ಸಿದ್ಧಾರೂಢರಿಂದ ಜಯಕೃಷ್ಣನಿಗೆ ಮುಂಡಕೋಪನಿಷತ್ ಭೋದನೆ,

 ✡️ ಸಿದ್ಧಾರೂಢರಿಂದ ಜಯಕೃಷ್ಣನಿಗೆ ಮುಂಡಕೋಪನಿಷತ್ ಭೋದನೆ, 



ಸಂಸಾರ ಸಾಗರದಲ್ಲಿಯ  ದುಃಖಗಳೆಂಬ ತೆರೆಗಳ ಹೊಡೆತಕ್ಕೆ ವ್ಯಾಕುಲ ಚಿತ್ತದಿಂದ ಜಯಕೃಷ್ಣನು ಈ ಭವರೋಗ ಬಾಧೆಯನ್ನು ನಿವಾರಣೆ ಮಾಡುವ ಸದ್ಗುರುವಿನ ಶೋಧನೆಯಲ್ಲಿದ್ದಾಗ ಕೆಲ ಸಾಧುಗಳು ಹುಬ್ಬಳ್ಳಿಗೆ ಹೋಗು ಅಲ್ಲಿ ಸಿದ್ದಾರೂಢರು ಇದ್ದಾರೆ. ಅವರಿಂದ ನಿನ್ನ ಹೃತ್ತಾಪಹರಣವಾಗುವುದು ಅಂತಾ ಸಲಹೆ ಮಾಡಿದರು. ಅದಕ್ಕೆ ಉತ್ತಮ ಅಧಿಕಾರಿಯಾಗಿದ್ದ ಜಯಕೃಷ್ಣ ಒಂದಾನೊಂದು ದಿನ ಪ್ರಾತಃ ಕಾಲದಲ್ಲಿ ಶ್ರೀಗಳ ಮಠಕ್ಕೆ ಆಗಮಿಸಿದರು. ಸದ್ಗುರು ಪಾದಾರವಿಂದಗಳಲ್ಲಿ ವಂದನೆಗಳನ್ನು ಸಲ್ಲಿಸುತ್ತಾ, ಹೇ ಸದ್ಗುರುವೇ, ಅಜ್ಞಾನಾಂಧಕಾರವನ್ನು ಹೋಗಲಾಡಿಸುವ ತೇಜಪುಂಜವಾದ ನೇತ್ರಗಳುಳ್ವನೇ, ಭೋಗಭಯವನ್ನು ನೀಗಿರುವ ಶಿವಯೋಗಿಯೆ  ಶರಣಾಗತ ರಕ್ಷಕ, ಭವರೋಗ ಹಾರಕ ಧನ್ವಂತರಿಯೇ , ನನ್ನನ್ನು ರಕ್ಷಿಸು, ಷಂಡ ಷಣ್ಮತಗಳನ್ನು ಖಂಡಿಸಿದವನೆ, ಅಮಿತಾನಂದದ ಶಿವಯೋಗಿಯೇ , ದ್ವಾಸು ಪರ್ಣಾ ಶರೀರೇ ಸ್ಮಿನ್ ಜೀವೇಶಾಖ್ಯೌಸಸ್ಥಿತೌ ಎಂಬ ಮುಂಡಕೋಪನಿಷತ್ತಿನಲ್ಲಿರುವ ಶೃತಿ ಪ್ರಮಾಣವು ಜೀವ ಮತ್ತು ಈಶ್ವರರ  ಭೇದವನ್ನು ತೋರಿಸುವಂತೆ ಭಾಸವಾಗುತ್ತಾಲಿದೆ. ಇದರಿಂದ ಅಖಂಡೈಕ್ಯ ಜ್ಞಾನಕ್ಕೆ ವಿಘ್ನ ಬರುವುದು. ಈ ಸಂಶಯ ನಿವಾರಿಸು ಅಂತಾ ಪ್ರಾರ್ಥಿಸಿದನು.




ಆಗ ಶ್ರೀಗಳು ಹೇ ಭಕ್ತನೇ, ಸದ್ಗುರುಗಳ ಮುಖದಿಂದ ಈಶೃತಿಯ ಸಾರವನ್ನು ನೀನು  ಶ್ರವಣ ಮಾಡದೇ ಇದ್ದುದರಿಂದ, ನಿನ್ನಲ್ಲಿ ಸಂಶಯಗಳು ಸುಳಿಯತೊಡಗಿವೆ ಅಂತಾ ಹೇಳಿದರು. ಅದಕ್ಕೆ ಆತನೂ, ನನ್ನಷ್ಟಕ್ಕೆ ನಾನೇ ಓದುತ್ತಾ ನನ್ನ ಮನಸ್ಸಿಗೆ ಬಂದಂತೆ ಅರ್ಥ ಮಾಡಿಕೊಂಡಿದ್ದಕ್ಕೆ ಈ ಸಂಶಯಕ್ಕೆ ಕಾರಣವಾಗಿದೆ. ನಿಜವಾದ ಬೋಧನೆ  ತಮ್ಮಿಂದಾಗಬೇಕು ಅಂತಾ ಕೇಳಿಕೊಂಡನು. ಆಗ ಶ್ರೀಗಳು ಆತನನ್ನು ಕುರಿತು ಮುಂಡಕೋಪನಿಷತ್ತಿನ  ಆರು ಖಂಡ, ತೈತ್ತಿರೀಯೋಪನಿಷತ್ತು ಮೂರನೇ ಭೃಗುವಲ್ಲಿಯ ಹತ್ತು ಅನುವಾಕ್ಯ  ಮತ್ತು ಐತರೇಯೋಪನಿಷತ್ತಿನ  ಐದು ಖಂಡಗಳಲ್ಲಿಯ  ಸುವಿಚಾರವನ್ನು ಬೋಧಿಸಿದರು. ಉತ್ತಮ ಅಧಿಕಾರಿಯಾದ ಜಯಕೃಷ್ಣನು ಶ್ರೀಗಳ ಪಾದಪದ್ಮಗಳಲ್ಲಿ  ಶಿರೋಕಮಲವನ್ನಿಟ್ಟು, ಹೆ ಗುರುವೇ ನನ್ನಲ್ಲಿಯ ದ್ವೈತ  ಭ್ರಮೆಯನ್ನು ಹೊಡೆದೋಡಿಸಿ ದೃಢವಾದ ಅಪರೋಕ್ಷ ಅದ್ವೈತ  ಜ್ಞಾನವನ್ನು ಬೋಧಿಸಿ  ಭ್ರಮರ ಕೀಟನ್ಯಾಯದಂತೆ ನನ್ನನ್ನು ನಿನ್ನಂತೆ ಮಾಡಿರುವಿ. ಈ ಜ್ಞಾನವು ಕೆಡದಂತೆ ನನಗೆ ಆಶೀರ್ವದಿಸು ಅಂತಾ ಪ್ರಾರ್ಥಿಸಿದನು. ಆಗ ಸಿದ್ದಾರೂಢರು ಆತನನ್ನು ಕುರಿತು ಆಶೀರ್ವದಿಸುತ್ತಾ, ಹೇ ಭಕ್ತ ಶಿರೋಮಣಿಯೆ, ನೀನು ವಿಚಾರ ಸಾಗರ ಗ್ರಂಥವನ್ನು ಕನ್ನಡದಲ್ಲಿ ಜನಸಾಮಾನ್ಯರಿಗೆ ತಿಳಿಸುವಂತೆ ಭಾಷಾಂತರ ಮಾಡು. ನಿನಗೆ ಸದ್ಗುರುವಿನ ದಯೆಯಿಂದ ದೊರೆತ  ಘನವಾದ ಅಪರೋಕ್ಷ ಜ್ಞಾನವು  ಧೃಢವಾಗುವುದು ಅಂತಾ ಅಪ್ಪಣೆ ಕೊಡಿಸಿದರು.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ


👇👇👇👇

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಬಾಬಾ ಗರ್ದೆಯವರಿಗೆ ಛಾಂದೋಗ್ಯಪನಿಷತ್ತಿನ ಭೋದನೆ

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»



Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ