ಗುರುನಾಥನಿಂದ ವಿಷನೀರು ಅಮೃತವಾಯಿತು




ಮುದೋಳ ತಾಲೂಕಿನ ರೂಗಿ ಎಂಬ ಗ್ರಾಮದಲ್ಲಿ ಅಡವಿ ಮಠದಲ್ಲಿ ಪೂಜ್ಯ ಲಿಂಗಾನಂದ ಸ್ವಾಮಿಗಳು ಅಧಿಪತಿಯಾಗಿದ್ದಾಗ, ಅಲ್ಲಿಯ ಭಕ್ತ ಸಮುದಾಯ ಸದ್ಗುರು ಗುರುನಾಥರನ್ನು ತಮ್ಮ ಮಠಕ್ಕೆ ಬರಮಾಡಿಕೊಳ್ಳುವುದನ್ನು ನಿಶ್ಚಯಿಸಿದರು. ಆ ಪ್ರಕಾರ ಹುಬ್ಬಳ್ಳಿಗೆ ಬಂದು ಶ್ರೀಗಳನ್ನು ಕರೆದುಕೊಂಡು ಹೋಗಲು ಆಮಂತ್ರಣ ಕೊಟ್ಟು, ಒಂದು ಶುಭ ಮಿತಿಯನ್ನು ನಿಶ್ಚಯಿಸಿ ಊರಿಗೆ ಬಂದರು. ನಂತರ ಆ ಶುಭ ಗಳಿಗೆಯಲ್ಲಿ ಶ್ರೀಗುರುನಾಥಾರೂಢರನ್ನು ಭಾರಿ ವಿಜೃಂಭಣೆಯಿಂದ ಕರೆದುಕೊಂಡು ಬಂದಾಗ, ಹತ್ತಾರು ಸಾವಿರ ಭಕ್ತರು ಕೂಡಿದ್ದರು. ಭರದಿಂದ ಕೂಡಿದ ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆಯಾಯಿತು. ಮಠದ ಪ್ರಾಂಗಣದಲ್ಲಿದ್ದ ಭಾವಿ ತುಂಬಿದ್ದರೂ ಅದು ಹೊಲಸಾಗಿ ನೀರು ಕಹಿಯಾಗಿತ್ತು, ಕುಡಿಯಲು ಅಯೋಗ್ಯವಾಗಿತ್ತು. ಆದ್ದರಿಂದ ಎಲ್ಲರಿಗೂ ಚಿಂತೆಯಾಯಿತು. ಆದರೂ ಎಲ್ಲರೂ ನಿಯಮಿಸಿದ ಪ್ರಕಾರ ಶ್ರೀಗುರುನಾಥರು ಮೆರವಣಿಗೆಯಲ್ಲಿ ಬಂದರು.
ಶ್ರೀಗಳು ಬರುವಾಗ ಸಹಜ ಆ ಬಾವಿಯ ಕಡೆಗೆ ಕೈ ಮಾಡಿದರು. ಅವರಿಗೆ ನೀರು ಬೇಕಾಗಿರಬಹುದೆಂಬ ಸಂಜ್ಞೆಯನ್ನು ಅರಿತ ಅವರ ಸೇವಕ ಸಾಧುವೊಬ್ಬರು, ಆ ಬಾವಿಯ ನೀರು ಹೇಗಿರುವುದೆಂಬ ವಿಚಾರ ಗೊತ್ತಿಲ್ಲದೆ ಆ ನೀರನ್ನು ಗುರುಗಳಿಗೆ ಕೊಟ್ಟರು. ಶ್ರೀಗಳು ಆ ನೀರನ್ನು ಸ್ವೀಕರಿಸಿ, ತಮ್ಮ ಮುಖದಲ್ಲಿ ಹಾಕಿಕೊಂಡು ಹೋಗಿ ಆ ನೀರನ್ನು ಆ ಬಾವಿಯಲ್ಲಿ ಉಗುಳಿದರು. ಈ ಘಟನೆಯನ್ನು ಕಂಡ ಒಬ್ಬಿಬ್ಬರು ಭಕ್ತರು ಭಯದಿಂದ ಗುರುಸ್ಮರಣೆ ಮಾಡುತ್ತ ಕುಡಿಯುತ್ತಿರಲಾಗಿ ಆ ನೀರು ಅಮೃತ ಸದೃಶವಾಗಿತ್ತು. ತಕ್ಷಣವೇ ನೀರಿನ ಸಮಸ್ಯೆ ಪರಿಹಾರವಾಗಿ ಎಲ್ಲರೂ ಆನಂದಪಟ್ಟು, ಶ್ರೀ ಗುರುನಾಥಾರೂಢ ಸ್ವಾಮಿಗಳನ್ನು ಉಚಿತಾಸನದಲ್ಲಿ ಕೂಡಿಸಿ ಪಾದಪೂಜೆ ಮಾಡಿದರು ನಂತರ ಅವರ ಆಶೀರ್ವಾದವನ್ನು ಭಕ್ತರು ಪಡೆದು ಪ್ರಸಾದ ತೆಗೆದುಕೊಂಡರು. ಆ ಮೇಲೆ ಶ್ರೀಗುರುಗಳ ಜಯಘೋಷ ಮಾಡುತ್ತ ಅವರನ್ನು ಹುಬ್ಬಳ್ಳಿಗೆ ಕಳಿಸಿಕೊಟ್ಟರು.



_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಕಾಡಿನಲ್ಲಿ ಹುಲಿಯಾಗಿ ಆನೆಗಳನ್ನು ಚದುರಿಸಿ ಸಾಧುಗಳ ರಕ್ಷಣೆ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ