ಸಿದ್ಧರಿಂದ ನಿರಕ್ಷರಿ ಯಶವಂತ ಬ್ರಹ್ಮಜ್ಞಾನಿಯಾದ

 🌺 ನಿರಕ್ಷರಿ ಯಶವಂತ ಬ್ರಹ್ಮಜ್ಞಾನಿಯಾದ 🌺



ನಿಜಾಂಪ್ರಾತದ ಆಣೂರು ಗ್ರಾಮದಲ್ಲಿ ಯಶವಂತನೆಂಬ ವ್ಯಕ್ತಿಯಿದ್ದನು. ಅವನ ಮೇಲೆ ಯಾವುದೂ ಒಂದು ಖುನಿ  ಖಟ್ಲೆಯಿದ್ದು ಶರಣಪ್ಪನವರ ಆಶೀರ್ವಾದದಿಂದ ಖಟ್ಲೆಯಿಂದ ಪಾರಾಗಿದ್ದನು. ನಂತರ ಅವನು ಶರಣಪ್ಪನವರಿಗೆ ಮಂತ್ರೋಪದೇಶ ಮಾಡಬೇಕೆಂದು ಬೇಡಿಕೊಂಡನು. ಆಗ ಶರಣರು ಇವನು ಮುಂದೆ ದೊಡ್ಡ ಮನುಷ್ಯನಾಗುವನೆಂದು ತಿಳಿದು ಪಂಚಾಕ್ಷರಿ ಮಂತ್ರೋಪದೇಶ ಮಾಡಿದರು. ಅವನು ಯಾವಾಗಲೂ ಕುಳಿತರೆ ನಿಂತರೆ ಯಾವುದೇ ಕೆಲಸ ಮಾಡುವಾಗ ಮಂತ್ರೋಚ್ಚಾರ ಮಾಡುವುದನ್ನು ಕೇಳಿದ ಅವನ ಹೆಂಡತಿಗೆ ಬೇಸರವಾಗಿ ನೀವು ನಾಮಸ್ಮರಣೆ ಮಾಡುವುದನ್ನು ಬಿಟ್ಟರೆ ಮನೆಯಲ್ಲಿ ಇರುತ್ತೇನೆ. ಇಲ್ಲವಾದರೆ  ತವರು ಮನೆಗೆ ಹೋಗುತ್ತೇನೆಂದು ಸಿಟ್ಟಿನಿಂದ ಹೇಳಿದಳು. ಆಗ ಯಶವಂತನು ಶಾಂತರೀತಿಯಿಂದ ಹೇಳಿದ ನಾನು ಮಂತ್ರೋಚ್ಚಾರಣೆಯನ್ನು ಬಿಡುವುದಿಲ್ಲ. ನಿನ್ನ ಇಚ್ಛೆಯಂತೆ ಆಗಲಿ' ಎಂದು ಅವಳಿಗೆ ಸೀರೆ, ಕುಪ್ಪಸ, ಒಡವ ಮತ್ತು ಒಂದು ಎಮ್ಮೆಯನ್ನು ಕೊಟ್ಟು ಅವಳ ತವರು ಮನೆಗೆ ಕಳಿಸಿಕೊಟ್ಟನು.
ಮುಂದೆ ಅವನಿಗೆ ಒಂದು ಆತಂಕ ತಪ್ಪಿತೆಂದು ತಿಳಿದು ಯಾವಾಗಲೂ ನಾಮಸ್ಮರಣೆ ಮಾಡುತ್ತಿದ್ದನು. ಆಮೇಲೆ ಶ್ರೀ ಸಿದ್ಧಾರೂಢರ ಕೀರ್ತಿಯನ್ನು ಕೇಳಿ ಶ್ರೀ ಶರಣಪ್ಪನವರನ್ನು ಕರೆದುಕೊಂಡು ಸಿದ್ಧರ ಮಠಕ್ಕೆ ಹೋಗಿ ಸದ್ಗುರುಗಳಿಗೆ ಸಾಷ್ಟಾಂಗ ನಮಿಸಿ ನಿಂತಾಗ ಶರಣಪ್ಪನವರು ಯಶವಂತನ ಪರಿಚಯ ಮಾಡಿಕೊಟ್ಟರು. ಆಗ ಸಿದ್ಧ ಹೇಳಿದ `ಯಶವಂತಾ, ನೀನು ಶರಣಪ್ಪನವರ ಸತ್ಸಂಗದಲ್ಲಿರುವುದರಿಂದ ನಿನ್ನ ಅಂತಃಕರಣ ಶುದ್ಧವಾಗಿದೆ. ಇನ್ನು ಮುಂದೆ ನನ್ನ ಚರಿತಾಮೃತವನ್ನು ಪಾರಾಯಣ ಮಾಡು ಎಂದು ಒಂದು ಗ್ರಂಥವನ್ನು ಕೊಟ್ಟರು.
ಆಗ ಯಶವಂತ `ತಂದೆ, ನನಗೆ ಓದು ಬರಹ ಏನೂ ಬರುವುದಿಲ್ಲ. ಹೇಗೆ ಮಾಡಲಿ?' ಎಂದಾಗ ಸಿದ್ದಾರೂಢರು ಅವನ ಕೈ ಹಿಡಿದು ಪಂಚಾಕ್ಷರಿ ಮಂತ್ರ ಬರಸಿ ಅವನ ನಾಲಗೆಯಿಂದ ಐದು ಸಲ ಮಂತ್ರ ನುಡಿಸಿ ಆಶೀರ್ವದಿಸಿದರು. ಮುಂದೆ ಸಿದ್ದರ ಅನುಗ್ರಹದಿಂದ ಓದು ಬರಹ ಕಲಿತು ಚರಿತಾಮೃತ ಗ್ರಂಥವನ್ನು ಪಾರಾಯಣ ಮಾಡಿ ಅದರ ಅರ್ಥವನ್ನು ತಿಳಿದುಕೊಂಡನು. ಮುಂದೆ ನಿಜಾಂಪ್ರಾಂತದ ಮರಾಠಿ ಜನರಿಗೆ ಶಾಸ್ತ್ರ ಬೋಧಿಸುತ್ತ ಪ್ರತಿ ವರ್ಷ ಆ ಪ್ರಾಂತದ ಭಕ್ತರನ್ನು ಸಿದ್ಧರ ಮಠಕ್ಕೆ ಕರೆತಂದು ದರ್ಶನಾಶೀರ್ವಾದಗಳನ್ನು ಮಾಡಿಸಿ ಕಳಿಸುತ್ತಿದ್ದನು. ಇದರಿಂದ ಅವನಿಗೆ ಓಂ ನಮಃ ಶಿವಾಯ ಹೆಸರು ಬಂದಿತು. ಸಂಚಾರ ಮಾಡುತ್ತ ಅಲ್ಲಿ ಪಟ್ಟಣಕ್ಕೆ ಬಂದು ತ್ರಿಷಷ್ಟಿ ಸ್ಥಾನದಲ್ಲಿ ದೇಹ ಬಿಟ್ಟನು. ಅಲ್ಲಿಯ ಜನರು ಓಂ ನಮಃ ಶಿವಾಯ ಗದ್ದುಗೆ ಕಟ್ಟಿಸಿ ಈವರೆಗೆ ಪೂಜೆ ಮಾಡುತ್ತಿದ್ದಾರೆ.


ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ