ಕೈಲಾಸ ಮಂಟಪ ಕಟ್ಟಿದ ಸಾಮಾನ್ಯ ಹಳ್ಳಿ ಬಡಗಿ 🌺

 🌺ಕೈಲಾಸ ಮಂಟಪ ಕಟ್ಟಿದ ಸಾಮಾನ್ಯ ಹಳ್ಳಿ ಬಡಗಿ 🌺



ಕಾಳಪ್ಪ ಹಳ್ಳಿಗಾಡಿನ ಬಡಗಿ, ಹೇಳಿಕೊಳ್ಳುವಂಥ ವಿದ್ಯಾವಂತನೂ ಅಲ್ಪ ಹುಬ್ಬಳ್ಳಿಯ ಮುಗುಲಹಳ್ಳಿ ಮಿಶ್ರಿಕೋಟಿಯ ಸಾಮಾನ್ಯ ಬಡಿಗೇರ್  ಮನೆತನದಲ್ಲಿ ಜನಿಸಿದವ. ರೈತರ ರಂಟಿ , ಕುಂಟಿ  ಕೆತ್ತುವ ಸಾಮಾನ್ಯ ಬಡಗಿ ಎನಿಸಿದ್ದನು. ಅವನು ಕೈಲಾಸಮಂಟಪದ ನಕ್ಷೆಯನ್ನು ನೆಲದ ಮೇಲೆ ಇದ್ದಲಿಯಿಂದ ಬರೆದು ಸಿದ್ಧರಿಗೆ ತೋರಿಸಿದನು, ಸಿದ್ಧರು ಮೊದಮೊದಲು ಕೈಲಾಸಮಂಟಪವನ್ನು ಕಟ್ಟಿಸಲು ಇಚ್ಛೆ ವ್ಯಕ್ತ ಮಾಡಲಿಲ್ಲ. ಕಾಳ್ಯಾ ನೀನೇ ನೋಡತೀ, ನಾವು ಬಡವರು. ಕೇವಲ ಕೈಪಾದವರು. ಬಿಟ್ಟು ತೊಟ್ಟೆನಂದರ ಮತ್ತೊಂದು ಲಂಗೋಟಿಯಿಲ್ಲ. ಇಂಥ ಕಟ್ಟಡ ನಮಗ್ಯಾಕ ಬೇಕು. ಇದು ರಾಜಮಹಾರಾಜರಿಗೆ ಸಲ್ಲುವಂತದ್ದು ಎಂದು ನುಡಿದರು. ಆಗ ಉಜ್ಜಣ್ಣವರ ಲಕ್ಷಮ್ಮ ಎಲ್ಲ ಬಂಗಾರದ ಆಭರಣ ರೊಕ್ಕ ರೂಪಾಯಿ ತಂದು, ಸಿದ್ದರ ಮುಂದೆ ಸುರುವಿದಳು, ಕೈಲಾಸಮಂಟಪ ಕಟ್ಟಲೇ ಬೇಕು ಎಂದಳು. ಎಲ್ಲ ಭಕ್ತರು ಒಕ್ಕೊರಲಿನಿಂದ ಆಗಲೇಬೇಕು. ನಾವು ಇರುತ್ತೇವೆ ಎಂದು ಆಶ್ವಾಸನೆ ಕೊಟ್ಟರು. ಆಗ ಸಿದ್ಧರು, ಹೀಗೋ ಭಕ್ತರ ಇಚ್ಚೆಯಂತಾಗಲಿ' ಎಂದರು. ಕಾಳಪ್ಪನು ಕೈಲಾಸ ಮಂಟಪದ ನಕ್ಷೆಯನ್ನು ಸಿದ್ಧರ ನೆರವಿನೊಂದಿಗೆ ಸಿದ್ಧಪಡಿಸಿದನು. ಕಬ್ಬಿಣ ಕಂಭಗಳನ್ನು ಮಾಡಿಸಬೇಕಾಗಿತ್ತು. ಮುಂಬಯಿಯ ಆಗರ್ಭ ಶ್ರೀಮಂತರಾದ ದಾಬೋಳಕರ ಮಂಗೇಶರಾಯರು ಕಾಳಪ್ಪನನ್ನು ಮುಂಬಯಿಗೆ ಕರೆದುಕೊಂಡು ಹೋದರು. ಮಿಶ್ರಿಕೋಟಿ, ಹಳೇಹುಬ್ಬಳ್ಳಿಯನ್ನೇ ಕಂಡ ಕಾಳಪ್ಪ ಮುಂಬಯಿಯನ್ನು ಕಂಡು ಗಾಬರಿಯಾಗಿ ಕಣ್ಣು ಕಣ್ಣು ಬಿಡತೊಡಗಿದನು. ಕಂಭಗಳನ್ನು ಎರಕ ಹೊಯ್ಯುವ ಒಂದು ಕಾರ್ಖಾನೆಗೆ ಅವರು ಕಾಳಪ್ಪನನ್ನು ಕರೆದೊಯ್ದರು. ಅಲ್ಲಿಯ ಮೆತ್ತನ್ನ ಆಸನಗಳ ಮೇಲೆ ತಾನು ಕುಳಿತರೆ, ಅಲ್ಲಿಯವರು ಏನಂದಾರೋ ಏನೋ ಎಂದು, ಅವನು ಕೂಡಲೇ ನೆಲದ ಮೇಲೆ ಕುಳಿತನು. ಕಾಳಪ್ಪನನ್ನು ಆ ಕಾರ್ಖಾನೆಯ ಮಾಲಿಕನು ಇವನು ಯಾವನೋ ಹಳ್ಳಿಯ ಹುಂಬ ಇರಬೇಕೆಂದು ಅಂದುಕೊಂಡು ಲಕ್ಷಕ್ಕೆ ತರಲಿಲ್ಲ. ಎಲ್ಲಿ ನಿಮ್ಮ ಶಿಲ್ಪಿ ಎಂದು ದಾಬೋಳಕರಿಗೆ ಅವನು ಕೇಳಿದನು. ದಾಬೋಳಕರ ಅವರು ಕಾಳಪ್ಪ ಕಡೆಗೆ ಕೈ ಮಾಡಿ ಇವನೇ ನಮ್ಮ ಶಿಲ್ಪಿ ಎಂದು ಹೇಳಿದರು. ಕಾಳಪ್ಪನ ಹಳ್ಳಿಗಾಡಿನ ಕಗ್ಗ ಉಡಿಗೆ, ಅವನ ಮುಗ್ಧ ಮುಖ ಮಂಡಲವನ್ನು ನೋಡಿ, ಆ ಮಾಲಿಕನು ನಕ್ಕನು. ದಾಬೋಳಕರರೇ ಈ ಹುಚ್ಚನನ್ನು ತೋರಿಸಿ, ಇವನು ಶಿಲ್ಪಿ ಎಂದು ನಮಗೆ ಏಕೆ
ಆಣತಿಸುತ್ತೀರಿ? ಎಂದನು, ಕಂಭದ ನಕ್ಷೆ ಬಿಡಿಸಲು ಅವನು ಕಾಳಪ್ಪನಿಗೆ ಬಿಳೇ ಕಾಗದ ಕೊಡಲಿಲ್ಲ. ಕಟ್ಟರೆ ಕೆಡಲಿ ಎಂದು ಒಂದು ರದ್ದಿ ಕಾಗದ ಕೊಟ್ಟನು. ಕಾಳಪ್ಪನು ನೆಲದ ಮೇಲೆ ಕುಳಿತು , ಪೆನ್ಸಿಲನಿಂದ್ ಒಂದು ಗೀರು ಎಳೆದನು. ಆ ಹಸ್ತ ಸಿದ್ದಿಯನ್ನು ಕಂಡು ಆ  ಮಾಲಿಕನು ಬೆರಗಾದನು. ಆಮೇಲೆ ಹತ್ತಿರ ಕರೆದು ಕೂಡ್ರಿಸಿಕೊಂಡು ಉಪಚರಿಸಿದನು. ಕಾಳಪ್ಪನು ತನ್ನ ಬದುಕನ್ನೇ ಧಾರೆಯೆರೆದು ಕೈಲಾಸಮಂಟಪವನ್ನು ಕಟ್ಟಿದನು. ಅವನು ಕೂಲಿಗಾಗಿ, ಹೊಟ್ಟೆಪಾಡಿಗಾಗಿ ದುಡಿಯಲಿಲ್ಲ. ಅವನ ದೇಹ ಮನ ಬುದ್ದಿಗಳು ಸಿದ್ಧಾರೂಢರಿಗಾಗಿ ಮೀಸಲಾಗಿದ್ದವು. ಅವನು ಮತ್ತು ಅವನ ಸಂಗಡಿಗರು ಮಠದಲ್ಲಿ ನುಚ್ಚು, ಮಜ್ಜಿಗೆ ಉಂಡು, ನೆಲದ ಮೇಲೆ ಮಲಗಿ, ಲೋಕ ಬೆರಗಾಗುವಂಥ ಕಟ್ಟಡ ಕಟ್ಟಿದರು. ಕಾಳಪ್ಪ ಸಿದ್ದರ ಬೆಳಕನಲ್ಲಿ ಬಂದನು. ವ್ಯಕ್ತಿಯಾದವನು ಅವನೊಂದು ಪ್ರಪಂಚ ಶಕ್ತಿಯಾದನು. ಅವನನ್ನು ಎಲ್ಲ ವಿದ್ಯೆಗಳು ಸಹಜವಾಗಿ ಹಿಂಬಾಲಿಸಿದವು. ಸಿದ್ದರ ಸಮಾಧಿಯ ಮೇಲಿರುವ ಸಂಗಮವರಿ ಕಲ್ಲಿನ ಮೂರ್ತಿಯನ್ನು ಕಳೆಯುವಾಗ ಕಾಳಪ್ಪನಿಗೆ ಇನ್ನೂ ಆಳವಾದಶಾಸ್ತ್ರ ಜ್ಞಾನವಿರಲಿಲ್ಲ. ಮುಂಬಯಿಯಲ್ಲಿ ತರಬೇತಿ ಪಡೆದವನೊಬ್ಬನು ಸಿದ್ದರ ಮೂರ್ತಿ ಕಟೆಯಲು ಬಂದನು. ಆಗಿನ ಕಾಲಕ್ಕೆ ಆತನು ಐದು ಸಾವಿರ ರೂಪಾಯಿ ಕೇಳಿದನಂತೆ. ರೊಕ್ಕ ತೆಗೆದುಕೊಂಡು ಮಾಡುವವನ ದುಡ್ಡಿನ ಬುದ್ದಿಗಿಂತ, ಶ್ರದ್ದೆಯಿಂದ ಮಾಡುವ ಕಾಳಪ್ಪನ ಆಸರಳ ಭಕ್ತಿ ಸಿದ್ಧರಿಗೆ ಮೆಚ್ಚಿಗೆಯಾಯಿತು. ನಮ್ಮ ಕಳ್ಯಾ  ಕಡೀತಾನ ಎಂದು ಸಿದ್ಧರು ಹೇಳಿದರು. ಸಿದ್ಧರು ಕಾಳಪ್ಪನ ಎದುರಿಗೆ ಅವನು ಹೇಳಿದಷ್ಟು ಹೊತ್ತು ಬಂದು ಕೂಡ್ರಲಾರಂಭಿಸಿದರು. ಕಾಳಪ್ಪನು ಹೇಳಿದಂತೆ ಸಿದ್ದರು. ಅಲುಗಾಡದೆ, ಕಣ್ಣು ಕೂಡ ಪಿಳಿಕಿಸದೆ ಕುಳಿತರು. ಜಗತ್ತು ಯಾವಾತನ ಪದತಲದಲ್ಲಿ ಅನನ್ಯ ಭಕ್ತಿ ಶ್ರದ್ಧೆಗಳಿಂದ ಹಣೆಹಚ್ಚಿ ಬಾಗತ್ತಿತ್ತೋ , ಆ ಪುರುಷ ಪರಮಾತ್ಮನೆನಿಸಿದ ಸಿದ್ಧರು ಕಾಳಪ್ಪನ ಇಚ್ಛೆಯಂತೆ ಭಕ್ತನ ಎದುರಿಗೆ ಕುಳಿತರು. ಮೂರ್ತಿಯನ್ನು ಕಾಳಪ್ಪ ಸಿದ್ಧಗೊಳಿಸಿದನು. ಶಿಲ್ಪಿಗಳು ಬಂದರು. ನೋಡಿ ಬೆರಗಾದರು. ಕಾಳಪ್ಪ ಅಮರಶಿಲ್ಪಿ ಎಂದು ಕೊಂಡಾಡಿದರು. ಒಬ್ಬ ಕೊಂಕು ಬುದ್ಧಿಯವನು. ಕುತ್ತಿಗೆ ಹಾಗಾಗಬೇಕಾಗಿತ್ತು. ಹೀಗಾಗಬೇಕಾಗಿತ್ತು ಎಂದು ಕೊಂಯಿಗುಟ್ಟಿದನು. ಆಗ ಕಾಳಪ್ಪನು ಸ್ಪಷ್ಟವಾಗಿ ಆ ಶಿವನು ನನ್ನೆದುರಿನಲ್ಲಿ ಬಂದು ಕುಳಿತನು. ನಾನು ಮನದುಂಬಿ ಅವನನ್ನು ನೋಡಿದೆನು. ಹೊರಗೆ ಕಂಡ ಶಿವನು ಮನದೊಳಗೆ ಮೂಡಿದನು. ಮನದಲ್ಲಿ ಮೂಡಿದಂತೆ ಕಲ್ಲಿನಲ್ಲಿ ಕಡೆದು ನಿಲ್ಲಿಸಿದ್ದೇನೆ ಎಂದು ನುಡಿದನು. ಮಿಶ್ರಿಕೋಟಿಯ ಸಾಮಾನ್ಯ ಬಡಿಗೆಯಾದ ಕಾಳಪ್ಪ ಲೋಕ ಬೆರಗಾಗುವಂಥ ಮೂರ್ತಿಯನ್ನು ಪವಾಡ ಎನ್ನುವಂತೆ ಕಟೆದನು.


_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಸಿದ್ಧರ ಹಲ್ಲು ಕಾಳಪ್ಪನ ಮಗ ಬಸವಣ್ಣಿ ಲಿಂಗವಾಯಿತು

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ