ಚಿಕ್ಕಮುನವಳ್ಳಿಯಲ್ಲಿ ಸಿದ್ಧರ ಲೀಲೆ

 🕉️ ಚಿಕ್ಕಮುನವಳ್ಳಿಯಲ್ಲಿ ಸಿದ್ಧರ ಲೀಲೆ 🌺



ಶಂಕರ ಶಾಸ್ತ್ರಿಗಳು ಸಿದ್ದಾರೂಢರ ದರ್ಶನದ ನಂತರ ಪ್ರತಿವರ್ಷ ಮಠದಲ್ಲಿ ಭಾಗವತ ಸಪ್ತಾಹದ ಸೇವೆ ಮಾಡಿ ಗುರುಗಳಿಗೆ ಸಂತೋಷಗೊಳಿಸುತ್ತಿದ್ದರು. ಒಂದು ವರ್ಷ ಮಠದಲ್ಲಿ ಸಿದ್ಧರ ಸನ್ನಿಧಿಯಲ್ಲಿ ಭಾಗವತ ಪ್ರವಚನ ಮಾಡುವಾಗ ಒಂದು ಘಟನೆ ನಡೆಯಿತು. ಚಿಕ್ಕ ಮುನವಳ್ಳಿ ಗ್ರಾಮದ ಹನುಮಂತರಾವ ಪಾಟೀಲ ಮತ್ತು ರಾಯನಗೌಡಾ ಪಾಟೀಲ ಬಂಧುಗಳು ಸಿದ್ದರ ಪರಮ ಭಕ್ತರು. ಅವರು ಮಠದಲ್ಲಿ ನಡೆಯುವ ಸಪ್ತಾಹದಲ್ಲಿ ಪಾಲ್ಗೊಂಡು ಶಂಕರ ಶಾಸ್ತ್ರಿಗಳ ಭಾಗವತ ಕೇಳಿ ಪ್ರಭಾವಿತರಾದರು. ನಂತರ ಸಿದ್ದರನ್ನು ಕಂಡು 'ಅಪ್ಪಾ, ನಮ್ಮೂರಲ್ಲಿ ಶಂಕರ ಶಾಸ್ತ್ರಿಗಳ ಭಾಗವತ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲು ಬಯಸಿದ್ದೇವೆ. ದಯವಿಟ್ಟು ಅವರನ್ನು ಕಳಿಸಿಕೊಡಿರಿ' ಎಂದು ಬೇಡಿಕೊಂಡರು. ಆಗ ಗುರುಗಳು ಶಾಸ್ತ್ರಿಗಳನ್ನು ಕರೆದು `ಶಾಸ್ತ್ರಿಗಳೇ, ನೀವು ಚಿಕ್ಕಮುನವಳ್ಳಿಗೆ ಹೋಗಿ ಭಾಗವತ ಸಪ್ತಾಹ ನಡೆಸಿ, ಅಲ್ಲಿಯ ಭಕ್ತರನ್ನು ಸಂತೋಷಗೊಳಿಸಿರಿ. ಅವರು ನಿಮ್ಮ ಭಾಗವತವನ್ನು ಬಹಳ ಮೆಚ್ಚಿದ್ದಾರೆ. ಅವರ ಜೊತೆಗೆ ಹೋಗಿ ಭಕ್ತಿಯ ಮಹಿಮೆಯನ್ನು ಪ್ರಸಾರ ಮಾಡಿರಿ' ಎಂದು ಹೇಳಿ ಆಶೀರ್ವದಿಸಿದರು.


ಆಗ ಗುರುಗಳ ಆಜ್ಞೆಯನ್ನು ಶಿರಸಾವಹಿಸಿ, ಶಾಸ್ತ್ರಿಗಳು ಆ ಬಂಧುಗಳ ಜೊತೆಗೆ ಚಿಕ್ಕಮುನವಳ್ಳಿಗೆ ಹೋದರು. ಆ ಬಂಧುಗಳ ಮನೆಯಲ್ಲಿ ಒಂದು ಸಿಂಹಾಸನದಲ್ಲಿ ಸಿದ್ದರ ಮೂರ್ತಿಯನ್ನು ಸ್ಥಾಪಿಸಿ ಸಪ್ತಾಹ ಪ್ರಾರಂಭಿಸಿದರು. ಸಾಕಷ್ಟು ಜನ ಬಂದು ಭಾಗವತ ಪ್ರವಚನ ಕೇಳಿ ಆನಂದ ಸಾಗರದಲ್ಲಿ ತೇಲಾಡಿದರು. ಅದನ್ನು ವರ್ಣಿಸುವುದು ಅಸಾಧ್ಯ. ಒಂದು ದಿನ ಪ್ರತ್ಯಕ್ಷವಾಗಿ ಅಘಟಿತ ಘಟನೆ ನಡೆಯಿತು. ಶ್ರದ್ದಾಯುಕ್ತ ಜನರಿಗೆ ಯತಾರ್ಥವಾದರೂ ಶ್ರದ್ದೆಯಿಲ್ಲದ ಮನುಷ್ಯರೂ ಒಪ್ಪಿಕೊಳ್ಳುವ ಘಟನೆ ಅದು.


ಶಾಸ್ತ್ರಿಗಳು ಶ್ರದ್ಧೆಯಿಂದ ಭಾಗವತ ಓದುತ್ತಿರುವ ಸಮಯದಲ್ಲಿ ಸ್ಕಂದದ ಹನ್ನೊಂದನೆಯ ಕಥಾ ನಡೆಯುತ್ತಿದ್ದಾಗ ಒಂದು ಚಮತ್ಕಾರ ನಡೆಯಿತು. ಸಿಂಹಾಸನದಲ್ಲಿದ್ದ ಸಿದ್ಧರ ಮೂರ್ತಿಗೆ ಮಾಲೆಯನ್ನು ತೊಡಿಸಿದ್ದರು. ಒಂದು ಪ್ರಕಾರದ ಆನಂದದ ಧ್ವನಿ ಬರತೊಡಗಿತು. ಇದನ್ನು ಕೇಳಿದ ಭಕ್ತರು ಚಕಿತರಾಗಿ ಮೂರ್ತಿಯ ಕಡೆಗೆ ನೋಡುತ್ತಿದ್ದರು. ಆಗ ಸಿದ್ಧರ ಮೂರ್ತಿಯ ಮೇಲಿದ್ದ ಎರಡು ಹೂವುಗಳು ಹಾರಿಬಂದು ರಾಯನಗೌಡರ ಧೋತರದ ಮೇಲೆ ಬಿದ್ದವು. ಈ ದೃಶ್ಯವನ್ನು ಎಲ್ಲರೂ ಆಶ್ಚರ್ಯದಿಂದ ಪ್ರತ್ಯಕ್ಷ ನೋಡಿದರು. ಆಗ ಎಲ್ಲರೂ ಸದ್ಗುರುವಿನ ಮಹಿಮೆ ಅಗಾಧವೆಂದು ಜಯಜಯಕಾರ ಮಾಡಿದರು. ಶ್ರೀ ಸಿದ್ಧಾರೂಢ ಗುರುಗಳು ಈಶ್ವರನೇ ಇರುವನೆಂದು ನಮಸ್ಕರಿಸಿದರು. ಆಗ ಗೌಡರು ಶಂಕರ ಶಾಸ್ತ್ರಿಗಳನ್ನು ಕುರಿತು `ಭಾಗವತ ಸಪ್ತಾಹದ ನಿಮಿತ್ತ ಸಿದ್ಧರು ಸಂತೋಷಗೊಂಡು ಪ್ರಸಾದ ನೀಡಿದ್ದಾರೆ. ಶಂಕರ ಶಾಸ್ತ್ರಿಗಳ ಉಪಕಾರ ನಮ್ಮ ಮೇಲೆ ಹೆಚ್ಚಾಯಿತು' ಎಂದು ಕೊಂಡಾಡಿದರು. ಸಪ್ತಾಹ ಮುಗಿದ ಮೇಲೆ ಶಾಸ್ತ್ರಿಗಳಿಗೆ ಗೌರವಿಸಿ ಕಾಣಿಕೆ ನೀಡಿ ಸಿದ್ದಾಶ್ರಮಕ್ಕೆ ಕಳಿಸಿಕೊಟ್ಟರು. ಶಾಸ್ತ್ರಿಗಳು ಸಿದ್ಧರಿಗೆ ವಂದಿಸಿ ನಡೆದ ಘಟನೆಯನ್ನು ತಿಳಿಸಿದಾಗ ಸದ್ಗುರುಗಳು ಆಶೀರ್ವದಿಸಿ ಹೀಗೆ ಹೇಳಿದರು 'ಎಲ್ಲಿ ಅಮಿತ ಭಕ್ತಿಯಿದೆಯೋ ಅಲ್ಲಿ ಗುರುವು ನಿಶ್ಚಯವಾಗಿ ವಾಸ ಮಾಡುತ್ತಾನೆ' ಎಂದರು. ಇದನ್ನು ಕೇಳಿದ ಶಾಸ್ತ್ರಿಗಳು, ಭಕ್ತರು ಸಿದ್ದರ ಜಯಜಯಕಾರ ಮಾಡಿದರು.

  👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ



 ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
👉ಕುಂದರೆ ವೇಷದಲ್ಲಿ ಬಂದು ಶಂಕರ ಶಾಸ್ತ್ರಿಗಳ ಮಗನ ರಕ್ಷಣೆ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
👉ಸಿದ್ಧಾರೂಢ ಭಾಗವತ ಎಲ್ಲಾ ಲೀಲಾಕಥೆ ಸಂಗ್ರಹ 📲

ಮೇಲಿನ  ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇

👉WhatsApp share 📲

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ