ಸಿದ್ಧಾರೂಢರ ಮತ್ತು ಮಹಾತ್ಮ ಗಾಂಧೀಜಿ ಸಮಾಗಮ ಕಥೆ .

 🌳 ಸಿದ್ಧಾರೂಢರ ಮತ್ತು ಮಹಾತ್ಮ ಗಾಂಧೀಜಿ ಸಮಾಗಮ.



ಭಾರತ ದೇಶಾದ್ಯಂತ ಸಂಗ್ರಾಮದ ಅಹಿಂಸಾತ್ಮಕ ಆಂದೋಲನ ಇಡೀ ದೇಶದ ಗಮನವನ್ನೇ ಕೇಂದ್ರೀಕರಿಸಿತ್ತು. ಈ ಆಂದೋಲನ ಅಗ್ರಗಣ್ಯ ನೇತಾರ ಮಹಾತ್ಮ ಗಾಂಧೀಜಿಯವರು ಹುಬ್ಬಳ್ಳಿಗೆ ಆಗಮಿಸಿದರು. ಶ್ರೀಗಳ ಬಗ್ಗೆ ಹಾಗೂ ಮಠದಲ್ಲಿಯ  ವಾತಾವರಣ ಬಗ್ಗೆ ತಿಳಿದುಕೊಂಡ ಮಹಾತ್ಮ ಗಾಂಧೀಜಿಯವರು ಮಠಕ್ಕೆ ಬಂದರು. ಶ್ರೀಗಳು ದೊಡ್ಡ ಅಡಗಿ ಮನೆಯಲ್ಲಿರುವವರು ಅಂತಾ ತಿಳಿದ ಕೂಡಲೇ ಅಲ್ಲಿಗೆ ಧಾವಿಸಿದರು. ಭೋಜನಕ್ಕೆ ಕೂತವರಲ್ಲಿ ಲಿಂಗಾಯತ, ಬ್ರಾಹ್ಮಣ, ಕ್ಷತ್ರಿಯ, ನೇಕಾರ, ಹರಿಜನ, ಗಿರಿಜನ ಮುಂತಾದ ಜಾತಿ, ಮತ, ಪಂಥ, ರಾಜ ರಂಕ, ಉಚ್ಚ ನೀಚ, ಬಡವ ಶ್ರೀಮಂತ ಭೇದವಿಲ್ಲದೆ ಎಲ್ಲರನ್ನೂ ಒಂದೇ ಸಾಲಿನಲ್ಲಿ ಸಹಭೋಜನ ಮಾಡಿಸುವಲ್ಲಿಯೂ, ತನ್ನ ಕೈಯಿಂದ ತುತ್ತನ್ನು ಎಲ್ಲ ಭಕ್ತರ ಬಾಯೊಳಗಿಡುತ್ತಿದ್ದ, ಅಲ್ಲಿ ಕೂತವರು ಶ್ರೀಗಳ ಮುಖದಲ್ಲಿ ತುತ್ತನ್ನು ಹಾಕುತ್ತಿದ್ದ ಹಾಗೂ ಓಂ ನಮಃ ಶಿವಾಯ ಮಂತ್ರ ಘೋಷಗಳ ನಿನಾದದಲ್ಲಿ ನಡೆಯುತ್ತಿದ್ದ ಅನ್ನ ಸಂತರ್ಪಣೆ ಮಧ್ಯೆದಲ್ಲಿ ಸಾಕ್ಷಾತ್ ಪರಶಿವನೇ ಅವತಾರ ಧಾರಣ ಮಾಡಿ ನಿಂತ ಶ್ರೀ ಸಿದ್ಧಾರೂಢರನ್ನು ಕಂಡು ಮಹಾತ್ಮ ಗಾಂಧೀಜಿಯವರು ದಿಟ್ಟೂಢರಾಗಿ ಹೋಗಿ ಶ್ರೀಗಳ ಪಾದಪದ್ಮಗಳಲ್ಲಿ ಶಿರೋಕಮಲವನ್ನಿಟ್ಟರು. 




ಶ್ರೀಗಳು ಗಾಂಧೀಜಿಯವರನ್ನು ಹಿಡಿದೆತ್ತಿ, ಆಲಿಂಗನ ಮಾಡಿ ಉಚಿತಾಸನದಲ್ಲಿ ಕುಳ್ಳಿರಿಸಿದರು. ಅವರಿಗೂ ಪ್ರಸಾದ ಸ್ವೀಕರಿಸಬೇಕೆಂದು ಹೇಳಿದರು. ಶ್ರೀ ಸಿದ್ಧಾರೂಢ ಸ್ವಾಮಿಗಳು ಹಾಗೂ ಮಹಾತ್ಮ ಗಾಂಧೀಜಿ ಸಮಾಗಮದ ಅಭೂತಪೂರ್ವ ದೃಶ್ಯವನ್ನು ಕಂಡು ಭಕ್ತರಿಗೆಲ್ಲ ಅಮಿತಾನಂದವಾಯಿತು. ಭೋಜನವಾದ ಕೂಡಲೇ ಪರಸ್ಪರರು ವಿನೋದದಿಂದ ಮಾತನಾಡತೊಡಗಿದರು. ಮಹಾತ್ಮ ಗಾಂಧೀಜಿ ಮಾತಾಡುತ್ತಾ, ಆಗಿನ ಕಾಲದಲ್ಲಿಯ  ಸಾಮಾಜಿಕ ಸ್ಥಿತಿಗತಿ, ಉಚ್ಚ ನೀಚ, ಬಡವ ಶ್ರೀಮಂತ, ಸ್ಪೃಶ್ಯ ಅಸ್ಪೃಶ್ಯ, ಜಾತಿ ಜಾತಿಗಳಲ್ಲಿ ವೈಷಮ್ಯದ  ತಾಂಡಾದಿಂದ ತತ್ತರಿಸುವ  ಈ ಕಾಲದಲ್ಲಿ ತಾವು ಈ ಎಲ್ಲ ವರ್ಗಗಳ ಜನರಲ್ಲಿಯ  ಅಸಮಾನತೆಯ  ಭಾವನೆ ತೊಡೆದು ಹಾಕಿ, ಏಕಸಾಲಿನಲ್ಲಿ ಕೂತು ಸಹಭೋಜನ, ಪರಸ್ಪರರಲ್ಲಿ ಭ್ರಾತೃತ್ವ ಭಾವನೆಯ  ನಿರ್ಮಾಣ, ಜೊತೆಗೆ ಆಧ್ಯಾತ್ಮ ಚಿಂತನೆಯಲ್ಲಿ ತೊಡಗಿಸಿದ ಶ್ರೀ ಸಿದ್ಧಾರೂಢರೇ ತಾವು ಅಸದೃಶ್ಯ ಚಮತ್ಕಾರ ಮಾಡಿರುವಿರಿ. ಈ ಅಸಾಧಾರಣ ಭಾವೈಕ್ಯತೆಯ  ಮೇಲೆ ಭದ್ರವಾದ  ರಾಷ್ಟ್ರವನ್ನು ಕಟ್ಟಲು ಕಾರಣೀಭೂತರಾದ ತಾವು ಈ ದೇಶಕ್ಕೆ ಅಪ್ರತಿಮ ಕಾಣಿಕೆ ನೀಡಿದ್ದೀರಿ. ಪರಕೀಯರ ಕಪಿಮುಷ್ಟಿಯಿಂದ ಭಾರತವನ್ನು ಸ್ವತಂತ್ರಗೊಳಿಸಿ, ಜಾತ್ಯಾತೀತ ರಾಷ್ಟ್ರವನ್ನು ಕಟ್ಟಲು ಸಂಕಲ್ಪ ಮಾಡಿ ಕೊಂಡಿದ್ದೆ  ಆದರೆ ನನಗಿಂತ ಮೊದಲೇ ಉಪೇಕ್ಷಿತ ವರ್ಗದಲ್ಲಿ ಸಮಾನತೆಯ ಜಾಗೃತಿಯಿಂದ, ಉಚ್ಚ ಸಂಸ್ಕಾರಗಳ ಅಧ್ಯಾತ್ಮ ಚಿಂತನೆಯಲ್ಲಿ ರತರನ್ನಾಗಿ  ಮಾಡಿ ಜಾತ್ಯಾತೀತತೆಯನ್ನು ಕಾರ್ಯರೂಪದಲ್ಲಿ ತಂದ ಮಹಾತ್ಮನೇ, ನಿನಗೆ ಅನಂತ ಅನಂತ ನಮನಗಳು. ತಾವು ತ್ರಿಕಾಲಜ್ಞಾನಿಗಳಾಗಿದ್ದೀರಿ. ನಾನು ಹಮ್ಮಿಕೊಂಡ ಈ ಅಹಿಂಸಾತ್ಮಕ ಆಂದೋಲನ ಮೂಲಕ ಭಾರತಕ್ಕೆ ಸ್ವಾತಂತ್ರ್ಯವು  ನನ್ನ ಜೀವಮಾನದಲ್ಲಿ ದೊರೆಯುವುದೋ  ಹೇಗೆ ತಿಳಿಸೋಣವಾಗಬೇಕು ಅಂತಾ ಶ್ರೀಗಳನ್ನು ಪ್ರಾರ್ಥಿಸಿದರು. ಆಗ ಶ್ರೀ ಸಿದ್ಧಾರೂಢರು, ಹೇ ಸ್ವಾತಂತ್ರ್ಯ ಸಂಗ್ರಾಮಿ, ಭಾರತ ಹಿತಚಿಂತಕ ಗಾಂಧೀಜಿ ಕೇಳಿರಿ, ನೀವು ಮಾಡಿದ ಪರಿಶ್ರಮವು ವ್ಯರ್ಥವಾಗಲಾರದು. ನಿಮ್ಮ ತಪಸ್ಸು ಪರಿಪಕ್ವತೆಯತ್ತ ಸಾಗಿದೆ. ಇನ್ನು ಕೆಲ ಕಾಲ ಪರಿಶ್ರಮ ಪಡಬೇಕಾಗಿದೆ, ನಿಮ್ಮ ಜೀವನಾನದಲ್ಲಿಯೆ ಸ್ವಾತಂತ್ರ್ಯ ದೊರೆಯುವದು. ಸ್ವರಾಜ್ಯ ದೊರೆತ ನಂತರ ಸುಖ ದೊರೆಯಲಾರದು. ದುಃಖದ ತೆರೆಗಳಿಂದ ತತ್ತರಿಸುವಂತಾಗುವದು. ಭವಿಷ್ಯತ್ತಿನ ರಾಷ್ಟ್ರ ನಿರ್ಮಾಣಕ್ಕಾಗಿ ಕಾಣುತ್ತಿರುವ ನಮ್ಮ ಕನಸು ಸಾಕಾರಗೊಳ್ಳಲಿ, ಭಾರತದ ಪ್ರಜೆಗಳಿಗೆ ಗುಲಾಮ ಗಿರಿ ತಪ್ಪಿ, ಭಾರತೀಯ ಸಂಸ್ಕೃತಿ ಪುನರುತ್ಥಾನ ದತ್ತ ನೀವು ಪ್ರಯತ್ನ ಮಾಡಲು ನಿಮಗೆ ಸದ್ಗುರುನಾಥನು ಶುಭಾಶೀರ್ವಾದ ಮಾಡಲಿ ಅಂತ ಹಾರೈಸುತ್ತಾ ಮಹಾತ್ಮ ಗಾಂಧೀಜಿಯವರನ್ನು ಶ್ರೀ ಸಿದ್ಧಾರೂಢರು ಬೀಳ್ಕೊಟ್ಟರು.

👇👇👇👇

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಸಿದ್ಧಾರೂಢರು ಸರ್ಕಸ್ ಕಂಪನಿಯ ಕಾಶೀನಾಥಪಂತ ಛತ್ರೆಗೆ ಚೀನಾದಲ್ಲಿ ತೋರಿದ ಮಹಿಮೆ ಕಥೆ

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ