ಶ್ರೀ ಸಿದ್ಧಾರೂಢರ ಜನ್ಮಸ್ಥಾನದ ಶೋಧ
🌺 ಶ್ರೀ ಸಿದ್ಧಾರೂಢರ ಜನ್ಮಸ್ಥಾನದ ಶೋಧ 🌺
ಜಗದ್ಗುರು ಸಿದ್ದಾರೂಢರು ಬ್ರಹ್ಮಾನಂದ ಸಾಮ್ರಾಜ್ಯದ ಅಧಿಪತಿಯಾಗಿ ಭಕ್ತಕೋಟಿಯ ತನುಮನಗಳ ದಾರಿದ್ರವನ್ನು ಕಳೆದು ಮುಮುಕ್ಷುಗಳಿಗೆ ಮುಕ್ತಿಯನ್ನು ನೀಡಿ ಸುಖ ಶಾಂತಿಯ ಭಾಗ್ಯದೇವತೆಯಾಗಿ ಯತಿಗಳಿಗೆ ಮಹಾಯತಿಯಾಗಿ ಮಾತು ಮನಗಳಿಗೆ ನಿಲುಕದ ಮಹಿಮಾನ್ವಿತರಾಗಿದ್ದ ಸಿದ್ದಾರೂಢರು ಹುಬ್ಬಳ್ಳಿಯಲ್ಲಿ ಬಂದು ಮಠ ಸ್ಥಾಪಿಸಿದ ನಂತರ ಅವರ ಅನೇಕ ಶಿಷ್ಯರು ಶ್ರೀಗಳ ಆದೇಶದ ಪ್ರಕಾರ ಶ್ರೀ ಸಿದ್ಧಾರೂಢರ ಚರಿತ್ರೆಗಳನ್ನು ಕನ್ನಡ, ಮರಾಠಿ ಮತ್ತು ಗುಜರಾಥಿ ಭಾಷೆಗಳಲ್ಲಿ ಬರೆದಿದ್ದು, ಅವುಗಳಲ್ಲಿ ಆರೂಢರ ಜನ್ಮ ಸ್ಥಾನ ಬಿದರಿಕೋಟೆಯೆಂದು ಬರೆದಿರುವುದರಿಂದ ಸುಮಾರು ನಾಲ್ಕತ್ತು ನಾಲ್ಕತೈದು ವರ್ಷಗಳ ಹಿಂದೆ ಎಲ್ಲ ಭಕ್ತರೂ ಶ್ರೀಗಳ ಜನ್ಮಸ್ಥಾನ ಬಿದರಿಕೋಟೆಯೆಂದೇ ತಿಳಿದಿದ್ದರು. ಮುಂದೆ ಬೀದರದ ಶ್ರೀ ಶಿವಕುಮಾರಸ್ವಾಮಿಗಳು ಬಸವಕಲ್ಯಾಣ ತಾಲೂಕಿನ ಮುಚಳಂಬ ಗ್ರಾಮದಲ್ಲಿ ೧೯೭೧ರಲ್ಲಿ ಜರುಗಿದ ಶ್ರೀ ನಾಗಭೂಷಣ ಶಿವಯೋಗಿಗಳ ಪ್ರಥಮ ಪುಣ್ಯಾರಾಧನೆಯ ಕಾರ್ಯಕ್ರಮಕ್ಕಾಗಿ ಕಾಶಿಯಿಂದ ಆಗಮಿಸಿದ್ದರು.
ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೂರು ದಿವಸ ಕಳೆದ ನಂತರ ಶ್ರೀಗಳು ರಾತ್ರಿ ಪ್ರಸಾದ ಸೇವಿಸಿ ಮಲಗಿಕೊಂಡಾಗ ಅವರ ಕನಸಿನಲ್ಲಿ ಶ್ರೀ ಗುರು ಸಿದ್ದಾರೂಢರು ದರ್ಶನ ನೀಡಿ ಒಂದು ಗುಲಾಬಿ ಹೂವನ್ನು ಅವರ ಕೈಯಲ್ಲಿ ಕೊಟ್ಟು, ನೀನು ನನ್ನ ಜನ್ಮಸ್ಥಳವಾದ ಚಳಕಾಪುರಕ್ಕೆ ಹೋಗಿ ಅಲ್ಲಿಯ ಜನರಲ್ಲಿ ಧರ್ಮ ಜಾಗೃತಿಗೊಳಿಸು' ಎಂದು ಹೇಳಿ ಅದೃಶ್ಯರಾದರು.
ಆಗ ಅವರು ಎಚ್ಚರಾಗಿ, ಕನಸಿನಲ್ಲಿ ಆದೇಶ ನೀಡಿದ ಆ ಮಹಾಗುರುವಿನ ಆದೇಶವನ್ನು ಪಾಲಿಸಬೇಕೆಂದು ಅನೇಕ ಭಕ್ತರಿಗೆ ಕರೆಸಿ ವಿಚಾರಿಸಿದಾಗ ಚಳಕಾಪುರವು, ಬೀದರ ಶಹರದ ಸಮೀಪವಿರುವುದೆಂದು ತಿಳಿದು ಬಂದಿತು ನಂತರ ಅವರು ಚಳಕಾಪುರ ಗ್ರಾಮಕ್ಕೆ ಬಂದರು. ಅಲ್ಲಿಯ ಜನರಿಗೆ ವಿಚಾರಿಸಿದಾಗ ಶ್ರೀ ಸಿದ್ಧಾರೂಢರು ಜನಿಸಿದ ಮನೆಯನ್ನು ತೋರಿಸಿದರು. ಅದನ್ನು ನೋಡಿದ ಸ್ವಾಮಿಗಳು ಸಂತೋಷಭರಿತರಾಗಿ ಶ್ರೀಗಳ ಮನತನದವರನ್ನು ಭೇಟಿಯಾದರು. ಅದೇ ವರ್ಷ ಚಳಕಾಪುರದ ಎಲ್ಲ ಭಕ್ತಮಂಡಳಿಯನ್ನು ಕೂಡಿಸಿ ಸ್ವಾಮಿಗಳು ಇಲ್ಲಿ ಶ್ರೀ ಸಿದ್ಧಾರೂಢರ ಸ್ಮಾರಕ ರಚಿಸುವುದಾಗಿ ಹೇಳಿದಾಗ ಎಲ್ಲ ಭಕ್ತರು ಒಪ್ಪಿಕೊಂಡು, ಶ್ರೀ ಸಿದ್ಧಾರೂಢರು ಸಣ್ಣವರಿರುವಾಗ ಅಲ್ಲಿಯ ಕೆರೆಯಲ್ಲಿ ದೇವದತ್ತನನ್ನು ಮುಳುಗಿಸಿ ಪುನಃ ಎಬ್ಬಿಸಿ ಲೀಲೆ ಮಾಡಿದ ಆ ಪವಿತ್ರ ಸ್ಥಳವನ್ನು ಶ್ರೀ ಕುಮಾರಸ್ವಾಮಿಗಳಿಗೆ ದಾನವಾಗಿ ಕೊಟ್ಟರು.
ನಂತರ ಅದೇ ಸ್ಥಳದಲ್ಲಿ ಶ್ರೀ ಸಿದ್ಧಾರೂಢ ಗುರುವಿನ ಮಠವನ್ನು ನಿರ್ಮಿಸಿ ಬಹಳ ದೊಡ್ಡ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
