ತವಕದ ಬಾಳಯ್ಯನಿಗೆ ಶ್ರೀ ಸಿದ್ಧಾರೂಢರು ಶಾಂತಿ ತೋರಿಸಿದ ಕಥೆ

 🕉️ ತವಕದ ಬಾಳಯ್ಯನಿಗೆ ಶ್ರೀ ಸಿದ್ಧಾರೂಢರು ಶಾಂತಿ ತೋರಿಸಿದ್ದು🌷



ಒಮ್ಮೆ ಸಿದ್ಧಾಶ್ರಮದಲ್ಲಿ ಸಿದ್ದಾರೂಢರು ಅನೇಕ ಭಕ್ತ ಮುಮುಕ್ಷು ಜನರೊಂದಿಗೆ ಬೋಧ ಬೋಧಕತ್ವದಿಂದ ಇರುತಿರಲಿಕ್ಕೆ ಒಂದು ದಿವಸ ತವಗ ಗ್ರಾಮದಿಂದ ಬಾಳಯ್ಯ  ವೇದ ಪಾಂಡಿತ್ಯ ಯೋಗ ಅಭ್ಯಾಸದಿಂದ ಆತ್ಮಸಂಯಮನಾಗಿ ಉನ್ಮತ್ತತೆಯಿಂದ ಕೂಡಿಕೊಂಡು ಹುಬ್ಬಳ್ಳಿ ಸಿದ್ಧಾಶ್ರಮಕ್ಕೆ ಬಂದರು. ಅಷ್ಟರಲ್ಲಿ ಸಿದ್ದ ಗುರುಗಳು ತಮ್ಮ ಶಯ್ಯಾಸನದ ತಲೆದಿಂಬಿನ ಬುಡದಲ್ಲಿ ಶ್ರೇಷ್ಠವಾದ ೧೦ ಉಪನಿಷತ್ ಗಳನ್ನು ಇಟ್ಟುಕೊಂಡಿದ್ದರು. ಸಂಶಯಗ್ರಸ್ತ ಮುಮುಕ್ಷುಗಳಿಗೆ  ಆ ಗ್ರಂಥವನ್ನು ಅವರ ಕಡೆಯಿಂದ ಓದಿಸಿ ಅವರ ಸಂಶಯಗಳನ್ನು ನಿವಾರಿಸಿ ಕಳಿಸಿಕೊಡುತ್ತಿದ್ದರು. ಈ ಉನ್ಮತ್ತ ಅವಸ್ಥೆಯಿಂದ ಬಂದ ಬಾಳಯ್ಯನು ಸಿದ್ಧಾರೂಢರ ಶಯನದ  ಆಸನದಲ್ಲಿದ್ದ ಉಪನಿಷತ್‌ಗಳನ್ನು ಕೈಯಲ್ಲಿ ತೆಗೆದುಕೊಂಡವನೇ ಎಲೋ ಸಿದ್ಧಾ, ಈ ಗ್ರಂಥಗಳೆಂಬ ದನಗಳ ಉಪಾಧಿಯು  ನಿನಗೇಕೋ ಎಂದು, ಆ ಹತ್ತು ಉಪನಿಷತ್ ಗಳನ್ನು ಪರಪರನೆ ಹರಿದು ಹಾಕಿದನು.ಆಗ  ಸಿದ್ದರು ಕುಲುಕುಲು ನಗಲಿಕ್ಕೆ ಹತ್ತಿದರು. ಮತ್ತೆ ವಿಶಾಲವಾದ ದೊಡ್ಡ ಅಡಿಗೆಮನೆ ಪಾಕಶಾಲೆಯ  ತುಂಬಾ ಬೂಟುಗಾಲಿನಿಂದ ಅಡ್ಡಾಡಲಿಕ್ಕೆ ಹತ್ತಿದನು. ಆಗ ಆಶ್ರಮದ ಪಾಕಶಾಲೆಯ ಸಾಧುಗಳು ಬಂದು ಸಿದ್ಧಾರೂಢರಿಗೆ ಬಾಳಯ್ಯನು ಬೂಟುಗಾಲಿನಿಂದ ಪಾಕಶಾಲೆಯಲ್ಲಿ ಅಡ್ಡಾಡಲಿಕ್ಕೆ ಹತ್ತಿದ್ದಾನೆ ಎಂದು ಹೇಳಲು, ಆಗ ಸಿದ್ಧರು ಸುಮ್ಮನೆ ಇರಿಯೆಂದು  ಕೈಸನ್ನೆ ಮಾಡಿದರು. ಸಾಧುಗಳು ಸ್ತಬ್ದ  ಉಳಿದುಕೊಳ್ಳಲು ಬಾಳಯ್ಯನು ಶ್ರೀ ಸಿದ್ಧಾರೂಢರ ಅಖಂಡ ಬ್ರಹ್ಮಾನಂದ ಸಹಜಸ್ಥಿತಿಯನ್ನು ಕಂಡು ಇಂಥಾ ಶಾಂತಸ್ಥಿತಿ ಸ್ಥಿತಪ್ರಜ್ಞನನ್ನು ನಾನೆಂದೂ  ನೋಡಲಿಲ್ಲವೆಂದು ಅರಿತು ಆಶ್ಚರ್ಯವುಳ್ಳವನಾಗಿದ್ದನು. ಈ ತನ್ನ ವರ್ತನೆಯಿಂದ ಕೋಪಗೋಳದ  ಸಿದ್ಧಾರೂಢರ ಪಾದಾರವಿಂದಗಳಲ್ಲಿ ಬಾಳಯ್ಯನು ವಂದನೆಗಳನ್ನರ್ಪಿಸುತ್ತಾ ಈತನಲ್ಲಿಯ  ಸ್ಥಿತಪ್ರಜ್ಞತೆ ಭಕ್ತರಿಗೆ ತಿಳಿಯಲೋಸುಗವೇ ಈ ಪ್ರಕಾರ ತಾನು ಮಾಡಿರುವುದಾಗಿ ಹೇಳಿದರು. ಅಲ್ಲಿಂದ ದೇಹ ಬಿಡುವವರೆಗೂ ಮಠಕ್ಕೆ  ಬಂದಾಗ ಹುಬ್ಬಳ್ಳಿ ನಡು ಊರಲ್ಲಿಯೇ  ಪಾದರಕ್ಷೆಯನ್ನು ಕಳೆದು ಸಿದ್ಧ ಸದ್ಗುರು ದರ್ಶನಕ್ಕೆ ಬರಲಿಕ್ಕೆ ಹತ್ತಿದನು ಮತ್ತು ತಾನು ಇದ್ದಲ್ಲಿಯೇ ಸಿದ್ದರ ಸ್ಥಿತಿಯನ್ನು ಅವರ ಮಹಿಮೆಯನ್ನು ಭಕ್ತರಿಗೆಲ್ಲ ಹೇಳಲಿಕ್ಕೆ ಹತ್ತಿದನು. ಗುರುಮಹಿಮೆ ಅಪಾರವಾದುದು.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಗೋಪನಕೊಪ್ಪದ ಶ್ರೀ ಸಿದ್ದವೀರಸ್ವಾಮಿಗಳು,

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ