂತಗಳ ಕೂಡ  ಒಡನಾಡು, ನಿನ್ನ ಹಣೆಯಲ್ಲಿ ಬೆಂಕಿ ಬೀಳಲಿ, ನಿನ್ನ ನೆತ್ತಿಗೆ ನೀರು ಹರಿಯಲಿ ನಿನ್ನ  ಹಡೆದವರು ನಾಶವಾಗಲಿ: ಪ್ರಳಯ ಕಾಲದಲ್ಲಿ ನಿನ್ನ ಸಂಪತ್ತು ನಾಶವಾಗಲಿ: ನಿನ್ನ ಕೈಯಲ್ಲಿ ಕೋಡು ಬರಲಿ. ನಿನ್ನ ಮಗನ ಹೊಟ್ಟೆ ಹರಿಯಲಿ. ನಿರ್ವಾಣಿ, ನಿನ್ನ ಕೊರಳಿಗೆ ಹಾವು ಸುತ್ತಲಿ, ನಿನ್ನ ಬಾಯಲ್ಲಿ ವಿಷವನ್ನು ಹಾಕಲಿ, ನೀನು ಭಿಕ್ಷೆ ಬೇಡು, ನಿನಗೆ ಚರ್ಮವೇ  ಹೊದಿಕೆಯಾಗಲಿ, ನಿನ್ನ ಭಕ್ತನು ನಿನ್ನನ್ನು ಸುಡಲು ನಿನ್ನ ಬೆನ್ನುಹತ್ತಲಿ'' ಮುಂತಾಗಿ ಶಪಿಸುತ್ತಾ ದೇವಮಲ್ಲಮ್ಮನು ಶೋಕಿಸತೊಡಗಿದಳು. ನನ್ನ ಮಗನು ಪ್ರಾಣ ಬಿಡಲು ನಿನಗೆ ಆನಂದವಾಯಿತೆ? ಶಿವನೇ' ಅಂತಾ ಅಳತೊಡಗಿದಳು. ''ಚತುರ ಶಾಲಾ ಗುರುಗಳಿಗೆ ಓಂಕಾರದ ಅರ್ಥವನ್ನು ಹೇಳಿದ್ದು, ಸತ್ತ ಎಮ್ಮೆಯನ್ನು, ಹಾವನ್ನು ಬದುಕಿಸಿದ್ದು ಮುಂತಾದ ಮಹಿಮೆಗಳು ನನ್ನ ಸ್ಮತಿಪಟಲದ ಮೇಲಿರುವದನ್ನು ನಾನು ಹೇಗೆ ಮರೆಯಲಿ' ಅಂತಾ ಎದೆ ಬಡಿದುಕೊಂಡು ರೋಧಿಸತೊಡಗಿದಳು. ಈ ರೋಧನೆಯಲ್ಲಿ ತಾಯಿಯ ದುಃಖ ಉಕ್ಕೇರುತ್ತಿದ್ದುದನ್ನು ಕಂಡು ನೆರೆದವರೆಲ್ಲರೂ ಸಾಂತ್ವನ ಮಾಡಿದರು. ತಡೆಯದಾಗದೆ, ದುಃಖಸಾಗರದ ಅಬ್ಬರಿಸುವ ತೆರೆಗಳ ಹೊಡೆತಕ್ಕೆ ಘಾಸಿಯಾಗಿ ಮುಂದೇನು ಮಾಡಬೇಕೆಂದು ತಿಳಿಯದಾಯಿತು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ  ಕಥೆಗಳ ಲಿಂಕಗಳು 
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
2)Facebook shareಗಾಗಿ👉  
3

«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ