ಸಿದ್ಧರ ಜನಾಬಾಯಿಯ ಉದ್ಧಾರ
🌺 ಜನಾಬಾಯಿಯ ಉದ್ಧಾರ 🌺
ಪುಣೆಯ ಹತ್ತಿರ ಪಾವಳಗ್ರಾಮದ ರಾಮಕೃಷ್ಣ ರಾಜಘಾಟಕ ಇವರ ಪತ್ನಿ ಜಾನಕೀಬಾಯಿಯ ಉದರದಿಂದ ಗೋದಾಬಾಯಿ (ಜನಾಬಾಯಿ) ಜನಿಸಿದಳು. ಚಿಕ್ಕಂದಿನಿಂದ ಸಿಟ್ಟಿನ ಸ್ವಭಾವದವಳು. ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಮಾತು ನಿಷ್ಟುರವಾಗಿದ್ದು ಶಾಂತಿಯಿರಲಿಲ್ಲ. ಅದನ್ನು ಕಂಡು ತಂದೆ ತಾಯಿಗಳು ಹುಬ್ಬಳ್ಳಿಯ ಸಿದ್ಧಾರೂಢರ ಸತ್ಸಂಗದಲ್ಲಿರಲೆಂದು ಸಚ್ಚಿದಾನಂದರ ಮನೆಯ ಸಮೀಪದ ಮನೆಯಲ್ಲಿಟ್ಟಿದ್ದರು. ಜನ್ಮೋದ್ಧರಕ್ಕೆ ಮಠಕ್ಕೆ ಹೋಗಿ ಬರುತ್ತಿದ್ದಳು. ಸಿದ್ದರ ಭಕ್ತಿಯಾದ ಅಂಬಾಬಾಯಿ ಮತ್ತು ಲಕ್ಷ್ಮೀಬಾಯಿಯವರ ಸಂಗದಿಂದ ಸಿದ್ಧರ ಭಕ್ತಿ ಹೆಚ್ಚಾಯಿತು. ಒಂದು ದಿವಸ ಅವರು ಗೋದೂಬಾಯಿಯನ್ನು (ಜನಾಬಾಯಿ) ಸಿದ್ಧರ ಹತ್ತಿರ ಕರೆದುಕೊಂಡು ಹೋಗಿ `ಸದ್ಗುರುವೇ, ಇವಳ ಹೆಸರು ಗೋದೂಬಾಯಿ ಸದ್ಗುರುಗಳ ಕೃಪೆಯನ್ನು ಇಚ್ಚಿಸಿದ್ದಾಳೆ. ಇವಳು ಸಚ್ಚಿದಾನಂದರ ಮನೆಯ ಹತ್ತಿರವಿದ್ದಾಳೆ. ಇವಳ ಮೇಲೆ ಕೃಪಮಾಡಬೇಕು' ಎಂದು ಬೇಡಿಕೊಂಡರು.
ಇದನ್ನು ಕೇಳಿದ ಸಿದ್ಧ ಹೇಳಿದ ಪೂರ್ವಪುಣ್ಯ ಬಲವಾಗಿರುವುದರಿಂದ ಸದ್ಭಾವ ದೊಡ್ಡದಾಗಿ ಬೆಳೆದಿದೆ. ಈ ಬಾಯಿಯಿಂದ ಒಳ್ಳೆಯ ಕೆಲಸವಾಗಬೇಕಾಗಿದೆ. ಸಚ್ಚಿದಾನಂದರಿಂದ ಉದ್ದಾರವಾಗುತ್ತಾಳೆ. ಅವರಿಗೆ ಭೇಟಿಯಾಗಿ ಮಂತ್ರೋಪದೇಶ ಮಾಡಲು ಬೇಡಿಕೊಳ್ಳಿರಿ' ಎಂದು ಹೇಳಿ ಕಳಿಸಿದರು. ಆಗ ಇಬ್ಬರೂ ಬಾಯಿಯವರು ಗೋದಾವರಿಗೆ ಹೇಳಿದರು ಗುರುಗಳಲ್ಲಿ ಭೇದವೆಣಿಸಬಾರದು ನಡ' ಎಂದು ಮನೆಗೆ ಕರೆದುಕೊಂಡು ಹೋದರು. ಅಂದು ಗೋದೂಬಾಯಿಯು ರಾತ್ರಿ ಊಟ ಮಾಡಿ ಮಲಗಿಕೊಂಡಾಗ ಕನಸಿನಲ್ಲಿ ಸಚ್ಚಿದಾನಂದರು ಕೂಗಿ ಕರೆದು 'ಸದ್ಗುರುಗಳು ನಿನ್ನನ್ನು ನನ್ನ ಕಡೆಗೆ ಕಳಿದ್ದಾರೆ. ರಾಮಮಂತ್ರ ತೆಗೆದುಕೊಂಡು ಅಜಸ್ರನಾಮಸ್ಮರಣೆ ಮಾಡು' ಎಂದು ಹೇಳಿ ಅದೃಶ್ಯರಾದರು. ಆಗ ಎಚ್ಚರಾಗಿ ಸಿದ್ಧರ ವಚನ ನೆನೆಸಿಕೊಂಡು ಆನಂದಿತಳಾದಳು.
ಮರುದಿನ ಅಂಬಾಬಾಯಿಯು ಅವಳನ್ನು ಕರೆದುಕೊಂಡು ಸಚ್ಚಿದಾನಂದರ ದರ್ಶನ ಮಾಡಿಸಿದಾಗ ಗೋದೂಬಾಯಿ ಸಚ್ಚಿದಾನಂದರಿಗೆ ಸ್ಪಷ್ಟ ವಿಚಾರ ತಿಳಿಸಿದಳು. ಆಗ ಸಚ್ಚಿದಾನಂದರು (ತಮ್ಮಣ್ಣ ಶಾಸ್ತ್ರಿ) ಗೋದೂಬಾಯಿ, ಸ್ವಲ್ಪ ದಿವಸಗಳಲ್ಲಿ ನಿನ್ನ ಉದ್ಧಾರವಾಗಲಿ ಎಂದು ಸಿದ್ದಾರೂಢರು ನಿನ್ನನ್ನು ನನ್ನೆಡೆಗೆ ಕಳಿಸಿದ್ದಾರೆ ಎಂದು ಹೇಳಿ ಅವಳಿಗೆ ರಾಮಮಂತ್ರ ಉಪದೇಶಿಸಿ ಹದಿಮೂರು ಲಕ್ಷ ಮಂತ್ರ ಪಠಿಸಲು ಹೇಳಿದರು. ಮುಂದೆ ಅವರು ಹೇಳಿದಂತೆ ಮೂರು ತಿಂಗಳಲ್ಲಿ ಕೇವಲ ಹಾಲು ಹಣ್ಣು ತೆಗೆದುಕೊಂಡು ಮಂತ್ರ ಪಠಿಸಿದಳು. ಹೀಗೆ ಕೆಲವು ದಿವಸ ಕಳೆದ ನಂತರ ಅಘಟಿತ ಘಟನೆ ಜರುಗಿತು.
ಸಚ್ಚಿದಾನಂದರ ಗುರುಗಳಾದ ಗೋಂದಾವಲೆಯ ಬ್ರಹ್ಮಚೈತನ್ಯರು ಮತ್ತು ಶ್ರೀ ಸಿದ್ಧಾರೂಢರು ಅವಳ ಕನಸಿನಲ್ಲಿ ಬಂದರು. ಆಗ ಮೂರ್ತಿಗಳು ಎರಡಾಗಿದ್ದರೂ ಹರಿಹರರ ರೂಪವೇ ಅವರಾಗಿದ್ದರು. ಅವರು ಸಿದ್ಧ ಗೀತಾಮೃತ ಮರಾಠಿ ಗ್ರಂಥ ಬರೆಯಲು ಹೇಳಿ ಅದೃಶ್ಯರಾದರು. ಮುಂದೆ ಅವರ ಕರುಣೆಯಿಂದ ಶ್ರೀ ಸಿದ್ದಗೀತಾಮೃತ ಗ್ರಂಥ ಬರೆದು ಸದ್ಗುರುಗಳ ಸೇವೆ ಮಾಡುತ್ತ ಜನಾಬಾಯಿ ಹೆಸರಿನಿಂದ ಪ್ರಸಿದ್ಧಳಾಗಿ ಧನ್ಯಳಾದಳು.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
