ಪತ್ತಾರನಿಗೆ ಬಂಗಾರದ ಕೆಲಸ ಕಲಿಸಿದ ಆರೂಢರು

 🌺 ಪತ್ತಾರನಿಗೆ ಬಂಗಾರದ ಕೆಲಸ ಕಲಿಸಿದ 🌺


ಶಂಕ್ರಪ್ಪ ಅಥಣಿಕರನು ಆಭರಣದ ಕೆಲಸಗಾರನು. ಇವನು ಚತುರ ಬುದ್ದಿಯವನಾಗಿದ್ದು ಸಚ್ಚಿದಾನಂದರ ಶಿಷ್ಯನು. ಕಿರೀಟಕ್ಕೆ ಸುವರ್ಣ ಲೇಪಿಸಬೇಕೆಂದು ಸಿದ್ದರ ಆಜ್ಞೆಯಾಯಿತು. ಒಂದು ಸಲ ಪ್ರಯತ್ನ ಮಾಡಿದನು. ಆದರೆ ಅದರಲ್ಲಿ ಯಶಸ್ವಿಯಾಗದೆ ಬಂಗಾರ ಹಾಳಾಯಿತು, ಜನರು ಇವನು ಬಂಗಾರ ಕಟ್ಟಿದ್ದಾನೆಂದು ಮಾತಾಡುತ್ತಿದ್ದರು. ಇದನ್ನು ಕೇಳದ ಅವನಿಗೆ ಬಹಳ ದುಃಖವಾಯಿತು. ಒಂದು ದಿನ ಚಿಂತೆಯಲ್ಲಿ ಮಲಗಿದಾಗ ಸ್ವಪ್ನದಲ್ಲಿ ಸಿದ್ಧರು ಕಾಣಿಸಿಕೊಂಡು ಹೇಳಿದರು `ಶಂಕ್ರಪ್ಪಾ, ನೀನು ಕಿರೀಟಕ್ಕೆ ಮೊದಲು ಬೆಳ್ಳಿಯ ನೀರು ಲೇಪಿಸಿ ಆಮೇಲೆ ಬಂಗಾರದ ನೀರನ್ನು ಲೇಪಿಸು ಅದರಲ್ಲಿ ಯಶಸ್ವಿಯಾಗುತ್ತಿ' ಎಂದು ಹೇಳಿ ಅದೃಶ್ಯರಾದರು. ಸಿದ್ದರು ಸ್ವಪ್ನದಲ್ಲಿ ಆದೇಶಿಸಿದಂತೆ ಶಂಕ್ರಪ್ಪ, ಮರುದಿನ ಪ್ರಯತ್ನಿಸಿದಾಗ ಉತ್ತಮ ಕಿರೀಟ ಮತ್ತು ಇತರ ವಸ್ತುಗಳು ತಯಾರಾದವು. ಆಗ ಆನಂದವಾಯಿತು. ಶಂಕ್ರಪ್ಪನು ಕುಮುಟಾಕರ ಮಾಮಲೇದಾರರನ್ನು ಕೂಡಿಕೊಂಡು ಸಿದ್ದರನ್ನು ಆನೆಯ ಮೇಲೆ ಕೂಡಿಸಿ ಅದೇ ಬಂಗಾರದ ಕಿರೀಟ ತೊಡಿಸಿ ದೊಡ್ಡ ಮಹೋತ್ಸವ ಮಾಡಿದನು.
ಕೋನಾರಸಾ ಬದಿಯೆಂಬವರು ಸಿದ್ಧರ ಸೇವೆ ಮಾಡಿ ಜನ್ಮ ಸಾರ್ಥಕ ಮಾಡಿಕೊಂಡರು. ಅಂಬಾಬಾಯಿ ಮತ್ತು ಲಕ್ಷ್ಮೀಬಾಯಿ ಹೊಸಕೋಟಿಯೆಂಬ ಅಕ್ಕತಂಗಿಯರು ಸಿದ್ದರ ಚರಣಗಳಲ್ಲಿ ಭಕ್ತಿಯಿಂದ ಸೇವೆ ಮಾಡಿದರು. ಆಪಿಬಾಯಿ ನಗರಕರ ಎಂಬವರು ಪ್ರಪಂಚ ಮಿಥ್ಯಾಯೆಂದು ತಿಳಿದು ಮನೆಯನ್ನು ಬಿಟ್ಟು ಸಿದ್ದರ ಸೇವೆಗೈಯ್ಯುತ್ತ ಮಠದಲ್ಲಿಯೇ ಉಳಿದರು. ಆವೂಬಾಯಿ ಹಲ್ಯಾಳಕರ ಎಂಬವಳು ಶಿವರಾತ್ರಿಯ ಸಮಯದಲ್ಲಿ ನಿರಭಿಮಾನದಿಂದ ಸೇವೆ ಸಲ್ಲಿಸುತ್ತಿದ್ದಳು. ಹೀಗೆ ಅನೇಕ ಭಕ್ತರು ಸಿದ್ಧರನ್ನು ಭಕ್ತಿಯಿಂದ ಸೇವೆ ಸಲ್ಲಿಸಿ ಧನ್ಯರಾದರು.

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉 ಶ್ರೀ ಸಿದ್ಧಾರೂಢರ ಜನ್ಮಸ್ಥಾನದ ಶೋಧ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ