ಶರೀಫ ಸಾಹೇಬರು ಸಿದ್ಧಾರೂಢ ಮಠಕ್ಕೆ ಬಂದು ತೆಂಗಿನಕಾಯಿ ಮಾಯಾಮಾಡಿದ ಮಹಿಮೆ ತೋರಿದ ಕಥೆ,

 🌿ಶರೀಫ ಸಾಹೇಬರು ಸಿದ್ಧಾರೂಢ ಮಠಕ್ಕೆ ಬಂದು ಕಾಯಿ ಮಹಿಮೆಯನ್ನು ತೋರಿಸಿದ ಕಥೆ,



ಪ್ರತಿದಿನವೂ ಸಿದ್ಧಾರೂಢರ ಮಠದಲ್ಲಿ ಶಾಸ್ತ್ರಾಧ್ಯಯನ ನಡೆದಾಗ  ಭಕ್ತರೆಲ್ಲರೂ ಆಗಮಿಸಿ ಶ್ರವಣ ಮಾಡುತ್ತಿದ್ದರು. ಸಿದ್ಧರ ಕೀರ್ತಿಯು ಜಗತ್ತಿನ ತುಂಬಾ ಪಸರಿಸಿತು. ಕಾಲ ಕಾಲಕ್ಕೆ ಮಹಾತ್ಮರು ಮಠಕ್ಕೆ ಬರುವಿಕೆ ಹೆಚ್ಚಾಗತೊಡಗಿತು. ಮಹಾತ್ಮರ ಸಮಾಗಮ, ಚರ್ಚಾ, ದರ್ಶನಗಳಿಂದ ಭಕ್ತರೆಲ್ಲರೂ ಹರ್ಷೋಲ್ಲಾಸಗಳಿಂದ ಸೇವಾತತ್ಪರರಾಗಿರುತ್ತಿದ್ದರು.


ಮಹಾತ್ಮರಲ್ಲಿ ಅಗ್ರಗಣ್ಯರಾದ ಖಾಸ್ಗತಸ್ವಾಮಿ, ಇಟಗಿ, ಸದಾಶಿವಸ್ವಾಮಿ, ರಂಗಪ್ಪ, ದೇವೇಂದ್ರಪ್ಪ, ಗುಂಡಾಗುರು, ಅಥಣಿ ಮುರಗೇಂದ್ರ ಸ್ವಾಮಿಗಳು, ಶರಣಪ್ಪ, ಉದ್ದಾನಯ್ಯ ಮುಂತಾದವರು ಬಂದು ಶ್ರೀಗಳ ಮಠದಲ್ಲಿ ಸೇವಾನಿರತರಾದರು. ಸಾಕ್ಷಾತ್ ಶಿವನ ಪರಾವತಾರಿಯಾದ ಶ್ರೀ ಗುರು ಸಿದ್ಧಾರೂಢ ಸ್ವಾಮಿಗಳೇ,  ನಮಗೆ ನಿಜಗುಣ ಶಿವಯೋಗಿಗಳು ರಚಿಸಿದ ಆರು ಶಾಸ್ತ್ರಗಳನ್ನು ಬೋಧನೆ ಮಾಡಬೇಕು ಅಂತ ಪ್ರಾರ್ಥಿಸಿದರು. ಭಕ್ತರ ಇಚ್ಛೆಯಂತೆ ನಿಜಗುಣರ ಶಾಸ್ತ್ರಗಳ ಶ್ರವಣ ನಡೆಯಿತು. ಕೆಲವರು ಮಠದಲ್ಲಿ ವಾಸ ಮಾಡಹತ್ತಿದರು. ಕೆಲವರು ಕೆಲ ದಿನಗಳವರೆಗೆ ಮಠದಲ್ಲಿ ಉಳಿದುಕೊಂಡು ಮತ್ತೆ ಮತ್ತೆ ತಮ್ಮ ತಮ್ಮ ಊರುಗಳಿಗೆ ಹೋಗಿ ಬರುತ್ತಿಲಿದ್ದರು.


🌷 ಶರೀಫ ಸಾಹೇಬರ ಆಗಮನ 🌺


ಕೈಲಾಸದಲ್ಲಿ ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ, ಸಾಯುಜ್ಯ ಪದವಿಗಳ ಪ್ರಮಥ ಗಣಂಗಳ ಮಧ್ಯದಲ್ಲಿ ಪರಶಿವನು ಶೋಭಿಸುವಂತೆ, ಶ್ರೀಗಳ ಮಠದಲ್ಲಿ ಸಾಲೋಕ್ಯ ಅಂದರೆ ಹುಬ್ಬಳ್ಳಿ ಪುರವಾಸಿ ಭಕ್ತವೃಂದ, ಸಾಮಿಪ್ಯ ಅಂದರೆ ಮಠದ ರಹವಾಸಿ ಭಕ್ತವೃಂದ, ಸಾರೂಪ್ಯ ಅಂದರೆ  ಸನ್ಯಾಸಿ ವೃಂದ, ಸಾಯುಜ್ಯ ಅಂದರೆ ಮಹಾತ್ಮರ ವೃಂದ ಇವರೆಲ್ಲ ಪ್ರಮಥಗಣಂಗಳ ಮಧ್ಯದಲ್ಲಿ ಅಗ್ರಪೀಠದಲ್ಲಿ ವಿರಾಜಮಾನರಾದ ಸಿದ್ಧಾರೂಢ ಸ್ವಾಮಿಗಳು ಉಪನಿಷತ್ತಿನ ಕುರಿತು ಬೋಧ ಮಾಡುತ್ತಿರುವಾಗ, ಒಂದಾನೊಂದು ದಿನ ಸಾಧು ಶರೀಫ್ ಸಾಹೇಬರು ಆಗಮಿಸಿದರು. ಅಲ್ಲಿಯ  ಸುಂದರವಾದ ಹೂವಿನ ತೋಟದಲ್ಲಿ ಹೊಕ್ಕು ನಾಲ್ಕೈದು  ಪರಿಮಳದ ಹೂವುಗಳನ್ನು ಹರಿದುಕೊಂಡರು. ತೋಟವನ್ನು ಕಾಯುವಾತನು ಅಲ್ಲಿಗೆ ಧಾವಿಸಿ ಶರೀಫರನ್ನು ಕುರಿತು ಅಯ್ಯಾ ಮಹನೀಯರೇ, ಅಗಾಧ ಸುವಾಸನೆಯನ್ನು ಬೀರಿ, ಮನಸ್ಸಿಗೆ ಆಹ್ಲಾದವನ್ನು ಬೀರುವ ಹೂವುಗಳ ಪರಿಮಳವನ್ನು ಫ್ರಾಣಿಸಿ ಆನಂದಪಡುವುದನ್ನು ಬಿಟ್ಟು, ಒಂದು ನಿಮಿಷದಲ್ಲಿ ಬಾಡವು ಹೂವುಗಳನ್ನು ಕಿತ್ತುಕೊಂಡ ನನಗೆ ಶೋಭೆಯೆ? ನಿಮ್ಮ ವಿವೇಕಕ್ಕೆ ಇದು ಸರಿಯೇ ಎಂದು ಪ್ರಶ್ನಿಸಿದನು. ಆಗ ಶರೀಫ್ ಸಾಹೇಬರು ಉತ್ತರಿಸುತ್ತಾ ಸರಿ ಸರಿ ಆರೂಢನೆಂದು ಖ್ಯಾತಿವೆತ್ತವರಿಗೂ ಅವನ  ಶಿಷ್ಯರಾದ ನಿಮಗೂ ಇಂತಹ ಆಶೆಯಿರಲು ಉಳಿದವರ ಪಾಡೇನು? ಭೋಗದ್ರವ್ಯಗಳೆಲ್ಲ ಭೋಗಿಗಳ ಭೋಗಕ್ಕಲ್ಲದೆ  ತಾವುಗಳು ತ್ಯಾಗಿಗಳು ನಿಮ್ಮ ಭೋಗಕ್ಕೆ ಇವು  ಅಲ್ಲ ಅಂತ ನುಡಿದದನ್ನು ಕೇಳಿ ಸಿದ್ಧಾರೂಢರು  ಸುಮ್ಮನಿದ್ದರು. ಭಕ್ತರೆಲ್ಲರೂ ಶಾಸ್ತ್ರ ಶ್ರವಣಕ್ಕಾಗಿ  ಕುಳಿತುಕೊಂಡರು.




ಆಗ ಸಿದ್ಧಾರೂಢರು ಭಕ್ತರನ್ನು ಕುರಿತು, 


ಹೇ ಭಕ್ತರೆ ಸಗುಣನಾದ ಈಶ್ವರನು ಕಲ್ಪಿತನು. ಅವನು ಸೃಷ್ಟಿಸಿದ ಈ ಧರೆಯು ಕಲ್ಪಿತವು, ಈ ಧರೆಯಲ್ಲಿಯ  ಚರಾಚರಗಳೆಲ್ಲ ಕಲ್ಪತವು, ಭವಿಗಳು ಭಕ್ತರು ಭವರಹಿತ ಮಹಾತ್ಮರು ಕಲ್ಪತರು. ಇವೆಲ್ಲ ಮನಸ್ಸಿನ ಕಲ್ಪನೆಯಲ್ಲಿ ತೋರಿ ಅಡಗಿರುವುದರಿಂದ ಅದು ಮನೋಧರ್ಮವಾಗಿದೆ. ವಸ್ತು ಸ್ಥಿತಿ ಹೀಗಿರುವುದರಿಂದ ನಾನು ಅದರ ಸಂಗವಿಲ್ಲದೆ ಚೈತನ್ಯರೂಪದಿಂದ ಸಾಕ್ಷಿಕನಾಗಿರುವೆ. ಅದು ಹೇಗೆ ಅಂತ ಕೇಳಲು ಬೇರೆಯವರಿಗಾದ  ಹರುಷ ಖೇದಾದಿಗಳು ನನ್ನ ಅನುಭವಕ್ಕೆ ಬಾರದಂತೆ, ನನ್ನ ಮನಸ್ಸಿನ ಖೇದ ಮೋಹಾದಿಗಳು ವಿಚಾರಿಸಲು ನನಗೆ ಇರುವುದಿಲ್ಲ. ಪರಮ ತ್ಯಾಗಿಯೆನಿಸಿಕೊಂಡು ಹೂವುಗಳ ಆಸೆಯಿಂದ ನೀನೇ ಹರಿದುಕೊಂಡು ಆಶಾಯುಕ್ತ ಭೋಗಿಗಳ ಒಡೆಯುವುದನ್ನು ಮರೆತು, ನೀನು ಎರಡನೆಯವರಿಗೆ ಆಶೆಯುಳ್ಳವರೆಂದು ಅನ್ನಬಹುದೆ ಎಂದು ನುಡಿದರು. ಅದಕ್ಕೆ ಶರೀಫರು ನೀನು ಜಗದೊಡೆಯನು. ಸತ್ಯ, ಸತ್ತು, ಚಿತ್ತು, ಆನಂದ ಇವು ಆತ್ಮನಲ್ಲಿ ಹೇಗೆ ಇರುವವು ಎಂದು ಪ್ರಶ್ನಿಸಿದರು.

ಆಗ ಸಿದ್ದಾರೂಢರು, ಹೇ ಶರೀಫಾ ಕೇಳು, ಭೂತ, ಭವಿಷ್ಯತ್, ವರ್ತಮಾನ ಈ ಮೂರು ಕಾಲಗಳಲ್ಲಿ ಅಬಾಧಿತನಾಗಿರುವುದರಿಂದ ಆತ್ಮನು ಸದ್ರೂಪನಾಗಿದ್ದಾನೆ. ಸರ್ವ ಜಗತ್ತನ್ನು ಪ್ರಕಾಶಿಸುವುದರಿಂದ ಚಿದ್ರೂಪನಾಗಿದ್ದಾನೆ. ಪರಮಪ್ರೀತಿಗೆ ಪಾತ್ರನಾಗಿರುವುದರಿಂದ ಸದಾ ಆನಂದದಲ್ಲಿರುವುದರಿಂದ ಸಚ್ಚಿದಾನಂದ

ರೂಪನಾಗಿದ್ದಾನೆ ಅಂತಾ ವಿವರಿಸಿದರು. ಶ್ರೀಗಳ ಬೋಧಾಮೃತಪಾನದಿಂದ ಹರ್ಷೋಲ್ಲಾಸಗಳಿಂದ ಶರೀಫ ಸಾಹೇಬರು ಶ್ರೀಗಳನ್ನು ಕುರಿತು ಒಂದು ಪದ್ಯವನ್ನು ತತ್ ಕ್ಷಣವೇ ರಚನೆ ಮಾಡಿ ಸಾಧು ನೋಡಲೋ ಪರಮ ನಿವನೇ  ಸಾಧು ನೋಡಲೋ ಅಂತಾ ಹಾಡತೊಡಗಿದರು. ಅದನ್ನು ಕಂಡು ಶ್ರೀಗಳು ಈತನು ಪ್ರಸಾದಿಕ ವರಕವಿ ಅಂತಾ ಪ್ರಶಂಸಿಸಿದರು. ನಂತರ ಆನಂದಭರಿತರಾದ ಶರೀಫರು ತಾನು ಗುರುಕೃಪೆಯಿಂದ ಮಾಡಿದ ದೇವಿ ಉಪಾಸನೆಯು ಫಲಿಸಿತು ಅಂತ ಭಾವಿಸಿ, ಶ್ರೀಗಳಿಗೆ ಎರಡು ತೆಂಗಿನ ಕಾಯಿಗಳನ್ನು ಅರ್ಪಿಸಿ ನನಗೆ ಆಶೀರ್ವಾದ ಮಾಡಿರಿ, ಈ ಆಶೀರ್ವಾದ ರೂಪವಾಗಿ ಕೆಡುವ ಶರೀರವೆಂಬ ಈ ಕಾಯದ ಒಳಹೊರಗೂ ಏನೂ ಇರದೆ ಚಿತಾಕಾಶದಲ್ಲಿ

ತಾನೇ ತಾನಾಗಿ ಹೊಳೆಯುವಂತೆ ಈ ತೆಂಗಿನಕಾಯಿ ಒಳಗಿರುವ ನೀರು ಕೊಬ್ಬರಿಗಳೆರಡೂ ಇರುದಂತೆ  ಮಾಡಿ ಕೇವಲ ಬುರುಡಿಯನ್ನಷ್ಟೇ ದಯಪಾಲಿಸಬೇಕು ಅಂತಾ ಪ್ರಾರ್ಥಿಸಿದರು. ಆಗ ಸಿದ್ದಾರೂಢರು ಆತನನ್ನು ಕುರಿತು, ಕೇ ಶರೀಫನೇ  ನೀನು ಕೇಳಿದ್ದು ಒಂದು ಕ್ಷುಲ್ಲಕ ಕಾರ್ಯವಾಗಿದೆ. ವಿಚಾರಹೀನರಾದ  ಜಾದೂಗಾರರು ಮಾಡಿ ತೋರಿಸುವ ಕಾರ್ಯವಾಗಿದೆ. ಜ್ಞಾನಿಗಳಾದ ಮಹಾತ್ಮನು  ತಮ್ಮ ಮಹಿಮೆಯನ್ನು ಇಂತಹ ಸಣ್ಣ ಪುಟ್ಟ ಕಾರ್ಯಗಳಿಗೆ ಉಪಯೋಗಿಸಲಾರರು, ಅದು ಹಾಗಿರಲಿ ಬಿಡು. ನಿಮ್ಮ ಸದ್ಗುರುಗಳಾದ ಗೋವಿಂದಭಟ್ಟರಿಗೆ  ಪ್ರಾಪ್ತಿಯಾದ ದೇವಿ ಉಪಾಸನೆಯ ಸಿದ್ದಿಯನ್ನು ಪ್ರಕಟಿಸಲು ನೀನೇ ಪರಮ ಯೋಗ್ಯವಾಗಿರುವಿ. ನೀನು ಈಗ ಹೇಳಿದ್ದನ್ನು ಮಾಡಿ ತೋರಿಸಲು  ನಿಮ್ಮ ಗುರುಗಳ ಕೀರ್ತಿಯು ಪ್ರಸಾರವಾಗುವುದು ಅಂತ ಸಲಹೆ ಮಾಡಿದರು. ಅದಕ್ಕೆ ಕೂಡಲೇ ಶರೀಫರು ಅಲ್ಲಿದ್ದ ತೆಂಗಿನಕಾಯಿಯನ್ನು ತೆಗೆದುಕೊಂಡು ಘ್ರಾಣಿಸಿ ಭೂಮಿಗೆ ಒಗೆದರು, ಅದು ಒಡೆದು ಚಿಪ್ಪುಗಳ ಪುಡಿಯಾಯಿತು. ಅದರಲ್ಲಿ ನೀರು ವ ಕೊಬ್ಬರಿ ಇದ್ದಿಲ್ಲ. ಇನ್ನೊಂದು ತೆಂಗಿನಕಾಯಿಯನ್ನು ಕೈಯಲ್ಲಿ ತೆಗೆದುಕೊಂಡು ಕೂಡಲೇ ಅದು ಅದೃಶ್ಯವಾಯಿತು. ಕೂಡಿದವರೆಲ್ಲರೂ ನೋಡಿ ಆಶ್ಚರ್ಯಚಕಿತರಾಗಿ ಇದು ಗುರು ಶಿಷ್ಯರ ಮಹಿಮೆ ಅಂತಾ ಕೊಂಡಾಡತೊಡಗಿದರು. ನಂತರ ಈ ಎರಡೂ ಘಟನೆಗಳ ರಹಸ್ಯವನ್ನು ತಿಳಿಸಬೇಕೆಂದು ಭಕ್ತರು ಸಿದ್ದಾರೂಢರಲ್ಲಿ ಪ್ರಾರ್ಥಿಸಿದರು.


ಆಗ ಸಿದ್ದಾರೂಢರು, ಭಕ್ಕರೆ ಏಕಚಿತ್ತದಿಂದ ಕೇಳಿರಿ ತೆಂಗಿನಕಾಯಿಯಲ್ಲಿಯ ಕೊಬ್ಬರಿ, ನೀರು ಅಂದರೆ ಈ ದೇಹವೆಂಬ ಕಾಯದಲ್ಲಿ ಅಹಂಕಾರ ಮಮಕಾರಗಳು. ಸಂಶಯ ರಹಿತವಾಗಿ ಸದ್ಗುರುಗಳಿಂದ ಬೋಧಾಮೃತಪಾನ ಮಾಡಿದ ಭಕ್ತನು, ಅಷ್ಟಾಂಗ ಸಾಧನೆಗಳಿಂದ ಅಹಂಕಾರ ಮಮಕಾರ ಭ್ರಾಂತಿಗಳನ್ನು ಹೋಗಲಾಡಿಸಲುವುದೇ ಘ್ರಾಣಿಸಿದಂತೆ, ಇದರಿಂದ ಶಿವ ಜೀವರ ಐಕ್ಯತೆಯ ಅದ್ವೈತವನ್ನು ಸ್ಥಿರಗೊಳಿಸುವುದೇ ಕಾಯಿಯನ್ನು ಓಡೆದಂತೆ ಮತ್ತು ಇನ್ನೊಂದು ತೆಂಗಿನಕಾಯಿಯು ಅದೃಶ್ಯ ವಾಗಿರುವುದರ ರಹಸ್ಯವೇನೆಂದರೆ ಈ ದೇಹವು ಪೂರ್ವದಲ್ಲಿಯೂ  ಇದ್ದಿಲ್ಲ. ಭವಿಪತ್ತಿನಲ್ಲೂ ಇರಲಾರದು. ವರ್ತಮಾನ ಅಂದರೆ ಮಧ್ಯದಲ್ಲಿ ತೋರಿ, ಕೆಲ ಕಾಲ ಇದ್ದು ಅಡಗುವ ಈ ದೇಹ ಆತ್ಮವಲ್ಲ. ಇದು ಆತ್ಮದಲ್ಲಿ ಅತ್ಯಂತ ಅಭಾವವು ಎಂಬುದನ್ನು ಸ್ಥಿರತೆಗೊಳಿಸುವುದೇ ಕಾಯಿಯು  ಅದೃಶ್ಯವಾದಂತೆ ಎಂದು ವಿವರಿಸಿದರು. ಈ ರಹಸ್ಯವನ್ನು ಕೇಳಿ  ಹರ್ಷಗೊಂಡು ಸಿದ್ಧಚರಣಗಳಲ್ಲಿ ವಂದನೆಗಳನ್ನು ಅರ್ಪಿಸಿದರು.

👇👇👇👇

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಜಮಖಂಡಿ ಅಪ್ಪಾಸಾಹೇಬರು ಬಂದು ಮಠಕ್ಕೆ ರಸ್ತೆ ಮಾಡಿಸಿದ್ದು

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ