ಕಾಡಿನಲ್ಲಿದ್ದ ಭಕ್ತರ ರಕ್ಷಣೆ ಮಾಡಿದ ಸಿದ್ಧಾರೂಢರು
🌺 ಕಾಡಿನಲ್ಲಿದ್ದ ಭಕ್ತರ ರಕ್ಷಣೆ 🌺
ಹುಬ್ಬಳ್ಳಿ ತಾಲೂಕು ಮಂಟೂರು ಗ್ರಾಮದ ನಿವಾಸಿಗಳಾದ ವೀರಭದ್ರಪ್ಪ, ಅಣಸಿನಕಾಯಿಯವರು ಶ್ರೀ ಸಿದ್ಧಾರೂಢರ ಪರಮ ಭಕ್ತರಾಗಿದ್ದರು. (ಮೆಣಸಿನಕಾಯಿ ಬಿಕ್ಷೆ ಮಾಡಿ ಮಠಕ್ಕೆ ಅರ್ಪಿಸುವ ಅವರಿಗೆ ಮೆಣಸಿನಕಾಯಿ ಎಂಬ ಹೆಸರು ಬಂದಿದೆ) ಅವರು ಅನೇಕ ಊರುಗಳಲ್ಲಿ ಸಂಚರಿಸಿ ಮೆಣಸಿನಕಾಯಿ ಭಿಕ್ಷೆ ಮಾಡಿ ಸಿದ್ಧರಿಗೆ ಅರ್ಪಿಸುವ ಸೇವೆ ಮಾಡುತ್ತಿದ್ದರು. ಅವರು ರೂಢಿಯಂತೆ ಒಂದು ದಿನ ಸಿದ್ಧರ ಮಠಕ್ಕೆ ಹೋಗಿ ಅವರ ದರ್ಶನ ತೆಗೆದುಕೊಂಡಾಗ ಸಿದ್ದ ಹೇಳಿದ 'ವೀರಭದ್ರ ಕೈಲಾಸ ಮಂಟಪದ ನಿರ್ಮಾಣಕ್ಕಾಗಿ ಬಹಳ ಕಟ್ಟಿಗೆ ಬೇಕಾಗುತ್ತದೆ. ಅಡವಿಗೆ ಹೋಗಿ ಕಟ್ಟಿಗೆ ತರಬೇಕಲ್ಲ' ಎಂದಾಗ ವೀರಭದ್ರಪ್ಪ ಹೇಳಿದ `ತಂದೆ, ನಾಳೆಯೇ ಹೋಗಿ ಬರುತ್ತೇನೆ' ಎಂದು ಹೇಳಿ ಆಶೀರ್ವಾದ ತೆಗೆದುಕೊಂಡು ಮನೆಗೆ ಹೋಗಿ ಗುರುಗಳ ಆಜ್ಞೆಯಂತೆ ಮರುದಿನ ನಾಲ್ಕಾರು ಚಕ್ಕಡಿಗಳನ್ನು ತಗೆದುಕೊಂಡು ತನ್ನ ಸಂಗಡಿಗರನ್ನು ಕೂಡಿಕೊಂಡು ಮಠಕ್ಕೆ ಹೋದನು. ನಂತರ ಗುರುಗಳ ದರ್ಶನ ತೆಗೆದುಕೊಂಡು ಹೊರಡಲು ನಿಂತಾಗ ಸದ್ಗುರುಗಳು ಅವರಿಗಾಗಿ ರೊಟ್ಟಿ, ಅನ್ನ, ಕಾಯಿಪಲ್ಲೆಗಳಿಂದ ತುಂಬಿದ ಬುತ್ತಿಯ ಗಂಟನ್ನು ಅವರ ಕೈಗೆ ಕೊಟ್ಟು ಕಾರವಾರ ರಸ್ತೆಯವರೆಗೆ ಬಂದು ಆಶೀರ್ವದಿಸಿ ಕಳಿಸಿದರು. ಭಕ್ತರು ಓಂ ನಮಃ ಶಿವಾಯ ಮಂತ್ರ ಭಜನ ಮಾಡುತ್ತ ಇದ್ದರ ಜಯಜಯಕಾರ ಮಾಡುತ್ತ ಕಿರವತ್ತಿ ಕಾಡಿಗೆ ಹೋದರು.
ಅನೇಕ ಕ್ರೂರ ಪ್ರಾಣಿಗಳಿಂದ ಮತ್ತು ದೊಡ್ಡ ದೊಡ್ಡ ಗಿಡಮರಗಳಿಂದ ಕೂಡಿದ ಕಿರವತ್ತಿ ಕಾಡಿನಲ್ಲಿ ಎತ್ತುಗಳನ್ನು ಒಂದು ಗಿಡಕ್ಕೆ ಕಟ್ಟಿ ಹೊಟ್ಟು ಮೇವು ಹಾಕಿ ಚಕ್ಕಡಿಯಲ್ಲಿ ಕಟ್ಟಿಗೆಯ ದೊಡ್ಡ ದೊಡ್ಡ ಬೊಡ್ಡೆಗಳನ್ನು ಹೇರಿದರು. ಆಮೇಲೆ ಅಲ್ಲಿಯೇ ಇರುವ ವಿಶಾಲ ಕೊಳದ ದಂಡೆಯಲ್ಲಿ ಕುಳಿತು ಪ್ರೀತಿಯಿಂದ ಸಿದ್ಧ ಕೊಟ್ಟ ಬುತ್ತಿಯ ಗಂಟನ್ನು ಬಿಚ್ಚಿ ಊಟ ಮಾಡಿ ನೀರು ಕುಡಿದು ಗಿಡಕ್ಕೆ ಕಟ್ಟಿದ ಎತ್ತುಗಳನ್ನು ಬಿಚ್ಚಿ ಚಕ್ಕಡಿಗೆ ಕಟ್ಟಲು ತರುವಾಗ ಎತ್ತುಗಳು ತಮ್ಮ ಮೂಗಿನ ವಾಸನೆಯಿಂದ ಸಮೀಪದಲ್ಲಿ ಹುಲಿಯಿರುವುದನ್ನು ತಿಳಿದು ದಾರವನ್ನು ಜಗ್ಗತೊಡಗಿದವು. ಇವು ಎಕೆ ಜಗ್ಗು ತ್ತವೆಯೆನ್ನುವುದು ಭಕ್ತರಿಗೆ ತಿಳಿಯಲಿಲ್ಲ. ಅಲ್ಲಿಯೇ ಸಮೀಪದಲ್ಲಿ ಗಿಡದ ಕೆಳಗಿರುವ ದೊಡ್ಡ ಕಂಟೆಯಲ್ಲಿ ಅಡಗಿದ್ದ ಹುಲಿಯು ಎತ್ತಿನ ಮೇಲೆ ಕಣ್ಣಿಟ್ಟಿದೆ. ಅತ್ತ ನೀರಿನ ಕೊಳದಲ್ಲಿರುವ ದೊಡ್ಡ ಮೊಸಳೆ ಬಾಯ್ದೆರೆದು ಕುಳಿತಿದೆ. ಈ ಎರಡರ
ಮಧ್ಯದ ಕಾಲ್ದಾರಿಯಲ್ಲಿ ಎತ್ತುಗಳು ಮತ್ತು ಭಕ್ತರಿದ್ದಾರೆ. ಆಗ ಹುಲಿಯು ಎತ್ತಿನ ಮೇಲೆ ಠಣ್ಣನೆ ಜಿಗಿಯಿತು. ಆಗ ವೀರಭದ್ರಪ್ಪ ಹಿಡಿದ ಎತ್ತು, ದಾರವನ್ನು ಕೊಸರಿಕೊಂಡು ಓಡಿತು. ಜಿಗಿದ ಹುಲಿಯು ನೇರವಾಗಿ ಮೊಸಳೆಯ ಬಾಯಿಗೆ ಸಿಕ್ಕಾಗ ಮೊಸಳೆಯು ಹುಲಿಯನ್ನು ಎಳೆದುಕೊಂಡು ನೀರೊಳಗೆ ಮುಳುಗಿತು.
ಈ ಭಯಾನಕ ದೃಶ್ಯವನ್ನು ನೋಡಿದ ಭಕ್ತರು ಗಾಬರಿಗೊಂಡು ತಂದೆ ಸಿದ್ಧಾರೂಢಾ, ಇಂದು ನಮ್ಮನ್ನು ಸಂಕಟದಿಂದ ನೀನೇ ಉಳಿಸಿದ ತಂದೆ' ಎಂದು ಸಿದ್ಧರನ್ನು ಸ್ಮರಿಸುತ್ತ ಎತ್ತುಗಳನ್ನು ಚಕ್ಕಡಿಗೆ ಕಟ್ಟಿ ಭಜನೆ ಮಾಡುತ್ತ ಮಠಕ್ಕೆ ಬಂದಾಗ ಸಿದ್ದರು , ಅವರ ದಾರಿಯನ್ನೇ ನೋಡುತ್ತಿದ್ದ. ಆಗ ಭಕ್ತರು ಚಕ್ಕಡಿಗಳನ್ನು ಒಂದು ಕಡೆಗೆ ನಿಲ್ಲಿಸಿ ಎತ್ತುಗಳನ್ನು ಬಿಚ್ಚಿ ಒಂದೆಡೆ ಕಟ್ಟಿ ಸಿದ್ಧರಿಗೆ ವಂದಿಸಿದಾಗ ಸಿದ್ಧರು ನಗುತ್ತ ವೀರಭದ್ರಾ ಅಡವಿಯಲ್ಲಿ ನಡೆದ ಘಟನೆಯ ಕಾಲದಲ್ಲಿ ನಿನಗೆ ಬಹಳ ಅಂಜಿಕೆಯಾಗಿತ್ತೆ? ನಾನು ಅಲ್ಲಿಯೇ ಇದ್ದದ್ದು ನಿನಗೆ ಗೊತ್ತಾಗಲಿಲ್ಲವೆ?' ಎಂದಾಗ ವೀರಭದ್ರಪ್ಪ ಹೇಳಿದ `ಅಪಾ, ಅಂಥ ಘೋರಾರಣ್ಯದಲ್ಲಿ ನಮ್ಮನ್ನು ಕಾಪಾಡಲು ನೀನಲ್ಲದೆ ಮತ್ತಾರು ಬರಬೇಕು ತಂದೆ' ಎಂದು ಆನಂದದ ಕಣ್ಣೀರು ಸುರಿಸುತ್ತ ಚಕ್ಕಡಿಗಳಲ್ಲಿದ್ದ ಕಟ್ಟಿಗೆಗಳನ್ನು ಇಳಿಸಿ ತನ್ನ ಸಂಗಡಿಗರಿಂದ ಕೂಡಿಕೊಂಡು ಪ್ರಸಾದ ತೆಗೆದುಕೊಂಡು ಮನೆಗೆ ಹೋದರು.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
