ಶಿವನು ಜಂಗಮವೇಷದಲ್ಲಿ ಬಂದು ಬಾಲಸಿದ್ಧರೂಡನನ್ನು ಬದುಕಿಸಿ ಬ್ರಹ್ಮಚರ್ಯ ದೀಕ್ಷೆ ಕೊಟ್ಟಕಥೆ
🕉️ ಶಿವನು ಜಂಗಮವೇಷದಲ್ಲಿ ಬಂದು ಬಾಲಸಿದ್ಧನ ಬದುಕಿಸಿ ಬ್ರಹ್ಮಚರ್ಯ ದೀಕ್ಷೆ ಕೊಟ್ಟಿದು 🙏
ಶಿವನು ಪ್ರಮಥ ಗಣಗಳಿಂದ ಜಂಗಮ ವೇಷಧಾರಿಯಾಗಿ ಅಲ್ಲಿಗೆ ಆಗಮಿಸಿದನು. “ಸಿದ್ದನನ್ನು ಬದುಕಿಸಲು ಬಂದಿರುವೆವು'' ಅಂತಾ ಹೇಳಿದ ಆ ಜಂಗಮರ ಪಾದಗಳಿಗೆ ನಮಸ್ಕರಿಸಿ, "ಕಂದನನ್ನು ಬದುಕಿಸಿರಿ'' ಅಂತಾ ನೆರೆದವರೆಲ್ಲರೂ ಅಂಗಲಾಚಿ ವಿನಯಪೂರ್ವಕ ಬೇಡಿಕೊಂಡರು. ಆಗ ಜಂಗಮನು ಸಿದ್ಧನ ಎಲ್ಲ ಅಂಗಾಂಗಗಳನ್ನು ಮುಟ್ಟುತ್ತಾ ನೋಡುತ್ತಾ ತಂದೆ ತಾಯಿಗಳನ್ನು ಕುರಿತು “ಈತನು ಈ ಭೂಲೋಕಕ್ಕೆ ಗುರುವಾಗುವನು. ಮನೆಯನ್ನು ಬಿಟ್ಟು ಹೋಗಲು ಈ ಬಾಲಕನಿಗೆ ಪರವಾನಿಗೆ ಕೊಟ್ಟಲ್ಲಿ ಮಾತ್ರ ಬದುಕಿಸುವೆ, ಬೇಗ ಇದಕ್ಕೆ ಸಮ್ಮತಿ ಕೊಟ್ಟಲಿ ಈ ಕಾರ್ಯವನ್ನು ಪೂರೈಸುವೆ, ಇಲ್ಲವೆ ನಾನು ಹೊರಟು ಹೋಗುವೆ' ಅಂತಾ ಜಂಗಮನು ನುಡಿದನು, ''ಬದುಕಿ ಲೋಕೋದ್ದಾರ ಮಾಡಲಿ'' ಅಂತಾ ತಂದೆ ತಾಯಿಗಳು ಸಮ್ಮತಿಸಿದ ಕೂಡಲೇ ಜಂಗಮನು ಮಂತ್ರಿಸಿದನು. ಆಗ ಸಿದ್ದನಿಗೆ ಕಚ್ಚಿದ ಹಾವು ಘಾಯದಿಂದ ವಿಷವನ್ನು ಹೀರಿ ಸರಿದು ಹೋಯಿತು. ಘಾಯಕ್ಕೆ ಔಷಧವನ್ನು ಹಚ್ಚಲು ಶಿವನಾಮ ಸ್ಮರಣೆಯನ್ನು ಮಾಡುತ್ತಾ ಸಿದ್ದನು ಎಚ್ಚೆತ್ತ ಕೂಡಲೇ ತಂದೆ ತಾಯಿ ನೆರೆದ ಜನರೆಲ್ಲರೂ ಆನಂದಸಾಗರದಲ್ಲಿ ತೇಲಾಡಿದರು. ಸದ್ಭಕ್ತಿಯಿಂದ ಆ ಮಹಾಮಹಿಮನಿಗೆ ವಂದಿಸುತ್ತಾ "ದೀರ್ಘಾಯುಷಿಯಾಗು'' ಅಂತಾ ಆಶೀರ್ವದಿಸಿದರು. ಬಳಿಕ ಜಂಗಮನು ಸಿದ್ದನಿಗೆ ಶಾಸ್ತ್ರೋಕ್ತವಾಗಿ ಸ್ನಾನ ಮಾಡಿಸಿ ಭಸ್ಮವನ್ನು ಹಚ್ಚಿ ಪಂಚಕಲಶ ಸ್ಥಾಪಿಸಿ ಪೂಜಾವಿಧಿ ವಿಧಾನದೊಂದಿಗೆ ದೀಕ್ಷೆಯನ್ನು ನೀಡಿದನು. "ನೀನು ಜಗದೋದ್ಧಾರ ಮಾಡುವ ಮಹಾನುಭಾವನಿರುವಿ. ಶಿವಾಂಶ ಸಂಭೂತನಾಗಿರುವಿ, ಹೀನ ಸಂಸ್ಕಾರಕ್ಕೆ ನಂಬದೆ, ಸದ್ಗುರುವನ್ನು ಸೇವಿಸಿ ಕರುಣೆ ಪಡೆದು ಜ್ಞಾನಿಯಾಗಿ ದಿಗ್ವಿಜಯ ಮಾಡು"ಅಂತಾ ಜಂಗಮನು ಹೇಳಲು ಅದಕ್ಕೆ ಸಿದ್ದನು ''ಸಮ್ಮತಿಸಿದನು". ಪುರಜನರು ಜಂಗಮನಿಗೆ ವಂದಿಸುತ್ತಾ ಸ್ವಾಮಿ ನೀವು ಯಾರು? ನಿಮ್ಮ ಹೆಸರೇನು? ನೀವೆಲ್ಲಿಂದ ಬಂದಿರುವಿರಿ? ಮುಂದೆ ಎಲ್ಲಿಗೆ ಹೋಗುವಿರಿ? ಅಂತಾ ಕೇಳಿದರು. ಅದಕ್ಕೆ ಉತ್ತರಿಸುತ್ತಾ "ದೇವನೂರಿನ ಮಠದ ಪಟ್ಟದ ದೇವಶಿವಯ್ಯ ನಾನು, ಈ ಲೋಕದಲ್ಲಿ ನನಗೆ ಇಬ್ಬರು ಜಗಳಗಂಟ ಹೆಂಡಂದಿರು ಇರುವರು, ಮೂವರು ಹಠಮಾರಿ ಮಕ್ಕಳು, ಒಂದು ಮುದಿ ಎತ್ತು ಇದ್ದು ನನ್ನದು ಅತಂತ್ರ ಸಂಸಾರ, ತಾಳಮೇಳ ಇಲ್ಲದ್ದು, ಈ ಬಿಕ್ಕಟ್ಟಿನ ಸಂಸಾರಕ್ಕೆ ಬೇಸತ್ತು ನಾನು ಸಾಯಬೇಕು ಅಂತಾ ವಿಷವನ್ನು ಕುಡಿದರೂ ಸಾಯಲಿಲ್ಲ. ಇಂತಹ ಸಂಸಾರ ತಾಪತ್ರಯ ಇರುವಾಗ, ಇಲ್ಲಿ ನಿಲ್ಲಲಿಕ್ಕೆ ಸಾಧ್ಯವಿಲ್ಲ. ನಾವು ಹೋಗಬೇಕು'' ಅಂತಾ ಅವರಿಗೆ ಹರಸುತ್ತಾ ಹೋದರು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
2)Facebook shareಗಾಗಿ👉
3
«««««ಓಂ ನಮಃ ಶಿವಾಯ »»»»»»»
