ವನಭೋಜನಕ್ಕೆ ಹೋದಾಗ ನೀರಲಹಣ್ಣಿನ ರಾಶಿ ಮಾಡಿ, ಸತ್ತ ಹಾವು ಬದುಕಿಸಿದ ಕಥೆ
🌳ವನಭೋಜನಕ್ಕೆ ಹೋದಾಗ ನೀರಲಹಣ್ಣಿನ ರಾಶಿ ಮಾಡಿದು ಹಾಗೆ ಸತ್ತ ಹಾವು ಬದುಕಿಸಿದ ಲೀಲೆಗಳು 🌱
ಮತ್ತೊಂದು ದಿನ ಸಿದ್ಧನಾಥನು ಬಹು ಬಾಲಕರನ್ನು ಕೂಡಿಕೊಂಡು ಒಂದು ನೀರಲ ಹಣ್ಣಿನ ತೋಟಕ್ಕೆ ಹೋದನು.ತೋಟವನ್ನು ಪ್ರವೇಶಿಸಿದ ಕೂಡಲೇ ಹುಡುಗರೆಲ್ಲರೂ ಉತ್ತಮವಾದ ಹಣ್ಣುಗಳನ್ನು ಆರಿಸುವ ಉದ್ದೇಶದಿಂದ ಅತ್ತಿತ್ತ ಓಡುತ್ತಿದ್ದರು. ಆಗ ಸಿದ್ಧನು ಒಂದು ಸ್ಥಾನದಲ್ಲಿ ಶಾಂತವಾಗಿ ನಿಂತು ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ - ಇವರು ಮಾಯಾಮೋಹಿತರಾಗಿ ವಿಷಯಗಳಲ್ಲಿ ಸಿಲುಕಿ, ಸರ್ವಕ್ಕೆ ಕಾರಣವಾಗಿರುವ ಈಶನಾದ ನನ್ನನ್ನು ಮರೆತಿರುವರು. ಈಗ ಇವರನ್ನು ನನ್ನ ಕಡೆಗೆ ಎಳಕೊಂಡು ಇವರಿಗೆ ವಿವೇಕವನ್ನು ಉಪದೇಶಿಸಬೇಕು, ಎಂದುಕೊಂಡು ಸಿದ್ದನು ಏನು ಚಮತ್ಕಾರ ಮಾಡಿದರೆಂದರೆ, ಒಂದು ನೀರಲ ಹಣ್ಣನ್ನು ಭೂಮಿಯ ಮೇಲೆ ಚೆಲ್ಲಿದ ಕೂಡಲೇ ಅಲ್ಲಿ ಒಂದು ದೊಡ್ಡ ಹಣ್ಣಿನ ರಾಶಿಯೇ ಉಂಟಾಯಿತು. ಅತ್ಯುತ್ತಮವಾದ ಪಕ್ವ ಫಲಗಳಿಂದ ಯುಕ್ತವಾದ ಆ ರಾಶಿಯನ್ನು ಕಂಡು ಬಾಲಕರೆಲ್ಲರೂ ಅಲ್ಲಿಗೆ ಓಡಿಬಂದು, ಸಿದ್ಧನಿಗೆ ಕೇಳುತ್ತಾರೆ- "ನಾವು ಈವರೆಗೆ ನೋಡದ ಉತ್ತಮವಾದ ಫಲಗಳ ಈ ರಾಶಿಯು ಇಲ್ಲಿ ಹ್ಯಾಗೆ ಉಂಟಾಯಿತು ? ಈಶ್ವರನ ಕಾರ್ಯಗಳು ಅಘಟಿತವಾಗಿರುತ್ತವೆ.” ಹೀಗೆಂದು ಅವರೆಲ್ಲರೂ ಅನೇಕ ಫಲಗಳನ್ನು ತಕ್ಕೊಂಡು ತಿಂದರು ಮತ್ತು ಫಲಗಳನ್ನು ಕಟ್ಟಿಕೊಳ್ಳುತ್ತಿದ್ದರು. ಆಗ ಸಿದ್ಧನು ಅವರನ್ನು ಕುರಿತು, "ನೀವು ಹೊಟ್ಟೆತುಂಬ ಹಣ್ಣುಗಳನ್ನು ತಿಂದಿರಲ್ಲ. ಆದರೆ ಯಾವತರ ಉಪಕಾರದಿಂದ ಈ ಸಮೃದ್ಧಿಯಾದ ಫಲಗಳ ರಾಶಿಯು ಸಿಕ್ಕಿತು ಎಂಬುದು ನೀವು ವಿಚಾರ ಮಾಡಲಿಲ್ಲ”, ಎಂದು ಹೇಳಿದ್ದಕ್ಕೆ ಅವರು "ನಮಗೋಸ್ಕರ ಜಗದೀಶ್ವರನು ಈ ಸ್ವಾಧಿಷ್ಟವಾದ ಫಲಗಳನ್ನು ಕೃಪೆಯಿಂದ ನಿರ್ಮಿಸಿದನು. ಆದರೆ ನಮ್ಮ ಮೂರ್ಖತ್ವದಿಂದ ಆತನನ್ನು ನಾವು ಅರಿಯದೇ ಹೋದೆವು. ಈಗ ಈ ಹಣ್ಣುಗಳನ್ನು ಇಲ್ಲೇ ಬಿಟ್ಟು ನಾವು ಮನೆಗೆ ಹೋಗೋಣ" ಎಂದು ಅಂದರು. ಆಗ ಸಿದ್ದನು, “ಎಲೈ ತಮ್ಮಗಳಿರಾ, ಈ ಹಣ್ಣುಗಳನ್ನು ಬೇಡುವೆವು ಎಂದು ಹೇಳುವಿರಿ, ಹಣ್ಣು ಬಿಟ್ಟರೆ ಅವನ್ನು ನೋಡುವಂಥ ಕಣ್ಣುಗಳನ್ನು ಬಿಡಲಾರಿರಿ. ಕಣ್ಣುಗಳಿಂದ ಪುನಃ ಪುನಃ ಹಣ್ಣುಗಳನ್ನು ನೋಡುತ್ತಲೇ ಚಿತ್ತಾಕರ್ಷಣವಾಗಿ ವಿಷಯಗಳ ಕಡೆಗೆ ಮನಸ್ಸು ಹರಿಯುವದು. ಕಣ್ಣುಗಳಾದರೂ ಮುಚ್ಚಬಹುದು, ಆದರೆ ದೇಹಾಭಿಮಾನ ಸ್ಥಿರವಿರದು. ಅದು ಇರುವ ತನಕ ಈಶ್ವರ ಪ್ರಾಪ್ತಿಗೋಸ್ಕರ ಮಾಡಿದ ಯತ್ನಗಳೆಲ್ಲ ವ್ಯರ್ಥವಾಗಿರುವವು. ಈ ಅಭಿಮಾನವನ್ನು ತ್ಯಾಗ ಮಾಡಲಿಕ್ಕೆ ಜ್ಞಾನ ಧ್ಯಾನಾದಿಗಳಿಂದ ಯತ್ನವನ್ನು ಮಾಡತಕ್ಕದ್ದು; ಇದಕ್ಕೆ ತಪಉಪವಾಸಾದಿ ಇತರ ಉಪಾಯಗಳು ನಡೆಯಲಾರವು. ಈಶ್ವರ ಧ್ಯಾನದಿಂದ ಆತ್ಮಜ್ಞಾನವಾಗಿ ಅದರಿಂದ ಬ್ರಹ್ಮಾನಂದ ಪ್ರಕಟವಾಗುವದು. ಬ್ರಹ್ಮಾನಂದದಲ್ಲಿ ಚಿತ್ತವು ಮಗ್ನವಾಗಿರಲು, ವಿಷಯಭಾನವು ಉಳಿಯಲಾರದು. ಈಗ ನೀವು ಸಾಕಷ್ಟು ಹಣ್ಣುಗಳನ್ನು ತಕ್ಕೊಂಡು ಮನೆಗೆ ಹೋಗಿರಿ,'' ಎಂದು ಸಿದ್ಧನು ಅಂದದ್ದು ಕೇಳಿ, ಸರ್ವರೂ ಮನೆ ಕಡೆ ಹೊರಟರು.
🕉️ ಬಾಲಸಿದ್ಧನು ವನ ಭೋಜನ ಮುಗಿಸಿ ಬರುವಾಗ ಸತ್ತ ಹಾವು ಬದಕಿಸಿ ತೋರಿಸಿದ🌱.
ಸಾಯಂಕಾಲ ಪುನಃ ಭೋಜನ ಪೂರೈಸಿ ಹಾಡುತ್ತಾ ಕುಣಿದಾಡುತ್ತಾ ಊರಿನ ಕಡೆ ನಡೆದಾಗ ಮಾರ್ಗ ಮಧ್ಯದಲ್ಲಿ ಉದ್ದವಾಗಿ ಬಿದ್ದ ಹಾವನ್ನು ಕಂಡು ಭಯದಿಂದ ಜನರು ಓಡತೊಡಗಿದರು. ಆಗ ಸಿದ್ಧನು ಅಯ್ಯಾ ಜನರೆ, ಯಾಕೆ ಓಡುವಿರಿ, ಸಾಕು ನಿಲ್ಲಿರಿ. ಹೆಣಕ್ಕೆ ಹೆದರುವ ನೀವೆಂತಹ ಶೂರರು. ಆದಿ ಪರಶಿವನಿಗೆ ಆಭರಣವಾಗಿರುವ ಆದಿಶೇಷನೇ ಭೂಲೋಕಕ್ಕೆ ನಿಮ್ಮ ಭಕ್ತಿಯನ್ನು ಪರೀಕ್ಷಿಸಲು ಬಂದಿರುವನು. ಶಿವನಾಮ ಉಚ್ಛರಿಸುವದರಿಂದ ಭಯ ನಿವಾರಣೆಯಾಗುವುದು ಎಂದು ಸತ್ತ ಹಾವನ್ನು ಎತ್ತಿ ತೋರಿಸಿದನು. ಇದನ್ನು ಕಂಡು ಜನರು ಚಕಿತರಾದರು. ಸಿದ್ದನು ಹೇಳಿದ ಪ್ರಕಾರ ಪಂಚಾಕ್ಷರಿ ಮಂತ್ರವನ್ನು ಭಕ್ತಿಯಿಂದ ನುಡಿಯಲು, ಸತ್ತ ಹಾವು ಚೇತರಿಸಿಕೊಂಡು ಮೆಲ್ಲಗೆ ಸರಿದು ದೂರ ಹೋಯಿತು. ಈ ಮಹಾ ಮಹಿಮೆಯನ್ನು ಕಂಡು ಅತೀವ ಉತ್ಸಾಹದಿಂದ ಗ್ರಾಮದಲ್ಲಿ ಸಿದ್ಧನ ಮೆರವಣಿಗೆಯನ್ನು ಮಾಡಿ ಜಯ ಜಯಕಾರ ಹಾಕಿದರು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
2)Facebook shareಗಾಗಿ👉
«««««ಓಂ ನಮಃ ಶಿವಾಯ »»»»»»»
