ಭಕ್ತರ ಸಿಂಧೂ ಸಿದ್ಧಾ

 🌺 ಭಕ್ತರ ಸಿಂಧೂ ಸಿದ್ಧಾ 🌺




ದೂರದ ಕಲಬುರ್ಗಿ ಜಿಲ್ಲೆಯ ದೇವಳಗಾಣಗಾಪೂರದಿಂದ ಅಲ್ಲಿಯ ಸರ್ವಶ್ರೀಗಳಾದ ವಾಮನಭಟ್ಟರು ಹಾಗೂ ದತ್ತಂಭಟ್ಟರು ಶಿವರಾತ್ರಿಯ ಜಾತ್ರೆಯ ಕಾಲಕ್ಕೆ ಹುಬ್ಬಳ್ಳಿಯಲ್ಲಿನ ಒಂದು ಬ್ರಾಹ್ಮಣ ದೇವಸ್ಥಾನದಲ್ಲಿನ ಪೂಜಾ ಸಮಾರಂಭಕ್ಕೆ ಬಂದಿದ್ದರು. ಅವರು ತಮ್ಮ ಪೂಜಾ ಕಾರ್ಯಕ್ರಮ ಪೂರೈಸಿದರು. ಈಗ ಹುಬ್ಬಳ್ಳಿಯಲ್ಲಿ ಸಿದ್ದಾರೂಢರ ಜಾತ್ರಾ ಮಹೋತ್ಸವದೆ, ಹೇಗೂ ಹುಬ್ಬಳ್ಳಿಗೆ ಬಂದಿದ್ದೇವೆ. ಸಿದ್ದಾರೂಢರ ದರ್ಶನ ಮಾಡಿಕೊಂಡು ಹೋಗೋಣ ಎಂದು ಅವರಿಬ್ಬರೂ ಹಣ್ಣು ಹೂ ತಕ್ಕೊಂಡು  ಶ್ರೀಮಠಕ್ಕೆ ಬಂದರು. ಅಪ್ಪನವರ ದರ್ಶನಕ್ಕೆ ದೊಡ್ಡ ಪಾಳಿ. ಅವರು ರೈಲಿನಿಂದ ಗಾಣಗಾಪುರಕ್ಕೆ ಹೋಗಬೇಕು. ಹೆಚ್ಚು ಸಮಯವಿಲ್ಲ. ಈ ಗದ್ದಲದಲ್ಲಿ ಅವರ ದರ್ಶನ ನಮಗೆ ಅಗುವುದೋ ಇಲ್ಲವೋ ಎಂಬ ಚಿಂತೆಯಲ್ಲಿ ಅವರು ನಿಂತಿರುವಾಗ, ಅಪ್ಪನವರ ಬಳಿಯ ಒಬ್ಬ ಶಿಷ್ಯ ಹೇಗೋ ಹಾದಿಮಾಡಿಕೊಂಡು ಬಂದು, ಎತ್ತರವಾದ ಕಟ್ಟೆಯ ಮೇಲೆ ನಿಂತು, “ಗಾಣಗಾಪುರದ ವಾಮಭಟ್ಟರನ್ನು ದತ್ತಂಭಟ್ಟರನ್ನು ಸಿದ್ಧಾರೂಢರು ಕರೆಯುತ್ತಿದ್ದಾರೆ. ಅವರು ಕೂಡಲೇ ಬರಬೇಕು ಎಂದು ಕೂಗಿದ. ಇಬ್ಬರೂ ಭಟ್ಟರು ಸಿದ್ದಾರೂಢರ ಬಳಿಗೆ ಹೇಗೋ ಹಾದಿ ಮಾಡಿಕೊಂಡು ಹೋದರು. ಆಗ ಸಿದ್ದಾರೂಢರು, “ಗಾಣಗಾಪುರದ ದತ್ತಾತ್ರೇಯನ ಭಕ್ತರಾದ ನೀವು ಸಿದ್ಧಾರೂಢರ ದರ್ಶನಕ್ಕೆ ಬರುವ ಮನಸ್ಸು ಹ್ಯಾಂಗ ಮಾಡಿದಿರಿ?” ಎಂದು ಕೇಳಿದರು. ಆಗ ವಾಮನಭಟ್ಟರು, “ಮಹಾಸ್ವಾಮೀ, ಗಾಣಗಾಪುರದ ದತ್ತಾತ್ರೇಯ, ಹುಬ್ಬಳ್ಳಿ ಸಿದ್ಧಾರೂಢರು ಬೇರೆ ಬೇರೆ ಅಲ್ಲವಲ್ಲ. ಅವರು ಇಬ್ಬರೂ ಆ ಪರಮಾತ್ಮನ ಬೆಳಕೇ ಆಗಿದ್ದಾರೆ ಎಂಬ ಗಟ್ಟಿ ನಂಬಿಕೆಯಿಂದ ತಮ್ಮ ದರ್ಶನಕ್ಕೆ ಬಂದಿದ್ದೇವೆ' ಎಂದರು. ಆಗ ಸಿದ್ಧಾರೂಢರು ನಗುತ್ತ, 'ದತ್ತಾತ್ರೇಯನ ದೊಡ್ಡ ಸ್ಥಾನದಿಂದ ಬಂದ ನಿಮ್ಮ ಮನಸ್ಕೂ ಅಷ್ಟೇ ದೊಡ್ಡದು. ಭಗವಂತನನ್ನು ಎಲ್ಲಡೆಗೂ ಕಾಣುವ ನಿಮಗೆ ಆ ಗುರು ಒಳಿತನ್ನುಂಟು ಮಾಡಲಿ' ಎಂದು ಇಬ್ಬರಿಗೂ ಶಾಲು ಹೊದಿಸಿ, ಬೊಗಸೆಗಟ್ಟಲೆ ಬೆಳ್ಳಿ ರೂಪಾಯಿ ಉಡಿ ತುಂಬಿಸಿ, ಸಿದ್ಧಾರೂಢರು ಇಬ್ಬರನ್ನೂ ಹರಸಿದರಂತೆ'.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಅಮರಶಿಲ್ಪಿ ಮಿಶ್ರಿಕೋಟಿ ಕಾಳಪ್ಪ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ