ಸಿದ್ಧರ ಜ್ವರ ನಿಮಿತ್ತ ಗೋವರ್ಧನಾತ್ಸವ
🌺 ಸಿದ್ಧರ ಜ್ವರ ನಿಮಿತ್ತ ಗೋವರ್ಧನಾತ್ಸವ 🌺
ಕ್ಷಯ ನಾಮ ಸಂವತ್ಸರದಲ್ಲಿ ಶ್ರೀ ಸಿದ್ಧಾರೂಢರು ಜ್ವರದಿಂದ ಬಳಲಹತ್ತಿದರು. ಆ ಶೀತಜ್ವರದಿಂದ ಗುರುಗಳ ಶರೀರ ಜರ್ಜರಿತವಾಯಿತು. ಆಗ ಭಕ್ತರು ಗಾಬರಿಯಾಗಿ ನಾಮಸ್ಮರಣೆ ಮಾಡಹತ್ತಿದರು. ಎಷ್ಟೋ ಜನರು ತಾಹಿ ತ್ರಾಹಿ ಸದ್ಗುರುವೇ, ನಿಮ್ಮನ್ನು ಬಿಟ್ಟು ನಮಗಾರಿರುವರು ಎಂದು ಮೊರೆಯಿಡುತ್ತಿದ್ದರು. ಅದನ್ನು ಕೇಳಿದ ಸಿದ್ದನು ಭಕ್ಕರೆ ಯಾರೂ ಭಯಪಡಬೇಕಿಲ್ಲ. ರೋಗಗಳು ಶಾಶ್ವತವೆಂದು ನಿಮಗೆ ಯಾರು ಹೇಳಿದರು? ಯಾವುದು ಬರುವುದೋ ಅದು ಒಂದು ದಿವಸ ಹೋಗಲೇಬೇಕು. ಅದರಂತೆ ಈಗ ನನಗೆ ಜ್ವರ ಬಂದಿದೆ. ಮುಂದೆ ಅದು ನಿವಾರಣೆಯಾಗುತ್ತದೆ' ಎಂದು ಸಮಾಧಾನಪಡಿಸಿದರು. ಎಲ್ಲ ಕಡೆಗೆ ಭಜನ ನಾಮಸ್ಮರಣೆ ನಡೆಯಹತ್ತಿದವು. ಗುರುಗಳು ಪಲ್ಲಂಗದ ಮೇಲೆ ಮಲಗಿಕೊಂಡಿದ್ದರು. ಅನ್ನ ನೀರು ಹೋಗುತ್ತಿರಲಿಲ್ಲ. ಸೀತಜ್ವರ ಸಿದ್ದರಲ್ಲಿ ವ್ಯಾಪಕವಾಯಿತು. ಇದನ್ನು ಕಂಡು ಭಕ್ತರು ಚಿಂತಿತರಾದರು. ಎರಡು ದಿವಸ ಶಾಸ್ತ್ರ ಪುರಾಣಗಳು ನಿಂತವು. ಯಾರಿಂದಲೂ ಔಷಧ ತೆಗೆದುಕೊಳ್ಳಲಿಲ್ಲ. ಇದನ್ನು ಕಂಡು ಸಮುದ್ರದ ಮೀನು ನೀರಿನಿಂದ ಹೊರಬಂದಾಗ ಯಾವ ರೀತಿ ಚಟಪಟಿಸುತ್ತಿದೆಯೋ ಅದರಂತೆ ಭಕ್ತರು ಚಟಪಟಿಸುತ್ತಿದ್ದರು.
ಸಿದ್ಧರಿಗೆ ಸೀತಜ್ವರ ತಗುಲಿದ ಸುದ್ದಿ ತಿಳಿದು ಪರಸ್ಥಳಗಳಿಂದ ಅಸಂಖ್ಯ ಭಕ್ತರು ಬಂದು ಮಠ ತುಂಬಿ ಹೋಯಿತು. ಎಲ್ಲ ಭಕ್ತರೂ ಅಲ್ಲಲ್ಲಿ ಮಾತನಾಡುತ್ತ ಚಿಂತಿಸುತ್ತಿದ್ದರು. ಕೆಲವರು ಊಟ ಮಾಡಿ ಚಿಂತೆಯಿಂದ ಮಲಗುತ್ತಿದ್ದರು. ಆದರೆ ಅವರಲ್ಲಿ ದೈತಭಾವವಿರಲಿಲ್ಲ. ಸಿದ್ಧಾರೂಢನು ತನ್ನ ಸೇವೆಗಾಗಿಯೇ ಈ ಯುಕ್ತಿಯಿಂದ ಲೀಲೆ ಮಾಡಿದನೊ ಏನೋ ತಿಳಿಯದು. ಸೀತಜ್ಜರ ಹಿಡಿದುಕೊಂಡು ಸಿದ್ಧನು ಸ್ವಸ್ಥ ಮಲಗಿದ್ದನು. ಆಗ ಭಕ್ತರು ಏನು ಮಾಡಬೇಕು? ಯಾವ ದೇವರಿಗೆ ಮೊರೆ ಹೋಗಬೇಕು? ಅವೆಲ್ಲವೂ ಗುರುವಿನ ಆಜ್ಞೆಯಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ಆದ್ದರಿಂದ ಸದ್ಗುರುವಿನ ಆರಾಧನೆಯನ್ನೇ ಮಾಡಬೇಕೆನ್ನುತ್ತಿದ್ದರು. ಆದರೆ ಗುರುಗಳು ಜ್ವರಪೀಡಿತರಾಗಿ ಮಲಗಿದ್ದಾರೆ. ಹೇಗೆ ಮಾಡಬೇಕೆಂದು ವಿಚಾರ ಮಘ್ನರಾದರು.
ಒಬ್ಬ ಹೇಳಿದ ಹನ್ನೊಂದು ಜನ ಸೋಮವಾರ ವೃತವನ್ನು ಒಂದು ಆವರ್ತನ ಮಾಡಿ ಹನ್ನೆರಡು ನೂರು ಜಪ ಮಾಡಬೇಕೆಂದನು. ಇನ್ನೊಬ್ಬ ಶತರುದ್ರ ಮಾಡಬೇಕೆಂದ, ಮತ್ತೊಬ್ಬ ಯಾರು ಗುರುಗಳಿಗೆ ಪೀಡಿಸುವರೋ ಅವನನ್ನು ಮಠದಿಂದ ಹೊರಗೆ ಹಾಕಬೇಕೆಂದ. ಏನೇ ಹೇಳಲಿ ಕೆಲವು ಭಕ್ತರು ವೃತನೇಮ ಯಜ್ಞಾದಿಗಳನ್ನು ಮಾಡಿದರು. ಕೆಲವರು ಉಪವಾಸ, ಭಜನೆ, ನಾಮಸ್ಮರಣೆ ಮಾಡಿದರು. ಇದರಿಂದ ಭಕ್ತರ ಪುಣ್ಯ ಪರಿಪಾಕದಿಂದಲೋ ಏನೋ ಅಂತೂ ಶೀತಜ್ವರ ಕಂಪಿಸಿ ಸಿದ್ಧರನ್ನು ಬಿಟ್ಟು ಹೋಯಿತು. ಭಕ್ತರು ಸಂತೋಷದಿಂದ ಜಯಜಯಕಾರ ಮಾಡಿರು.
ಭಕ್ತರ ಈ ಪ್ರೀತಿಯನ್ನು ನೋಡಿ ಸದ್ಗುರುಗಳು ಸಂತೋಷದಿಂದ ಹೇಳಿದರು "ನೀವು ಯಾವ ಕಾಳಜಿ ಮಾಡಬೇಡಿರಿ. ನಿಮ್ಮ ನಿಗ್ರಹದಿಂದ ಶೀತಜ್ವರ ಹೋಯಿತು. ಇನ್ನು ಮುಂದೆ ಬರುವುದಿಲ್ಲ' ಎಂದಾಗ ಎಲ್ಲರೂ ಜಯಜಯಕಾರ ಮಾಡಿದರು. ಆಮೇಲೆ ಸಿದ್ಧರ ಸೀತಜ್ವರ ನಿವಾರಣೆಯಾದ ಸಂತೋಷಕ್ಕಾಗಿ ಮಹಾಯಜ್ಞ ಮಾಡಬೇಕೆಂದು ಸಂಕಲ್ಪ ಮಾಡಿ ಭಕ್ತರು ಆನಂದದಿಂದ ಸಿದ್ದರ ಕಡೆಗೆ ಬಂದು `ಗುರುಗಳೇ, ನಾವು ಭಜನೆ ಸಪ್ತಾಹ ಮಾಡಬೇಕೆಂದಿದ್ದೇವೆ. ತಮ್ಮ ಅಪ್ಪಣೆಯಾಗಬೇಕು' ಎಂದಾಗ ಗುರುಗಳು ಸಂತೋಷಗೊಂಡು ಭಕ್ತರೇ, ನಿಮ್ಮ ಭಾಗ್ಯೋದಯವಾಗಲು ಈ ಸಮಯ ಬಂದಿದೆ. ಇಂಥ ಕಾಲ ಸಿಗುವುದು ದುರ್ಲಭವಾಗಿದೆ. ಆದ್ದರಿಂದ ಏಳು ದಿವಸ ಓಂ ನಮಃ ಶಿವಾಯ ಮಂತ್ರೋಚ್ಚರಿಸುತ್ತ ಸಪ್ತಾಹ ಮಾಡಿರಿ' ಎಂದರು, ಆಗ ಅಶ್ಚಿನ ವದ್ಯ ತ್ರಯೋದಶಿ ದಿವಸ ಗುರುಗಳನ್ನು ಪೂಜಿಸಿ ಕೈಯಲ್ಲಿ ವೀಣೆ ಹಿಡಿದು ಶಿವನಾಮ ಸಪ್ತಾಹ ಪ್ರಾರಂಭಿಸಿದರು.
ಆ ದಿವಸದಿಂದ ಇಪ್ಪತ್ತುನಾಲ್ಕು ಗಂಟೆ ನಾಮಸ್ಮರಣೆಯಲ್ಲಿ ಎಲ್ಲರಿಗೂ ಸೇವೆಯ ಭಾಗ್ಯ ದೊರೆಯಲೆಂದು ಇಪ್ಪತ್ತು ನಾಲ್ಕು ಜನರು ಸರಿಯಂತೆ ನಾಮಸ್ಮರಣೆ ಮಾಡುತ್ತಿದ್ದರು. ನರಕ ಚತುರ್ದಶಿಯ ದಿನ ಶ್ರೀ ಕೃಷ್ಣನು ಹದಿನೇಳು ಸಾವಿರ ಸ್ತ್ರೀಯರಿಗೆ ರಕ್ಷಿಸಿ ವಿಜಯ ಸಂಪಾದಿಸಿದ್ದನು. ಅಂಥ ಕೃಷ್ಣನೇ ಸಿದ್ಧಾರೂಢ ನಾಮದಿಂದ ಅವತಾರ ತಾಳಿ ಹುಬ್ಬಳ್ಳಿಯಲ್ಲಿ ನಿಂತಿದ್ದಾನೆ' ಎಂದು ಎಲ್ಲರೂ ಪೂಜಿಸಿ ದೀಪೋತ್ಸವ ಮಾಡಿದರು. ಕಾರ್ತಿಕ ಶುದ್ಧ ಪ್ರತಿಪದೆಯ ದಿವಸ ಶ್ರೀ ಕೃಷ್ಣನು ಗೋವರ್ಧನಗಿರಿಯನ್ನೆತ್ತಿ ಇಂದ್ರನ ಗರ್ವ ಮುರಿದು ಗೋಪಾಲಕರ ರಕ್ಷಣೆ ಮಾಡಿದ ಕೃಷ್ಣನೇ ಸಿದ್ಧನಿದ್ದಾನೆಂದು ಭಾವಿಸಿ ಅಂದು ಗೋವರ್ಧನೋತ್ಸವ ಪ್ರಾರಂಭಿಸಿದರು. ಆಗ ಏಳು ದಿವಸಗಳ ಸಪ್ತಾಹವು ಪಂಚಮಿ ಬುಧವಾರ ಸಮಾಪ್ತಿಯಾಯಿತು. ಗುರುಗಳು ಮಹಿಮ್ನರುದ್ರ ಪಠಿಸಬೇಕೆಂದಾಗ ಭಕ್ತರು ಪ್ರೇಮದಿಂದ ಪಠಿಸಿ ಗುರುಗಳಿಂದ ತೆಂಗಿನಕಾಯಿ ಆಶೀರ್ವಾದ ಪಡೆದರು. ಗುರುವಾರ ಅನ್ನಸಂತರ್ಪಣೆಯ ನಂತರ ಸಿದ್ಧರಿಗೆ ಜಯಜಯಕಾರ ಮಾಡುತ್ತ ತಮ್ಮ ಸ್ಥಾನಗಳಿಗೆ ನಡೆದರು. ಸಿದ್ಧರಿಗೆ ಜ್ವರ ಬಂದಾಗ ಮೌನಿಬೂವಾಯೆಂಬುವರು ಮೌನ ಧರಿಸಿ ಅನ್ನ ಪಾನಾದಿಗಳನ್ನು ಬಿಟ್ಟು ತಪಸ್ಸು ಮಾಡಿದರು. ಗುರುಗಳ ಜ್ವರ ನಿವಾರಣೆಯಾದಾಗ ಆಹಾರ ಸೇವಿಸಿ ಭಿಕ್ಷೆಗೆ ಹೋದರು. ಇದು ವಿಶೇಷ. ಸಿದ್ಧರ ಜ್ವರ ನಿವಾರಣೆಯಾದ ದಿನದಿಂದ ಕಾರ್ತಿಕ ಮಾಸದಲ್ಲಿ ಗೋವರ್ಧನ ಸಪ್ತಾಹ ಮುಂದುವರಿಯಿತು.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
