ಕಾಡಿನಲ್ಲಿ ಹುಲಿಯಾಗಿ ಆನೆಗಳನ್ನು ಚದುರಿಸಿ ಸಾಧುಗಳ ರಕ್ಷಣೆ
ಶ್ರೀ ಬಸವರಾಜ ಹಾಗೂ ಶ್ರೀ ಶಿವಾನಂದ ಭಾರತಿ ಸ್ವಾಮಿಗಳು ಶ್ರೀ ಗುರುನಾಥರ ಬಹಳ ಭಕ್ತಿಗೈದವರು. ಒಂದು ದಿನ ಅವರು ಊಟಿ ನಗರಕ್ಕೆ ಹೋಗಿದ್ದರು. ಅಲ್ಲಿ ಆರ್ಯಮುನಿಯೋಗಿ ಸ್ವಾಮಿಗಳು ಪರಿಚಯಸ್ಥರು ಒಂದು ದಿವಸ ಅಲ್ಲಿ ಉಳಿದಿದ್ದರು
ಮರುದಿವಸ ಶ್ರೀ ಶಿವಾನಂದ ಭಾರತಿಯವರು ಆರ್ಯ ಮುನಿಯೋಗಿ ಸ್ವಾಮಿಗಳನ್ನು ಕುರಿತು, ಸ್ವಾಮಿಗಳೇ ನಾವು ಹುಬ್ಬಳ್ಳಿಗೆ ಹೋಗುತ್ತೇವೆ ಅಪ್ಪಣೆ ಕೊಡಿರಿ ಎಂದಾಗ ಸ್ವಾಮಿಗಳು ಈಗ ಊಟ ಮಾಡಿಕೊಂಡು ಹೋಗಿರಿ ಎಂದಾಗ ಊಟ ಮಾಡಹತ್ತಿದರು. ಅಷ್ಟರಲ್ಲಿ ಹುಬ್ಬಳ್ಳಿಯಿಂದ ಒಂದು ತಾರು ಬಂದಿತು. ಅದರಲ್ಲಿ ಶ್ರೀಗುರುನಾಥ ಸ್ವಾಮಿಗಳ ಆರೋಗ್ಯ ಕೆಟ್ಟಿದೆ, ದವಾಖಾನೆಗೆ ಸೇರಿಸಿದ್ದಾರೆ, ಸೀರಿಯಸ್ ಆಗಿದೆ ಎಂದು ಬರೆದಿತ್ತು.
ಆಗ ಬಸವರಾಜ ಮತ್ತು ಶ್ರೀ ಶಿವಾನಂದ ಭಾರತಿಯವರು ಬಸಿನಿಂದ ಹೊರಟರು. ಆಗ ರಾತ್ರಿ ಒಂದು ಗಂಟೆ ಸುಮಾರಿಗೆ ಬಸ್ ಚಾಲಕ ಒಮ್ಮೆಲೆ ಬಸ್ಸನ್ನು ನಿಲ್ಲಿಸಿದ. ಏಕೆ ನಿಲ್ಲಿಸಿದಿರಿ ಎಂದು ಚಾಲಕನಿಗೆ ಕೇಳಿದಾಗ ಅವನು ಹೇಳಿದ, ಅಲ್ಲಿ ಮುಂದೆ ನೋಡಿರಿ ಆನೆಗಳ ಹಿಂಡು ನಿಂತಿದೆ. ಅದಕ್ಕಾಗಿ ನಿಲ್ಲಿಸಿದೆ ಎಂದನು. ಆಗ ಪ್ರಯಾಣಿಕರು ಗಾಬರಿಗೊಂಡರು. ಆ ಕಾಡಾನೆಗಳು ಬಸ್ಸಿನತ್ತ ಮುಖಮಾಡಿ ಅರ್ಧತಾಸು ನಿಂತಿದ್ದವು. ಸರಿಯಲಿಲ್ಲ. ಆಗ ಶ್ರೀ ಶಿವಾನಂದ ಭಾರತಿ ಸ್ವಾಮಿಗಳು, ಸದ್ಗುರುವೇ ನಿನ್ನ ಸೇವೆಗೆ ಬರಬೇಕೆಂದಾಗ ಈ ಆನೆಗಳಿಂದ ತಡೆಯುಂಟಾಗಿದೆ. ಬೇಗ ನಿವಾರಿಸು ಎಂದ ತಕ್ಷಣ, ಅಲ್ಲಿಯ ಹುಲಿಯ ಗರ್ಜನೆ (ಗುರಪ್ಪ ಪೂರ್ವಜನ್ಮ ಹುಲಿಯಾಗಿತ್ತು ) ಆಗಿ ಆನೆಗಳ ಹಿಂಡು ಚದುರಿ ಕಾಡಿನಲ್ಲಿ ಹೋದವು. ಮುಂದೆ ಚಾಲಕನು ಬಸ್ಸನ್ನು ಓಡಿಸುತ್ತ ಹುಬ್ಬಳ್ಳಿಗೆ ಬಂದು ನಿಲ್ಲಿಸಿದ. ನಂತರ ಬಸವರಾಜ ಮತ್ತು ಶ್ರೀ ಶಿವಾನಂದ ಭಾರತಿಯವರು ಕೋ-ಆಪರೇಟಿವ್ ದವಾಖಾನೆಗೆ ಹೋಗಿ ಶ್ರೀ ಗುರುನಾಥರ ಸೇವೆಯಲ್ಲಿ ತೊಡಗಿದರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
