ಕನಸಲ್ಲಿ ಸಿದ್ಧಾರೂಢರು ಹೇಳಿದ ವಿಷಯ ಸತ್ಯವಾಗಿ ಮಠದಲ್ಲಿ ಭಾಗವತ ಪುರಾಣ ಪ್ರಾರಂಭ
🙏 ಮಠದಲ್ಲಿ ಭಾಗವತ ಪುರಾಣ ಪ್ರಾರಂಭ 🙏
ಶಂಕರಶಾಸ್ತ್ರಿ ಮಿಶ್ರಿಕೋಟಿಯೆಂಬ ಮಹನೀಯರು ಭಾಗವತ ಗ್ರಂಥದ ಪ್ರವಚನ ಮಾಡುತ್ತ ಊರೂರು ತಿರುಗುತ್ತಿದ್ದರು. ಭಾಗವತದ ಹೆಚ್ಚಿನ ಭಾವ ತಿಳಿದುಕೊಳ್ಳಬೇಕಾದರೆ ಶ್ರೀ ಗುರುವಿಲ್ಲದೆ ಸರಿಯಾದ ಗತಿ ಸಿಗುವುದಿಲ್ಲವೆಂಬ ವಿವೇಕದಿಂದ ತಳಮಳಗೊಳ್ಳುತ್ತಿದ್ದರು. ಸೂಳಿಬಾವಿ ಗ್ರಾಮದ ಸದಾಶಿವಪ್ಪ ಕುಲಕರ್ಣಿಯವರ ಮಗ ಸಾಂಬಪ್ಪನವರು ಶ್ರೀ ಸಿದ್ಧಾರೂಢರ ಭಕ್ತಿಯನ್ನು ಅನೇಕ ವರ್ಷಗಳಿಂದ ಮಾಡುತ್ತ ಬಂದಿದ್ದರು. ಶಂಕರ ಶಾಸ್ತ್ರಿಗಳು ಅವರ ಮನೆಯಲ್ಲಿ ಭಾಗವತ ಸಪ್ತಾಹ ಪ್ರಾರಂಭಿಸಿದ್ದರು. ಅವರ ಪ್ರವಚನ ಕೇಳಲು ಬಹಳ ಸಂಖ್ಯೆಯಲ್ಲಿ ಜನರು ಬರುತ್ತಿದ್ದರು. ಅವರ ಹರಿಕಥೆಯು ಬಹಳ ಮಧುರವಾಗಿರುವುದರಿಂದ ಭಕ್ತರು ಭ್ರಮರಗಳಂತೆ ಆ ಮಧುರ ವಚನಗಳನ್ನು ಸವಿಯಲು ಬರುತ್ತಿದ್ದರು. ಸಪ್ತಾಹ ಪ್ರಾರಂಭವಾದ ಮೂರು ದಿವಸಗಳಲ್ಲಿ ಶ್ರೀ ಸಿದ್ಧಾರೂಢರಿಂದ ಮೂರು ಪತ್ರಗಳು ಬಂದವು. ಅವುಗಳಲ್ಲಿ ಶಾಸ್ತ್ರಿಗಳೇ ನಿಮ್ಮ ಸೇವೆಯ ಕಾರ್ಯ ಇಲ್ಲಿದೆ. ಅದನ್ನು ಬಿಟ್ಟು ನಮ್ಮ ಹುಬ್ಬಳ್ಳಿಯ ಸಿದ್ಧಾಶ್ರಮಕ್ಕೆ ಬರಬೇಕು' ಎಂದು ಬರೆಯಲಾಗಿತ್ತು.
ಸಾಂಬಪ್ಪನವರು ಪತ್ರದ ಸಾರವನ್ನು ತಿಳಿದು ಇಲ್ಲಿ ಸಪ್ತಾಹ ಪ್ರಾರಂಭಿಸಲಾಗಿದೆ. ಇದನ್ನು ಅರ್ಧದಲ್ಲಿ ಬಿಟ್ಟು ಹೇಗೆ ಹೋಗಬೇಕು ಎಂದು ಶ್ರೀ ಸಿದ್ಧಾರೂಢರಿಗೆ ಹೀಗೆ ಪತ್ರ ಬರೆದರು 'ಸದ್ಗುರುವೇ, ನಮ್ಮ ಮನೆಯಲ್ಲಿ ಶ್ರೀ ಶಂಕರ ಶಾಸ್ತ್ರಿಗಳು ಭಕ್ತಿಯಿಂದ ಪುರಾಣ ಹೇಳುತ್ತಿದ್ದಾರೆ. ಇನ್ನು ಮೂರು ದಿವಸಗಳ ನಂತರ ಮುಗಿಯುತ್ತದೆ. ಮುಗಿದ ತಕ್ಷಣ ಶಾಸ್ತ್ರಿಗಳನ್ನು ಕರೆದುಕೊಂಡು ಬರುತ್ತೇನೆ' ಎಂದು ಪತ್ರ ಬರೆದರು. ಸಪ್ತಾಹದ ಆರನೆಯ ದಿನ ಶಾಸ್ತ್ರಿಗಳು ಆ ದಿನದ ಭಾಗವತ ಮುಗಿಸಿ ರಾತ್ರಿ ಊಟ ಮಾಡಿ ಮಲಗಿದಾಗ ಸ್ವಪ್ನ ಬಿದ್ದಿತು. ಅದರಲ್ಲಿ ಸಿದ್ಧಾರೂಢರು ಭವ್ಯವಾದ ಸಿಂಹಾಸನದಲ್ಲಿ ಕುಳಿತಿದ್ದಾರೆ. ಮಸ್ತಕದಲ್ಲಿ ಕಿರೀಟ, ಹಣೆಯಲ್ಲಿ ಭಸ್ಮ, ಕುಂಕುಮ, ಕೊರಳಲ್ಲಿ ನಾಗಾಭರಣ ಶೋಭಿಸುತ್ತಿದೆ. ಮಾಲೆ ಧರಿಸಿ ಭರಜರಿ ಶಾಲು ಹೊತ್ತಿದ್ದಾರೆ. ಆಗ ಶಾಸ್ತ್ರಿಗಳು ಎದ್ದು ನಿಂತು ನಮಸ್ಕರಿಸಿದಾಗ ಶ್ರೀಗಳು ಹೇಳುತ್ತ `ಜಗತ್ತಿನಲ್ಲಿ ಶ್ರೀ ಗುರುವೇ ಪಸರಿಸಿದ್ದಾನೆಂಬುದನ್ನು ಮರೆತಿರುವೆಯಾ? ಏನು? ಹುಬ್ಬಳ್ಳಿಗೆ ಬಂದು ಗುರುದರ್ಶನ ಪಡೆದು ನಿನ್ನ ಜನ್ಮ ಸಫಲ ಮಾಡಿಕೊಳ್ಳು ಪ್ರಪಂಚದಲ್ಲಿ ಇದೇ ನಿನ್ನ ಕರ್ತವ್ಯವಾಗಿದೆ' ಎಂದು ಹೇಳಿ ಅದೃಶ್ಯರಾದರು.
👇👇👇👇👇👇👇👇👇👇👇👇👇👇
👉👉ಸಂಪೂರ್ಣ ಕಥೆಯನ್ನು WhatsApp share ಮಾಡಲು 📲
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
