ಮುಂಬೈ ಭಕ್ತಳ ಮೂಗಿನ ನತ್ತು ಸಿದ್ಧರಿಂದ ಪುನಃ ಸಿಕ್ಕಿತು.

 🌺 ಮುಂಬೈ ಭಕ್ತಳ ಮೂಗಿನ ನತ್ತು ಸಿದ್ಧರಿಂದ ಪುನಃ ಸಿಕ್ಕಿತು.


ಮುಂಬೈಯ ಪಾಂಡುರಂಗ ಜಾವಜಿಯವರ ಮನೆಯಲ್ಲಿ ಸ್ಥಾಪಿಸಿದ ಹುಬ್ಬಳ್ಳಿಯ ಸಿದ್ಧಾರೂಢರ ಮೂರ್ತಿಯನ್ನು ಅವರ ಪತ್ನಿ ಸತ್ಯಭಾಮಾಬಾಯಿಯವರು ದಿನಾಲು ಶೋಡಷ ಕರ್ಮಪೂರ್ವಕ ಅಷ್ಟವಿದ್ವಾರ್ಚನೆಯಿಂದ ಪೂಜಿಸುತ್ತಿದ್ದಳು. ದಂಪತಿಗಳು ತಮ್ಮ ಮಗಳಾದ ಸೀತಾದೇವಿಯವರನ್ನು ರಾಮರಾವ ಎಂಬವರಿಗೆ ಲಗ್ನ ಮಾಡಿ ಕೊಟ್ಟಿದ್ದರು. ಲಗ್ನ ಸಮಾರಂಭ ಮುಗಿದ ಮೇಲೆ ಮಗಳನ್ನು ಗಂಡನ ಮನೆಗೆ ಕಳಿಸುವಾಗ ಹತ್ತು ಸಾವಿರ ರೂಪಾಯಿ ಬೆಲೆಬಾಳುವ ಒಂದು ನನ್ನನ್ನು ಕೊಟ್ಟಿದ್ದರು. ಅವರ ಮನೆಯಲ್ಲಿ ಹೆಣ್ಣು ಮಕ್ಕಳು ಕೂಡಿ ಭೋಜನ ಮಾಡುವಾಗ ಸೀತಾಬಾಯಿಯು ಊಟ ಮಾಡುವಾಗ ನತ್ತು ಊಟಕ್ಕೆ ಅಡಚಣೆಯಾಗುವುದೆಂದು ಅದನ್ನು ತೆಗೆದು ತನ್ನ ತೊಡೆಯ ಮೇಲಿಟ್ಟು ಭೋಜನ ಮುಗಿಸಿ ಏಳುವಾಗ ಅವಳು ನತ್ತನ್ನು ಮರೆತು ಎದ್ದು ಹೋದಳು. ಅದು ಅಲ್ಲಿಯೇ ನೆಲದ ಮೇಲೆ ಬಿದ್ದಿತು. ಅವಳ ಸಮೀಪದಲ್ಲಿ ಕುಳಿತ ಒಬ್ಬ ಸ್ತ್ರೀಯು ನೋಡಿ ಗುಪ್ತವಾಗಿ ತೆಗೆದುಕೊಂಡು ಮನೆಗೆ ಹೋದಳು.
ಸೀತಾಬಾಯಿಯು ತಿರುಗಿ ಮನೆಗೆ ಬಂದಾಗ ಅವಳ ತಾಯಿ ಮಗಳ ಮೂಗಿನಲ್ಲಿ ನತ್ತು ಇಲ್ಲದ್ದನ್ನು ನೋಡಿ 'ಸೀತಾ ನತ್ತು ಎಲ್ಲಿ?' ಎಂದಾಗ ಮಗಳು ಗಾಬರಿಯಾಗಿ `ಅವ್ವಾ, ನಾನು ಊಟ ಮಾಡುವಾಗ ಅದನ್ನು ತೊಡೆಯ ಮೇಲಿಟ್ಟುಕೊಂಡಿದ್ದ. ಅದನ್ನು ಮರೆತು ಬಂದಿದ್ದೇನೆ' ಎಂದಳು. ನಂತರ ತಾಯಿ ಮಗಳು ಊಟದ ಸ್ಥಳದಲ್ಲಿ ಹುಡುಕಾಡಿದರೆ ಅದು ಸಿಗಲಿಲ್ಲ. ಅದರಿಂದ ಮನನೊಂದು ಮನೆಗೆ ಬಂದರು. ಸತ್ಯಭಾಮಾಳಿಗೆ ನತ್ತು ಕಳೆದದ್ದಕ್ಕಾಗಿ ವ್ಯಸನವಾಗಲಿಲ್ಲ. ಮಗಳು ಗಂಡನ ಮನೆಗೆ ಮೊದಲ ಸಲ ಹೋಗುವಾಗ ಅಪಶಕುನವಾಯಿತೆಂದು ಮನಸ್ಸಿಗೆ ಅಸಮಾಧಾನವಾಯಿತು.
ಅದಕ್ಕಾಗಿ ಆಗ ಸಿದ್ಧಾರೂಢರನ್ನು ಕುರಿತು 'ಹೇ ಸದ್ಗುರುವೇ, ನಿನ್ನ ಮೂರ್ತಿಯನ್ನು ಭಕ್ತಿಯಿಂದ ಪೂಜಿಸುತ್ತಿರುವೆನು. ಈಗ ಈ ಅಪಶಕುನವಾಗಿದೆ. ನಿನ್ನ ಹೊರತು ನಾನೂ ಯಾರನ್ನೂ ಕೇಳುವುದಿಲ್ಲ' ಎಂದು ಮನಸ್ಸಿನಲ್ಲಿ ನೊಂದುಕೊಂಡು ಮನೆಗೆ ಹೋಗಿ ಸಿದ್ದ ಮೂರ್ತಿಯ ಪಾದಗಳನ್ನು ಹಿಡಿದು ಪ್ರಾರ್ಥಿಸಿಕೊಳ್ಳುತ್ತ 'ಸದ್ಗುರುವೇ, ಈ ಸಮಯದಲ್ಲಿ ನೀನೇ ಬಂದು ಈ ಸಂಕಟದಿಂದ ಪಾರುಮಾಡು. ನೀನು ಬರುವವರೆಗೆ ಅನ್ನ ನೀರುಗಳನ್ನು ಮುಟ್ಟುವುದಿಲ್ಲ' ಎಂದು ಗಟ್ಟಿಯಾಗಿ ಬೇಡಿಕೊಂಡಳು.
ಅಷ್ಟರಲ್ಲಿ ಏನಾಯಿತೆಂದರೆ ಯಾವ ಹೆಣ್ಣು ಮಗಳು ನತ್ತನ್ನು ತೆಗೆದುಕೊಂಡು ಹೋಗಿದ್ದಳೋ ಅವಳ ಅತ್ತೆಯ ಕನಸಿನಲ್ಲಿ ಸಿದ್ದಾರೂಢರು ಬಂದು ನಿನ್ನ ಸೊಸೆಯು ನಾಶಿಕಾಭರಣವನ್ನು (ಮತ್ತು) ತೆಗೆದುಕೊಂಡು ಬಂದಿದ್ದಾಳೆ. ಅದನ್ನು ಸತ್ಯಭಾಮಾಬಾಯಿಗೆ ಕೊಟ್ಟು ಬಂದರೆ ಒಳಿತು. ಇಲ್ಲವಾದರೆ ನಿನ್ನ ಮಗನಿಗೆ ದುರ್ದರ ಪ್ರಸಂಗ ಬರುವುದು' ಎಂದು ಹೇಳಿ ಅದೃಶ್ಯರಾದರು. ಕೂಡಲೇ ಅವಳು ಎಚ್ಚೆತ್ತು ಸೊಸೆಗೆ ಕೇಳಿದಾಗ ಸೊಸೆಯು ಒಪ್ಪಿಕೊಂಡು ಅವಳು ಅತ್ತೆಗೆ ತಂದುಕೊಟ್ಟಳು. ನಂತರ ಅತ್ತೆ ಸೊಸೆ ಇಬ್ಬರೂ ಸೇರಿ ರಾತ್ರಿಯಲ್ಲೇ ತಮ್ಮ ಮೋಟಾರ ಕಾರಿನಲ್ಲಿ ಕುಳಿತು ರಾವಜಿಯವರ ಮನೆಗೆ ಬಂದು ಮನೆಯ ಕದವನ್ನು ಬಡೆಯಹತ್ತಿದರು.
ಆಗ ಸತ್ಯಭಾಮಾ ಬಾಗಿಲು ತೆಗೆದಾಗ ಅವರಿಬ್ಬರೂ ಒಳಗೆ ಬಂದು ಸಿದ್ಧರ ಮೂರ್ತಿಗೆ ನಮಿಸಿ ಹೇಳಿದರು 'ಸತ್ಯಭಾಮಾ ಬಾಯಿಯವರೆ, ನಿಮ್ಮ ಮಗಳ ಬೆಲೆಬಾಳುವ ನತ್ತು ನಮ್ಮ ಸೊಸೆಗೆ ಸಿಕ್ಕಿದೆ. ಅವಳಿಗೆ ಗೊತ್ತಾಗದೆ ತಂದಿದ್ದಾಳೆ. ದಯಮಾಡಿ ಕ್ಷಮಿಸಿರಿ. ರಾತ್ರಿ ನನ್ನ ಕನಸಿನಲ್ಲಿ ಸಿದ್ದಾರೂಢರು ಬಂದು 'ಆ ನತ್ತನ್ನು ರಾವಜಿಯವರಿಗೆ ಬೇಗ ಮುಟ್ಟಿಸದಿದ್ದರೆ ನಿಮಗೆ ಸಂಕಟ ಬಂದೊದಗುವುದು' ಎಂದು ಹೇಳಿ ಹೋದರು. ಅದಕ್ಕಾಗಿ ಬಂದಿದ್ದೇವೆ. ತೆಗೆದುಕೊಳ್ಳಿರಿ' ಎಂದು ಅವರಿಗೆ ನತ್ತನ್ನು ಕೊಟ್ಟು ಕ್ಷಮೆಯಾಚಿಸಿ ಹೋದರು. ಇದನ್ನು ನೋಡಿದ ಸತ್ಯಭಾಮಾಬಾಯಿಯು ಶ್ರೀ ಸಿದ್ಧರನ್ನು ನೆನೆಯುತ್ತ ಸದ್ಗುರುವೇ ನನ್ನ ಪ್ರಾರ್ಥನೆಯನ್ನು ಕೇಳಿದಾಕ್ಷಣ ಹುಬ್ಬಳ್ಳಿಯಿಂದ ಬಂದು ನಮ್ಮನ್ನು ಕಾಪಾಡಿದಿರಿ ಗುರುವೇ, ನಿನ್ನ ಲೀಲೆ ಅಗಾಧವಾದುದು' ಎಂದು ಕೊಂಡಾಡಿದಳು.
ಒಂದು ದಿವಸ ಬಿಟ್ಟು ಸತ್ಯಭಾಮಾ ಬಾಯಿಯವರು ತನ್ನ ಮಗಳು ಸೀತಾಳನ್ನು ಕರೆದುಕೊಂಡು ಹುಬ್ಬಳ್ಳಿಯ ಮಠಕ್ಕೆ ಬಂದು ಸದ್ಗುರುಗಳಿಗೆ ನಮಸ್ಕರಿಸಿದಾಗ ಸಿದ್ದರು ಕೇಳಿದರು. `ಸತ್ಯಭಾಮಾ, ನಿಮ್ಮ ನತ್ತು ನಿಮಗೆ ಇಕ್ಕಿದೆಯೇ ಹೇಗೆ?' ಎಂದಾಗ ಬಾಯಿಯವರು `ಸಿದ್ಧ ಗುರುವೇ, ಆ ನತ್ತು ನಿಮ್ಮ ಕೃಪೆಯಿಂದ ಸಿಕ್ಕಿತು. ನಿಮ್ಮ ಲೀಲೆಯನ್ನು ವರ್ಣಿಸಲಸಾಧ್ಯ ತಂದೆ' ಎಂದು ಹೇಳಿ ತಾಯಿ, ಮಗಳು ಸಾಷ್ಟಾಂಗ ನಮಿಸಿ ಆ ನತ್ತನ್ನು ಸಿದ್ಧರ ಪಾದಗಳಿಗೆ ಸಮರ್ಪಿಸಿದರು. ಆಗ ಸದ್ಗುರುಗಳು ಅವರನ್ನು ಎಬ್ಬಿಸಿ ನತ್ತನ್ನು ಸೀತಾಬಾಯಿಯ ಮೂಗಿನಲ್ಲಿಟ್ಟು ಹೇಳಿದರು `ಸೀತಾಬಾಯಿ, ಈ ನತ್ತನ್ನು ನನ್ನ ಪ್ರಸಾದವೆಂದು ಸ್ವೀಕರಿಸು. ಯಾವಾಗಲೂ ನಾಮಸ್ಮರಣೆಯನ್ನು ಮಾಡುತ್ತಿರು' ಎಂದು ಹೇಳಿ ಆಶೀರ್ವದಿಸಿ ಕಳಿಸಿದರು. ಮುಂದೆ  ಅಕ್ಕಲಕೋಟೆಯ ಶರಣಪ್ಪನವರು ಇವರನ್ನು ಕಂಡು ಇವರು ಸಿದ್ದರ ಶಿಷ್ಯರೆಂದು ತಿಳಿದು ಅವರನ್ನು ಮನೆಗೆ ಕರೆದುಕೊಂಡು ಹೋಗಿ ಭಜನೆ ಕೀರ್ತನೆ ಮಾಡಿಸಿ ಈ ಲೀಲೆಯನ್ನು ತಿಳಿಸಿ ಸತ್ಕರಿಸಿ ಕಳಿಸಿದರು.

ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ