ಸಿದ್ಧರ ಆಶೀರ್ವಾದ ಮಣ್ಣಿನಿಂದ ಹುಲಕೋಟಿ ರಾಮನಗೌಡರು ಶ್ರೀಮಂತರಾದರು
🌺ಸಿದ್ಧರ ಆಶೀರ್ವಾದ ಮಣ್ಣುನಿಂದ ಹುಲಕೋಟಿಯ ರಾಮನಗೌಡರು ಶ್ರೀಮಂತರಾದರು 🌺
ಹುಲಕೋಟಿಯ ಓದುಗೌಡರ ರಾಮನಗೌಡರ ಅಂದಿನ ಮನೆತನದ ಪರಿಸ್ಥಿತಿ (ಕಳೆದ ಶತಮಾನದ ಅಂತ್ಯ ಭಾಗ) ಚನ್ನಾಗಿರಲಿಲ್ಲ, ದುಡಿಯದ ಹೊರತು ಅವರ ತುತ್ತಿನ ಚೀಲ ತುಂಬುತ್ತಿರಲಿಲ್ಲ. ದಿನವೆಲ್ಲ ಮೈ ಹಣ್ಣಾಗುವಂತೆ ಹೊಲದಲ್ಲಿ ದುಡಿದರೂ ಬರುವ ಆದಾಯ ಅತ್ಯಲ್ಪ. ಬೇಸಾಯವನ್ನೇ ಅವಲಂಬಿಸಬೇಕೆಂದರೆ ಭೂಮಿಯೂ ಕಡಿಮೆ. ಅಂಥ ಸ್ಥಿತಿಯಲ್ಲಿಯೂ ರಾಮನಗೌಡರ ದೈವ ಶ್ರದ್ದೆ, ದೇವನಿಷ್ಠೆ, ಸ್ವಾಮಿ ಭಕ್ತಿ ಸಾಧು ಸಂತರ ಬಗೆಗಿನ ಅನುಕಂಪಕ್ಕೆ ಕೊರತೆ ಕಾಣಲಿಲ್ಲ. ರಾಮನಗೌಡರ ಪುಣ್ಯ ವಿಶೇಷವೆನ್ನ ಬೇಕು, ಸಿದ್ಧಾರೂಢರ ಸಾಕು ತಂದೆಯೆನಿಸಿಕೊಂಡಿದ್ದ ಉಜ್ಜಣ್ಣನವರ ಭೀದುಪ್ಪುನ ಸ್ನೇಹ ರಾಮನಗೌಡರಿಗೆ ಲಭಿಸಿತು. ಭೀಮಪ್ಪನು ಹೆಚ್ಚಾಗಿ ಹುಲಕೋಟಿಯಲ್ಲಿ ಇರುತ್ತಿದ್ದನು. ಇವನಿಂದಾಗಿ ರಾಮನಗೌಡರಿಗೆ ಸಿದ್ಧಾರೂಢರ ನಿಕಟ ಪರಿಚಯವಾಯಿತು. ಶಾಸ್ತ್ರ ತತ್ವ ಚಿಂತನೆ ಧ್ಯಾನ ಪ್ರಾರ್ಥನೆಗಳಲ್ಲಿ ಪ್ರೀತಿಯಿದ್ದ ರಾಮನಗೌಡರು ಸಿದ್ದರಲ್ಲಿಗೆ ಬರುತ್ತಿದ್ದರು. ಕೆಲಕಾಲ ಮಠದಲ್ಲಿಯೇ ಉಳಿದುಕೊಳ್ಳತ್ತಿದ್ದರು. ಪ್ರತಿ ಅಮವಾಸ್ಯೆಯ ರಾತ್ರಿ ಜಾಗರಣೆ ಮಾಡುತ್ತಿದ್ದರು. ಒಂದು ಸಲ ರಾಮನಗೌಡರು 'ದೇವಾ, ವೇಮನು ಸ್ವಾಮಿಗಳು ತಿಪ್ಪಿಯನ್ನು ಬಂಗಾರವನ್ನಾಗಿ ಮಾಡಿದರಂತೆ, ಇದು ಎಲ್ಲರಿಗೂ ಸಾಧ್ಯವೇ? ಎಂದು ಸಿದ್ಧಾರೂಢರಿಗೆ ಕೇಳಿದರು. ಆಗ ಸಿದ್ಧರು ಕೂಡಲೇ, ರಾಮನಗೌಡ, ತಿಪ್ಪಿ ತಾನೇ ಹೇಗೆ ಬಂಗಾರವಾಗುತ್ತದೋ? ಅದನ್ನು ಬಂಗಾರವನ್ನಾಗಿ ಮಾರ್ಪಡಿಸಬಹುದು' ಎಂದರು. ರಾಮನಗೌಡರು 'ಅದು ಹೇಗೆ ಸಾಧ್ಯ' ಎಂದು ಕೇಳಿದರು. ಅದಕ್ಕೆ ಪುರುಷ ಪ್ರಯತ್ನ, ದೈವದೊಲುಮೆ, ಗುರು ಅನುಗ್ರಹಗಳು ಬೇಕು' ಎಂದು ಸಿದ್ದರು ನುಡಿದರು, 'ದೇವಾ ನನಗೆ ಅಂಥ ಭಾಗ್ಯ ಯಾವಾಗ ಲಭಿಸುತ್ತದೆ' ಎಂದು ಗೌಡರು ಕೇಳಿದರು. 'ಗುರುಗಳು ಅಂತಃಕರಣ ಉಕ್ಕಿ ಹರಸಿದರೆ, ಎಲ್ಲವೂ ಹುಲುಸಾಗುವದು' ಎಂದರು ಗುರುಗಳು. ರಾಮನಗೌಡರ ಸೇವೆ ಎಂದಿನಂತೆ ಮುಂದುವರೆಯಿತು. ಒಂದು ಅಮವಾಸ್ಯೆಯ ಜಾಗರಣೆ ತೀರಿಸಿ, ರಾಮನಗೌಡರು ಹುಲಕೋಟಿಗೆ ಹೊರಟು ನಿಂತರು. ಸಿದ್ಧರ ಆಶೀರ್ವಾದವನ್ನು ಪಡೆಯಲು ತೋಟದಲ್ಲಿದ್ದ ಗುರುಗಳ ಬಳಿಗೆ ಹೋದರು. 'ದೇವಾ, ಊರಿಗೆ ಹೋಗುತ್ತೇನೆ. ಹರಸು' ಎಂದು ಕಾಲಿಗೆರಗಿ ಮಗ್ಗುಲಿಗೆ ನಿಂತರು. ಆಗ ಸಿದ್ಧರು, 'ರಾಮನಗೌಡ, ಒಡ್ಡು ಉಡಿ' ಎಂದರು. ತೋಟದಲ್ಲಿ ಯ ಮಠದ ಪುಣ್ಯ ಮಣ್ಣನ್ನು ಉಡಿಯಲ್ಲಿ ಹಾಕಿದರು. ಒಯ್ದು ಜಗಲಿಯ ಮೇಲಿಟ್ಟು ಪೂಜಿಸು, ನಿನಗೆ ಕಲ್ಯಾಣವಾಗುವದು' ಎಂದು ಹರಸಿದರು. ವಿಶ್ವಾಸದಿಂದ ಗುರು ಕೊಟ್ಟ ಮಣ್ಣನ್ನೆ' ಹೊನ್ನೆಂದು, ಹುಲುಸೆಂದು ಸ್ವೀಕರಿಸಿ ರಾಮನಗೌಡರು ಹುಲಕೋಟಿಗೆ ಹೋದರು. ಹರ್ಷ ಹರಿದಾಡಿತು, ನೆಮ್ಮದಿ ನೆಲೆನಿಂತಿತು. ಕೆಲವರು ಕೊಂಕು ಬುದ್ಧಿಯವರು 'ಅವನೊಬ್ಬ ಹುಚ್ಚ ಗುರು, ಇವನೊಬ್ಬ ಮಳ್ಳ ಶಿಷ್ಯ' ಎಂದು ತಮ್ಮ ಸಣ್ಣತನವನ್ನು ಕಾರಿಕೊಂಡರು. ಸಿದ್ದರು ಅವರಿಗೆ ಮಣ್ಣು ಕೊಡಲಿಲ್ಲ. ಭೂಮಿಯನ್ನು ನೀಡಿದರು, ತಮ್ಮ ಹಾಗೂ ನೆರೆಹೊರೆ ಊರುಗಳಲ್ಲಿ ಯ ಸಿಕ್ಕ ಎಲ್ಲ ತಿಪ್ಪಿಗಳನ್ನು ಕೊಂಡರು. ಲಾವಣಿ ಹೊಲ ಹಿಡಿದರು, ಮೈ ಬೆವರಿನಿಂದ ಭೂಮಿ ನೆನೆದವು. ರಕ್ತ ಸುಟ್ಟು ದುಡಿದರು. ದೈವದೇವರು ಆಸರೆಯಾದರು. ಮೈದೊಗಲ ಸುಟ್ಟು ಬೂದಿಯಾಗಿ ನೆಲಕ್ಕೆ ಎದ್ದಾಗ ದೈವದ ಬಾಗಿಲು ತೆರೆಯಿತು. ಭೂಮಿತಾಯಿ ಕಣ್ಣೆರೆದಳು. ಎಷ್ಟು ದುಡಿದರೂ ದಣಿಯವರಿಯದ ರಾಮನಗೌಡರು ಮುಟ್ಟಿದ ಮಣ್ಣು - ತಿಪ್ಪಿ ಚಿನ್ನವಾಗತೊಡಗಿತು. ಸಂತಸ, ಸೌಭಾಗ್ಯಗಳು ಸೂಸಿದವು. ಸಿದ್ದರ ಅನುಗ್ರಹದಿಂದ ಓದುಗೌಡರ ಮನೆಯು ಹೆಸರಾಯಿತು.
ಮಠದಲ್ಲಿ ಹರ್ತಿ ಚನ್ನಮ್ಮ, ಡಂಬಳ ನೀಲಮ್ಮ, ಛಬ್ಬಿ ನೀಲವ್ವ, ಕೂಸಿಗಲ್ಲ ತಾಯವ್ವ, ಹುಲಕೋಟಿ ಮರೆವ್ವ ಮೊದಲಾದವರು ಹರ್ಷದಿಂದ ಹಾಡುತ್ತ ಸೇವೆ ಮಾಡುತ್ತಿದ್ದರು. ಆಗ ಸಿದ್ದರು, ಚನ್ನವ್ವ, ನೀಲವ್ವ ಎಲ್ಲರೂ ಬನ್ನಿರಿ, ಬೇಗ ಬನ್ನಿರಿ, ದೇವಕನ್ನಿಕೆಯರು ಬಂದಿದ್ದಾರೆ. ನೋಡಲು ಬನ್ನಿರಿ' ಎಂದು ಕರೆದರು. ಆಗ ಲಕ್ಷ್ಮವ್ವ ಎಂಬ ಹೆಣ್ಣುಮಗಳು, 'ದೇವಾ, ನಾವು ನರಮನುಷ್ಯರು, ನಮಗೆ ಆ ದೇವತೆಗಳು ಹ್ಯಾಂಗ ಕಾಣಬೇಕು'? ಎಂದು ನುಡಿದಳು. ಸಿದ್ದರು ಅವಳ ಮಾತಿಗೆ ನಕ್ಕರು. ''ತಾಯೇ, ಮಹಾತ್ಮರಿಗಿಂತ ಮಹಾತ್ಮರ ಸೇವೆ ಮಾಡುವವರು ಮಿಗಿಲಾಗಿರುತ್ತಾರೆ. ಅಂಥವರನ್ನು ಕಾಣಲೆಂದು ದೇವತೆಗಳು ಬರುತ್ತಾರೆ. ನಿಮಗೆ ದೇವತೆಗಳು ಕಾಣದಿದ್ದರೇನಾಯಿತು? ನಿಮ್ಮನ್ನು ಕಾಣಲು ದೇವತೆಗಳೇ ಬರುತ್ತಾರಲ್ಲ! ಅದರಿಂದ ನೀವು ನಿಜಕ್ಕೂ ದೊಡ್ಡವರು; ನಿಮ್ಮಂಥ ತಾಯಂದಿರ ಪಾದಧೂಳಿಯಿಂದ ಈ ಮಠವು ದೊಡ್ಡದಾಗಿದೆ. ಇಲ್ಲದಿದ್ದರೆ ಇಲ್ಲಿ ಏನು ಐತಿ ಮಣ್ಣು ? ನಾನು ಪುಣ್ಯವಂತ, ನಿಮ್ಮಂಥ ಗಟ್ಟಿಗರಾದ ತಾಯಿಗಳನ್ನು ಪಡೆದಿದ್ದೇನೆ. ನಿಮ್ಮಿಂದ ಈ ಮಠದ ಗೌರವ ಹೆಚ್ಚಿದೆ' ಎಂದು ಸಿದ್ದರು ನುಡಿದರು. ಜೀವಂತ ದೇವರೆನಿಸಿದ್ದ ಸಿದ್ಧರಿಗೆ ಶಿಷ್ಯರೇ ದೇವರು ಆಗಿದ್ದರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
