ಅಮರಶಿಲ್ಪಿ ಮಿಶ್ರಿಕೋಟಿ ಕಾಳಪ್ಪ
🌺 ಅಮರಶಿಲ್ಪಿ ಮಿಶ್ರಿಕೋಟಿ ಕಾಳಪ್ಪ 🌺
ಕೈಲಾಸ ಮಂಟಪದ ಗೋಡೆಗಳು ಮೂರು ಮೊಳ ಮೇಲೆದ್ದಿದ್ದವು. ಅದರ ಶಿಲ್ಪಿಯಾದ ಮಿಶ್ರಿಕೋಟಿ ಕಾಳಪ್ಪನಿಗೆ ಪ್ಲೇಗು ಬಂತು. ಅವನಿಗೆ ತೊಡೆಯಲ್ಲಿ ಮತ್ತು ಬಗಲಲ್ಲಿ ದೊಡ್ಡ ದೊಡ್ಡ ಗಂಟು ಕಾಣಿಸಿಕೊಂಡವು. ವಿಪರೀತ ಸಂಕಟವಾಗಿ ಹೊರಳಾಡತೊಡಗಿದನು. ಉರುಳಾಡಲು ಅವನಿಗೆ ಕೈಲಾಸ ಮಂಟಪದ ಮುಂದಿನ ಬಯಲು ಸಾಲದಾಯಿತು. ತಾನು ಉಳಿಯುವದಿಲ್ಲವೆಂದು ಕಾಳಪ್ಪನಿಗೆ ಖಾತ್ರಿಯಾಯಿತು. ತನ್ನ ಮಗನಾದ ಬಸವಣ್ಣೆಪ್ಪನನ್ನು ಅವನು ಹತ್ತಿರಕ್ಕೆ ಕರೆದು, ಬಸವಣ್ಣಿ , ನಾನು ಉಳಿಯುವುದಿಲ್ಲ; ಮಿಶ್ರಿಕೋಟಿಗೆ ಹೋಗಿ ನಿಮ್ಮಮನನ್ನು ಕರೆದುಕೊಂಡು ಬಾ” ಎಂದು ಹೇಳಿದನು. ಕಾಳಪ್ಪನಿಗೆ ವಿಪರೀತ ಜ್ವರ ಏರಿದವು. ಅವನ ಸಂಕಟ ಅಸದಳವಾಯಿತು. ಮೈ ಮೇಲಿನ ಪ್ರಜ್ಞೆ ಉಳಿಯದಂತಾಯಿತು. ಆಗ ಪಾಠಶಾಲೆಯಲ್ಲಿ ಪ್ರವಚನವನ್ನು ಹೇಳುತ್ತಿದ್ದ ಸಿದ್ಧಾರೂಢರು ಅದನ್ನು ಕೂಡಲೇ ಅರ್ಧಕ್ಕೆ ನಿಲ್ಲಿಸಿದರು. 'ಕಾಳ್ಳಾ ಹೋಗುತ್ತಿದ್ದಾನೆ. ನೀವೆಲ್ಲರೂ ನೋಡಬನ್ನಿರಿ'' ಎಂದು ಸಿದ್ಧರು ಎಲ್ಲ ಶಿಷ್ಯರನ್ನು ತಮ್ಮ ಸಂಗಡ ಕರೆದು ತಂದರು. ಮಾರ್ಕಂಡೇಯನ ಚರಿತ್ರೆ ಓದುತ್ತಿದ್ದಿರಿ, ಪುರಾಣದಲ್ಲಿ ಕೇಳುತ್ತಿದ್ದೀರಿ, ಕಾಳ್ಯಾನ ಚರಿತ್ರೆ ನೋಡಬನ್ನಿರಿ ಎಂದು ಸಿದ್ದರು ಎಲ್ಲರನ್ನು ಕರೆದರು. ನೆಲವೇ ಸಾಲದೆಂಬಂತೆ ಸಂಕಟದಿಂದ ಹೊರಳಾಡುತ್ತಿದ್ದ ಕಾಳಪ್ಪನ ಬಳಿಗೆ ಸಿದ್ದರು ನಡೆದು ಬಂದರು. ಕಾಳ್ಯ ನಿನ್ನ ಜೀವನದೊಳಗೆ ಹೊತ್ತು ಮುಳುಗುತ್ತದಲೋ ಎಂದು ಸಿದ್ದರು ನಡೆದು ಬಂದರು. ಕಳ್ಯಾ ನಿನ್ನ ಜೀವನದೊಳಗೆ ಸೂರ್ಯ ಮುಳುಗುತ್ತಿದ್ದಾನಲ್ಲೋ ಎಂದು ಸಿದ್ದರು ಅವನನ್ನು ಪ್ರಶ್ನಿಸಿದರು . ಸಿದ್ದರ ಅಗಮನದಿಂದ ಕಾಳಪ್ಪನಿಗೆ ಬೇಸಿಗೆಯ ಬಿರು ಬಿಸಿಲಿನಲ್ಲಿ ತಂಗಾಳಿ ಬಂದು ಮೈಗೆ ತಂಪನ್ನೆರಚಿದಂತಾಯಿತು. ಅವನು ಸಾವರಿಸಿಕೊಂಡು ದೇವಾ, ನಿನ್ನ ಬಾಳಿನ ಸೂರ್ಯನೇ ನನ್ನೆದರು ಬಂದು ನಿಂತಿರುವಾಗ, ನನ್ನ ಜೀವನದಲ್ಲಿ ಹ್ಯಾಂಗ ಹೊತ್ತು ಮುಳುಗಬೇಕು ಎಂದು ಅಂದನು. ಅಷ್ಟೊತ್ತಿಗೆ ಊರೊಳಗಿನ ವೈದ್ಯರು ಬಂದರು. ಕಾಳಪ್ಪನನ್ನು ಪರಿಪರಿಯಾಗಿ ಪರೀಕ್ಷಿಸಿದರು. ಇವನು ಉಳಿಯಲಾರ, ಮುಂದಿನ ತಯಾರಿ ಮಾಡಲು ಅಡ್ಡಿಯಿಲ್ಲ ಎಂದು ಹೇಳಿ ಹೊರಟು ದೊದರು. ಸಿದ್ಧರು ಕೇವಲ ನಕ್ಕರು, ಕಾಳ್ಯ ಹೋಗತಾನ, ಕಾಳ್ಯ ಹೋದರೆ ಸ್ವತಃ ಬ್ರಹ್ಮನೇ ಈ ಕೈಲಾಸ ಮಂಟಪವನ್ನು ಕಟ್ಟಲು ಬರಬೇಕಾದೀತು. ಅದಕ್ಕೆ ಅವನು ಹೋಗಬಾರದು. ಸಿದ್ದರು ಕಾಳಪ್ಪನ ಹತ್ತಿರ ಮೆಲ್ಲ ಮೆಲ್ಲನೆ ಬಂದು ಕುಳಿತರು. ಆತನ ಮೈ ಮೇಲೆ ಆಶೀರ್ವಾದದ ಅಭಯ ವರಹಸ್ತವನ್ನಿಟ್ಟು , "ಈಗ ಹ್ಯಾಂಗ ಅನಸತದ ? ಎಂದು ಪ್ರಶ್ನಿಸಿದರು. ಯಪ್ಪಾ ಈಗ ಬೇಸಿ ಅನಿಸತೈತಿ, ನೀನು ನನ್ನ ಮ್ಯಾಲೆ ಕೈಯಿಟ್ಟರೆ ನನಗೆ ಸಂಕಟವೇ ಅನಿಸದು. ದೇವಾ, ಯಾವಾಗಲೂ ನಿನ್ನ ಹಸ್ತ ನನ್ನ ತಲೆಯ ಮೇಲಿರಲಿ' ಎಂದು ಕಾಳಪ್ಪನು ಬೇಡಿಕೊಂಡನು. ಆಗ ನಾಶಿಕದ ಶರಣಪ್ಪನು ಮುಂದೆ ಬಂದನು. ತನ್ನ ಹೆಗಲ ಮೇಲಿನ ಸಲ್ಲೆ ಹಾಸಿ, ದೇವಾ ಕಾಳಪ್ಪ ನಮ್ಮ ಮಠದ ವಿಶ್ವಕರ್ಮ' ನಮ್ಮ ಪಾಲಿನ ಅಮರಶಿಲ್ಪಿ, ಅವನಿಗೆ ನಮ್ಮ ಆಯುಷ್ಯ ಕೋಡುತ್ತೇವೆ. ಅವನನ್ನು ನೀನು ನಮಗಾಗಿ ಉಳಿಸಿಕೊಡಬೇಕು'' ಎಂದು ಬೇಡಿಕೊಂಡನು. ಆಗ ಸಿದ್ಧರು ಹೀಗೋ ಭಕ್ತರ ಇಚ್ಛೆ ಇದ್ದಂತಾಗಲಿ ಎಂದು ನುಡಿದರು. ಎಲ್ಲರನ್ನು ಹತ್ತಿರಕ್ಕೆ ಕರೆದು, ಈಗ ಕಾಳ್ಯ ಬದುಕಲಾರ; ಅವನು ಬದುಕಿ ಉಳಿಯಬೇಕಾದರೆ ನೀವು ನಿಮ್ಮ ಆಯುಷ್ಯದ ಕೆಲ ಭಾಗವನ್ನು ಅವನಿಗೆ ಕೊಡಬೇಕು. ಯಾರಾರು ಎಷ್ಟೆಷ್ಟು ಆಯುಷ್ಯ ಕೊಡುತ್ತೀರೋ, ಕೊಡುವವರು ಬೇಗ ಮುಂದೆ ಬನ್ನಿರಿ ಎಂದರು. ಅವರು ನಿರುಪಾದಪ್ಪನನ್ನು ಮುಂದಕ್ಕೆ ಕರೆದು, ನೀನು ಐದು ವರ್ಷ ಕೊಡು ಎಂದರು. ಅವನು ಆಗಲಿ ದೇವಾ ಎಂದನು. ಬೆಟಗೇರಿ ಚನ್ನಬಸಪ್ಪನೆಂಬ ಭಕ್ತ ಮುಂದೆ ಬಂದನು. ಚನಬಸ್ಯಾ, ನೀನೂ ಐದು ವರ್ಷ ಕೊಡು ಎಂದು ಸಿದ್ಧರು ನುಡಿದರು. ಅವನೂ ಐದು ವರ್ಷ ನೀಡಿದನು. ಮುರುಗೋಡದ ಪೀತಾಂಬರಪ್ಪನು ಒಂದು ವರ್ಷ ಆಯುಷ್ಯ ಕೊಟ್ಟನು. ಸಿದ್ಧರು ಆಯುಷ್ಯವನ್ನು ಕಾಳಪ್ಪನಿಗೆ ನೀಡಿದರು. ಅವನು ಮಠದಸೇವೆಗೆ ಬದುಕಿ ಉಳಿದನು. ಅವನು ಕೈಲಾಸ ಮಂಟಪ ಕಟ್ಟಿದನು. ಸಿದ್ದರ ಮೂರ್ತಿಯನ್ನು ನಿರ್ಮಿಸಿದನು. ಅವನು ತನ್ನ ಅಕಾಲಿಕ ಸಾವನ್ನು ಸಿದ್ದರ ದಯೆಯಿಂದ ಜಯಿಸಿದನು. ಸನಿಹ ಬರುವ ಸಾವನ್ನು ದೂರ ಓಡಿಸುವ ಶಕ್ತಿ ಸಿದ್ದಾರೂಢರಿಗಿತ್ತು.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
