ಹಸಿವುನಿಂದ ಸತ್ತ ಮಕ್ಕಳ ದುಃಖದಿಂದ ಭಾವಿಯೊಳಗೆ ಗುರವ್ವ ಹಾರುವಾಗ ಸಿದ್ಧಾರೂಢರು ಬಂದು ಬಿಡಿಸಿ ಅವರನ್ನು ಆಶೀರ್ವಾದಿಸಿ ಶ್ರೀಮಂತರನ್ನ ಆಗಿ ಮಾಡಿದರು

 🍂ಗುರವ್ವಾ ಎಂಬವಳ ಮಕ್ಕಳು ಅನ್ನವಿಲ್ಲದೆ ಸತ್ತ ದುಃಖದಿಂದ ಬಾವಿಯೊಳಗೆ ಹಾರುವಾಗ, ಸದ್ಗುರುವು ಬಂದು ಬಿಡಿಸಿ, ಅವರನ್ನು ಆಶೀರ್ವಾದಿಸಿ  ಶ್ರೀಮಂತನ್ನಾಗಿ ಮಾಡಿದನು.



ಹುಬ್ಬಳ್ಳಿಯೊಳಗೆ ಬಸವಣ್ಣನೆಂಬ ಗೃಹಸ್ಥರು ಇರುತ್ತಿದ್ದನು. ಅವನಿಗೆ ಗುರವ್ವಾ ಎಂಬಾಕೆ ಹೆಂಡತಿ ಮತ್ತು ಇಬ್ಬರು ಗಂಡು, ಇಬ್ಬರು ಹೆಣ್ಣು ಹೀಗೆ ನಾಲ್ಕು ಮಂದಿ ಮಕ್ಕಳು ಇದ್ದವು. ಇವರನ್ನು ಕೂಡಿಕೊಂಡು ಬಸವಣ್ಣನು ಬಹು ದರಿದ್ರ ಸ್ಥಿತಿಯಲ್ಲಿದ್ದು  ಕಾಲಕ್ಷೇಪ ಮಾಡುತ್ತಿದ್ದರು. ಅವನ ಜೀವಿಕಾವೃತ್ತಿಯು ಏನೋ ನಿಮಿತ್ಯದಿಂದ ತಪ್ಪಿತು, ಮತ್ತು ಎರಡನೇಯದು ಸಿಗಲಿಲ್ಲ. ಇದರಿಂದ ಅವರು ಬಹು ದುಃಖದಿಂದ ಪೀಡಿತರಾಗಿದ್ದರು, ಮತ್ತು ಅದೇ ಸಮಯದಲ್ಲಿ ಕ್ಷಾಮ ಕಾಲವೂ ಬಂತು. ಏನೋ ಸ್ವಲ್ಪ ಧನವಿದ್ದದ್ದು ಅದು ಪೂರಾ ಅನ್ನದ ಸಲುವಾಗಿ ಖರ್ಚಾಯಿತು. ಆಮೇಲೆ ಮನೆಯೊಳಗಿದ್ದ ಎಲ್ಲಾ ಸಾಮಾನು ಮಾರಿಕೊಂಡು ಮೂರು ದಿವಸ ಸಾಗಿಸಿದರು. ಅನಂತರ ಒಂದು ದಿನ ಮನೆಯಲ್ಲಿ

ಮಂದಿಯ ಹೊರತು ಮತ್ತೇನೇನೂ ಇಲ್ಲದೆ, ಬಸವಣ್ಣನು ಊರೆಲ್ಲಾ ತಿರುಗಿ ಬಂದರೂ, ಒಂದು ಹಿಡಿಯಷ್ಟಾದರೂ ಧಾನ್ಯವು ಸಿಗಲಿಲ್ಲ, ನಗರದಲ್ಲೆಲ್ಲಾ ತಿರುಗಿ, ಬಸವಣ್ಣನು  ಮನೆಗೆ ಬರುವುದನ್ನು ನೋಡಿ, ಆ ಕ್ಷಣದಲ್ಲಿ ಮಕ್ಕಳು ಓಡಿ ಬಂದು, ಅವನಿಗೆ ತೆಕ್ಕೆ ಹಾಕಿ, ತಿನ್ನಲಿಕ್ಕೆ ಕೊಡು ಎಂದು ಬೇಡತೊಡಗಿದವು. "ಅಪ್ಪಾ ನಮಗೆ ಬಹಳ ಹಸಿವೆಯಾಗಿದೆ. ನಾವು ಉಪವಾಸ ಸಾಯುವದೇನು ?' ಇದನ್ನು ಕೇಳಿದ ಆ ತಾಯಿ ತಂದೆಗಳು ದುಃಖದಿಂದ ಕಣ್ಣೀರು ಸುರಿಸುವಂಥವರಾದರು. ಇಷ್ಟು ಸಂಕಷ್ಟ ಪ್ರಾಪ್ತವಾದರೂ ಎರಡನೇಯವರ ಬಾಗಿಲಲ್ಲಿ ನಿಂತು ಭಿಕ್ಷೆ ಬೇಡಲಿಕ್ಕೆ ನಾಚಿತ್ತಿದ್ದರು. ಯಾಕೆಂದರೆ “ದೇವರು ನಮಗೇನು ಕೊಡಲಿಲ್ಲ. ಹೀಗಿದ್ದು ಪರರಿಗೆ ಯಾತಕ್ಕೆ ನಾವು ಕಷ್ಟ ಕೊಡಬೇಕು. ನಾವು ದುಃಖ ಭೋಗಿಸಲಿಕ್ಕೆ ಸಂಸಾರಕ್ಕೆ ಬಂದಿರುತ್ತೇವೆ. ಅದು ನಮಗೆ ಹ್ಯಾಗೆ ತಪ್ಪಿತು.'' ಅನ್ನುವರು. ಹುಡುಗರಿಗೆ ಸಹಾ, ಏನೇನು ಆಹಾರವಿಲ್ಲದೆ  ಎರಡು ದಿವಸಗಳಾದವು. ಎರಡನೇ ದಿವಸ ಆ ತಾಯಿ ತಂದೆಗಳಿಗೆ ಅತ್ಯಂತ ದುಃಖವು ಪ್ರಾಪ್ತ ವಾಯಿತು. ಒಬ್ಬ ಹುಡುಗ ಮತ್ತು ಒಂದು ಹುಡುಗಿಯು ಅನ್ನ ಅನ್ನವೆಂತ ಕೂಗುತ್ತಾ ಪ್ರಾಣ ಬಿಟ್ಟವು, ಇದನ್ನು ನೋಡಿ ಅವರ ತಾಯಿಯಾದರೂ ಶೋಕಾರ್ಣವದಲ್ಲಿ ಮುಳುಗಿ, ಅವರಿಗೆ ಏನೂ ವಿಚಾರ ಸೂಚಿಸದಂತಾಯಿತು, ಸತ್ತವರ ಅಂತ್ಯ ಕ್ರಿಯೆ ಮಾಡುವದರ ಸಲುವಾಗಿ ಬಸವಣ್ಣನು ಹೋದನು. ಇತ್ತ ಉಳಿದ ಎರಡು ಮಕ್ಕಳು ಮಲಗಿದ್ದನ್ನು ನೋಡಿ, ಗುರವ್ವಾ ಹೊರಗೆ ಬಂದಳು. ಆಕೆಯ  ಮನಸ್ಸು ದುಃಖ ಸಂಬಂಧ ಭ್ರಮೆಯಿಂದ ಪೂರ್ಣ ವ್ಯಾಪಿಸಿದ್ದು ಆಕೆಯನ್ನು ತಡೆಯಲಿಕ್ಕೆ ಯಾರೂ ಇಲ್ಲದೆ ಹೋಗಿ, ಒಂದು ಬಾವಿಯ ಸಮೀಪ ಬಂದಳು. ಆಕೆಯ ಬುದ್ಧಿಯು  ಭ್ರಮಣವಾಗಿತ್ತು. ಆಕೆಯ ಗಂಡನು ಅಷ್ಟರಲ್ಲಿ ಸತ್ತ  ಹುಡುಗರ ಅಂತ್ಯಕ್ರಿಯೆಯನ್ನು ತೀರಿಸಿ ಮನೆಗೆ ಬಂದು ನೋಡುವಾಗ, ಗೃಹದೊಳಗೆ ಗೃಹಿಣಿಯು ಎಲ್ಲಿಯೂ ಕಾಣಲಿಲ್ಲ, ಮತ್ತು ಎರಡು ಹುಡುಗರು ಆಳುತ್ತಿದ್ದವು. ಆಗ ಆ ಹುಡುಗರನ್ನು ತೆಗೆದುಕೊಂಡು ಬಸವಣ್ಣನು ಹೊರಗೆ ಬಂದು ಅತ್ತಿತ್ತ ಹುಡುಕುತ್ತಿರುವಾಗ್ಗೆ, ತನ್ನ ಪತ್ನಿಯನ್ನು ದೂರದಿಂದ ಕಾಣುವಂಥವನಾದನು. ಆಕೆಯು ಒಂದು ಭಾವಿಯ ಕಟ್ಟೆಯ ಮೇಲೆ ಹತ್ತಿ, ಭಾವಿಯೊಳಗೆ ಹಾರಲು ಸಿದ್ದಳಾದಳು. ಆ ಕ್ಷಣವೇ ಅಕಸ್ಮಾತ್ತಾಗಿ ಒಬ್ಬ ಸಾಧುವು ಪ್ರಾಪ್ತನಾಗಿ, ಆಕೆಗೆ  ಹಿಡಿದು ಜಗ್ಗಿ ಕೆಳಗಿಳಿಸಿದನು. ಆಕೆಯು ದುಃಖದಿಂದ ತಳಮಳಿಸಿ ತತ್ಕಾಲವೇ ಮೂರ್ಛಾಗತಳಾಗಿ ಬಿದ್ದಳು. ಆಗ ಇದನ್ನೆಲ್ಲಾ ನೋಡಿ ಬಸವಣ್ಣನು ಅಲ್ಲಿಗೆ ಓಡಿ ಬಂದು, ನೋಡುವಾಗ, ಆಕೆಯು ಮೃತಪ್ರಾಯಳಾಗಿ ಬಿದ್ದಿರುವಳು. ಆ ಸಾಧುವು  ಕೃಪಾದೃಷ್ಟಿ ಯಿಂದ ನೋಡಿದ ಮಾತ್ರದಿಂದ ಆಕೆಯು  ಎದ್ದುಕೂತಳು, ಮತ್ತು ಮೃತವಾದ ತನ್ನ ಇಬ್ಬರು ಮಕ್ಕಳ ನೆನಪು ಮಾಡಿ ಆಳಲಿಕ್ಕೆ ಆರಂಭಿಸಿದಳು - 'ತಿನ್ನಲಿಕ್ಕೆ ಏನು ಇಲ್ಲದೆ  ಎರಡು ಸತ್ತವು. ಇವೆರಡು ಸಾಯಲಿಕ್ಕೆ ತಯಾರಾಗಿವೆ. ನನ್ನಿಂದ ಇದು ನೋಡೊಣ ಆಗುವದಿಲ್ಲವೆಂದು ನಾನು ಜೀವ ಕೊಡುವೆನು", ಹೀಗೆ ಅಂದು ಪುನಃ ಎದ್ದಳು. ಆಗ್ಗೆ ಸಾಧುವು  ಮುಂದೆ ಬಂದು, ತನ್ನ ಬೆರಳಿನಿಂದ ಆಕೆಯ ಹಣೆಗೆ ಸ್ಪರ್ಷಿಸಿದ ಕೂಡಲೇ, ಆಕೆಯು ಎಲ್ಲಾ ದುಃಖವನ್ನು ಮರೆತುಬಿಟ್ಟಳು. ಬಸವಣ್ಣನು ಆಕೆಗೆ ಕೈಹಿಡಿದು, ಮನೆಗೆ ಕರೆದುಕೊಂಡು ಹೊಗುವಾಗ ಆ ಸಾಧುವಿನ ಉಪಕಾರವನ್ನು ನೆನಸಿ, ಆತನನ್ನು ತನ್ನ ಮನೆಗೆ ಬರಲಿಕ್ಕೆ ಪ್ರಾರ್ಥಿಸುವಂಥವನಾದನು. ಹುಡುಗರನ್ನು ಕೂಡಿಕೊಂಡು ಎಲ್ಲರೂ ಮನೆಗೆ ಬಂದರು. ಮತ್ತು ಸಾಧುವಿಗೆ ಒಂದು ಆಸನವನ್ನು ಕೊಟ್ಟು ಕೂಡ್ರಿಸಿ,  ಸರ್ವರೂ ಆತನಿಗೆ ನಮನ ಮಾಡಿದರು. ಆದರೆ ಆತನಿಗೆ ಪೂಜಿಸುವದಕ್ಕೆ ಬೇಕಾದ ಸಾಮಾನು ಮನೆಯೊಳಗಿರಲಿಲ್ಲ. ಆಗ ಬಸವಣ್ಣನು ಅನ್ನುತ್ತಾನೆ - ''ಮಹಾಸ್ವಾಮಿ, ನಮ್ಮ ಪೂರ್ವ ಪುಣ್ಯದಿಂದ, ನೀವು ನಮ್ಮನ್ನು ರಕ್ಷಿಸುವದಕ್ಕಾಗಿ ಬಂದಿರಿ. ಆದರೆ ನಾವು ಈ ಸಮಯದಲ್ಲಿ ಬಹಳ ದುರ್ಭಾಗಿಗಳಾಗಿದ್ದೇವೆ. ಮಹಾತ್ಮರಾದ ನಿಮ್ಮನ್ನು ಪೂಜಿಸಿ, ನೈವೇದ್ಯ ಮುಂದಿಡಲಿಕ್ಕೆ ಮನೆಯೊಳಗೆ ಏನೂ ಇರುವದಿಲ್ಲ”, ಆಗ ಸಾಧುವು ಬಸವಣ್ಣನನ್ನು ಕುರಿತು - 'ನನಗೆ ಬಹಳ ಹಸಿವೆಯಾಗಿರುತ್ತದೆ. ಏನಾದರೂ ಭಕ್ಷ್ಯವನು ಕೊಡು” ಎಂದು ಹೇಳಿದ್ದು ಕೇಳಿ, ಬಸವಣ್ಣನಿಗೆ ದುಃಖದಿಂದ ಕಣ್ಣೊಳಗೆ ನೀರು ಬಂತು. ಆಗ ಸಾಧುವಿಗೆ, ಆತನು ತನ್ನ ಗೃಹದೊಳಗಿನ ದುರವಸ್ಥೆಯನ್ನು ಪೂರ್ಣವಾಗಿ ತಿಳಿಸಿದನು . ಅದಕ್ಕೆ ಸಾಧು ಅನ್ನುತ್ತಾನೆ- ನೋಡು, ನಿನ್ನ ಪೆಟ್ಟಿಗೆಯಲ್ಲಿ ಏನಾದರೂ ರೊಕ್ಕ ಇರಬಹುದು. ಅದನ್ನು ತೆಗೆದುಕೊಂಡು ಬಾ." ಬಸವಣ್ಣನು ಮನಸ್ಸಿನಲ್ಲಿ ಅಂದುಕೊಂಡನು - ರೊಕ್ಕ ಏನೇನು ಇಲ್ಲ, ಆದರೂ ನೋಡಿ ಬರುವನೆಂದು ಒಳಗೆ ಹೋಗಿ ಪೆಟ್ಟಿಗೆಯೊಳಗೆ ನೋಡಿದಾಗ, ಅಲ್ಲಿ ಒಂದೇ ದುಡ್ಡನ್ನು ಕಂಡನು. ಆ ದುಡ್ಡು ತೆಗೆದುಕೊಂಡು ಬಂದು ಸಾಧುವಿನ ಕೈಯಲ್ಲಿ ಕೊಟ್ಟನು. ಸಾಧುವಾದರೂ, ಅದನ್ನು ಬಸವಣ್ಣನಿಗೆ ಕೊಟ್ಟು - ''ಇದನ್ನು ಸೆರಗಿನಲ್ಲಿ ಕಟ್ಟಿಕೊಂಡು ಬಾಜಾರಕ್ಕೆ  ಹೋಗಿ, ಎಲ್ಲರಿಗೂ ಭೋಜನಾರ್ಥ ಸಾಕಾಗುವಷ್ಟು ಪದಾರ್ಥಗಳನ್ನು ತೆಗೆದುಕೊಂಡು ಬಾ'', ಅಂದನು. ಅದನ್ನು ಕೇಳಿ, ಬಸವಣ್ಣನು “ಆಜ್ಞೆ  ಪ್ರಕಾರ ನಾನು ಮಾಡುವೆನು. ಆದರೆ ಈ ದುಡ್ಡಿಗೆ ನಾಲ್ಕು ಅಕ್ಕಿಕಾಳು ಸಹಾ  ಸಿಗಲಿಕ್ಕಿಲ್ಲ. ಹೀಗಿದ್ದರೂ ನೀವು ಮಹಾತ್ಮರಂಬಂತೆ ಕಾಣಿಸುತ್ತೀರಿ. ನಾನು ನಿಮ್ಮ ಮಹಿಮೆಯನ್ನು ತಿಳಿಯಲಾರೆ'', ಹೀಗಂದು  ಆತನು ಪೇಟೆಗೆ ಹೋದನು. ಒಂದು ಅಂಗಡಿಗೆ ಹೋಗಿ, ಧೋತರದ ಪದರಿಗೆ ಕಟ್ಟಿದ್ದ ದುಡ್ಡನ್ನು ಬಿಚ್ಚಿ ನೋಡುತ್ತಾನೆ. ಅದು ಸುವರ್ಣ ಮೋಹರವಾದದ್ದು ನೋಡಿ ಹರ್ಷಚಕಿತನಾದನು. ಬಸವಣ್ಣನು ಅಂಗಡಿಯವನ ಕೈಯಲ್ಲಿ ಅ ಮೋಹವನ್ನು ಕೊಟ್ಟು ತಮಗೆಲ್ಲರಿಗೂ ಭೋಜನಕ್ಕೋಸ್ಕರ ಬೇಕಾಗುವ ಪದಾರ್ಥಗಳನ್ನು ತೆಗೆದುಕೊಂಡು ಧೋತರದೊಳಗೆ ಕಟ್ಟಿಕೊಂಡು. ಕೆಲವು ರೊಕ್ಕ ತಿರುಗಿ ಬಂದವು. ಅವನ್ನು ಸಹಾ ತೆಗೆದುಕೊಂಡು ಮನೆಗೆ ಬಂದು, ಎಲ್ಲ ಸಾಮಾನು ಮತ್ತು ರೊಕ್ಕ ಸಾಧುವಿನ ಮುಂದೆ ಇಟ್ಟನು. ಆಗ್ಗೆ ಸಾಧುವು ಅವನ್ನೆಲ್ಲಾ  ಗುರವ್ವನಿಗೆ ಕೊಟ್ಟು ಶೀಘ್ರವಾಗಿ ಅಡಿಗೆ ಮಾಡಿ ತನಗೆ ನೀಡೆಂದು ಹೇಳಿದನು. ಆಕೆಯು ಒಳಗೆ ಹೋಗಿ ಬೇಗನೆ ಅಡಿಗೆ ಸಿದ್ಧಪಡಿಸಿದಳು. ಆಮೇಲೆ ಸಾಧುವಿಗೋಸ್ಕರ ಪಾತ್ರೆ ಇಟ್ಟು ನೀಡಿದಳು. ಮೊದಲು ಹುಡುಗರಿಗೆ ಊಟಕ್ಕೆ ಹಾಕಬೇಕೆಂದು ಹೇಳಿ, ಅವರಿಗೇ ಉಣ್ಣಿಸಿ, ಆಮೇಲೆ ಸಾಧುವು, ಬಸವಣ್ಣ ಮತ್ತು ಗುರವ್ವಗೆ ಊಟಕ್ಕೆ ಕೂಡ್ರಿಸಿ, ತಾನು ಉಣ್ಣುವಂಥವನಾದನು. ಎಲ್ಲರದೂ  ಭೋಜನವಾದ  ಮೇಲೆ ಸಾಧು ಹೊರಟು ಹೊರಗೆ ಬಂದನು. ಆಗ ಎಲ್ಲರೂ ಹೋಗಿ ಆತನ ಪಾದಕ್ಕೆ ಬಿದ್ದು - 'ಹೇ ದಯಾಳುವೇ ನಮ್ಮನ್ನು ಆಶೀರ್ವದಿಸಬೇಕು,'' ಅಂದರು. ಅದಕ್ಕಾತನು-“ನಿಮಗೆ ಕಲ್ಯಾಣವಾಗುವದು. ನಾನು ಈಗ ಸಿದ್ಧಾಶ್ರಮಕ್ಕೆ ಹೋಗುವೆನು.” ಅಂದದ್ದು ಕೇಳಿ, ಅವರ ಹೃದಯದಲ್ಲಿ ಪ್ರೇಮವು ಉಕ್ಕಿ ಬಂದು, ನೇತ್ರಗಳಿಂದ ನೀರು ಸುರಿಸುವಂಥವರಾದರು. ಸಾಧುವು  ಹೋದ ಮೇಲೆ, ಅವರೆಲ್ಲರೂ ಮನೆಗೆ ತಿರುಗಿ ಬಂದರು. ಆಗ ಬಸವಣ್ಣನು  ಪತ್ನಿಯನ್ನು ಕುರಿತು - 'ಇವರು ಆರೂಢಸ್ವಾಮಿಯೇ ಇರುತ್ತಾರೆ. ಇದರೊಳಗೆ ಏನೇನೂ ಸಂಶಯವಿಲ್ಲ.” ಅಂದನು. ಗುರವ್ವಾ ಅನ್ನುತ್ತಾಳೆ - ''ನಾವು ಆರೂಢ ಮಠಕ್ಕೆ ಎಂದೆಂದೂ ಹೋಗಲಿಲ್ಲ, ಹೀಗಿದ್ದು ಆತನು ನಮಗೆ ಈ ಕಾಲದಲ್ಲಿ ಯಾಕೆ ಬಂದು ಸಹಾಯ ಮಾಡಿದನು ? ನನಗೆ ಸಂಶಯ ಕಾಣುತ್ತದೆ". ಆ ಕೂಡಲೇ ಅವರು ಸಿದ್ಧಾಶ್ರಮಕ್ಕೆ ಹೋಗಿ, ಅಲ್ಲಿ ಸಿದ್ಧಾರೂಢನನ್ನು ನೋಡಿ ಆಶ್ಚರ್ಯಪಟ್ಟು - ''ಈತನೇ ನಮ್ಮ ಸಾಧು ಇದ್ದಾನೆ'' ಎಂದು ನುಡಿದು, ಬಹಳ ಆನಂದಭರಿತರಾದರು. ತಕ್ಷಣವೇ ಸಿದ್ಧಾರೂಢರ  ಮುಂದೆ ಅವರು ಸಾಷ್ಟಾಂಗ ಹಾಕುವಂಥವರಾದರು. ಸದ್ಗುರುಗಳಾದರೂ ಅವರಿಗೆ ಸಮೀಪ ಕರೆದು ಅನ್ನುತ್ತಾರೆ - ''ನಿಮ್ಮ ಹತ್ತಿರ ಹತ್ತು ರೂಪಾಯಿಗಳವೆ. ಅವುಗಳನ್ನು ತೆಗೆದುಕೊಂಡು ನೀವು ವ್ಯಾಪಾರ ಮಾಡಿರಿ.” ಬಸವಣ್ಣನು ಹೋಗಿ ಗುರ್ವಾಜ್ಞೆಯಂತೆ ಮಾಡಿದನು. ಶೀಘ್ರವೇ ಅವನಿಗೆ ವಿಶೇಷ ಲಾಭ ಪ್ರಾಪ್ತವಾಗಿ, ದಿನೇ ದಿನೇ ವ್ಯಾಪಾರದಲ್ಲಿ ಸಿದ್ಧ ಕೃಪೆಯಿಂದ ಧನಿಕನಾದನು. ನಿತ್ಯ ಆ ದಂಪತಿಗಳು ಸಿದ್ಧಾಶ್ರಮಕ್ಕೆ ಬರುತ್ತಿದ್ದರು. ಪ್ರಸಂಗದಲ್ಲಿ ಸಿದ್ದರನ್ನು ಮನೆಗೆ ಕರೆಸಿ ಪೂಜಿಸುತ್ತಿದ್ದರು. ಅವರನ್ನುತ್ತಾರೆ, “ಈ ಸಿದ್ಧಾರೂಢರು ಸರ್ವಕಾಲ ತಮ್ಮ ಭಕ್ತ ಕಾರ್ಯದಲ್ಲಿ ಸಾದರರಾಗಿರುವರು. ಆದರೆ ತಮ್ಮ ಭಕ್ತರಿರದಿದ್ದರೂ, ದೀನರಾದಂಥವರಿಗೆ ಸಂಕಟ ಕಾಲದಲ್ಲಿ ಪ್ರಾಪ್ತರಾಗಿ ರಕ್ಷಿಸುವವರು”.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಬಸವಣ್ಣನಿಗೆ ಗರ್ವ ಬಂದಿರುವಾಗ, ಆತನ ಶ್ರೀಮಂತಿಕೆ ಹರಣವಾಯಿತು. ಭಕ್ತಿ ಹುಟ್ಟಿದ ತರುವಾಯ ಬಂದೀಖಾನೆಯೊಳಗಿಂದ ಸದ್ಗುರುವು ಬಿಡಿಸಿದನು.

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ