ಸಿದ್ಧರ ಹಲ್ಲು ಕಾಳಪ್ಪನ ಮಗ ಬಸವಣ್ಣಿ ಲಿಂಗವಾಯಿತು

 🌺ಸಿದ್ಧರ ಹಲ್ಲು ಕಾಳಪ್ಪನ ಮಗ ಬಸವಣ್ಣಿ ಲಿಂಗವಾಯಿತು 🌺



ಸಿದ್ಧಾರೂಢರು 1929ರಲ್ಲಿ ದೇಹವಿಟ್ಟರು. ಕಾಳಪ್ಪನು ಕೈಲಾಸ ಮಂಟಪ, ಮಠದೊಳಗಣ ತನ್ನ ಕೆಲಸ ಮುಗಿಸಿ ಸಿದ್ಧಾರೂಢರು ಕರುಣಿಸಿದ ಆಯುಷ್ಯ ಪೂರೈಸಿ, ಅವನೂ ಸಿದ್ಧಾರೂಢ ಪಾದ ಸೇರಿದ. ಅವನ ಮಗ 
ಶಿಲ್ಪಿಯಾಗಿದ್ದ ಬಸವಣ್ಣೆಪ್ಪನು ದೇವರ ಒಂದು ವಿಗ್ರಹವನ್ನು ಕಟೇದು ಕೊಡಲು ಹನುಮಸಾಗರ ಬಳಿಯ ಭಕ್ತರೊಡನೆ ಕರಾರು ಮಾಡಿಕೊಂಡನು. ಆ ಭಕ್ತರು ಶಿಲೆಯನ್ನು ತಂದು ಸಿದ್ಧಾರೂಢರ ಮಠದ ಪಾಠಶಾಲೆಯ ಎದುರು ಹಾಕಿದರು. ಸಾಕಷ್ಟು ಮುಂಗಡ ಹಣವನ್ನು ಆ ಊರ ಭಕ್ತರು ಕೊಟ್ಟರು. ಮನಸಿಕರಾಯನಂತಿದ್ದ ಬಸವಣ್ಣೆಪ್ಪ ಮೂರ್ತಿಯನ್ನು ಕಟೆಯುವದನ್ನು ಮುಂದಕ್ಕೆ ಹಾಕುತ್ತಲೇ ಬಂದನು. ದಿನಗಳೇಕೆ. ವರ್ಷಗಳೇ ಉರುಳಿದವು. ಆ ದೇವಾಲಯ ಊರಲ್ಲಿ ಸಿದ್ಧವಾಯಿತು. ಮೂರ್ತಿಯ ಸಿದ್ಧವಾಗಲಿಲ್ಲ ಎಂದು ಭಕ್ತರು ಬಸವಣ್ಣೆಪ್ಪನಿಗೆ ದುಂಬಾಲು ಬಿದ್ದರು. ಸಿದ್ಧಾರೂಢರ ಸೇವೆ ಮಾಡಿದ್ದ ಬಸವಣ್ಣೆಪ್ಪನೇ  ಮೂರ್ತಿಯನ್ನು ಕಟೆಯಬೇಕು. ಅವನಿಂದ ನಿರ್ಮಿತವಾದರೆ ಆ ಮೂರ್ತಿಯಲ್ಲಿ ಜೀವ ಕಳೆ ಉಕ್ಕುತ್ತದೆ. ಮೂರ್ತಿಯ ವೈಭವ ಹೆಚ್ಚುತ್ತದೆ. ನಾಲ್ಕು ದಿವಸ ತಡವಾದರೂ ಅಡ್ಡಿಯಿಲ್ಲ ಎಂದು ಆ ಊರಿನ ಭಕ್ತರು ಬಸವಣ್ಣೆಪ್ಪನಿಗೆ ವಿಶೇಷ ಸವಲತ್ತು ನೀಡಿದರು. ಅದು ಅತಿಯಾಯಿತೇನೋ! ಬಸವಣ್ಣಪ್ಪ ಮತ್ತೆ ದಿನಗಳೆದನು, ಆ ಜನಗಳ ಸೈರಣೆ ಮಿಕ್ಕಿತು,ಭಕ್ತವಂತರಾದ ಅವರು ''ಬಸವಣ್ಣೆಪ್ಪ , ನೀನೂ ಬೇಗ ಮೂರ್ತಿಯನ್ನು ಕಟೆಯದಿದ್ದರೆ, ಅನಿವಾರ್ಯವಾಗಿ ನಾವೇ ನಿನ್ನನ್ನು ಕಟೆಯಬೇಕಾಗುತ್ತದೆ' ನೋಡು ಎಂದು ಸಲುಗೆ ಮಿಶ್ರಿತ ವಾತ್ಸಲ್ಯ ಭಕ್ತಿಯಿಂದ ಬಿನ್ನವಿಸಿಕೊಂಡರು. ಹಲವು ಊರು ಆಡ್ಡಾಡಿ ಹುಡಕ್ಯಾಡಿ ಅವರು ಬಸವಣ್ಣೆಪ್ಪನನ್ನು ಹುಬ್ಬಳ್ಳಿಗೆ ಕರೆದು ತಂದರು. ಮೂರ್ತಿ ಸಿದ್ಧವಾಗುವವರೆಗೂ ನಿನ್ನ ಬಳಿಯೇ ಇರುತ್ತವೇ  ಎಂದರು. ಶಿಲೆಯ ಪೂಜೆ ಆಯಿತು. ಶಿಲ್ಪಿ ತನ್ನ ಕಾರ್ಯ ಪ್ರಾರಂಭಿಸಿದ ಕಾರ್ಯ ಭರದಿಂದ ನಡೆದಿತ್ತು. ದೇವತಾ ವಿಗ್ರಹ ರೂಪಗೊಳ್ಳುತ್ತಿತ್ತು. ಒಂದು ದಿವಸ ಮೈಸೂರ ಕಡೆಯ ಹಿರಿಯ ಶಿಲ್ಪಿಗಳ ಒಂದು ತಂಡವು ಕ್ಷೇತ್ರ ದರ್ಶನ ಮಾಡುತ್ತ ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಬಂದಿತು. ಯೋಗಯೋಗ ಎನ್ನಬೇಕು. ಆ ತಂಡವು ಬಸವಣ್ಣೆಪ್ಪನುಮೂರ್ತಿ ಕಟೆವಲ್ಲಿಗೆ ಬಂದಿತು. ಒಬ್ಬರು ಬಸವಣ್ಣೆಪ್ಪನ ಹಸ್ತಸಿದ್ಧಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೊಬ್ಬರು ಮೂರ್ತಿಯ ಪೂಜಾ ಫಲ ವೈಭವದತ್ತ ದೃಷ್ಟಿ ಹರಿಸುತ್ತ ಲೆಕ್ಕ ಹಾಕತೊಡಗಿದರು. ಗುಣಾವಗುಣಗಳ ಚಿಂತನೆ ನಡೆಯಿತು. ಆ ತಜ್ಞನು ಕೆಲ ಹೊತ್ತು ಚಿಂತನೆ ಮಾಡಿ, ಮೂರ್ತಿಯು ಬೇಗ ಪೂಜೆಗೊಳ್ಳುತ್ತದೆ. ಒಂದು ವಿಶೇಷವೆಂದರೆ ಮೂರ್ತಿಯು ಪೂಜೆಗೊಳ್ಳುವ ದಿವಸವೇ ಅದನ್ನು ನಿರ್ಮಿಸುವ ಶಿಲ್ಪಿಯ ಪೂಜೆಯೂ ಆಗುತ್ತದೆ ಎಂದು ಭವಿಷ್ಯ ನುಡಿದನು. ಅವನ ಭವಿಷ್ಯ ಉಳಿದವರ ಮೇಲೆ ಏನು ಪರಿಣಾಮ ಮಾಡಿತೋ ತಿಳಿಯಲಿಲ್ಲ. ಆದರೆ ಶಿಲ್ಪಯಾದ ಬಸವಣ್ಣೆಪ್ಪನ ಅಂತಃಕರಣವನ್ನೆ ಆ ಮಾತು ಅಲುಗಾಡಿಸಿತು. ಅವನ ಜೀವನ ತಂತಿಯೇ ನಡುಗಿತು. ಮೂರ್ತಿಯ ಕೆಲಸ ಹೆಚ್ಚು ಕಡಿಮೆ ಮುಗಿಯುತ್ತ ಬಂದಿತ್ತು. ಪೂರ್ಣಗೊಂಡರೆ, ಆ ಭಕ್ತರು ನಿಂತ ಕಾಲ ಮೇಲೆಯೇ ಅದನ್ನು ಊರಿಗೆ ಒಯ್ಯುತ್ತಾರೆ. ಪ್ರಾಣ ಪ್ರತಿಷ್ಟಾಪನಾ ಕಾರ್ಯವು ನಡೆದು, ಆ ಮೂರ್ತಿ ಪೂಜೆಗೊಳ್ಳುತ್ತದೆ. ಆ ಕಲ್ಲಿನಲ್ಲಿ ಪ್ರಾಣ ತುಂಬುವಾಗಲೇ ಅದೇ ಕಲ್ಲುಮೂರ್ತಿ ಮನುಷ್ಯ ಜೀವಿಯಾದ ನನ್ನ ಶರೀರದಲ್ಲಿಯ ನನ್ನ ಪ್ರಾಣವನ್ನೇ ತೆಗೆಯುತ್ತದೆಯಲ್ಲ ಎಂದು ಬಸವಣ್ಣೆಪ್ಪ ಗಡಗಡನೆ ನಡುಗಿದ. ಏನು ಮಾಡಬೇಕೆಂದು ಅವನಿಗೆ ತಿಳಿಯಲಿಲ್ಲ. ಒಂದು ವಾರಕೆಲಸ ನಿಲ್ಲಿಸಿದ. ಚಿಂತೆ ಆವರಿಸಿತು. ನಿದ್ರೆ ಬತ್ತಿತು. ಹಸಿವು ಅಡಗಿತು. ಈ ಕಾರ್ಯವನ್ನು ನಾನು ಹಿಡಿಯಲೇಬಾರದಾಗಿತ್ತು ಎಂದು ಅವನ ಮನ ಲೆಕ್ಕ ಹಾಕಿತು. ಸಮಾಧಾನ ಉಳಿಯಲಿಲ್ಲ. ಮೂರ್ತಿಯ ಕಾರ್ಯ ಪೂರ್ಣಮಾಡಿದರೆ ನನ್ನ ಮರಣವೇ ಹತ್ತಿರ ಹತ್ತಿರ ಬರುತ್ತದೆ. ಏನು ಮಾಡಲಿ? ಯಾರನ್ನು ಮೊರೆ ಹೋಗಲಿ? ಅಯ್ಯೋ ! ಎಂದು ಅವನ ಜೀವವು ಮಮ್ಮಲನೆ ಮರುಗಿತು. ಮುಕ್ತಾಯ ಹಂತದಲ್ಲಿದ್ದ ಕೆಲಸ ನಿಲ್ಲಿಸಿ, ಸಿದ್ಧಾರೂಢ ಪರಮಾತ್ನ ಮಾಡಿದಂತಾಗಲಿ ಎಂದು ಬಸವಣ್ಣೆಪ್ಪ ತಮ್ಮ ರಾದ ಮಿಶ್ರಿಕೋಟಿಗೆ ಬಂದು, ಅಲ್ಲಿಯೂ ಹತ್ತು ಹಲವು ಚಿಂತೆಗಳು ಅವನನ್ನು ಹರಿದು ತಿನ್ನತೊಡಗಿದವು. ಮರಣ ಹತ್ತಿರ ಬಂದಂತೆನಿಸಿದ ಅವನ ಮೈಯೊಳಗಿನ ನರಗಳೇ ಸತ್ತಂತಾದವು. ಅವನು ತಾಯಿ ತಂದೆಯನ್ನು ನೆನೆದ. ಸದ್ದುರು ಸಿದ್ದಾರೂಢರನ್ನು ನೆನೆಯುತ್ತ ಭಾರವಾದ ಹೃದಯದೊಂದಿಗೆ ಕಟ್ಟಿಗೆಯ ದೊಡ್ಡದಾದ ಸಂದುಕದ ಮೇಲೆ ಅವನು ಮಲಗಿದ. ಚಿಂತೆ ಮಾಡಿ ಹಣ್ಣಾದ ದೇಹಕ್ಕೆ ಜಂಪು ಹತ್ತಿತು. ಅವನು ಒಂದು ಸುಂದರ ಸ್ವಪ್ನ ಕಂಡನು, ಆ ಸ್ವಪ್ನದಲ್ಲಿ ತಂದೆ ಕಾಳಪ್ಪನು ಅಡ್ರಸಿ  ಅವನೆಡೆಗೆ ಓಡಿ ಬಂದನು. “ಬಸವಣ್ಣಿ, ನೀನು  ಪಡುವ ಯಾತನೆ ಕಂಡು ತಂದೆಯಾದ ನನ್ನ ಕರುಳಿಗೆ ಕಿಚ್ಚು ಇಟ್ಟಂತಾಯಿತು. ಗಡನಾ  ಹೋಗಿ ನಾನು ಸಿದ್ಧಾರೂಢರ ಪಾದಕ್ಕೆರಗಿದೆ. ತಂದೇ, ಬಸವಣ್ಣಿಗೆ ಬರುವ ಈ ಆಕಾಲ  ಮರಣವನ್ನು ತಪ್ಪಿಸು ದೇವಾ ಎಂದು ಬೇಡಿಕೊಂಡೆ. ಆಗ ಸಿದ್ಧಾರೂಢ ಅಪ್ಪನು ನನಗೆ  “ಕಾಳ್ಯಾ ಈ ಅಕಾಲ ಮರಣ ತಪ್ಪಿಸಲು ಒಂದು ಉಪಾಯವಿದೆ. ಬಸವಣ್ಣಿ ಅದನ್ನು ಮಾಡಿದರೆ, ಈ ಬರುವ ಗಂಡಾಂತರದಿಂದ ಪಾರಾಗುತ್ತಾನೆ ಎಂದು ಹೇಳಿದರು, ಏನು ಉಪಾಯ? ಎಂದು ಕಾಳಪ್ಪ ಕೇಳಿದ. ಆಗ ಸಿದ್ಧಾರೂಢರು ಹಿಂದೊಮ್ಮೆ ನಡೆದ ಪ್ರಸಂಗವನ್ನು ನೆನಪಿಸಿದರು”. ಆ ಪ್ರಸಂಗ ಹೀಗಿದೆ. ೧೯೧೫ ರಲ್ಲಿ ಸಿದ್ಧಾರೂಢರ ಶೂಲದ ಒಂದು ಹಲ್ಲು ಅಲುಗಾಡತೊಡಗಿತ್ತು. ಅವರು ಕಾಳಪ್ಪನಿಗೆ ಅದನ್ನು ಕಿತ್ತಿ ತಗೆಯಲು ಹೇಳಿದರು. ಕಾಳಪ್ಪನು ಆ ಹಲ್ಲನ್ನು ಕಿತ್ತಿ ತೆಗೆದು, ದೇವಾ ಇದನ್ನು ಎಲ್ಲಿ ಚೆಲ್ಲಲಿ? ಎಂದು ಕೇಳಿದ. ಆಗ ಸಿದ್ದಾರೂಢರು, "ಕಾಳಾ ಆ ಹಲ್ಲನ್ನು ಅಲ್ಲಿ ಇಲ್ಲಿ ಚೆಲ್ಲಬೇಡ. ಅದು ನಿಮಗ ಒಂದು ದಿವಸ ಉಪಯೋಗಕ್ಕೆ ಬರತದ; ಜೋಪಾನವಾಗಿ ಇಡು' ಎಂದು ಹೇಳಿದರು. ಕಾಳಪ್ಪನು ಆ ಹಲ್ಲನ್ನು ಜತನದಿಂದ ತಂದು, ಮಿಶ್ರಿಕೋಟಿಯ ತನ್ನ ಮನೆಯಲ್ಲಿನ ಕಟ್ಟಿಗೆಯ ದೊಡ್ಡ ಸಂದುಕದ ಒಳಗಡೆಯ ಬಲ ಮೂಲೆಯಲ್ಲಿ ಒಂದು ಕರ್ಪೂರದ ಡಬ್ಬಿಯಲ್ಲಿ ಇಟ್ಟನು. ದಿನಗಳು ಉರುಳಿದವು. ಸಿದ್ಧಾರೂಢರು ದೇಹ ಇಟ್ಟರು. ಕಾಳಪ್ಪನೂ ದೇಹಯಿಟ್ಟ. ಆ ಹಲ್ಲು ಅಲ್ಲಿಯೇ ಇತ್ತು. ಸಿದ್ಧಾರೂಢರು ಆ ಹಲ್ಲನ್ನು ನೆನಪಿಸುತ್ತ ಕಾಳಪ್ಪನಿಗೆ, "ಕಾಳಾ ಬಸವಣ್ಣಿ ಈಗ ಆ ಶೂಲದ ಹಲ್ಲಿನ ಪೀಟಕ ಮಾಡಿ, 'ಲಿಂಗವನ್ನು ನಿರ್ಮಿಸಿ, ಅಂಗದ ಮೇಲೆ ಆ ಲಿಂಗವನ್ನು ಕಟ್ಟಿಕೊಂಡು ಪೂಜಿಸತೊಡಗಿದರೆ, ಈಗ ಬರುವ ಅಕಾಲಿನ ಮರಣ ತಪ್ಪುತ್ತದೆ ನೋಡು' ಎಂದು ಹೇಳಿದರು. ಕಾಳಪ್ಪನು ಈ ವಿಷಯವನ್ನು ಬಸವಣ್ಣಿಗೆ ತಿಳಿಸಿದನು. ಸ್ವಪ್ನದಲ್ಲಿ ಯೇ ಬಸವಣ್ಣೆಪ್ಪನು ಕಾಳಪ್ಪನಿಗೆ ತಂದೇ ಆಶೂಲದ ಹಲ್ಲು ಎಲ್ಲಿದೆ? ಎಂದು ಕೇಳಿದ. ಆಗ ಕಾಳಪ್ಪನು ಬಸವಣ್ಣಿ , “ ನೀನು ಯಾವ ಸಂದುಕದ ಮೇಲೆ ಈಗ ಮಲಗಿರುವಿಯೋ ಅದೇ ಸಂದುಕದ ಒಳಗಡೆಯ ಬಲ ಮೂಲೆಯಲ್ಲಿರುವ ಕಪ್ಪುರದ ಡಬ್ಬಿಯಲ್ಲಿದೆ ನೋಡು' ಎಂದು ಹೇಳಿದ. ಬಸವಣ್ಣೆಪ್ಪನಿಗೆ ಹರ್ಷವಾಯಿತು. ಸಿದ್ಧಾರೂಢರ ದಯೆಯಿಂದ ಬರುವ ಅಕಾಲಿಕ ಮರಣ ತಪ್ಪಿತು ಎಂದು ಸಂತಸದಿಂದ ನಿದ್ರೆಯಿಂದ ಎದ್ದ. ಸಂದುಕವನ್ನು ತೆಗೆದ, ಕರ್ಪೂರದ ಡಬ್ಬಿಯನ್ನು ತೆರೆದ. ಸಿದ್ಧಾರೂಢರ ಶೂಲದ ಹಲ್ಲನ್ನು ಕೈಯಲ್ಲಿ ಹಿಡಿದಾಗ, ಅವನಿಗೆ ಹೊಸ ಜೀವ ಬಂದಂತಾಯಿತು. ಪ್ರಾಣಕ್ಕಿಂತ ಯಾವುದೂ ದೊಡ್ಡದಲ್ಲ ಎಂದು ಹಲ್ಲನ್ನೇ ಪೀಟಕ ಮಾಡಿ, ಲಿಂಗ ಧರಿಸಿದ. ಬಸವಣ್ಣಪ್ಪನ ಅಕಾಲ ಮರಣ ಗುರುದಯೆಯಿಂದ ದೂರಾಯಿತು. ಜನಿವಾರವೇ ಶಿವದಾರವಾಯಿತು. ಶಿವದಾರವೇ ಜನಿವಾರವಾಯಿತು. ಸಿದ್ಧರು ನಂಬಿದ ಭಕ್ತರ ಕೈ ಎಂದೂ ಬಿಡಲಿಲ್ಲ. ಅವರು ಜಾಗೃತ ದೇವರು.


_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಸಿದ್ಧರ ಆಶೀರ್ವಾದ ಮಣ್ಣುನಿಂದ ಹುಲಕೋಟಿಯ ರಾಮನಗೌಡರು ಶ್ರೀಮಂತರಾದರು

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ